ರಶ್ಮಿಕಾ ಮಂದಣ್ಣ ಅವರು ಧರಿಸಿ ಬಂದ ಈ ಡ್ರೆಸ್ ಬೆಲೆ ಎಷ್ಟು ಗೊತ್ತಾ

ಭಾರತೀಯ ಚಿತ್ರರಂಗದಲ್ಲಿ ಇದೀಗ ಸಖತ್ ಶೈನ್ ಆಗುತ್ತಿರುವ ನಟಿ ಅಂದರೆ ಅದು ಕನ್ನಡದ ನಟಿ ರಶ್ಮಿಕಾ ಮಂದಣ್ಣ. ಸದಾ ತಮ್ಮ ಹೊಸ ಸಿನಿಮಾ ಮತ್ತು ವಿವಿಧ ವಿಚಾರಗಳಿಗೆ ಭಾರಿ ಸುದ್ದಿಯಾಗುವ ನಟಿ ರಶ್ಮಿಕಾ ಮಂದಣ್ಣ ಇದೀಗ ತಾವು ಧರಿಸಿದ್ದ ಡ್ರೆಸ್ ಬೆಲೆಯ ವಿಚಾರವಾಗಿ ಭಾರಿ ಸುದ್ದಿಯಾಗುತ್ತಿದ್ದಾರೆ. ಸೋಶಿಯಲ್ ಮೀಡಿಯಾಗಳಲ್ಲಿ ಅಂತೂ ಈ ಡ್ರೆಸ್ ಬೆಲೆ ಕೇಳಿ ಎಲ್ಲರೂ ಅಚ್ಚರಿ ವ್ಯಕ್ತಪಡಿಸಿ ದುಬಾರಿ ಬೆಡಗಿಯಾದ ರಶ್ಮಿಕಾ ಅಂತ ಟ್ರೋಲ್ ಶುರುವಾಗಿದೆ. ಕಿರಿಕ್ ಪಾರ್ಟಿ ಸಿನಿಮಾ ಸೂಪರ್ ಹಿಟ್ ಆದ ನಂತರ ತೆಲುಗಿನಲ್ಲಿ ಯಾವ ರೀತಿ ರಶ್ಮಿಕಾ ಮಂದಣ್ಣ ಅವರಿಗೆ ಅವಕಾಶಗಳು ಹರಿದು ಬಂದು ಬೇಡಿಕೆ ಸೃಷ್ಟಿಯಾಯಿತೋ ಅದೇ ರೀತಿಯಾಗಿ ಇದೀಗ ತೆಲುಗಿನ ಅಲ್ಲು ಅರ್ಜುನ್ ಅವರ ಪುಷ್ಪಾ ಸಿನಿಮಾ ಪ್ಯಾನ್ ಇಂಡಿಯಾ ರೀಲಿಸ್ ಆಗಿ ಭರ್ಜರಿ ಸಕ್ಸಸ್ ಕಂಡ ನಂತರ ರಶ್ಮಿಕಾ ಮಂದಣ್ಣ ಅವರಿಗೆ ಬಾಲಿವುಡ್ ನಲ್ಲಿ ಸಖತ್ ಡಿಮ್ಯಾಂಡ್ ಕ್ರಿಯೇಟ್ ಆಗಿದೆ.

ಈಗಾಗಲೇ ಮಿಶನ್ ಮಜ್ನು, ಗುಡ್ ಬಾಯ್, ಅನಿಮಲ್ ಅಂತಹ ಬಾಲಿವುಡ್ ಸ್ಟಾರ್ ನಟರ ಸಿನಿಮಾಗಳಲ್ಲಿ ನಟಿಸಿರುವ ರಶ್ಮಿಕಾ ಮಂದಣ್ಣ ಇತ್ತೀಚೆಗೆ ಬಾಲಿವುಡ್ ನ ನಿರ್ಮಾಪಕ ಸಿದ್ದಾರ್ಥ್ ರಾಯ್ ಕಪೂರ್ ಅವರ ಕಛೇರಿಯಲ್ಲಿ ಕಾಣಿಸಿಕೊಂಡಿದ್ದಾರೆ. ಹೊಸದೊಂದು ಹಿಂದಿ ಸಿನಿಮಾಗಳಲ್ಲಿ ಅವಕಾಶ ಪಡೆದಿರುವ ನಟಿ ರಶ್ಮಿಕಾ ಮಂದಣ್ಣ ಅದೇ ವಿಚಾರವಾಗಿ ಮಾತುಕತೆ ನಡೆಸಿ ಪ್ರೊಡ್ಯೂಸರ್ ಸಿದ್ದಾರ್ಥ್ ರಾಯ್ ಕಪೂರ್ ಅವರ ಕಛೇರಿಯಿಂದ ಹೊರ ಬರಬೇಕಾದಾಗ ಮಾಧ್ಯಮ ಸ್ನೇಹಿತರು ರಶ್ಮಿಕಾ ಅವರ ಒಂದಷ್ಟು ಫೋಟೋಗಳನ್ನು ಸೆರೆ ಹಿಡಿದಿದ್ದಾರೆ. ಇದೀಗ ಆ ಫೋಟೋಗಳು ಸೋಶಿಯಲ್ ಮೀಡಿಯಾಗಳಲ್ಲಿ ವೈರಲ್ ಆಗಿದ್ದು, ರಶ್ಮಿಕಾ ಧರಿಸಿದ್ದ ಡ್ರೆಸ್ ಬಗ್ಗೆ ಭಾರಿ ಚರ್ಚೆಯಾಗಿದೆ. ಈ ಚರ್ಚೆಯಲ್ಲಿ ಸಿಕ್ಕ ಅಚ್ಚರಿ ವಿಚಾರ ಅಂದರೆ ರಶ್ಮಿಕಾ ಮಂದಣ್ಣ ಧರಿಸಿದ್ದ ಸ್ವೆಟರ್ ಡ್ರೆಸ್ ಬೆಲೆ ಎಷ್ಟಿರಬಹುದು ಎಂದು ಅನೇಕರು ಹುಡುಕಿದ್ದಾರೆ. ಆಗ ಅವರಿಗೆ ಅಚ್ಚರಿ ಅಂದರೆ ರಶ್ಮಿಕಾ ಧರಿಸಿದ್ದ ಡ್ರೆಸ್ ಬೆಲೆ ಬರೋಬ್ಬರಿ 1 ಲಕ್ಷದ 26 ಸಾವಿರದ 400 ರೂಪಾಯಿಗಳು ಎಂದು ತಿಳಿದುಬಂದಿದೆ.

ರಶ್ಮಿಕಾ ಆ ಸಂಧರ್ಭದಲ್ಲಿ ಪೋನಿ ಟೇಲ್ ಹೇರ್ ಸ್ಟೈಲ್ ನಲ್ಲಿ ಸಿಂಪಲ್ ಎಂಬಂತೆ ಬಿಳಿ, ಕಂದು ಕೆಂಪು ಮತ್ತು ಕಪ್ಪು ಬಣ್ಣದ ತೋಳ್ಪಟ್ಟಿಯ ಸ್ವೆಟರ್ ಧರಿಸಿದ್ದರು. ಇದರ ಬೆಲೆಯೇ ಇಷ್ಟೊಂದು ದುಬಾರಿನ ಎಂದು ಅನೇಕರು ಅಚ್ಚರಿ ಪಟ್ಟಿದ್ದಾರೆ. ನಟಿ ರಶ್ಮಿಕಾ ಮಂದಣ್ಣ ಸಾಲು ಸಾಲು ಸಿನಿಮಾಗಳಲ್ಲಿ ನಟಿಸುತ್ತಾ ಯಶಸ್ಸನ್ನು ಪಡೆದುಕೊಂಡು ಯಾವ ರೀತಿ ದುಬಾರಿ ನಟಿ ಎಂದು ಕರೆಸಿಕೊಳ್ಳುತ್ತಿದ್ದಾರೋ, ಅದೇ ರೀತಿಯಾಗಿ ನಟಿ ರಶ್ಮಿಕಾ ಮಂದಣ್ಣ ಅವರು ಧರಿಸುವ ಉಡುಗೆ ತೊಡುಗೆಗಳು ಕೂಡ ಭಾರಿ ದುಬಾರಿ ಆಗಿದೆ. ಇನ್ನು ನಟಿ ರಶ್ಮಿಕಾ ಮಂದಣ್ಣ ಸದ್ಯಕ್ಕೆ ಮಾಲಿವುಡ್ ಸ್ಟಾರ್ ನಟ ದುಲ್ಖರ್ ಸಲ್ಮಾನ್ ಅವರ ಸೀತಾರಾಮಂ ಚಿತ್ರದಲ್ಲಿ ಅತಿಥಿ ಪಾತ್ರದಲ್ಲಿ ನಟಿಸಿದ್ದಾರೆ. ಅದರ ಜತೆಗೆ ಇದೀಗ ಬಾಲಿವುಡ್ ನಲ್ಲಿ ರಶ್ಮಿಕಾ ಮಂದಣ್ಣ ಅವರ ಹೊಸ ಸುದ್ದಿ ಏನಪ್ಪಾ ಅಂದರೆ ನಟಿ ರಶ್ಮಿಕಾ ಮಂದಣ್ಣ ಇತ್ತೀಚೆಗೆ ಕೆಲವು ದಿನಗಳ ಹಿಂದೆಯಷ್ಟೇ ಜಾಹೀರಾತಿನಲ್ಲಿ ಜೊತೆಯಾಗಿ ಕಾಣಿಸಿಕೊಂಡಿದ್ದ ಸ್ಟಾರ್ ನಟ ವಿಕ್ಕಿ ಕೌಶಲ್ ಅವರೊಟ್ಟಿಗೆ ಕೂಡ ಸಿನಿಮಾ ಮಾಡಲಿದ್ದಾರೆ ಅನ್ನೋ ಸುದ್ದಿ ಕೇಳಿ ಬರುತ್ತಿದೆ.

Leave a Reply

%d bloggers like this: