ರತನ್ ಟಾಟಾ ಹೆಗಲ ಮೇಲೆ ಕೈ ಹಾಕಿ ನಿಂತಿರುವ ಯುವಕ ಯಾರು ಗೊತ್ತಾ? ಯುವಕನ ರೋಚಕ ಕಥೆ ಓದಿ ಒಮ್ಮೆ

ಯುವಕನಿಗಿದ್ದ ಶ್ವಾನಗಳ ಮೇಲಿನ ಕಾಳಜಿ ಮತ್ತು ಪ್ರೀತಿಗೆ ಮನಸೋತು ತನ್ನ ಪರ್ಸನಲ್ ಅಸಿಸ್ಟೆಂಟ್ ಆಗಿ ನೇಮಕ ಮಾಡಿಕೊಂಡ ಜಗತ್ಪ್ರಸಿದ್ದ ಉದ್ಯಮಿ…! ಜಗತ್ತಿನಲ್ಲಿ ವಿಧ್ಯಾವಂತರು, ಬುದ್ದಿವಂತರಿಗೆ ಕೊರತೆ ಏನಿಲ್ಲ. ಆದರೆ ನಿಶ್ಕಲ್ಮಶ ಇರುವ ಹೃದಯ ವಂತಿಕೆಯ ವ್ಯಕ್ತಿತ್ವ ಇರುವ ವ್ಯಕ್ತಿಗಳ ಕೊರತೆ ಮಾತ್ರ ಇದ್ದೇ ಇದೆ. ಕೇವಲ ಸ್ವ ಹಿತಾಸಕ್ತಿಯಾಗಿ ಹಣದ ಹಪಾಹಪಿಗಾಗಿ ದಿನವಿಡೀ ದುಡಿಯುವ ವ್ಯಕ್ತಿಗಳ ನಡುವೆ ಈ ಯುವಕ ಮೂಕ ಪ್ರಾಣಿಗಳ ಮೇಲೆ ಇಟ್ಟಿರುವ ಕಾಳಜಿ ಪ್ರೀತಿ ನಿಜಕ್ಕೂ ಕೂಡ ಬೆಲೆ ಕಟ್ಟಲಾಗದ್ದು. ಇಂತಹ ವ್ಯಕ್ತಿತ್ವವುಳ್ಳ ಯುವಕನಿಗೆ ತನ್ನ ಬಳಿ ಕೆಲಸ ಮಾಡುವಂತೆ ಕೇಳಿದ ವ್ಯಕ್ತಿ ಯಾರು ಗೊತ್ತಾ. ಅವರು ಬೇರಾರು ಅಲ್ಲ ಜಗತ್ತಿನ ಅತಿ ದೊಡ್ಡ ದಾನಿ ಉದ್ಯಮಿ ಆಗಿರುವ ರತನ್ ಟಾಟಾ. ಉದ್ಯಮಿ ರತನ್ ಟಾಟಾ ಅವರು ಕಳೆದೊಂದು ಒಂದು ಶತಮಾನದಲ್ಲಿ ಕಂಡ ಜಗತ್ತಿನಲ್ಲಿ ಅತ್ಯಂತ ದೊಡ್ಡ ದಾನಿ ಎಂಬ ಕೀರ್ತಿಗೆ ಪಾತ್ರರಾಗಿದ್ದಾರೆ.

ಕೋವಿಡ್ ಸಂಕಷ್ಟದ ಸಮಯದಲ್ಲಿ ಉದ್ಯಮಿ ರತನ್ ಟಾಟಾ ಅವರು ಕೋಟ್ಯಾಂತರ ರೂ.ಗಳನ್ನು ಪ್ರಧಾನಿ ಮಂತ್ರಿ ಕೋವಿಡ್ ಪರಿಹಾರ ನಿಧಿಗೆ ದೇಣಿಗೆ ನೀಡಿ ಸಂಕಷ್ಟದ ಸಂಧರ್ಭದಲ್ಲಿ ಸರ್ಕಾರದ ಜೊತೆಗೆ ಕೈ ಜೋಡಿಸಿ ನೆರವಾಗಿದ್ದರು. ಇಂತಹ ಉದಾರ ಮನಸ್ಸು ಇರುವ ಉದ್ಯಮಿ ರತನ್ ಟಾಟಾ ಅವರು ಇಪ್ಪತ್ತೇಳು ವರ್ಷದ ಯುವಕನ ಮಾನವೀಯ ಗುಣಕ್ಕೆ ಮನಸೋತು ತನ್ನ ಅಸಿಸ್ಟೆಂಟ್ ಆಗಿ ನೇಮಿಸಿಕೊಂಡಿದ್ದಾರೆ. ಅದರ ಕಥೆಯನ್ನ ತಿಳಿಯೋಣ. ಐದು ವರ್ಷಗಳ ಹಿಂದೆ ರಸ್ತೆಯಲ್ಲಿ ಸಾಗುತ್ತಿದ್ದ ಶಾಂತನು ನಾಯ್ಡು ಎಂಬ ಹುಡುಗನಿಗೆ ರಸ್ತೆ ಬದಿಯಲ್ಲಿ ನಾಯಿಯೊಂದು ಜೀವ ಬಿಡುತ್ತಿರುವ ದೃಶ್ಯ ಕಾಣಿಸುತ್ತದೆ.

ಇದನ್ನ ನೋಡಿ ಮನ ಕರಗಿ ಆ ಯುವಕ ಮೂಕ ಪ್ರಾಣಿಗಳಾದ ಈ ಬೀದಿ ನಾಯಿಗಳ ಜೀವ ರಕ್ಷಣೆಗೆ ಏನಾದರು ಮಾಡಬೇಕು ಎಂಬ ಉದ್ದೇಶದಿಂದಾಗಿ ನಾಯಿಗಳ ಕುತ್ತಿಗೆಗೆ ರಿಫ್ಲೆಕ್ಟರ್ ಅಳವಡಿಸುವ ಬಗ್ಗೆ ಥಿಂಕ್ ಮಾಡುತ್ತಾನೆ. ನಾಯಿಗಳ ಕುತ್ತಿಗೆಗೆ ರಿಪ್ಲೆಕ್ಟರ್ ಅಳವಡಿಸುವುದರಿಂದ ರಸ್ತೆಯಲ್ಲಿ ನಾಯಿಗಳು ಓಡಾಡುತ್ತಿರುವುದು ವಾಹನ ಸವಾರರಿಗೆ ಸುಲಭಾವಾಗಿ ತಿಳಿಯುತ್ತದೆ..ಇದರಿಂದಾಗಿ ವಾಹನ ಸವಾರರು ಕೂಡ ವೇಗವನ್ನ ನಿಯಂತ್ರಿಸಬಹುದಾಗಿರುತ್ತದೆ. ಈ ಆಲೋಚನೆಯನ್ನ ಶಾಂತನು ನಾಯ್ಡು ರತನ್ ಟಾಟಾ ಅವರಿಗೆ ಪತ್ರ ಬರೆಯುತ್ತಾನಂತೆ.

ಶಾಂತನು ಅವರ ಈ ವಿನೂತನ ಆಲೋಚನೆ ಟಾಟಾ ಗ್ರೂಫ್ ಆಫ್ ಕಂಪನೀಸ್ ನ ನ್ಯೂಸ್ ಲೆಟರ್ ನಲ್ಲಿ ಪ್ರಕಟವಾಗಿ ಭಾರಿ ವೈರಲ್ ಆಗುತ್ತದೆ. ಪತ್ರ ಬರೆದಿದ್ದ ಶಾಂತನುಗೆ ಅಚ್ಚರಿ ಎಂಬಂತೆ ರತನ್ ಟಾಟಾ ಅವರಿಂದ ಕರೆ ಬರುತ್ತದೆ. ರತನ್ ಟಾಟಾ ಅವರು ಶಾಂತನು ಅವರ ಐಡಿಯಾ ಮೆಚ್ಚಿ ಮುಂದಿನ ನಿನ್ನ ಎಲ್ಲಾ ಹೊಸ ಆಲೋಚನೆಗೆ ನಾನು ಸಹಾಯ ಮಾಡುತ್ತೇನೆ. ನೀನು ಚೆನ್ನಾಗಿ ಓದು ಎಂದು ವಿದೇಶದಲ್ಲಿ ಉನ್ನತ ಶಿಕ್ಷಣಕ್ಕೆ ಆರ್ಥಿಕ ನೆರವು ನೀಡುತ್ತಾರೆ. ಹೊರ ದೇಶದಲ್ಲಿ ವಿಧ್ಯಾಭ್ಯಾಸ ಮುಗಿಸಿ ಬಂದ ನಂತರ ಶಾಂತನು ಅವರಿಗೆ ಸ್ವತಃ ಕರೆ ಮಾಡಿ ರತನ್ ಟಾಟಾ ಅವರು ನನ್ನ ಪರ್ಸನಲ್ ಅಸಿಸ್ಟೆಂಟ್ ಆಗಿ ಕೆಲಸಕ್ಕೆ ಬರುತ್ತಿರಾ ಎಂದು ಕೇಳಿದರಂತೆ.

ಬಯಸದೇ ಬಂದ ಭಾಗ್ಯ ಎಂಬಂತೆ ಶಾಂತನು ನಾಯ್ಡು ಕೂಡ ರತನ್ ಟಾಟಾ ಅವರ ಬಳಿ ಕಾರ್ಯ ನಿರ್ವಹಿಸುತ್ತಿದ್ದಾನೆ. ಇನ್ನು ಈ ವಿಚಾರವನ್ನು ಶಾಂತನು ನಾಯ್ಡು ಅವರು ಹ್ಯೂಮನ್ ಆಫ್ ಬಾಂಬೆ ಎಂಬ ಸೋಶಿಯಲ್ ಮೀಡಿಯಾ ಖಾತೆಯಲ್ಲಿ ಶೇರ್ ಮಾಡಿಕೊಂಡಿದ್ದಾರೆ. ಈ ಪೋಸ್ಟ್ ಇದೀಗ ಸೋಶಿಯಲ್ ಮೀಡಿಯಾದಲ್ಲಿ ಸಖತ್ ವೈರಲ್ ಆಗಿದೆ. ಈ ನಮ್ಮ ಲೇಖನ ನಿಮಗೆ ಇಷ್ಟವಾದಲ್ಲಿ ಶೇರ್ ಮಾಡಿ ಮತ್ತು ಲೈಕ್ ಮಾಡಿ. ಮತ್ತಷ್ಟು ಹೊಸ ಹೊಸ ಸುದ್ದಿಗಳಿಗಾಗಿ ನಮ್ಮ ಪೇಜ್ ನ್ನು ತಪ್ಪದೆ ಲೈಕ್ ಮಾಡಿ.