ಸಾಲ ಮಾಡಿ ತೆಗೆದ ಒಂದು ಲಾರಿಯಿಂದ ಇಂದು 4500 ಲಾರಿ ಆಗಿದ್ದು ಹೇಗೆ ಗೊತ್ತಾ? ಎಲ್ಲರಿಗು ಆದರ್ಶವಾಗುವಂತಹ ರೋಚಕ ಕಥೆ

ತನ್ನ ತಂದೆಯ ಪ್ರಿಂಟಿಂಗ್ ಪ್ರೆಸ್ ಅಂಗಡಿ ಕೆಲಸ ತೊರೆದು ಸಾಲ ಮಾಡಿ ಸ್ವಂತ ಉದ್ಯಮ ಆರಂಭಿಸಿದ ವ್ಯಕ್ತಿ ಇಂದು ಸಾವಿರಾರು ಜನರಿಗೆ ಉದ್ಯೋಗ ನೀಡಿದ್ದಾರೆ.ಜೀವನದಲ್ಲಿ ಪ್ರತಿಯೊಬ್ಬರಿಗೂ ಏನಾದರು ಸಾಧನೆ ಮಾಡಬೇಕು.ಯಾರ ಕೈ ಕೆಳಗಡೆ ಕೆಲಸ ಮಾಡದೇ ಸ್ವತಂತ್ರವಾಗಿ ದುಡಿಯಬೇಕು ಎಂಬ ಕನಸು ಬಹುತೇಕರಿಗೆ ಇರುತ್ತದೆ.ಆದರೆ ಇದಕ್ಕೆ ಆರಂಭದಲ್ಲೇ ಅಪಸ್ವರ ತೆಗೆಯುವುದು ಮನೆಯ ಹಿರಿಯರು. ಅಂತೆಯೇ ಇಂದು ಸಾರಿಗೆ-ಸಂಪರ್ಕ ಕಾರ್ಗೋ ಇಂಡಸ್ಟ್ರಿಯಲ್ಲಿ ಪ್ರತಿಷ್ಟಿತ ಉದ್ಯಮಿಯಾಗಿರುವ ವಿಜಯಾನಂದ ರೋಡ್ ಲೈನ್ಸ್ ಲಿಮಿಟೆಡ್ ( ವಿ.ಆರ್.ಎಲ್.) ಸಂಸ್ಥೆಯ ಮಾಲೀಕರಾದ ವಿಜಯ ಸಂಕೇಶ್ವರ ಅವರು ತಾವು ಮೊದಲು ಸ್ವಂತ ಉದ್ಯಮ ಆರಂಭಿಸುತ್ತೇನೆ ಅಂದಾಗಲೂ ಕೂಡ ಅವರ ತಂದೆ ಆತಂಕ ವ್ಯಕ್ತಪಡಿಸಿದ್ದಂತೆ. ವಿಜಯ ಸಂಕೇಶ್ವರ ಅವರು ಗದಗ ಮೂಲದವರಾಗಿದ್ದು,ಬಸವಣ್ಣಪ್ಪ ಮತ್ತು ಚಂದ್ರಮ್ಮ ದಂಪತಿಗಳಿಗೆ 1950 ಆಗಸ್ಟ್ 2 ರಂದು ಜನಿಸುತ್ತಾರೆ.

ಇವರ ತಂದೆ ಪುಟ್ಟದೊಂದು ಪ್ರಿಂಟಿಂಗ್ ಪ್ರೆಸ್ ನಡೆಸುತ್ತಿರುತ್ತಾರೆ.ಬಿ.ಕಾಂ.ಪದವಿ ಪೂರೈಸಿದ ನಂತರ ವಿಜಯ ಸಂಕೇಶ್ವರ ಅವರು ತಮ್ಮ ತಂದೆಯ ಅಂಗಡಿಯಲ್ಲಿಯೇ ಕೆಲಸ ಮಾಡಿಕೊಂಡು,ಪ್ರಿಂಟಿಂಗ್ ಪ್ರೆಸ್ ಅಂಗಡಿಯನ್ನ ನಿರ್ವಹಣೆ ಮಾಡಿಕೊಂಡು ಹೋಗುತ್ತಿರುತ್ತಾರೆ. ಹೇಗಿದ್ದರು ಬಿ.ಕಾಂ.ಪದವಿ ಪೂರೈಸಿದ ವಿಜಯ ಸಂಕೇಶ್ವರ ಅವರು ಹೀಗೆ ಒಂದು ದಿನ ತಾವು ಕಂಡಿದ್ದ ಕನಸನ್ನು ಈಡೇರಿಸಿಕೊಳ್ಳುವ ಬಗ್ಗೆ ಚಿಂತನೆ ನಡೆಸುತ್ತಾರೆ.ಇವರಿಗೆ ಮೊದಲಿನಿಂದಲೂ ಸ್ವಂತದೊಂದು ಉದ್ಯಮ ಮಾಡಬೇಕು ಎಂಬ ಮಹಾದಾಸೆ ಇರುತ್ತದೆ.ಹಾಗಾಗಿ ಸಾರಿಗೆ ಕ್ಷೇತ್ರದ ಕಡೆ ಗಮನ ಹರಿಸಿದ ವಿಜಯ ಸಂಕೇಶ್ವರ ಅವರು ಆರಂಭವಾಗಿ ಸ್ವಂತದೊಂದು ಲಾರಿ ಖರೀದಿ ಮಾಡುತ್ತಾರೆ.

ಅದೂ ಕೂಡ ಹಣವನ್ನು ಸಾಲ ಮಾಡಿ ಈ ಲಾರಿಗೆ ಬಂಡವಾಳ ಹೂಡುತ್ತಾರೆ.ಮೊದಲು ಹುಬ್ಬಳ್ಳಿ,ಧಾರವಾಡ ನಗರಗಳಿಂದ ಬೆಂಗಳೂರಿಗೆ ಸರಕುಗಳನ್ನು ಸಾಗಾಟ ಮಾಡುತ್ತಿರುತ್ತಾರೆ. ಆರಂಭದ ದಿನಗಳಲ್ಲಿ ಮಗ ಸಾಲ ಮಾಡಿ ವ್ಯವಹಾರ ಮಾಡುತ್ತಿದ್ದಾನೆ ಎಂದು ಸಂಕೇಶ್ವರ ಅವರ ತಂದೆ ಆತಂಕ ವ್ಯಕ್ತಪಡಿಸಿದ್ದರಂತೆ.ಆದರೆ ಸಂಕೇಶ್ವರರು ತಮ್ಮ ಈ ಟ್ರಾನ್ಸ್ ಪೋರ್ಟ್ ವ್ಯವಹಾರದಲ್ಲಿ ದಿನ ಕಳೆದಂತೆ ಉತ್ತಮವಾಗಿ ಯಶಸ್ಸು ಪಡೆಯುತ್ತಾರೆ. ಇದರ ನಂತರ ಮತ್ತೊಂದು ಲಾರಿ ಖರೀದಿ ಮಾಡುತ್ತಾರೆ.ಇದಾದ ಬಳಿಕ ಎರಡು ಲಾರಿಗಳನ್ನಿಟ್ಟುಕೊಂಡು ಅಧಿಕೃತವಾಗಿ 1976 ರಲ್ಲಿ ವಿ.ಆರ್.ಎಲ್.ಸಂಸ್ದೆಯನ್ನು ಆರಂಭಿಸುತ್ತಾರೆ. ಇದರ ಕೇಂದ್ರ ಕಛೇರಿ ಗದಗದಲ್ಲಿದೆ.ಸರಕು-ಸಾಗಾಣಿಕೆಯ ಜೊತೆಗೆ ಪ್ಯಾಸೆಂಜರ್ ಸೇವೆ ನೀಡಲು ಪ್ರಾರಂಭಿಸಿದರು.

ನಾಲ್ಕು ಬಸ್ ಗಳು ಇಂದು 700.ಕ್ಕೂ ಹೆಚ್ಚು ಬಸ್ ಗಳನ್ನು ಹೊಂದಿವೆ.4,500 ಕ್ಕೂ ಲಾರಿಗಳಿವೆ.ವಿ.ಆರ್.ಎಲ್ ಸಂಸ್ಥೆಯಲ್ಲಿ ಇಂದು ಬರೋಬ್ಬರಿ 19,763 ಜನರಿಗೆ ಉದ್ಯೋಗ ನೀಡಿದೆ. ಇದು ಆರಂಭದ ದಿನಗಳಲ್ಲಿ ಹುಬ್ಬಳ್ಳಿಯಿಂದ ಬೆಂಗಳೂರಿಗೆ ಪ್ರಯಾಣ ಮಾಡಲು ಸಹಾಯವಾಗ್ತಿತ್ತು. ಇಂದು ಇಷ್ಟು ಬೆಳೆದು ನಿಲ್ಲಲ್ಲೂ ಪಟ್ಟ ಹೋರಾಟ ಅಷ್ಟೀಷ್ಟಲ್ಲ ಬಿಡಿ. ಅದರ ಹಿಂದಿನ ತಯಾರಿ ಫುಲ್ ಜೋರಾಗೆ ಇತ್ತು. ಒಬ್ಬ ವ್ಯಕ್ತಿ ಉಹೆಗೂ ಮೀರಿ ಬೆಳೆದು ನಿಂತಾಗ ಸಮಾಜದಲ್ಲಿ ಅವರ ಜೀವನ ಉದಾಹರಣೆಯಾಗುತ್ತೆ. ಯಶಸ್ಸಿನ ಹಿಂದನ ತಯಾರಿಗೆ ಅವರು ಪಟ್ಟ ಕಷ್ಟಗಳು ಯಶಸ್ಸಿನ ಮೆಟ್ಟಿಲಾಗಿ ಪರಿಣಮಿಸುತ್ವೆ.. ಪ್ರಯತ್ನಂ ಸಿದ್ಧಿ ಸಾಧನಂ ಅಂತ ದೊಡ್ಡವರು ಅಷ್ಟೀಲ್ಲದೆ ಹೇಳಿದ್ದಾರಾ ಹೇಳಿ.