ರವಿಚಂದ್ರನ್ ತಮ್ಮ ಬಾಲಾಜಿ ಸಿನೆಮಾದಿಂದ ಶಾಶ್ವತವಾಗಿ ದೊರವಾಗಿದ್ದು ಏಕೆ ಗೊತ್ತಾ? ಅಸಲಿ ಕಾರಣ ಏನು ಗೊತ್ತಾ?

ಹಣ, ಸಿನಿಮಾ ಹಿನ್ನೆಲೆ ಇದ್ದರೆ ಸಾಕು ಯಾರು ಬೇಕಾದರು ಹೀರೋ ಆಗಬಹುದು. ಬೆಳ್ಳಿ ಪರದೆಯಲ್ಲಿ ಮಿಂಚಬಹುದು ಎಂದು ಗಾಂಧಿನಗರದಲ್ಲಿ ಮಾತನಾಡಿಕೊಳ್ಳುತ್ತಾರೆ. ಆದರೆ ಹಣದ ಜೊತೆಗೆ ಕನ್ನಡ ಚಿತ್ರರಂಗದಲ್ಲಿ ಬಹುದೊಡ್ಡ ಸಿನಿಮಾ ಹಿನ್ನೆಲೆ ಹೊಂದಿದರು ಕೂಡ ನಟ ಬಾಲಾಜಿ ಅವರು ಚಂದನವನದಲ್ಲಿ ನೆಲೆ ಕಂಡುಕೊಳ್ಳಲು ಸಾಧ್ಯವಾಗಿಲ್ಲ. ಬಾಲಾಜಿ ಅವರು ಬೇರಾರು ಅಲ್ಲ. ಕನ್ನಡ ಚಿತ್ರರಂಗಕ್ಕೆ ಅನೇಕ ಸೂಪರ್ ಹಿಟ್ ಚಲನಚಿತ್ರಗಳನ್ನು ನೀಡಿ ಅಪಾರ ಕೊಡುಗೆ ನೀಡಿರುವ ಖ್ಯಾತ ನಿರ್ಮಾಪಕರಾದ ವೀರಾಸ್ವಾಮಿ ಅವರ ಪುತ್ರ. ಅಷ್ಟೇ ಅಲ್ಲದೆ ಸ್ಯಾಂಡಲ್ ವುಡ್ ನಟ, ನಿರ್ದೇಶಕ ಎವರ್ ಗ್ರಿನ್ ಸಾಂಗ್ ಗಳ ಸರದಾರ ಕ್ರೇಜಿ಼ ಸ್ಟಾರ್ ವಿ ರವಿಚಂದ್ರನ್ ಅವರ ಸೋದರ. ಇಷ್ಟೆಲ್ಲಾ ಸಿನಿಮಾ ಬ್ಯಾಗ್ರೌಂಡ್ ಇದ್ದರು ಕೂಡ ನಟ ಬಾಲಾಜಿ ಅವರಿಗೆ ಸಿನಿಮಾ ಕ್ಷೇತ್ರ ಕೈ ಹಿಡಿಯಲಿಲ್ಲ.

ಸ್ಯಾಂಡಲ್ ವುಡ್ ನಲ್ಲಿ ಈಗಾಗಲೇ ಅನೇಕ ಸ್ಟಾರ್ ಮಕ್ಕಳು ಚಿತ್ರರಂಗಕ್ಕೆ ಎಂಟ್ರಿ ಕೊಟ್ಟಿದ್ದಾರೆ. ಕೆಲವರಿಗೆ ಕಲಾ ಸರಸ್ವತಿ ಕೈ ಹಿಡಿದರೆ ಇನ್ನೂ ಕೆಲವರಿಗೆ ಪ್ರತಿಭೆ ಇದ್ದರು ಕೂಡ ಕೈ ಹಿಡಿಯುವುದಿಲ್ಲ. ಅಂತಹ ನಟರಲ್ಲಿ ಬಾಲಾಜಿ ಕೂಡ ಒಬ್ಬರು. ಬಾಲಾಜಿ ಅಂದಾಕ್ಷಣ ಇವರು ನೆನಪಿಗೆ ಬರುವುದು ಕಡಿಮೆ. ಆದರೆ ಕ್ರೇಜಿ಼ಸ್ಟಾರ್ ವಿ. ರವಿಚಂದ್ರನ್ ಅವರ ಸೋದರ ಅಂದಾಗ ತಟ್ಟನೆ ಅಹಂ ಪ್ರೇಮಾಸ್ಮಿ ಚಿತ್ರದಲ್ಲಿ ನಾಯಕ ನಟರಾಗಿ ಗಮನ ಸೆಳೆದ ನಟ ಬಾಲಾಜಿ ಅಂದಾಗ ನೆನಪಿಗೆ ಬರುತ್ತಾರೆ. ನಟ ಬಾಲಾಜಿ ಅವರು ನನಪಿಗೆ ಬಾರದೇ ಹೋಗುವುದಕ್ಕೆ ಕಾರಣ ಅಂದರೆ ಅವರು ಸಿನಿಮಾರಂಗದಿಂದ ಅಂತರ ಕಾಯ್ದುಕೊಂಡಿರುವುದು. ಬಾಲಾಜಿ ಅವರು ತಮ್ಮ ತಂದೆ ವೀರಾಸ್ವಾಮಿ ಅವರ ನಿಧನದ ನಂತರ ಈಶ್ವರಿ ಸಂಸ್ಥೆಯ ಜವಾಬ್ದಾರಿಯನ್ನು ತೆಗೆದುಕೊಳ್ಳುತ್ತಾರೆ. ತಮ್ಮ ಈಶ್ವರಿ ಸಂಸ್ಥೆಯಡಿ ಅನೇಕ ಸಿನಿಮಾಗಳ ಡಿಸ್ಟ್ರಿಬ್ಯುಟರ್ ಆಗಿ ಕಾರ್ಯ ನಿರ್ವಹಿಸುತ್ತಾರೆ.

ಚದ ನಂತರ ಮೊಟ್ಟ ಮೊದಲಿಗೆ ಹೀರೋ ಆಗಿ ಕಾಲೇಜ್ ಎಂಬ ಚಿತ್ರದಲ್ಲಿ ನಟಿಸುವ ಅವಕಾಶ ಸಿಗುತ್ತದೆ. ಈ ಕಾಲೇಜ್ ಚಿತ್ರಕ್ಕೆ ಅಣ್ಣ ರವಿಚಂದ್ರನ್ ಅವರೇ ಆಕ್ಷನ್ ಕಟ್ ಹೇಳುತ್ತಿದ್ದರಂತೆ. ಆದರೆ ಕಾರಣಾಂತರಗಳಿಂದ ಈ ಚಿತ್ರ ಸಂಪೂರ್ಣವಾಗದೇ ಅರ್ಧದಲ್ಲೇ ನಿಂತು ಹೋಯಿತು. ಇದಾದ ಬಳಿಕ ರವಿಚಂದ್ರನ್ ಅವರು ಕೊಂಚ ಬೇಸರವಾಗಿ ಮತ್ತೆ ತನ್ನ ತಮ್ಮನಿಗೆ ಒಂದು ಬ್ರೇಕ್ ನೀಡಲೇಬೇಕು ಎಂದು ಅಹಂ ಪ್ರೇಮಾಸ್ಮಿ ಸಿನಿಮಾ ಮಾಡುತ್ತಾರೆ. ಆದರೆ ಈ ಚಿತ್ರ ನಿರೀಕ್ಷೆ ಮಟ್ಟಕ್ಕೆ ಯಶಸ್ಸು ಕಾಣುವುದಿಲ್ಲ. ಇದು ನಟ ಬಾಲಾಜಿ ಅವರಿಗೂ ಕೂಡ ಅತೃಪ್ತಿಯಾಗಿ ಕಾಡುತ್ತದೆ. ಇದಾದ ಬಳಿಕ ತುಂಟ, ಇನಿಯ, ರಾಜಕುಮಾರಿ ಅಂತಹ ಚಿತ್ರ ಮಾಡುತ್ತಾರೆ. ಆದರೆ ಯಾವುದೇ ಚಿತ್ರ ಕೈ ಹಿಡಿಯದ ಕಾರಣ ಅಣ್ಣ ರವಿಚಂದ್ರನ್ ಅವರ ಸಲಹೆಯಂತೆ ಈಶ್ವರಿ ಸಂಸ್ಥೆಯ ಪ್ರೊಡಕ್ಷನ್ ಕೆಲಸ ಕಾರ್ಯಗಳಲ್ಲಿ ತೊಡಗಿಸಿಕೊಂಡು ಸಾಗುತ್ತಿದ್ದಾರೆ.

Leave a Reply

%d bloggers like this: