ರವಿಚಂದ್ರನ್ ಅವರ ಸಿನಿಮಾ ತಿರಸ್ಕರಿಸಿದ್ದ ಕನ್ನಡ ನಟಿ, ವೇದಿಕೆ ಮೇಲೆಯೇ ಕಾಲೆಳೆದ ರವಿಚಂದ್ರನ್ ಅವರು

ಬನಾರಸ್ ಚಿತ್ರದ ನಾಯಕಿಗೆ ಎಲ್ಲರೆದುರಿಗೆ ಕಾಲೆಳೆದ ಕ್ರೇಜಿ಼ಸ್ಟಾರ್ ರವಿಚಂದ್ರನ್! ಚಾಮರಾಜಪೇಟೆ ಶಾಸಕ ಜಮೀರ್ ಅಹ್ಮದ್ ಖಾನ್ ಅವರ ಪುತ್ರ ಝೈದ್ ಖಾನ್ ಚೊಚ್ಚಲ ಬಾರಿಗೆ ನಾಯಕ ನಟರಾಗಿ ನಟಿಸಿರೋ ಬನಾರಸ್ ಸಿನಿಮಾದ ಟ್ರೇಲರ್ ಲಾಂಚ್ ಕಾರ್ಯಕ್ರಮ ಇತ್ತೀಚೆಗೆ ಬೆಂಗಳೂರಿನಲ್ಲಿ ಅದ್ದೂರಿಯಾಗಿ ನಡೆಯಿತು. ಈ ಕಾರ್ಯಕ್ರಮಕ್ಕೆ ವಿಶೇಷ ಅತಿಥಿಯಾಗಿ ಕ್ರೇಜಿ಼ಸ್ಟಾರ್ ವಿ.ರವಿಚಂದ್ರನ್ ಆಗಮಿಸಿದ್ದರು. ಟ್ರೈಲರ್ ಲಾಂಚ್ ಕಾರ್ಯಕ್ರಮದಲ್ಲಿ ರವಿಚಂದ್ರನ್ ಅವರು ಮಾತನಾಡಿ ಝೈದ್ ಖಾನ್ ಗೆ ಸ್ಯಾಂಡಲ್ ವುಡ್ ಗೆ ಸ್ವಾಗತ ಎಂದೇಳುತ್ತಾ ಅವರ ಬಗ್ಗೆ ನಿಮ್ಮ ತಂದೆ ನಮಗೆಲ್ಲರಿಗೂ ಗೊತ್ತು. ನೀವು ಕೂಡ ತುಂಬಾ ಕ್ಯೂಟ್ ಆಗಿ ಕಾಣಿಸುತ್ತೀದ್ದೀರಿ.

ನಿಮಗೆ ಒಳ್ಳೆಯದಾಗಲಿ ಎಂದು ಚಿತ್ರಕ್ಕೆ ಶುಭ ಹಾರೈಸಿದರು. ಅದೇ ರೀತಿ ಮಾತು ಮುಂದುವರಿಸಿದ ರವಿಚಂದ್ರನ್ ಝೈದ್ ಖಾನ್ ನಾನು ಮನೇಲಿ ಇಲ್ಲ ಅಂತ ಹೇಳಿದ್ರು ಕೂಡ ಅವರಿವರ ಬಳಿ ಮಾಹಿತಿ ಪಡ್ಕೊಂಡು ಹುಡುಕಿಕೊಂಡು ಮನೆಗೇ ಬಂದ್ಬಿಟ್ಟ. ನನ್ಗೆ ಫ್ಲೈಟ್ ಇದೆ ಅಂತೇಳಿದ್ರು ಕೂಡ ಟೈಮ್ ಚೇಂಜ್ ಮಾಡ್ಕೊಳಿ ಅಂತ ದುಂಬಾಲು ಬಿದ್ದ. ನಾನ್ ಕೂಡ ಕೇಳ್ದೇ ಇಷ್ಟ್ ದಿನ ಇರ್ಲಿಲ್ವಲ್ಲ ಹೀಗೇನು ಅಂತ. ಅದ್ಕೇ ಝೈದ್ ಖಾನ್ ಅದೇ ಇಷ್ಟ್ ದಿನ ಇರ್ಲಿಲ್ಲ. ಅದ್ಕೇನೇ ಈಗ ಬನ್ನಿ ಅಂತ ಹಿಂದೆ ಬಿದ್ಧ. ಏನೇ ಆಗ್ಲಿ ಅವರ ವಿನಯವಂತಿಕೆಗೆ, ಪ್ರೀತಿ, ವಿಶ್ವಾಸಕ್ಕೆ ನಾನು ಆಭಾರಿ ಎಂಬ ಭಾವನೆಯಲ್ಲಿ ಹಾರೈಸಿದ್ರು. ಅದೇ ಸಂಧರ್ಭದಲ್ಲಿ ಬನಾರಸ್ ಚಿತ್ರದ ನಾಯಕಿ ಸೋನಾಲ್ ಮಾಂಟೇರೋ ಅವರನ್ನ ಕಂಡು ನೀವು ಒಂದ್ಸಲ ನಮ್ಮ ಮನೆಗೆ ಬಂದಿದ್ರಿ ಅಲ್ವಾ. ಆಗ ನನ್ನ ನಟನೆಯ ಕನ್ನಡಿಗ ಸಿನಿಮಾಗೆ ನೀವು ಒಪ್ಪದೇ ರಿಜೆಕ್ಟ್ ಮಾಡಿದ್ರಿ.

ಹೋಗ್ಲಿ ಬಿಡಿ ಈಗ ಒಳ್ಳೆ ಸಿನಿಮಾ ಸಿಕ್ಕಿದೆ. ಆ ನನ್ನ ಸಿನಿಮಾ ಓಡ್ಲೇ ಇಲ್ಲ. ಅಂದ್ಹಾಗೆ ನೀವ್ ಆಗ್ಲೇ ಕಾಣಿಸ್ಲೇ ಇಲ್ಲ. ಲೇಟಾಗ್ ಬಂದಿರ್ಬೇಕು ನೀವು. ಈ ಕಾಲದ ಹೀರೋಯಿನ್ಸ್ ಗಳಿಗೆ ಸರಿಯಾದ್ ಟೈಮ್ಗ್ ಬರೋಕ್ ಆಗೋದೇ ಇಲ್ಲ ಎಂದು ನಟಿ ಸೋನಾಲ್ ಮಾಂಟೆರೋ ಅವ್ರಿಗೆ ಇಡೀ ಕಾರ್ಯಕ್ರಮದಲ್ಲಿ ಸಖತ್ತಾಗೆಯೇ ರವಿಚಂದ್ರನ್ ಕಾಲೆಳೆದ್ರು. ಇನ್ನು ಈ ಬನಾರಸ್ ಸಿನಿಮಾದ ಟ್ರೇಲರ್ ಕುತೂಹಲ ಮೂಡಿಸಿದ್ದು, ಈ ಚಿತ್ರ ಕೇವಲ ಲವ್ ಅಂಡ್ ರೊಮ್ಯಾಂಟಿಕ್ ಮಾತ್ರ ಅಲ್ಲ ಇದೊಂದು ಸಸ್ಪೆನ್ಸ್ ಥ್ರಿಲ್ಲರ್ ಜಾನರ್ ಸಿನಿಮಾ ಅಂತ ತಿಳಿಯಬಹುದಾಗಿದೆ. ಚಿತ್ರಕ್ಕೆ ಅಜನೀಶ್ ಲೋಕನಾಥ್ ರಾಗ ಸಂಯೋಜನೆ ಮಾಡಿದ್ದು, ಖ್ಯಾತ ನಿರ್ದೇಶಕ ಜಯತೀರ್ಥ ಆಕ್ಷನ್ ಕಟ್ ಹೇಳಿದ್ದಾರೆ. ಇದೇ ನವೆಂಬರ್ 4ರಂದು ಬನಾರಸ್ ಸಿನಿಮಾ ಕನ್ನಡ, ತೆಲುಗು, ತಮಿಳು ಸೇರಿದಂತೆ ಪಂಚ ಭಾಷೆಗಳಲ್ಲಿ ದೇಶಾದ್ಯಂತ ಅದ್ದೂರಿಯಾಗಿ ರಿಲೀಸ್ ಆಗಲಿದೆ.

Leave a Reply

%d bloggers like this: