ರಿಯಾಲಿಟಿ ಶೋ ಅಷ್ಟೇ ಅಲ್ಲ ಈಗ ಜಾಹಿರಾತಿನಲ್ಲೂ ಮಿಂಚುತ್ತಿದ್ದಾರೆ ಪುಟಾಣಿ ವಂಶಿಕಾ

ಕನ್ನಡದ ಖ್ಯಾತ ನಟ ಆನಂದ್ ಅವರ ಪುತ್ರಿ ಇದೀಗ ಕಿರುತೆರೆ ಮತ್ತು ಜಾಹೀರಾತುಗಳಲ್ಲಿ ಕಾಣಿಸಿಕೊಳ್ಳುವ ಮೂಲಕ ತನ್ನ ಅತ್ಯಂತ ಚಿಕ್ಕ ವಯಸ್ಸಿನಲ್ಲಿಯೇ ಭಾರಿ ದೊಡ್ಡ ಮೊತ್ತದ ಸಂಭಾವನೆ ಪಡೆದಿದ್ದಾಳೆ. ಹೌದು ಮರದಂತೆ ನೊಗ ಅಪ್ಪನಂತೆ ಮಗ ಅನ್ನೋ ಒಂದು ಗಾದೆ ನಮ್ಮಲ್ಲಿದೆ. ಅದೇ ರೀತಿಯಾಗಿ ಈ ಪುಟಾಣಿ ಪೋರಿ ತನ್ನ ತಂದೆ ಮಾಸ್ಟರ್ ಆನಂದ್ ಅವರಂತೆಯೇ ಮಾತಿನಲ್ಲಿ ತುಂಬಾ ಚುರುಕು. ಮಾಸ್ಟರ್ ಆನಂದ್ ಅಂತಾನೇ ಕರೆಸಿಕೊಳ್ಳುವ ನಟ, ನಿರೂಪಕ, ನಿರ್ದೇಶಕರಾಗಿ ಗುರುತಿಸಿಕೊಂಡಿರುವ ಆನಂದ್ ಅವರು 2010ರಲ್ಲಿ ಯಶಸ್ವಿನಿ ಅವರೊಟ್ಟಿಗೆ ದಾಂಪತ್ಯ ಜೀವನಕ್ಕೆ ಹೆಜ್ಜೆ ಇಟ್ಟಿದ್ದಾರೆ. ಸಿನಿಮಾ, ಕಿರುತೆರೆ ಅಂತ ಸದಾ ಒಂದಲ್ಲ ಒಂದು ಕಾರ್ಯ ಚಟುವಟಿಕೆಗಳಲ್ಲಿ ತೊಡಗಿಕೊಂಡಿರುವ ಮಾಸ್ಟರ್ ಆನಂದ್ ಅವರು ಸದ್ಯಕ್ಕೆ ಸಿನಿಮಾಗಳಿಗಿಂತ ಹೆಚ್ಛಾಗಿ ಕಿರುತೆರೆಯ ರಿಯಾಲಿಟಿ ಶೋಗಳ ನಿರೂಪಕರಾಗಿರೇ ಹೆಚ್ಚು ಕ್ರಿಯಾಶೀಲರಾಗಿದ್ದಾರೆ.

ಬಾಲ ನಟರಾಗಿ ತಮ್ಮ ಮೊಣಚಾದ ನಾಜೂಕು ಪಟ ಪಟ ಅಂತ ಮಾತನಾಡುವ ಮೂಲಕ ಕನ್ನಡ ಸಿನಿ ಪ್ರೇಕ್ಷಕರನ್ನ ರಂಜಿಸುತ್ತಾ ಮೂರ್ನಾಲ್ಕೂ ದಶಕಗಳಿಂದ ಕನ್ನಡಿಗರ ಮನೆ ಮನದಲ್ಲಿ ಹೆಸರಾಗಿರುವ ಮಾಸ್ಟರ್ ಆನಂದ್ ಇದೀಗ ತಮ್ಮ ಮಗಳನ್ನ ಕೂಡ ತನ್ನಂತೆಯೇ ತಯಾರಿ ಮಾಡಿದ್ದಾರೆ ಅನ್ನಬಹುದು. ಹೌದು ಮಾಸ್ಟರ್ ಆನಂದ್ ಅವರ ಮಗಳು ವಂಶಿಕಾ ನಮ್ಮಮ್ಮ ಸೂಪರ್ ಸ್ಟಾರ್ ಎಂಬ ರಿಯಾಲಿಟಿ ಶೋನಲ್ಲಿ ಭಾಗವಹಿಸಿದ್ದರು. ಅದಷ್ಟೇ ಅಲ್ಲದೆ ಗಿಚ್ಚಿಗಿಲಿಗಿಲಿ ಎಂಬ ಹಾಸ್ಯಮಯ ರಿಯಾಲಿಟಿ ಶೋನಲ್ಲಿಯೂ ಕೂಡ ನಟಿಸಿದ್ದಾರೆ. ಪೋರಿ ವಂಶಿಕಾ ತನ್ನ ತಂದೆ ಮಾಸ್ಟರ್ ಆನಂದ್ ಅವರಂತೆ ಮಾತಿನಲ್ಲಿ ತುಂಬಾ ಚ್ಯೂಟಿ. ನಮ್ಮಮ್ಮ ಸೂಪರ್ ಸ್ಟಾರ್ ರಿಯಾಲಿಟಿ ಶೋನಲ್ಲಿ ಮಾಸ್ಟರ್ ಆನಂದ್ ಪತ್ನಿ ಯಶಸ್ವಿನಿ ಮತ್ತು ಪುತ್ರಿ ವಂಶಿಕಾ ಭಾಗವಹಿಸಿದ್ದರು.

ಈ ರಿಯಾಲಿಟಿ ಶೋ ನಲ್ಲಿ ಈ ತಾಯಿ ಮಗಳು ಜಯಶೀಲರಾಗುತ್ತಾರೆ. ಇದಾದ ನಂತರ ವಂಶಿಕಾ ಅವರಿಗೆ ಕಿರುತೆರೆಯಲ್ಲಿ ಭಾರಿ ಬೇಡಿಕೆ ಉಂಟಾಗಿದೆ. ಮೂಲಗಳ ಪ್ರಕಾರ ವಂಶಿಕಾ ಅವರಿಗೆ ಧಾರಾವಾಹಿ ಮತ್ತು ಸಿನಿಮಾಗಳಲ್ಲಿ ಅವಕಾಶ ಸಿಕ್ಕಿದೆ ಎಂದು ಹೇಳಲಾಗುತ್ತಿದೆ. ಇನ್ನು ಬಾಲ ನಟಿ ವಂಶಿಕಾ ಇತ್ತೀಚೆಗೆ ತನ್ನ ತಂದೆ ಮಾಸ್ಟರ್ ಆನಂದ್ ಅವರೊಟ್ಖಿಗೆ ವಿಕ್ಸ್ ಪ್ರಾಡಕ್ಟ್ ಜಾಹೀರಾತಿನಲ್ಲಿ ಕಾಣಿಸಿಕೊಂಡಿದ್ದಾರೆ. ಈ ಜಾಹೀರಾತಿನಲ್ಲಿ ನಟಿಸುವುದಕ್ಕೆ ಕಂಪನಿಯು ವಂಶಿಕಾಳಿಗೆ ಭಾರಿ ಮೊತ್ತದ ಸಂಭಾವನೆಯನ್ನ ನೀಡಿದೆ ಎಂದು ತಿಳಿದು ಬಂದಿದೆ. ಈ ವಿಕ್ಸ್ ಪ್ರಾಡಕ್ಟ್ ಜಾಹೀರಾತಿನಲ್ಲಿ ಮಾಸ್ಟರ್ ಆನಂದ್, ಪತ್ನಿ ಯಶಸ್ವಿನಿ ಮತ್ತು ವಂಶಿಕಾ ಕಾಣಿಸಿಕೊಂಡಿದ್ದಾರೆ. ಈ ವಿಕ್ಸ್ ಜಾಹೀರಾತನ್ನ ಮಾಸ್ಟರ್ ಆನಂದ್ ಅವರು ತಮ್ಮ ಸೋಶಿಯಲ್ ಮೀಡಿಯಾ ಖಾತೆಯಲ್ಲಿ ಶೇರ್ ಮಾಡಿಕೊಂಡಿದ್ದಾರೆ.