ರವಿಚಂದ್ರನ್ ತನ್ನ ತಂದೆಯ ಒತ್ತಾಯಕ್ಕಾಗಿ ಮದುವೆಯಾದ, ಆದರೆ ತಾನು ಪ್ರೀತಿಸಿದ ಹುಡುಗಿ ಮಾತ್ರ ಇವರೇ

ಕನ್ನಡ ಚಲನಚಿತ್ರರಂಗದ ಬಹುಮುಖ ಪ್ರತಿಭೆ ಪ್ರೇಮಲೋಕದ ಒಡೆಯ ಕ್ರೇಜಿ಼ಸ್ಟಾರ್ ವಿ.ರವಿಚಂದ್ರನ್ ತಾನು ಪ್ರೀತಿಸಿದ ಹುಡುಗಿಯನ್ನ ಯಾಕೆ ಮದುವೆ ಆಗಲಿಲ್ಲ ಗೊತ್ತಾ..ಕನಸುಗಾರ ರವಿಚಂದ್ರನ್ ತನ್ನ ಸಿನಿಮಾಗಳಲ್ಲಿ ಪ್ರೀತಿ ಪ್ರೇಮದ ಬಗ್ಗೆ ಬಹಳ ಸೊಗಸಾಗಿ ಕಲ್ಪನೆಯನ್ನೂ ಮೀರಿಸುವಂತಹ ಹಾಗೇ ತೋರಿಸುವ ರವಿಚಂದ್ರನ್ ತಮ್ಮ ವೈಯಕ್ತಿಕ ಜೀವನದಲ್ಲಿ ತಮ್ಮ ಪ್ರೀತಿಯನ್ನೇ ಯಾಕೆ ತ್ಯಾಗ ಮಾಡಿದರು ಎಂಬ ಪ್ರಶ್ನೆ ಹಲವರನ್ನ ಕಾಡುತ್ತದೆ. ಅದಕ್ಕೂ ಮುನ್ನ ಕ್ರೇಜಿ಼ಸ್ಟಾರ್ ವಿ.ರವಿಚಂದ್ರನ್ ಅವರು ಕನ್ನಡ ಚಿತ್ರರಂಗದಲ್ಲಿ ನಡೆದು ಬಂದ ಹೆಜ್ಜೆಯನ್ನ ಗಮನಿಸೋಣ. 90 ರ ದಶಕದಲ್ಲಿ ಕ್ರೇಜಿ಼ಸ್ಟಾರ್ ವಿ.ರವಿಚಂದ್ರನ್ ಅಂದ್ರೆ ಸಾಕು ಒಮ್ಮೆಲೆ ಹೆಂಗಳೆಯರ ಮನ ಝಲ್ಲೆನ್ನುತ್ತದೆ. ಅಷ್ಟರ ಮಟ್ಟಿಗೆ ಹೆಂಗಳೆಯರ ಮನ ಗೆದ್ದಿದ್ದರು ರವಿಚಂದ್ರನ್. 90 ರ ದಶಕದಲ್ಲಿ ಸಿನಿಮಾಲೋಕಕ್ಕೆ ಹೊಸ ಬೆರಗನ್ನು ನೀಡಿದ ಖ್ಯಾತಿ ವಿ.ರವಿಚಂದ್ರನ್ ಅವರದ್ದು. ತಂದೆ ವೀರಸ್ವಾಮಿ ಅವರು ಕನ್ನಡ ಚಿತ್ರರಂಗದ ಖ್ಯಾತ ನಿರ್ಮಾಪಕರಾಗಿದ್ದರು ಕೂಡ ಖಳ ನಟನಾಗಿ ಖದೀಮ ಕಳ್ಳರು ಚಿತ್ರದ ಮೂಲಕ ಬೆಳ್ಳಿತೆರೆಗೆ ಪಾದಾರ್ಪಣೆ ಮಾಡಿದರು.

ತದ ನಂತರ ಪ್ರೇಮಲೋಕ ಎಂಬ ಕಾಲೇಜ್ ಲವ್ ಸ್ಟೋರಿ ಮೂಲಕ ನಾಯಕ ನಟರಾಗಿ ಚಂದನವನದಲ್ಲಿ ಹೊಸ ಸಂಚಲನ ಸೃಷ್ಟಿ ಮಾಡಿಬಿಟ್ಟರು. ಪ್ರೇಮಲೋಕ ಸಿನಿಮಾದಿಂದ ರವಿಚಂದ್ರನ್ ಅವರು ರಾತ್ರೋರಾತ್ರಿ ಸ್ಟಾರ್ ಆಗಿ ಬಿಟ್ಟರು. ರವಿಚಂದ್ರನ್ ಅವರು ಕೇವಲ ನಟನೆ ಮಾತ್ರ ಅಲ್ಲದೆ ಸಿನಿಮಾ ನಿರ್ಮಾಣ ನಿರ್ದೇಶನ, ಸಾಹಿತ್ಯ, ನೃತ್ಯ ಹೀಗೆ ಸಿನಿಮಾದ ಪ್ರತಿಯೊಂದು ವಿಭಾಗದಲ್ಲಿಯೂ ಕೂಡ ತೊಡಗಿಸಿಕೊಂಡು ಒನ್ ಮ್ಯಾನ್ ಶೋ ಆಗಿದ್ದವರು. ಇವರು ಕನ್ನಡ ಚಿತ್ರರಂಗಕ್ಕೆ ತಮ್ಮ ಸಿನಿಮಾಗಳ ಮೂಲಕ ಅಪಾರ ಸೇವೆ ಸಲ್ಲಿಸಿದ್ದಾರೆ. ಅದರಲ್ಲೂ ವಿಶೇಷವಾಗಿ ಅಂದರೆ ಕನ್ನಡದ ಚಿತ್ರಗಳಿಗೆ ಬಾಲಿವುಡ್ ಮತ್ತು ಪರಭಾಷೆಯ ಬೆಡಗಿಯರನ್ನ ಪರಿಚಯಿಸಿದ ಕೀರ್ತಿ ಇವರದ್ದು. ಅವರಲ್ಲಿ ಮಧುಬಾಲಾ, ಜೂಹಿ ಚಾವ್ಲಾ, ಖುಷ್ಬೂ, ರೋಜಾ, ಮೂನ್ ಮೂನ್ ಸೇನ್, ಶಿಲ್ಪಾ ಶೆಟ್ಟಿ, ಭಾನುಪ್ರಿಯ, ಮೀನಾ ಸೇರಿದಂತೆ ಅನೇಕ ಪರಭಾಷೆಯ ಪ್ರಸಿದ್ದ ನಟಿಯರನ್ನ ಕನ್ನಡ ಚಿತ್ರರಂಗಕ್ಕೆ ಪರಿಚಯಿಸಿದರು.

ಪ್ರೇಮಲೋಕ,ರಣಧೀರ ಅಂಜದ ಗಂಡು, ಯುದ್ದ ಕಾಂಡ, ರಾಮಾಚಾರಿ, ಅಣ್ಣಯ್ಯ,ಪುಟ್ನಂಜ,ಪ್ರೀತ್ಸೋದ್ ತಪ್ಪಾ,ಯಾರೇ ನೀನು ಚೆಲುವೆ,ಏಕಾಂಗಿ,ಮಲ್ಲ,ಹಠವಾದಿ ಹೀಗೆ ಅನೇಕ ಪ್ರೇಮಕಥಾಧಾರಿತ ಸಿನಿಮಾ ಮಾಡಿದ ರವಿಚಂದ್ರನ್ ಅವರು ಆಗಿದ್ದು ಮಾತ್ರ ಅರೆಂಜ್ ಮ್ಯಾರೇಜ್. ಹೌದು ಅದಕ್ಕೂ ಮುನ್ನ ರವಿಚಂದ್ರನ್ ಅವರು ಕಾಲೇಜು ದಿನಗಳಲ್ಲಿಯೇ ಒಬ್ಬಳನ್ನು ಪ್ರೀತಿಸಿದ್ದರಂತೆ. ಆದರೆ ಇವರಿಬ್ಬರ ಪ್ರೀತಿಗೆ ರವಿಚಂದ್ರನ್ ಅವರ ತಂದೆ ವೀರಾಸ್ವಾಮಿ ಅವರು ಒಪ್ಪದ ಕಾರಣ ತಮ್ಮ ಪ್ರೀತಿಯನ್ನ ತ್ಯಾಗ ಮಾಡಿದ ರವಿ ಅವರು 1986 ಫೆಬ್ರವರಿ 14.ರಂದು ತಮ್ಮ ಬಾಲ್ಯದ ಗೆಳತಿ ಸುಮತಿ ಅವರನ್ನ ತಮ್ಮ ಬಾಳ ಸಂಗಾತಿಯಾಗಿ ಸ್ವೀಕರಿಸುತ್ತಾರೆ. ಈ ದಂಪತಿಗಳಿಗೆ ಮನೋರಂಜನ್, ವಿಕ್ರಂ ಮತ್ತು ಗೀತಾಂಜಲಿ ಎಂಬ ಮೂವರು ಮಕ್ಕಳಿದ್ದಾರೆ. ಗೀತಾಂಜಲಿ ಅವರಿಗೆ ಕೆಲವು ವರ್ಷಗಳ ಹಿಂದೆಯಷ್ಟೇ ಅದ್ದೂರಿಯಾಗಿ ಮದುವೆ ಮಾಡಿಕೊಟ್ಟಿದ್ದಾರೆ ರವಿಚಂದ್ರನ್. ಇನ್ನು ಇವರಿಬ್ಬರು ಮಕ್ಕಳು ಮನೋರಂಜನ್ ಮತ್ತು ವಿಕ್ರಂ ಇಬ್ಬರು ಕೂಡ ಸ್ಯಾಂಡಲ್ ವುಡ್ ನಲ್ಲಿ ನಾಯಕ ನಟರಾಗಿ ಪಾದಾರ್ಪಣೆ ಮಾಡಿದ್ದಾರೆ.