ರೇಷನ್ ಕಾರ್ಡ್ ಇದ್ದೋರಿಗೆ ಗ್ರಾಮ ಪಂಚಾಯತಿಯಲ್ಲಿ ಯಾವೆಲ್ಲ ಸೌಲಭ್ಯಗಳು, ಸಬ್ಸಿಡಿ ಇವೆ ನೋಡಿ ಒಮ್ಮೆ, ಎಲ್ಲರು ತಿಳಿದುಕೊಳ್ಳಬೇಕಾದ ವಿಷಯ

ಬಿಪಿಎಲ್ ಕಾರ್ಡ್ ಹೊಂದಿರುವ ಕುಟುಂಬಗಳಿಗೆ ಆಯಾ ಗ್ರಾಮ ಪಂಚಾಯ್ತಿಗಳಲ್ಲಿಯೇ ಕನಿಷ್ಟ ಉದ್ಯೋಗ ದೊರಕಲಿದೆ. ಗ್ರಾಮೀಣ ಭಾಗಗಳಲ್ಲಿ ಜನರಿಗೆ ಕಾಲ ಕಾಲಕ್ಕೆ ಸೂಕ್ತವಾಗಿ ಕನಿಷ್ಟ ಉದ್ಯೋಗ ನೀಡಿ ಅವರಿಗೆ ಆರ್ಥಿಕ ಸಮಸ್ಯೆ ಕಾಡದಿರಲು ಸರ್ಕಾರ ಸರ್ಕಾರ ಅನೇಕ ಜನಪರ ಕಲ್ಯಾಣ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದೆ. ಅಂತಹ ಕಾರ್ಯಕ್ರಮಗಳಲ್ಲಿ ನರೇಗಾ ಕೂಲಿ ಯೋಜನೆ ಕೂಡ ಒಂದಾಗಿದೆ. ಗ್ರಾಮೀಣ ಭಾಗದಲ್ಲಿ ಉದ್ಯೋಗ ಸೃಷ್ಟಿಸುವ ಉದ್ದೇಶದಿಂದಾಗಿ ಕೇಂದ್ರ ಸರ್ಕಾರ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಯೋಜನೆಯನ್ನು ಜಾರಿಗೊಳಿಸಿದೆ. ಈ ಯೋಜನೆಯನ್ನ ಸಮರ್ಪಕವಾಗಿ ಅನುಷ್ಠಾನಕ್ಕೆ ತರಲು ಗ್ರಾಮೀಣಾಭಿವೃದ್ದಿ ಇಲಾಖೆ ನಿರಂತರ ಕಾರ್ಯ ಚಟವಟಿಕೆಯನ್ನು ಮಾಡುತ್ತಿದೆ. ಪ್ರಮುಖವಾಗಿ ಹಳ್ಳಿ ಗಳಲ್ಲಿ ಸಣ್ಣ ಪುಟ್ಟ ಭೂಮಿ ಹೊಂದಿರುವ ರೈತರು ತಮ್ಮ ಹೊಲದ ಜೊತೆಗೆ ಇನ್ನೊಬ್ಬರ ಹೊಲ ಗದ್ದೆಗಳಲ್ಲಿ ಕೆಲಸ ಮಾಡಿಕೊಂಡು ಜೀವನ ನಿರ್ವಹಣ ಮಾಡುತ್ತಿರುತ್ತಾರೆ.

ಆದರೆ ಜೀವನ ಮಾಡಲು ತುಂಡು ಭೂಮಿಯೂ ಸಹ ಇಲ್ಲದೆ ಎಷ್ಟೋ ಕುಟುಂಬಗಳು ದಿನ ನಿತ್ಯದ ಹೊಟ್ಟೆ ಪಾಡಿಗಾಗಿ ಪರದಾಡುವಂತಹ ಪರಿಸ್ಥಿತಿಗಳು ಕೂಡ ಇವೆ.ಇದಕ್ಕೆ ಮುಖ್ಯ ಕಾರಣ ಹಳ್ಳಿಗಳಲ್ಲಿ ಉದ್ಯೋಗಗಳು ಸಿಗದೇ ಇರುವುದು.ಪಟ್ಟಣಗಳಂತೆ ಹಳ್ಳಿಗಳಲ್ಲಿಯೂ ಕೂಡ ಉದ್ಯೋಗ ದೊರಕುವಂತೆ ಮಾಡಿ ನಿರುದ್ಯೋಗ ಸಮಸ್ಯೆಯನ್ನು ನಿರ್ಮೂಲನೆ ಮಾಡುವುದಕ್ಕಾಗಿ ಈ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಯೋಜನೆಯನ್ನ ಆರಂಭಗೊಳಿಸಿದೆ. ಗ್ರಾಮೀಣ ಭಾಗದ ದುಡಿಯುವ ಕೈಗಳಿಗೆ ಕನಿಷ್ಟ ನೂರು ದಿನಗಳ ಕೆಲಸವನ್ನು ನೀಡಿ ಹಳ್ಳಿ ಜನರ ಜೀವನವನ್ನು ಹಸನು ಮಾಡುವ ಉದ್ದೇಶವೊಂದಿದ್ದು ಇದು ಆಯಾಯ ಗ್ರಾಮ ಪಂಚಾಯ್ತಿಗಳ ಮೂಲಕ ಅನುಷ್ಟಾನಕ್ಕೆ ಬರುತ್ತದೆ. ಗ್ರಾಮ ಪಂಚಾಯ್ತಿಗಳು ತಮ್ಮ ವ್ಯಾಪ್ತಿಗೆ ಬರುವ ಹಳ್ಳಿಗಳಲ್ಲಿ ಕಾರ್ಮಿಕರನ್ನು ನೇಮಿಸಕೊಂಡು ಬದು ನಿರ್ಮಾಣ,ಕೃಷಿ ಹೊಂಡ ನಿರ್ಮಾಣ,ಸಮುದಾಯ ಭವನ,ಕೆರೆ ಹೂಳು ಎತ್ತುವುದು,ರಸ್ತೆ ಕಾಮಗಾರಿ,ಒಳ ಚರಂಡಿ ವ್ಯವಸ್ಥೆ ಸೇರಿದಂತೆ ಅನೇಕ ಕಾಮಗಾರಿಗಳ ನಿರ್ಮಾಣ ಕಾರ್ಯದಲ್ಲಿ ಜನರನ್ನ ಬಳಸಿಕೊಳ್ಳುವುದರ ಮೂಲಕ ಅವರಿಗೆ ದಿನಕ್ಕೆ ಕನಿಷ್ಟ ವೇತನ ನೀಡುತ್ತದೆ.

ಇತ್ತೀಚೆಗೆ ಕೋವಿಡ್ ಲಾಕ್ ಡೌನ್ ಸಂಧರ್ಭದಲ್ಲಿ ಪಟ್ಟಣ ತೊರೆದು ತಮ್ಮ ಹಳ್ಳಿಗಳನ್ನು ಸೇರಿದ ಅನೇಕರು ಈ ಗ್ರಾಮೀಣ ನರೇಜಾ ಯೋಜನೆಯ ಕೆಲಸಗಳ ಮೂಲಕ ಒಂದಷ್ಟು ಸಂಪಾದನೆ ಕಂಡು ಕೊಂಚ ಆರ್ಥಿಕ ಸಮಸ್ಯೆಗಳಿಂದ ದೂರವಾಗಿದ್ದರು.ಗ್ರಾಮ ಪಂಚಾಯ್ತಿಗಳಲ್ಲಿ ಎಪಿಎಲ್,ಬಿಪಿಎಲ್ ಕಾರ್ಡ್ ಹೊಂದಿರುವ ಕುಟುಂಬಗಳಿಗೆ ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಯೋಜನೆಯಡಿ ಅನುದಾನವನ್ನು ಕೂಡ ನೀಡುತ್ತವೆ.ಗಂಗಾ ಕಲ್ಯಾಣ ಯೋಜನೆಯಡಿ ಪಂಪ್ ಸೆಟ್,ವಸತಿ ಯೋಜನೆಯಡಿ ಆಶ್ರಯ ,ಕೊಟ್ಟಿಗೆ ನಿರ್ಮಾಣಕ್ಕೆ,ನೀರು ಇಂಗು ಗುಂಡಿ ನಿರ್ಮಾಣಕ್ಕೆ ಹೀಗೆ ಅನೇಕಾನೇಕ ಅನುದಾನಗಳನ್ನು ಬಿಪಿಎಲ್ ಕಾರ್ಡ್ ದಾರರಿಗೆ ನೀಡಲಾಗುತ್ತದೆ.