ರೆಬೆಲ್ ಸ್ಟಾರ್ ಅಂಬರೀಷ್ ನೆಲೆಸಿದ್ದ ಬೆಂಗಳೂರಿನ ಐಶಾರಾಮಿ ಮನೆ ಮೊದಲ ಬಾರಿ ನೋಡಿ ಎಷ್ಟು ಸುಂದರವಾಗಿದೆ

ಕನ್ನಡ ಚಿತ್ರರಂಗದ ಖ್ಯಾತ ನಟರಾದ ರೆಬೆಲ್ ಸ್ಟಾರ್ ಅಂಬರೀಶ್ ಅವರು ಇಹಲೋಕ ತ್ಯಜಿಸಿ ಎರಡು ವರ್ಷಗಳು ಪೂರೈಸಿದರು ಕೂಡ ಅವರ ನೆನಪು,ವ್ಯಕ್ತಿತ್ವ ಗುಣ ಕರುನಾಡಿನಲ್ಲಿ ಅಜರಾಮರ. ಒರಟುತನದ ಮಾತಿದ್ದರು ಕೂಡ ಹೃದಯದಲ್ಲಿ ಕಪಟ-ಕಲ್ಮಶವಿಲ್ಲದ ಅಂಬರೀಶ್ ಕಲಿಯುಗ ಕರ್ಣ ನಂತೆ ಬಡ-ಬಗ್ಗರಿಗೆ ಸಹಾಯ ಮಾಡಿದ್ದಾರೆ.ಕಷ್ಟ ಹೇಳಿಕೊಂಡು ತನ್ನ ಮನೆ ಬಾಗಿಲಿಗೆ ಬರವವರನ್ನ ಬರಿಗೈಲಿ ಕಳಿಸದೆ ಕೈಲಾದಷ್ಟು ನೆರವು ನೀಡುತ್ತದ್ದರು ಅಂಬರೀಶ್.ಮಳವಳ್ಳಿ ಹುಚ್ಚೆಗೌಡ ಅಮರನಾಥ್ ರೆಬೆಲ್ ಸ್ಟಾರ್ ಅಂಬರೀಶ್ ಆಗಿದ್ದೇ ರೋಚಕ. ಚಿತ್ರ ಬ್ರಹ್ಮ ಎಂದೇ ಹೆಸರು ವಾಸಿಯಾಗಿದ್ದ ಖ್ಯಾತ ನಿರ್ದೇಶಕ ಪುಟ್ಟಣ್ಣ ಕಣಗಾಲ್ ಅವರ ನಾಗರಹಾವು ಸಿನಿಮಾದ ಮೂಲಕ ಬಣ್ಣದ ಲೋಕಕ್ಕೆ ಹೆಜ್ಜೆ ಇಟ್ಟ ಅಂಬರೀಶ್ ತದ ನಂತರ ಸ್ಯಾಂಡಲ್ ವುಡ್ ನಲ್ಲಿ ನೆಲೆನಿಂತು ವಿರಾಜಮಾನವಾಗಿ ಬದುಕು ಸಾಗಿಸಿದ್ದವರು.ಇಂದು ಬೆಂಗಳೂರಿನ ಚಾಮರಾಜಪೇಟೆಯಲ್ಲಿ ಕಲಾವಿದರ ಸಂಘ ನಿರ್ಮಾಣ ಆಗಿದೆ ಅಂದರೆ ಅದಕ್ಕೆ ಅಂಬರೀಶ್ ಅವರ ಕೊಡುಗೆ ಅಪಾರ ಎನ್ನಬಹುದು.

ಮಾಜಿ ಸಿ.ಎಂ ಸಿದ್ದರಾಮಯ್ಯ ಅವರ ಸಚಿವ ಸಂಪುಟದಲ್ಲಿ ವಸತಿ ಸಚಿವರಾಗಿದ್ದ ಅಂಬರೀಶ್ ಕಲಾವಿದರ ಸಂಘ ಕಟ್ಟಡ ನಿರ್ಮಾಣ ಆಗಲು ಸರ್ಕಾರದಿಂದ ದೊರೆಯಬಹುದಾದ ಎಲ್ಲ ರೀತಿಯ ಅನುದಾನ ಕೊಡಿಸುವಲ್ಲಿ ಮುಂದಾಳತ್ವ ವಹಿಸಿ ಕಾರ್ಯ ನಿರ್ವಹಿಸದರು. ಹೀಗೆ ರೆಬೆಲ್ ಸ್ಟಾರ್ ಅಂಬರೀಶ್ ಅವರ ಸಿನಿಮಾ,ರಾಜಕೀಯ,ಸಮಾಜಸೇವೆಗಳಲ್ಲಿ ತೊಡಗಿಸಿಕೊಂಡು ಉತ್ತಮ ಹೆಸರು ಸಂಪಾದಿಸಿದರು. ಸ್ಯಾಂಡಲ್ ವುಡ್,ಕಾಲಿವುಡ್,ಟಾಲಿವುಡ್ ಸೇರಿದಂತೆ ಮಾಲಿವುಡ್ ಅಷ್ಟೇ ಅಲ್ಲದೆ ದೇಶ ವಿದೇಶಗಳಲ್ಲಿ ಅಪಾರ ಸ್ನೇಹ ಬಳಗ ಹೊಂದಿದ್ದರು.ಅಂಬರೀಶ್ ಅವರ ಬದುಕು ಬಹಳ ವೈವಿಧ್ಯಮವಾಗಿತ್ತು.ಅವರ ವೈಯಕ್ತಿಕ ಜೀವನದಲ್ಲಿಯೂ ಕೂಡ ತನ್ನ ಮಗ ಅಭಿಷೇಕ್,ಧರ್ಮ ಪತ್ನಿ ಸುಮಲತಾ ಅವರೊಂದಿಗೆ ಸುಂದರ ಬದುಕು ನಡೆಸಿದ ಅಂಬರೀಶ್ ಸಂಪೂರ್ಣ ಜೀವನ ನಡೆಸಿದರು.

ಇದುವರೆಗೆ ಅಂಬರೀಶ್ ನಾಗರಹಾವು ಸಿನಿಮಾದಿಂದ ದರ್ಶನ್ ಅಭಿನಯದ ಕುರುಕ್ಷೇತ್ರ ಚಿತ್ರದವರೆಗೆ ಬರೋಬ್ಬರಿ 220 ಕ್ಕೂ ಹೆಚ್ಚು ಚಿತ್ರಗಳಲ್ಲಿ ನಟಿಸಿರುವ ಅಂಬರೀಶ್ ಅವರು ಐಷಾರಾಮಿ ಮನೆಯಲ್ಲಿ ವಾಸ ಮಾಡುತ್ತಿದ್ದರು.ಬೆಂಗಳೂರು ಸುತ್ತಮುತ್ತಾ ಚಿತ್ರೀಕರಣವಿದ್ದಾಗ ಹೆಚ್ಚು ಕಾಲ ಜೆ.ಪಿ ನಗರದಲ್ಲಿರುವ ಅವರ ಐಷಾರಾಮಿ ಮನೆಯಲ್ಲಿ ಉಳಿದುಕೊಳ್ಳುತ್ತಿದ್ದರು.ಅವರ ಈ ಮನೆಯಲ್ಲಿ ಒಳವಿನ್ಯಾಸದ ಖರ್ಚು ಅತ್ಯಂತ ದುಬಾರಿಯಾಗಿದೆ.ಇತ್ತೀಚೆಗೆ ನಟಿ,ಸಂಸದೆ ಆಗಿರುವ ಸುಮಲತಾ ಅಂಬರೀಷ್ ಅವರು ಈ ಮನೆಯನ್ನು ಹೊಸದಾಗಿ ಆಲ್ಟ್ರೆಶನ್ ಮಾಡಿಸಿದ್ದರು.ಅಂಬರೀಶ್ ಅವರು ದೈಹಿಕವಾಗಿ ದೂರವಾಗಿದ್ದರು ಸಹ ಕನ್ನಡಿಗರ ಮನದಲ್ಲಿ ಶಾಶ್ವತ ಸ್ಥಾನ ಪಡೆದಿದ್ದಾರೆ.

Leave a Reply

%d bloggers like this: