ಸಚಿನ್ ತೆಂಡೂಲ್ಕರ್ ಮಗಳಿಗೆ ಬಂತು ದೊಡ್ಡ ಸಂಬಂಧ! ಹುಡುಗ ಯಾರು ಗೊತ್ತಾ

ಭಾರತೀಯ ಕ್ರಿಕೆಟ್ ನ ಪ್ರಖ್ಯಾತ ಆಟಗಾರನ ಪುತ್ರಿ ಇದೀಗ ಐಪಿಎಲ್ ಕ್ರಿಕೆಟ್ ನ ಪ್ರಮುಖ ಫ್ರಾಂಚೈಸಿಯಲ್ಲಿ ಪ್ರತಿನಿಧಿಸುವ ಆಟಗಾರನೊಂದಿಗೆ ಡೇಟಿಂಗ್ ನಡೆಸುತ್ತಿದ್ದಾರೆ ಎಂಬ ಗುಸು ಗುಸು ಜೋರಾಗಿ ಕೇಳಿಬರುತ್ತಿದೆ .ಭಾರತೀಯ ಕ್ರಿಕೆಟ್ ನ ಅನೇಕ ಯುವ ಸ್ಟಾರ್ ಆಟಗಾರರು ಬಾಲಿವುಡ್ ನ ನಟಿಯರೊಂದಿಗೆ ರಿಲೇಶನ್ ಹೊಂದುವುದು ಸರ್ವೇ ಸಾಮಾನ್ಯವಾಗಿ ಬಿಟ್ಟಿದೆ. ಅಂತೆಯೇ ಇದೀಗ ಕ್ರಿಕೆಟ್ ದೇವರು ಮಾಸ್ಟರ್ ಬ್ಲಾಸ್ಟರ್ ಸಚಿನ್ ತೆಂಡೂಲ್ಕರ್ ಅವರ ಪುತ್ರಿ ಕೂಡ ಇಂಡಿಯನ್ ಪ್ರೀಮಿಯರ್ ಲೀಗ್ ಕ್ರಿಕೆಟಿನ ಖ್ಯಾತ ಆಟಗಾರನ ಜೊತೆ ಡೇಟಿಂಗ್ ನಲ್ಲಿದ್ದಾರೆ ಎಂಬ ಗುಸು ಗುಸು ಕೇಳಿ ಬರುತ್ತಿದೆ. ಸಚಿನ್ ಅವರಿಗೆ ಅರ್ಜುನ್ ಮತ್ತು ಸಾರಾ ಎಂಬ ಇಬ್ಬರು ಮಕ್ಕಳಿದ್ದು,ಮಗ ಅರ್ಜುನ್ ತನ್ನ ತಂದೆಯಂತೆ ಕ್ರಿಕೆಟ್ ಕ್ಷೇತ್ರದಲ್ಲಿ ಸಾಧನೆ ಮಾಡಬೇಕು ಎಂಬ ಕನಸು ಹೊತ್ತು,ಅದೇ ದಾರಿಯಲ್ಲಿ ಸಾಗುತ್ತಿದ್ದಾರೆ.

ಇನ್ನು ಸಚಿನ್ ಅವರ ಮಗಳು ಸಾರಾ ತೆಂಡೂಲ್ಕರ್ ಸೋಶಿಯಲ್ ಮೀಡಿಯಾದಲ್ಲಿ ಸಖತ್ ಆಕ್ಟೀವ್ ಆಗಿದ್ದು,ಆಗಾಗ ಕೆಲವು ವಿಚಾರಗಳಿಗೆ ಸುದ್ದಿ ಆಗುತ್ತಿರುತ್ತಾರೆ.ಇದೀಗ ಸಾರಾ ಅವರು ಚರ್ಚೆಗೆ ಒಳಗಾಗಿರುವುದು ಖ್ಯಾತ ಕ್ರಿಕೆಟಿಗನೊಂದಿಗೆ ಸಾರಾ ಪ್ರೇಮದಲ್ಲಿದ್ದಾರೆ ಎಂಬ ವಿಚಾರವಾಗಿ.ಹೌದು ಭಾರತೀಯ ಕ್ರಿಕೆಟ್ ಆಟಗಾರ ಮತ್ತು ಇಂಡಿಯನ್ ಪ್ರೀಮಿಯರ್ ಲೀಗ್ ಕ್ರಿಕೆಟ್ ನ ಪ್ರಮುಖ ಫ್ರಾಂಚೈಸಿಯಾದ ಕೊಲ್ಕತ್ತಾ ನೈಟ್ ರೈಡರ್ಸ್ ತಂಡವನ್ನು ಪ್ರತಿನಿಧಿಸುವ ಕ್ರಿಕೆಟಿಗ ಶುಭ್ಮನ್ ಗಿಲ್ ಅವರೊಟ್ಟಿಗೆ ಸಾರಾ ತೆಂಡೂಲ್ಕರ್ ಡೇಟಿಂಗ್ ನಡೆಸುತ್ತಿದ್ದಾರೆ ಎಂಬ ಅನುಮಾನ ಶುರುವಾಗಿದೆ. ಪಂಜಾಬ್ ಮೂಲದ ಕ್ರಿಕೆಟಿಗ ಶುಭ್ಮನ್ ಗಿಲ್ ಅವರು ತಮ್ಮ ಇನ್ಸ್ಟಾದಲ್ಲಿ ಸಕ್ರೀಯವಾಗಿ ತೊಡಗಿಕೊಂಡಿರುತ್ತಾರೆ.

ಆಗಾಗ ತಮ್ಮ ದಿನ ನಿತ್ಯದ ಅಪ್ಡೇಟ್ಸ್ ಮತ್ತು ತಮ್ಮ ಒಂದಷ್ಟು ಫೋಟೋಗಳನ್ನು ಪೋಸ್ಟ್ ಮಾಡುತ್ತಿರುತ್ತಾರೆ.ಇನ್ಸ್ಟಾದಲ್ಲಿ ಸಾರಾ ತೆಂಡೂಲ್ಕರ್ ಮತ್ತು ಶುಭ್ಮನ್ ಗಿಲ್ ಪರಸ್ಪರ ಫಾಲೋ ಮಾಡುತ್ತಿದ್ದು,ಒಬ್ಬರ ಪೋಸ್ಟ್ ಗೆ ಮತ್ತೊಬ್ಫರು ಲೈಕ್ ಕಮೆಂಟ್ ಮಾಡುತ್ತಿರುತ್ತಾರೆ.ಸಾರಾ ತೆಂಡೂಲ್ಕರ್ ಅವರು ಶುಭ್ಮನ್ ಅವರ ಬಹುತೇಕ ಪೋಸ್ಟ್ ಗಳಿಗೆ ರಿಯಾಕ್ಟ್ ಮಾಡೇ ಇದ್ದಾರೆ.ಇದನ್ನೆಲ್ಲಾ ಗಮನಿಸುತ್ತಿರುವ ನೆಟ್ಟಿಗರು ಇವರಿಬ್ಬರು ಕೇವಲ ಸೋಶಿಯಲ್ ಮೀಡಿಯಾದಲ್ಲಿ ಮಾತ್ರ ಚಾಟಿಂಗ್ ಮಾಡೋದಲ್ಲ ವೈಯಕ್ತಿಕವಾಗಿ ಪರಸ್ಪರ ಸಂಪರ್ಕದಲ್ಲಿದ್ದಾರೆ ಎಂಬ ಅನುಮಾನ ವ್ಯಕ್ತಪಡಿಸಿದ್ದಾರೆ.ಆದರೆ ಈ ಬಗ್ಗೆ ಸಾರಾ ತೆಂಡೂಲ್ಕರ್ ಅವರಾಗಲೀ,ಶುಭ್ಮನ್ ಗಿಲ್ ಅವರಾಗಲಿ ಎಲ್ಲಿಯೂ ಕೂಡ ಪ್ರತಿಕ್ರಿಯಿಸಿಲ್ಲ.

Leave a Reply

%d bloggers like this: