ರಾಣಿ ಎಲಿಜಬೆತ್ ಹೋದ ನಂತರ ಈಗ ಇಂಗ್ಲೆಂಡಿನ ಹೊಸ ರಾಣಿ ಯಾರು ಗೊತ್ತೇ

ನಾಮಕವಸ್ತೆಗೆ ಮಾತ್ರ ರಾಣಿ ಆದರೆ ಯಾವುದೇ ಅಧಿಕಾರ ಇಲ್ಲ. ಹೌದು ಲಂಡನ್ ಕಿಂಗ್ ಚಾರ್ಲ್ಸ್ ಎರಡನೇ ಪತ್ನಿ ಕ್ಯಾಮಿಲ್ಲಾ ಅವರಿಗೆ ರಾಣಿ ಪಟ್ಟ ಸಿಕ್ಕರೂ ಕೂಡ ಅವರಿಗೆ ಅಧಿಕಾರ ಕೊಡಲ್ವಂತೆ. ಇತ್ತೀಚೆಗೆ ತಾನೇ ಅನಾರೋಗ್ಯ ಸಮಸ್ಯೆಯಿಂದ 96 ವರ್ಷದ ಎರಡನೇ ಎಲಿಜಬೆತ್ ರಾಣಿ ನಿಧನರಾಗಿದ್ದಾರೆ. ಇವರ ನಂತರ ಪ್ರೋಟೋಕಾಲ್ ನಿಯಮದಂತೆ ಅವರ ಪುತ್ರ ಚಾರ್ಲ್ಸ್ ಅಧಿಕಾರ ವಹಿಸಿಕೊಂಡಿದ್ದಾರೆ. ಚಾರ್ಲ್ಸ್ ರಾಜ ಆದೇಲೆ ಲಂಡನ್ ರಾಣಿಯಾಗಿ ಅವರ ಪತ್ನಿ ಕ್ಯಾಮಿಲ್ಲಾ ರಾಣಿ ಆಗ್ಲೇಬೇಕಲ್ವಾ. ಅದೇ ರೀತಿಯಾಗ ಇದೀಗ ಲಂಡನ್ ರಾಣಿಯಾಗಿ ಕ್ಯಾಮಿಲ್ಲಾ ಅಧಿಕಾರ ಪಡಿಬೋದಾಗಿತ್ತು. ಆದ್ರೇ ಕ್ಯಾಮಿಲ್ಲಾ ಅವರು ಪ್ರಿನ್ಸ್ ಚಾರ್ಲ್ಸ್ ಅವರ ಎರಡನೇ ಪತ್ನಿ ಎಂಬ ಕಾರಣಕ್ಕಾಗಿ ಅವರಿಗೆ ಆಸ್ತಿ ಪಾಸ್ತಿ ಮತ್ತು ಆಡಳಿತ ಅಧಿಕಾರದ ದಕ್ಕುವ ಸಾಧ್ಯತೆ ಕಡಿಮೆ ಎಂದು ಹೇಳಲಾಗ್ತಿದೆ.

ಚಾರ್ಲ್ಸ್ ಅವರು ಪ್ರಿನ್ಸೆಸ್ ಡಯಾನಾ ಅವರನ್ನ ಮದುವೆ ಆಗಿದ್ರು. ಆದ್ರೇ ಪತಿ ಪತ್ನಿಯ ನಡುವೆ ವೈಮನಸ್ಸು ಉಂಟಾಗಿ ಇಬ್ಬರು ಪರಸ್ಪರ ವಿಚ್ಚೇದನ ಪಡೆದರು. ರಾಜ ಚಾರ್ಲ್ಸ್ ಅವರಿಂದ ದೂರ ಆದ ನಂತರ ಪ್ರಿನ್ಸೆಸ್ ಡಯಾನಾ ಅವರು ಒಂಟಿಯಾಗಿ ಬದುಕು ನಡೆಸುತ್ತಿದ್ದರು. ರೂಪವಂತೆ ಗುಣವಂತೆ ಸಹಾಯದ ಗುಣವೊಂದಿದ್ದ ಕಾರಣ ರಾಣಿ ಡಯಾನಾ ಅವರನ್ನ ಕಂಡರೆ ಬ್ರಿಟನ್ ದೇಶದಲ್ಲಿ ಅಪಾರ ಹೆಸರು ಒಳ್ಳೆಯ ಅಭಿಪ್ರಾಯ ಇತ್ತು. ಆದರೆ ಯಾವಾಗ ಚಾರ್ಲ್ಸ್ ಮತ್ತು ಡಯಾನಾ ನಡುವೆ ಕ್ಯಾಮಿಲ್ಲಾ ಬಂದ್ರೋ ಆಗ ಕ್ಯಾಮಿಲ್ಲಾ ಅವರ ಮೇಲೆ ಬ್ರಿಟನ್ ದೇಶದಲ್ಲಿ ಅಸಮಾಧಾನ ವ್ಯಕ್ತವಾಗಿತ್ತು. ಆದರೆ ತದ ನಂತರ 1997ರಲ್ಲಿ ಕಿಂಗ್ ಚಾರ್ಲ್ಸ್ ಅವರ ಪತ್ನಿಯಾಗಿದ್ದ ಡಯಾನಾ ಅಪಘಾತದಲ್ಲಿ ದುರ್ಮರಣಕ್ಕೀಡಾಗುತ್ತಾರೆ. ತದ ನಂತರ ಕ್ಯಾಮಿಲ್ಲಾ ರಾಜ ಚಾರ್ಲ್ಸ್ ಜೊತೆ ಸಂಸಾರ ಮಾಡ್ತಾರೆ.

ಹೀಗೆ ಸಾಗುತ್ತಾ ಕ್ಯಾಮಿಲ್ಲಾ ಕೂಡ ಉತ್ತಮ ವ್ಯಕ್ತಿತ್ವದವರು ಎಂದು ತಿಳಿದು ಬ್ರಿಟನ್ ನಲ್ಲಿ ಕ್ಯಾಮಿಲ್ಲಾ ಅವರ ಬಗ್ಗೆ ಕೂಡ ಒಳ್ಳೇ ಅಭಿಪ್ರಾಯ ಮೂಡುತ್ತದೆ. 2005ರಲ್ಲಿ ಚಾರ್ಲ್ಸ್ ಅವರನ್ನ ಮದುವೆ ಆದಾಗ ಕ್ಯಾಮಿಲ್ಲಾ ಅವರಿಗೆ ವೇಲ್ಸ್ ರಾಜಕುಮಾರಿ ಬರುತ್ತೆ. ಆದ್ರೇ ಕ್ಯಾಮೆಲ್ಲಾ ಅವರಿಗೆ ತನ್ನನ್ನು ತಾವು ಕಾರ್ನ್ ವಾಲ್ ಡಚಸ್ ಆಗಿಯೇ ಉಳಿಸುಕೊಳ್ಳುವಂತೆ ಇಚ್ಚೆ ವ್ಯಕ್ತಪಡಿಸುತ್ತಾರೆ. ಇನ್ನು ಒಮ್ಮೆ ರಾಜ ಚಾರ್ಲ್ಸ್ ಅವರಿಗೆ ಖಾಸಗಿ ವಾಹಿನಿಯ ಸಂದರ್ಶನವೊಂದರಲ್ಲಿ ಕ್ಯಾಮೆಲ್ಲಾ ಅವರನ್ನ ಯಾವಾಗ ರಾಣಿಯಾಗಿ ನೋಡ್ಬೋದು ಎಂದು ಪ್ರಶ್ನೆ ಕೇಳಿದಾಗ ಮುಂದಿನ ದಿನಗಳಲ್ಲಿ ನೋಡೋಣ ಎಂದು ಉತ್ತರಿಸಿದ್ದರಂತೆ. ಆದರೆ ಈಗ ಎರಡನೇ ಎಲಿಜಬೆತ್ ರಾಣಿ ನಿಧನರಾಗಿದ್ದಾರೆ. ರಾಜನಾಗಿ ಚಾರ್ಲ್ಸ್ ಅಧಿಕಾರ ವಹಿಸಿಕೊಂಡಿದ್ದಾರೆ. ಅದದಂತೆ ರಾಣಿಯ ಸ್ಥಾನವನ್ನು ಕ್ಯಾಮೆಲ್ಲಾ ಅವರು ತುಂಬಿದ್ದಾರೆ. ಆದರೆ ಅವರು ಬ್ರಿಟನ್ ದೇಶದ ರಾಣಿ ಆಗಿದ್ರೂ ಕೂಡ ಎರಡನೇ ಪತ್ನಿ ಆದ ಕಾರಣ ಅವರಿಗೆ ಅಧಿಕಾರ ಇರೋದಿಲ್ಲ ಎಂದು ತಿಳಿದು ಬಂದಿದೆ.

Leave a Reply

%d bloggers like this: