ಸದ್ದಿಲ್ಲದೆ ನಿಶ್ಚಿತಾರ್ಥ ಆಗಿ ಕನಸು ನನಸು ಮಾಡಿಕೊಂಡ ಸ್ಯಾಂಡಲ್ ವುಡ್ ನ ಜನಪ್ರಿಯ ನಟಿ..! ಹುಡುಗನ ಬ್ಯಾಗ್ರೌಂಡ್ ಏನು ಗೊತ್ತಾ

ಸದ್ದಿಲ್ಲದೆ ನಿಶ್ಚಿತಾರ್ಥ ಆಗಿ ಕನಸು ನನಸು ಮಾಡಿಕೊಂಡ ಸ್ಯಾಂಡಲ್ ವುಡ್ ನ ಜನಪ್ರಿಯ ನಟಿ..! ಇತ್ತೀಚೆಗೆ ಕೆಲವು ತಿಂಗಳಿಂದ ಕನ್ನಡದ ಅನೇಕ ಯುವ ಕಲಾವಿದರು ಬ್ಯಾಚ್ಯುಲರ್ ಲೈಫ್ ನಿಂದ ಸಾಂಸಾರಿಕ ಜೀವನಕ್ಕೆ ಪ್ರವೇಶ ಪಡೆದುಕೊಳ್ಳುತ್ತಿದ್ದಾರೆ. ಕಿರುತೆರೆ ಧಾರಾವಾಹಿಯ ಅನೇಕ ನಟಿಯರು ಸುದ್ದಿ ಸದ್ದಿಲ್ಲದೆ ಮದುವೆ ಆಗಿ ಹನಿಮೂನ್ ಕೂಡ ಹೋಗಿದ್ದಾರೆ. ಅಂತೆಯೇ ಇದೀಗ ಸ್ಯಾಂಡಲ್ ವುಡ್ ಜನಪ್ರಿಯ ಬೇಡಿಕೆಯ ನಟಿ ಆಗಿರುವ ನಟಿ ಅಧಿತಿ ಪ್ರಭುದೇವ ಅವರು ಕೂಡ ಗುಟ್ಟಾಗಿ ನಿಶ್ಚಿತಾರ್ಥ ಮಾಡಿಕೊಂಡಿದ್ದಾರೆ. ಎಂಗೇಜ್ ಮೆಂಟ್ ಆಗಿರುವ ನಟಿ ಅಧಿತಿ ಪ್ರಭುದೇವ ಅವರು ತಮ್ಮ ಬಾವಿ ಪತಿಯ ಜೊತೆ ನಿಂತಿರುವ ಫೋಟೋವೊಂದನ್ನ ತಮ್ಮ ಸೋಶಿಯಲ್ ಮೀಡಿಯಾ ಖಾತೆಯಲ್ಲಿ ಶೇರ್ ಮಾಡಿಕೊಂಡಿದ್ದಾರೆ. ಇದು ಅವರ ಅಭಿಮಾನಿಗಳಿಗೆ ಅಚ್ಚರಿಯ ಸುದ್ದಿಯಾಗಿದೆ. ಅಧಿತಿ ಪ್ರಭುದೇವ ಅವರು ಇನ್ನು ಕೆಲವೇ ತಿಂಗಳಲ್ಲಿ ಸಪ್ತಪದಿ ತುಳಿಯಲಿದ್ದಾರೆ. ಈಗಾಗಲೇ ನಟಿ ಅಧಿತಿ ಪ್ರಭುದೇವ ಅವರು ಸಾಮಾಜಿಕ ಜಾಲತಾಣಗಳಲ್ಲಿ ಸಕ್ರೀಯವಾಗಿ ತೊಡಗಿಸಿಕೊಂಡಿರುವ ಕಾರಣ ಅವರ ಎಲ್ಲಾ ಅಪ್ ಡೇಟ್ಸ್ ಗಳನ್ನ ಅವರೇ ನೀಡುತ್ತಾರೆ.

ನಟಿ ಅಧಿತಿ ಪ್ರಭುದೇವ ಅವರು ಕನ್ನಡದ ಎಲ್ಲಾ ನಟಿಯರಂತಲ್ಲ‌. ಅಧಿತಿ ಪ್ರಭುದೇವ ಅವರಿಗೆ ಕನ್ನಡ ನಾಡು ನುಡಿಯ ಬಗ್ಗೆ ವಿಶೇಷವಾದ ಕಾಳಜಿ ಪ್ರೀತಿ ಅಭಿಮಾನ ಇದೆ. ಹಾಗಾಗಿ ಅಧಿತಿ ಅವರು ಇನ್ನಿತರ ನಟಿಯರಿಗಿಂತ ಪ್ರತ್ಯೇಕವಾಗಿ ನಿಲುತ್ತಾರೆ. ಏಕೆಂದರೆ ಕನ್ನಡ ನಾಡು ನುಡಿ, ಸಂಸ್ಕೃತಿ ಭಾಷೆ ಉಳಿವು ಬಗ್ಗೆ ಯಾವುದೇ ಪ್ರತಿಭಟನೆ ಆದರೂ ಕೂಡ ತಕ್ಷಣ ಪ್ರತಿಕ್ರಿಯೆ ನೀಡುತ್ತಾರೆ. ಕನ್ನಡ ಭಾಷೆಗೆ ಯಾವುದೇ ರೀತಿಯ ತೊಂದರೆ ಆದರೂ ಕೂಡ ಜೊತೆಗೆ ನಿಂತು ತಮ್ಮ ಅಭಿಪ್ರಾಯ ತಿಳಿಸುತ್ತಾರೆ. ಇನ್ನು ಇತ್ತೀಚೆಗೆ ಖಾಸಗಿ ಸಂದರ್ಶನವೊಂದರಲ್ಲಿ ಅಧಿತಿ ಪ್ರಭುದೇವ ಅವರು ತಮ್ಮ ಕನಸಿನ ಬಾಳ ಸಂಗಾತಿ ಹೇಗಿರಬೇಕು ಎಂದು ಶೇರ್ ಮಾಡಿಕೊಂಡಿದ್ದರು. ನಟಿ ಅಧಿತಿ ಪ್ರಭುದೇವ ಅವರಿಗೆ ತಮ್ಮ ಜೀವನ ಸಂಗಾತಿ ವ್ಯವಸಾಯ ಕ್ಷೇತ್ರದಲ್ಲಿ ತೊಡಿಗಿಕೊಂಡಿರಬೇಕು, ಇಲ್ಲವಾದರು ಅದರ ಬಗ್ಗೆ ಆಸಕ್ತಿ ಹೊಂದಿದವರಾಗಿರಬೇಕು. ಅಂತಹವರು ನನಗೆ ಇಷ್ಟ ಆಗುತ್ತಾರೆ ಎಂದು ತಮ್ಮ ಮನದಾಳದ ಮಾತುಗಳನ್ನ ಹಂಚಿಕೊಂಡಿದ್ದರು.

ಅಂತೆಯೇ ಅಧಿತಿ ಪ್ರಭುದೇವ ಅವರು ಸಹ ಕೋವಿಡ್ ಲಾಕ್ ಡೌನ್ ದಿನಗಳಲ್ಲಿ ತಮ್ಮ ಊರಿನಲ್ಲಿ ಟ್ರ್ಯಾಕ್ಟರ್ ಓಡಿಸುವುದು, ಹೊಲ ಗದ್ದೆಗಳಲ್ಲಿ ಸಣ್ಣ ಪುಟ್ಟ ಕೆಲಸ ಕಾರ್ಯಗಳಲ್ಲಿ ತೊಡಗಿಸಿಕೊಂಡಿದ್ದರು. ಇದೀಗ ನಟಿ ಅಧಿತಿ ಪ್ರಭುದೇವ ಅವರು ಯಶಸ್ ಎಂಬುವರೊಟ್ಟಿಗೆ ಎಂಗೇಜ್ ಮೆಂಟ್ ಮಾಡಿಕೊಂಡು ದಾಂಪತ್ಯ ಜೀವನಕ್ಕೆ ಹೆಜ್ಜೆ ಇಡಲು ಸಿದ್ದರಾಗಿದ್ದಾರೆ. ತಮ್ಮ ಹುಡುಗ ಯಶಸ್ ಅವರೊಟ್ಟಿಗೆ ನಿಂತಿರುವ ಫೋಟೋವೊಂದನ್ನ ಇನ್ಸ್ಟಾ ಗ್ರಾಮ್ ನಲ್ಲಿ ಶೇರ್ ಮಾಡಿಕೊಂಡಿರುವ ಅಧಿತಿ ಪ್ರಭುದೇವ ಅವರು ನನ್ನ ಕನಸು ಈಗ ನನಸಾಯಿತು ಬರೆದುಕೊಂಡಿದ್ದಾರೆ. ಯಶಸ್ ಅವರು ಮೂಲತಃ ಚಿಕ್ಕಮಗಳೂರಿನವರಾಗಿದ್ದು, ಕಾಫಿ ತೋಟವನ್ನ ಹೊಂದಿದ್ದಾರಂತೆ. ಯಶಸ್ ಮತ್ತು ಅಧಿತಿ ಇಬ್ಬರು ಪರಸ್ಪರ ಒಂದಷ್ಟು ವರ್ಷಗಳಿಂದ ಪ್ರೀತಿಸುತ್ತಿದ್ದಂತೆ ಇದೀಗ ತಮ್ಮ ಕುಟುಂಬದವರಿಗೆ ತಮ್ಮ ಪ್ರೀತಿಯ ವಿಚಾರ ತಿಳಿಸಿ ಮದುವೆಗೆ ಒಪ್ಪಿಸಿದ್ದಾರೆ.

Leave a Reply

%d bloggers like this: