ರಂಗಣ್ಣನ ಮಗಳ ಅದ್ದೂರಿ ಮದುವೆಗೆ ಖರ್ಚಾದ ಹಣ ಎಷ್ಟು ಗೊತ್ತಾ? ನೋಡಿ ಒಮ್ಮೆ

ಕನ್ನಡ ಸುದ್ದಿವಾಹಿನಿಯ ಖ್ಯಾತ ಪತ್ರಕರ್ತ ತಮ್ಮ ಮಗಳ ಮದುವೆಗೆ ಖರ್ಚು ಮಾಡುತ್ತಿರುವುದು ಕೋಟಿ ಕೋಟಿ ಅಂತೆ.ಆದರೆ ಅಸಲಿ ಕಥೆಯೇ ಬೇರೆಯಾಗಿದೆ. ಸಾಮಾನ್ಯವಾಗಿ ಸಮಾಜದ ಬಹುತೇಕ ಗಣ್ಯವ್ಯಕ್ತಿಗಳು ತಮ್ಮ ಮಕ್ಕಳ ಮದುವೆಯನ್ನ ಅದ್ದೂರಿಯಾಗಿ ಮಾಡುತ್ತಾರೆ. ರಾಜಕೀಯ ಕ್ಷೇತ್ರದ ವ್ಯಕ್ತಿಗಳು, ಉದ್ಯಮಿಗಳು, ಸಿನಿಮಾ ತಾರೆಯರು ಸೇರಿದಂತೆ ಆರ್ಥಿಕವಾಗಿ ಸಬಲರಾಗಿರುವ ಎಲ್ಲರು ಕೂಡ ತಮ್ಮ ಮಕ್ಕಳ ಮದುವೆಯನ್ನ ಬಹಳ ಅಚ್ಚುಕಟ್ಟಾಗಿ ಪ್ರತಿಷ್ಟಿತ ಛತ್ರಗಳಲ್ಲಿ ಸ್ವರ್ಗವೇ ಧರೆಗೆ ಇಳಿಸುವ ಮಟ್ಟಿಗೆ ವೈಭವದಿಂದ ಮಾಡುತ್ತಾರೆ. ಅಂತೆಯೇ ಇತ್ತೀಚೆಗೆ ಜನಪ್ರಿಯ ಕನ್ನಡ ಸುದ್ದಿ ವಾಹಿನಿಯ ಮುಖ್ಯಸ್ಥರಾದ ಮಗಳೊಬ್ಬರ ಮದುವೆಯಾಗಿದೆ. ಅದರ ಬಗ್ಗೆ ಅನೇಕರು ಅನೇಕ ಮಾತುಗಳನ್ನಾಡುತ್ತಿದ್ದಾರೆ. ಇದು ಎಷ್ಟರ ಮಟ್ಟಿಗೆ ಸತ್ಯ ಎಂಬುದನ್ನ ತಿಳಿಯೋಣ. ಹೌದು ಕರ್ನಾಟಕದ ಕನ್ನಡ ಸುದ್ದಿವಾಹಿನಿಯಲ್ಲಿ ದಶಕಗಳ ಹಿಂದೆ ಸಂಚಲನ ಉಂಟು ಮಾಡಿದ ಪಬ್ಲಿಕ್ ಟಿವಿ ಇಂದು ನಾಡಿನ ಮನೆ ಮನೆ ಮಾತಾಗಿದೆ.

ಪಬ್ಲಿಕ್ ಟಿವಿ ಮುಖ್ಯಸ್ಥರಾದ ಎಚ್.ಆರ್.ರಂಗನಾಥ್ ಅವರ ನಿರೂಪಣಾ ಶೈಲಿ ನಗರ ಮಾತ್ರವಲ್ಲ ಹಳ್ಳಿಯ ಮನೆಗಳನ್ನು ತಲುಪಿದೆ. ಎಚ್.ಆರ್.ರಂಗನಾಥ್ ಪ್ರತಿ ದಿನ ರಾತ್ರಿ 9 ಗಂಟೆಗೆ ನಡೆಸಿಕೊಡುವ ಬಿಗ್ ಬುಲೆಟಿನ್ ಕಾರ್ಯಕ್ರಮ ಅಪಾರ ಜನ ಮೆಚ್ಚುಗೆ ಪಡೆದಿದೆ. ಮಾಧ್ಯಮ ಕ್ಷೇತ್ರದಲ್ಲಿ ಇವರನ್ನ ಪ್ರೀತಿಯಿಂದ ರಂಗಣ್ಣ, ಕ್ಯಾಪ್ಟನ್ ಅಂತಾನೇ ಕರೆಯುವುದುಂಟು. ರಂಗಣ್ಣನವರು ತೀರಾ ಸರಳ ವ್ಯಕ್ತಿತ್ವದವರು. ಸಾಂಪ್ರದಾಯಿಕ ವಾರ್ತಾ ವಾಚನ ವಿಧಾನವನ್ನೇ ಬ್ರೇಕ್ ಮಾಡಿದ ರಂಗಣ್ಣನವರು ವಿಭಿನ್ನವಾಗಿ ಕಂಡಿದ್ದೇ ಇಲ್ಲಿ. ಈ ಖ್ಯಾತ ಪತ್ರಕರ್ತ ಎಚ್.ಆರ್.ರಂಗನಾಥ್ ಅವರು ಇತ್ತೀಚೆಗೆ ತಮ್ಮ ಮಗಳ ಮದುವೆಯನ್ನ ಮಾಡಿದ್ದಾರೆ. ಆ ಮದುವೆಯ ಬಗ್ಗೆ ಅನೇಕರು ಹೇಳುತ್ತಿರುವುದು ತಮ್ಮ ರಂಗಣ್ಣ ಅವರು ಮಗಳ ಮದುವೆಗೆ ಬರೋಬ್ಬರಿ ಹತ್ತು ಕೋಟಿ ಖರ್ಚು ಮಾಡಿದ್ದಾರೆ ಎಂದು.

ರಂಗಣ್ಣ ಅವರು ತಮ್ಮ ಪುತ್ರಿ ಪಯಸ್ವಿನಿ ಸತ್ವಜ ರಂಗಾಚಾರ್ ಅವರ ವಿವಾಹ ಮಹೋತ್ಸವ ಅದ್ದೂರಿಯಾಗಿ ಏನೂ ಮಾಡಿಲ್ಲ.ತಮ್ಮ ಆಪ್ತಿಷ್ಟರು ಮತ್ತು ಕುಟುಂಬಸ್ಥರ ಸಮ್ಮುಖದಲ್ಲಿ ಧಾರಾಮುಹೂರ್ತ ಕಾರ್ಯಕ್ರಮ ನೆರವೇರಿಸಿದ್ದಾರೆ ಅಷ್ಟೇ. ಮುಂದಿನ ತಿಂಗಳು ನಗರದಲ್ಲಿ ಅದ್ದೂರಿಯಾಗಿ ಆರತಕ್ಷತೆ ಕಾರ್ಯಕ್ರಮವನ್ನು ಆಯೋಜನೆ ಮಾಡಲಿದ್ದಾರೆ ಎಂದು ತಿಳಿದು ಬಂದಿದೆ. ಈಗಾಗಲೇ ರಾಜಕೀಯ ನಾಯಕರು, ಸಿನಿಮಾ ಕಲಾವಿದರು, ಪತ್ರಿಕಾ ಮಿತ್ರರು, ಉದ್ಯಮಿಗಳು ಸೇರಿದಂತೆ ನಾಡಿನ ಗಣ್ಯಾತಿಗಣ್ಯರನ್ನು ಭೇಟಿ ಮಾಡಿ ಎಚ್. ಆರ್. ರಂಗನಾಥ್ ಅವರು ಮದುವೆ ಆಹ್ವಾನ ಪತ್ರಿಕೆ ನೀಡಿದ್ದಾರೆ. ಎಚ್.ಆರ್.ರಂಗನಾಥ್ ಮತ್ತು ಶಾರದಾ ದಂಪತಿಯ ಪುತ್ರಿ ಪಯಸ್ವಿನಿ ಸತ್ವಜ ರಂಗಾಚಾರ್ ಅವರು ಉದ್ಯಮಿ ನಿಖಿಲ್ ಭಾಸ್ಕರ್ ಎಂಬುವವರನ್ನು ತಮ್ಮ ಬಾಳ ಸಂಗಾತಿಯಾಗಿ ಸ್ವೀಕರಿಸಿದ್ದಾರೆ. ನಿಖಿಲ್ ಭಾಸ್ಕರ್ ಅವರು ನಗರದ ಪ್ರಸಿದ್ದ ಉದ್ಯಮಿಗಳಾಗಿದ್ದು, ರಂಗನಾಥ್ ಪುತ್ರಿ ಪಯಸ್ವಿನಿ ಸತ್ವಜ ಜರ್ನಲಿಸಂ ಪದವಿಧರೆಯಾಗಿದ್ದಾರೆ.

Leave a Reply

%d bloggers like this: