ರಾಕಿಂಗ್ ಸ್ಟಾರ್ ಯಶ್ ತಂದೆ ಡ್ರೈವರ್ ಕೆಲಸ ಬಿಟ್ಟು ಈಗ ಹೇಗೆ ಜೀವನ ನಡಿಸುತ್ತಿದ್ದಾರೆ ಗೊತ್ತಾ? ನೋಡಿ ಒಮ್ಮೆ

ರಾಕಿಂಗ್ ಸ್ಟಾರ್ ಯಶ್ ಅವರು ಇಂದು ಕೆಜಿಎಫ್ ಚಿತ್ರದ ಅಭೂತಪೂರ್ವ ಯಶಸ್ಸಿನ ನಂತರ ವಿಶ್ವದಾದ್ಯಂತ ಅಪಾರ ಜನಪ್ರಿಯತೆ ಗಳಿಸಿ ನ್ಯಾಷನಲ್ ಸ್ಟಾರ್ ಆಗಿ ಮಿಂಚುತ್ತಿದ್ದಾರೆ . ಸಾಮಾನ್ಯ ಕುಟುಂಬದದಲ್ಲಿ ಜನಿಸಿದ ನವೀನ್ ಗೌಡ ಉರುಫ್ ಯಶ್ ಇಂದು ತಮ್ಮ ಪ್ರತಿಭೆ ಮತ್ತು ಶ್ರಮ, ಬದ್ದತೆಯಿಂದ ಸಿನಿಮಾ ಕ್ಷೇತ್ರದಲ್ಲಿ ಸಾಧನೆಯ ಮೆಟ್ಟಿಲೇರಿದ್ದಾರೆ. ಇದೀಗ ಸಿನಿಮಾ ವೊಂದಕ್ಕೆ ಕೋಟ್ಯಾಂತರ ರೂ. ಸಂಭಾವನೆ ಪಡೆಯುವ ನಟ ಯಶ್ ಐಷಾರಾಮಿ ಜೀವನ ನಡೆಸುತ್ತಿದ್ದಾರೆ. ಆದರೆ ಅವರ ತಂದೆ ಮಾತ್ರ ತಮ್ಮ ಊರಿನಲ್ಲಿ ಜಮೀನಿನಲ್ಲಿ ಕೃಷಿಕರಿಗೆ ಸಂತೃಪ್ತಿ ಜೀವನ ಕಂಡು ಕೊಂಡಿದ್ದಾರೆ. ಯಶ್ ಅವರ ತಂದೆ ಒಬ್ಬ ಸಾಮಾನ್ಯ ಬಸ್ ಡ್ರೈವರ್. ತಾನು ಒಬ್ಬ ಡ್ರೈವರ್ ಆಗಿದ್ದರೂ ಕೂಡ ತಮ್ಮ ಮಕ್ಕಳನ್ನು ಶ್ರೀಮಂತರು ಓದುವಂತಹ ಶಾಲಾ-ಕಾಲೇಜಿನಲ್ಲಿ ವಿದ್ಯಾಭ್ಯಾಸ ಕೊಡಿಸಿದ್ದರು. ಅದರಂತೆ ಅವರು ಪಿಯುಸಿ ವರೆಗೆ ಓದಿದರು ಕೂಡ ತದ ನಂತರದಲ್ಲಿ ತಮ್ಮ ಆಸಕ್ತಿ ನಟನೆಯತ್ತ ಮುಖ ಮಾಡಿದರು.

ಅದಕ್ಕಾಗಿ ಬೆಂಗಳೂರು ಬಂದರು. ಟಿ. ಎಸ್. ನಾಗಾಭರಣ ಅವರ ಬೆನಕ ನಾಟಕ ತಂಡಕ್ಕೆ ಸೇರಿದರು. ಒಂದಷ್ಟು ನಾಟಕಗಳಲ್ಲಿ ಅಭಿನಯಿಸಿ ನಟನೆಯಲ್ಲಿ ಪಳಗಿದ ಯಶ್ ತದ ನಂತರ ಸಣ್ಣ ಪುಟ್ಟ ಪಾತ್ರಗಳಿಗೆ ಬಣ್ಣ ಹಚ್ಚುವ ಮೂಲಕ ಕಿರುತೆರೆಯಲ್ಲಿ ಗುರುತಿಸಿಕೊಂಡರು. ತದ ನಂತರ ಜಂಭದ ಹುಡುಗಿ ಎಂಬ ಚಿತ್ರದಲ್ಲಿ ಸೆಕೆಂಡ್ ಹೀರೊ ಆಗಿ ನಟಿಸಿದರು. ಆದರೆ ಈ ಸಿನಿಮಾ ಹೇಳಿಕೊಳ್ಳುವಂತಹ ಹೆಸರು ತಂದುಕೊಡಲಿಲ್ಲ. ತದ ನಂತರ ರಾಕಿ ,ಕಳ್ಳರ ಸಂತೆ ಚಿತ್ರದಲ್ಲಿ ಅಭಿನಯಿಸುತ್ತಾರೆ. ಆದರೆ ಯಶ್ ಅವರಿಗೆ ಜನಪ್ರಿಯತೆ ಜೊತೆಗೆ ಹೆಸರು ತಂದುಕೊಟ್ಟ ಸಿನಿಮಾ ಅಂದರೆ ಅದು ಶಶಾಂಕ್ ನಿರ್ದೇಶನದಲ್ಲಿ ಮೂಡಿಬಂದ ಮೊಗ್ಗಿನ ಮನಸ್ಸು ಎಂಬ ಸಿನಿಮಾ.

ಈ ಚಿತ್ರದಲ್ಲಿ ರಾಧಿಕಾ ಪಂಡಿತ್ ಅವರಿಗೆ ಜೋಡಿಯಾಗಿ ಯಶ್ ನಟಿಸಿದ್ದರು. ಈ ಚಿತ್ರದ ನಟನೆಗೆ ಯಶ್ ಅವರಿಗೆ ಅವಾರ್ಡ್ ಕೂಡ ಸಿಗುತ್ತದೆ. ಬಳಿಕ ಯಶ್ ಅವರಿಗೆ ಬ್ರೇಕ್ ನೀಡಿದ್ದು ಕಿರಾತಕ ಸಿನಿಮಾ. ಅದಾದ ಬಳಿಕ ಗೂಗ್ಲಿ ಚಿತ್ರ ಮತ್ತೊಂದು ಯಶಸ್ಸು, ಗಜ ಕೇಸರಿ, ಮಿಸ್ಟರ್ ಅಂಡ್ ಮಿಸಸ್ ರಾಮಾಚಾರಿ ಸಿನಿಮಾ ಬರೋಬ್ಬರಿ ಐವತ್ತು ಕೋಟಿ ಕಲೆಕ್ಷನ್ ಮಾಡುವ ಮೂಲಕ ಯಶ್ ಅವರಿಗೆ ತಮ್ಮ ಸಿನಿ ಕೆರಿಯರ್ ನಲ್ಲಿ ಮತ್ತೊಂದು ಉತ್ತುಂಗತೆಗೆ ಹೆಜ್ಜೆ ಇಡಲು ಸಹಕಾರಿ ಆಗುತ್ತದೆ. ಇದಾದ ಬಳಿಕ ಪ್ರಶಾಂತ್ ನೀಲ್ ಅವರ ಕೆಜಿಎಫ್ ಚಿತ್ರ ಯಶ್ ಅವರನ್ನ ರಾಷ್ಟ್ರ ಮಾತ್ರ ಅಲ್ಲದೆ ಅಂತರಾಷ್ಟ್ರೀಯ ಮಟ್ಟದಲ್ಲಿ ಅಪಾರ ಜನಪ್ರಿಯತೆ ತಂದು ಕೊಡುತ್ತದೆ.

ಇದಾದ ಬಳಿಕ ಯಶ್ ಅವರು ನ್ಯಾಶನಲ್ ಸ್ಟಾರ್ ಆಗಿ ವರ್ಲ್ಡ್ ವೈಸ್ ಗುರುತಿಸಿಕೊಂಡಿದ್ದಾರೆ. ಕೇವಲ ಒಬ್ಬ ಸಾಮಾನ್ಯ ಡ್ರೈವರ್ ಮಗ ಇಂದು ಭಾರತೀಯ ಚಿತ್ರರಂಗದ ಸ್ಟಾರ್ ನಟನಾಗಿ ಸಾಧನೆ ಮಾಡಿದ್ದಾರೆ. ಊರಿಗೆ ರಾಜನಾದರು ಮನೆಗೆ ಮಗ ಎಂಬಂತೆ ತನ್ನಗ ಒಬ್ಬ ಸ್ಟಾರ್ ನಟ ಆಗಿದ್ದರು ಕೂಡ ಅವರ ತಂದೆ ತಾವು ಮೊದಲು ಹೇಗಿದ್ದರೋ ಅದೇ ರೀತಿ ಈಗಲೂ ಕೂಡ ಸರಳವಾಗಿಯೇ ಜೀವನ ನಡೆಸುತ್ತಿದ್ದಾರೆ. ಸದ್ಯಕ್ಕೆ ತಮ್ಮ ಡ್ರೈವರ್ ವೃತ್ತಿಯಿಂದ ನಿವೃತ್ತಿ ಪಡೆದುಕೊಂಡು ತಮ್ಮ ಮಗ ಯಶ್ ಖರೀದಿ ಮಾಡಿರುವ ಹತ್ತು ಎಕರೆ ಜಮೀನನಲ್ಲಿ ತೋಟ ಮಾಡಿಕೊಂಡು ತಮ್ಮ ಪತ್ನಿಯೊಟ್ಟಗೆ ಕೃಷಿಕರಾಗಿ ತಮ್ಮ ಊರಿನಲ್ಲಿ ನೆಲೆಸಿದ್ದಾರೆ. ಒಟ್ಟಾರೆಯಾಗಿ ನಟ ಯಶ್ ಅವರು ತಾವು ಕಂಡ ಕನಸನ್ನು ನನಸಾಗಿ ಮಾಡಿಕೊಂಡು ತಮ್ಮ ಪೋಷಕರನ್ನ ಚೆನ್ನಾಗಿ ನೋಡಿಕೊಳ್ಳುತ್ತಿದ್ದಾರೆ.

ಶ್ರೀ ರಾಘವೇಂದ್ರ ಸ್ವಾಮಿಗಳು ಅರ್ಚಕ ಮನೆತನದವರು ಹಾಗೂ ಪ್ರಧಾನ ಗುರುಗಳು ಮೊಬೈಲ್ ಸಂಖ್ಯೆ 9538866755 ಇವರು ದುರ್ಗಾ ಉಪಾಸನಾ ಮತ್ತು ಕೇರಳದ ವಿಶಿಷ್ಟ ಅನುಷ್ಠಾನ ಪೂಜೆಗಳಿಂದ ತಮ್ಮಲ್ಲಿ ಉಲ್ಬಣಿಸುವ ಸಕಲ ಸಮಸ್ಯೆಗಳಿಗೆ ಪರಿಹಾರ ಮತ್ತು ಮಾರ್ಗದರ್ಶನ ತಿಳಿಸಿಕೊಡುತ್ತಾರೆ ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಜಾತಕ ನಿರೂಪಣೆ ಮಾಡುತ್ತಾರೆ 9538866755 ನಿಮ್ಮ ಸಮಸ್ಯೆಗಳಾದ ಅನಾರೋಗ್ಯ ಸಂಬಂಧಿಸಿದ ಸಮಸ್ಯೆಗಳು ಸಂತಾನ ಸಾಲದ ಬಾಧೆ ಪ್ರೀತಿಯಲ್ಲಿ ನಂಬಿ ಮೋಸ ವಿವಾಹ ಉದ್ಯೋಗದಲ್ಲಿ ತೊಂದರೆ ಸತಿ ಪತಿ ಕಲಹ ಪ್ರೇಮ ವಿಚಾರ ಅತ್ತೆ-ಸೊಸೆ ಕಲಹ ದೃಷ್ಟಿ ದೋಷ ಮನೆಯಲ್ಲಿ ದಟ್ಟದರಿದ್ರ ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು ವ್ಯಾಪಾರದಲ್ಲಿ ತೊಂದರೆ ಕುಟುಂಬ ಕಷ್ಟ ಹಣಕಾಸಿನ ಅಡಚಣೆ ಪ್ರೇಮ ವೈಫಲ್ಯ ಹಾಗೂ ಸ್ತ್ರೀ ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ ಅಂಜನಾ ಪ್ರಶ್ನೆ ಅಷ್ಟಮಂಡಲ ಪ್ರಶ್ನೆ ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟಕಾರ್ಪಣ್ಯಗಳಿಗೆ ಶಾಶ್ವತ ಪರಿಹಾರ ಮತ್ತು ಉತ್ತಮ ಸಲಹೆ ಪಡೆದುಕೊಳ್ಳಿ ಕೂಡಲೇ ಕರೆ ಮಾಡಿ 9538866755.

Leave a Reply

%d bloggers like this: