ರೆಸ್ಟೋರೆಂಟ್ ಅಲ್ಲಿ ಭಾರತದ ಖ್ಯಾತ ಕ್ರಿಕೆಟ್ ಆಟಗಾರನ ಜೊತೆ ಕಾಣಿಸಿಕೊಂಡ ಸೈಫ್ ಅಲಿ ಖಾನ್ ಮಗಳು

ಬಾಲಿವುಡ್ ಸ್ಟಾರ್ ನಟ ಸೈಫ್ ಅಲಾಖಾನ್ ಪುತ್ರಿ ಸಾರಾ ಅಲಿಖಾನ್ ಬಾಯ್ ಫ್ರೆಂಡ್ ಜೊತೆ ಇರೋ ವೀಡಿಯೋ ವೈರಲ್ ಆಗಿದೆ. ಸಾರಾ ಅಲಿಖಾನ್ ಬಾಲಿವುಡ್ನ ಯುವ ಸ್ಟಾರ್ ನಟಿ. ಸಾರಾ ಅಲಿಖಾನ್ ಕ್ರಿಕಟಿಗನೊಬ್ಬನ ಜೊತೆ ರಿಲೇಶಿನ್ಶಿಪ್ ನಲ್ಲಿರೋದು ಈಗಾಗಲೇ ಗೊತ್ತಿರೋ ವಿಚಾರ. ಈ ಸಿನಿಮಾ ಮತ್ತು ಕ್ರಿಕೆಟ್ ಕ್ಷೇತ್ರಕ್ಕೆ ಒಂದು ಅವಿನಾಭಾವ ಸಂಬಂಧ ಅಂತೇಳ್ಬೋದು. ಯಾಕಪ್ಪಾ ಅಂದ್ರೆ ಅನೇಕ ಬಾಲಿವುಡ್ ತಾರೆಯರು ಕ್ರಿಕೆಟಿಗರನ್ನ ಪ್ರೀತಿಸಿ ಮದುವೆ ಆಗೋದು ಕಾಮನ್ ಆಗಿ ಬಿಟ್ಟಿದೆ. ಅದರಂತೆ ನಟಿ ಸಾರಾ ಅಲಿಖಾನ್ ಅವರು ಕೂಡ ಕ್ರಿಕೆಟಿಗ ಶುಭ್ ಮನ್ ಗಿಲ್ ಅವರೊಟ್ಟಿಗೆ ಪ್ರೀತಿ ಪ್ರೇಮದಲ್ಲಿದ್ದಾರೆ. ಆದರೆ ಇತ್ತೀಚೆಗೆ ಈ ಪ್ರೇಮಿ ಜೋಡಿಗಳು ಸೋಶಿಯಲ್ ಮೀಡಿಯಾ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಪರಸ್ಪರ ಇಬ್ಭರು ಒಬ್ಬರೊಬ್ಬರನ್ನ ಅನ್ ಫಾಲೋ ಮಾಡಿಕೊಂಡಿದ್ದರು.

ಇದರ ಹಿನ್ನೆಲೆಯಲ್ಲಿ ಬಿಟೌನ್ ನಲ್ಲಿ ಇಬ್ಬರ ನಡುವೆ ಎಲ್ಲವೂ ಸರಿ ಇಲ್ಲ. ಸಾರಾ ಅಲಿಖಾನ್ ಮತ್ತು ಶುಭ್ ಮನ್ ಗಿಲ್ ಬ್ರೇಕಪ್ ಮಾಡಿಕೊಂಡಿದ್ದಾರೆ ಎಂಬ ಸುದ್ದಿ ಜೋರಾಗಿ ಸದ್ದು ಮಾಡಿತು. ಇದಕ್ಕೆ ಈ ಜೋಡಿ ಕೂಡ ಯಾವುದೇ ರೀತಿ ಸ್ಪಷ್ಟನೆ ನೀಡಿರಲಿಲ್ಲ. ಆದರೆ ಇದೀಗ ಏಕಾಏಕಿ ಸಾರಾ ಅಲಿಖಾನ್ ಮತ್ತು ಶುಭ್ ಮನ್ ಗಿಲ್ ಇಬ್ಬರು ರೆಸ್ಟೋರೆಂಟ್ ವೊಂದರಲ್ಲಿ ಒಟ್ಟಿಗೆ ಡಿನ್ನರ್ ಮಾಡಿದ್ದಾರೆ. ಈ ಫೋಟೋ ಇದೀಗ ಸೋಶಿಯಲ್ ಮೀಡಿಯಾಗಳಲ್ಲಿ ವೈರಲ್ ಆಗಿದೆ. ಸಾರಾ ಮತ್ತು ಶುಭ್ ಮನ್ ಗಿಲ್ ಇಬ್ಬರು ಪರಸ್ಪರ ಊಟ ಮಾಡುತ್ತಾ ಮಾತನಾಡುತ್ತಿರೋ ವೀಡಿಯೋ ನೋಡಿ ಇಬ್ಬರ ನಡುವೆ ಅಂತಾದ್ದು ಏನೂ ಆಗಿಲ್ಲ. ಪರಸ್ಪರ ಇಬ್ಬರೂ ಚೆನ್ನಾಗಿಯೇ ಇದ್ದಾರೆ ಎಂದು ತಿಳಿದು ಬಂದಿದೆ. ಆದರೆ ಈ ಇಬ್ಬರು ಪ್ರೇಮಿಗಳ ಜೋಡಿ ಯಾವ ರೆಸ್ಟೋರೆಂಟ್ ವೊಂದರಲ್ಲಿ ಭೇಟಿ ಮಾಡಿತು ಎಂದು ಸ್ಪಷ್ಟವಾಗಿ ತಿಳಿದು ಬಂದಿಲ್ಲ.