ರಮ್ಯಾ ಅವರ ನಿರ್ಮಾಣದ ಮೊದಲ ಚಿತ್ರದ ಪೋಸ್ಟರ್ ಬಿಡುಗಡೆ

ಸ್ಯಾಂಡಲ್ ವುಡ್ ಬ್ಯೂಟಿ ಕ್ವೀನ್ ನಟಿ ರಮ್ಯಾ ಅವರು ತಮ್ಮ ಆಪಲ್ ಬಾಕ್ಸ್ ಸ್ಟೂಡಿಯೋಸ್ ನಿರ್ಮಾಣ ಸಂಸ್ಥೆಯ ಮೂಲಕ ತಯಾರಾಗುತ್ತಿರುವ ಚೊಚ್ಚಲ ಸಿನಿಮಾ ಸ್ವಾತಿ ಮುತ್ತಿನ ಮಳೆ ಹನಿಯೇ ಸಿನಿಮಾದ ಪೋಸ್ಟರ್ ರಿಲೀಸ್ ಆಗಿದೆ. ಈ ಸ್ವಾತಿ ಮುತ್ತಿನ ಮಳೆ ಹನಿಯೇ ಸಿನಿಮಾದಲ್ಲಿ ನಟಿ ರಮ್ಯಾ ಅವರೇ ನಟಿಸಬೇಕಿತ್ತು. ಆದರೆ ಈ ಚಿತ್ರದ ಪಾತ್ರ ಅವರಿಗೆ ಹೊಂದಾಣಿಕೆ ಆಗುವುದಿಲ್ಲ ಎಂಬ ಕಾರಣಕ್ಕಾಗಿ ಈ ಪಾತ್ರಕ್ಕೆ ಆರ್.ಜೆ. ಸಿರಿಯವರನ್ನ ಆಯ್ಕೆ ಮಾಡಲಾಯಿತು. ಈ ಮೂಲಕ ಆರ್.ಜೆ. ಸಿರಿ ಅವರು ರಾಜ್ ಬಿ ಶೆಟ್ಟಿ ಅವರಿಗೆ ಜೋಡಿಯಾಗಿ ನಟಿಸುತ್ತಿದ್ದಾರೆ. ಈ ಚಿತ್ರದ ಪೋಸ್ಟರ್ ಇತ್ತೀಚೆಗೆ ತಾನೇ ಬಿಡುಗಡೆ ಆಗಿದೆ.

ಪೋಸ್ಟರ್ ನಲ್ಲಿ ಸಿರಿಯವರು ಸಿಂಪಲ್ ಆಗಿ ಸೀರೆ ಉಟ್ಟು ಬುಕ್ ವೊಂದನ್ನ ಹಿಡಿದು ಎಲ್ಲಿಗೋ ಹೊರಟವರಂತೆ ಪೋಸ್ ಕೊಟ್ಟಿದ್ದಾರೆ. ಈ ಪೋಸ್ಟರ್ ಇದೀಗ ಸೋಶಿಯಲ್ ಮೀಡಿಯಾದಲ್ಲಿ ಸಖತ್ ವೈರಲ್ ಆಗಿದೆ. ಈ ಪೋಸ್ಟರ್ ಕಂಡ ಕೆಲವು ನೆಟ್ಟಿಗರು ಮೆಚ್ಚುಗೆ ವ್ಯಕ್ತಪಡಿಸಿ ಚಿತ್ರತಂಡಕ್ಕೆ ಶುಭ ಹಾರೈಸಿದ್ದಾರೆ. ಇನ್ನೂ ಕೆಲವರು ಈ ಪಾತ್ರಕ್ಕೆ ಖಂಡಿತಾ ರಮ್ಯಾ ಅವರು ಸೂಟ್ ಆಗ್ತಾ ಇರ್ಲಿಲ್ಲ. ಅವರು ಗ್ಲಾಮರಸ್ ಬ್ಯೂಟಿ ಅವರನ್ನ ಡಿ ಗ್ಲಾಮರಸ್ ಪಾತ್ರದಲ್ಲಿ ಒಪ್ಪಿಕೊಳ್ಳೋದು ಕಷ್ಟ ಎಂದು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಇನ್ನು ಸ್ವಾತಿ ಮುತ್ತಿನ ಮಳೆ ಹನಿಯೇ ಸಿನಿಮಾ ರಾಜ್ .ಬಿ.ಶೆಟ್ಟಿ ಅವರ ನಿರ್ದೇಶನದ ಮೂರನೇ ಸಿನಿಮಾವಾಗಿದೆ. ಹಾಗಾಗಿ ಈ ಚಿತ್ರದ ಬಗ್ಗೆ ಭಾರಿ ನಿರೀಕ್ಷೆಯಿದೆ. ಅದರ ಜೊತೆಗೆ ರಮ್ಯಾ ಅವರ ನಿರ್ಮಾಣದಲ್ಲಿ ಮೂಡಿ ಬರ್ತಿರೋ ಚೊಚ್ಚಲ.

ಸಿನಿಮಾ ಆಗಿರೋದ್ರಿಂದ ಈ ಚಿತ್ರದಲ್ಲಿ ಏನು ವಿಶೇಷತೆ ಇರ್ಬೋದು ಅಂತ ಅನೇಕ ಮಂದಿ ಕುತೂಹಲದಲ್ಲಿದ್ದಾರೆ. ಇನ್ನು ಈ ಬಗ್ಗೆ ಮಾತನಾಡಿರೋ ನಟ ಕಮ್ ನಿರ್ದೇಶಕ ರಾಜ್ ಬಿ ಶೆಟ್ಟಿ ಅವರು ಈ ಚಿತ್ರದಲ್ಲಿ ನಾನು ನನ್ನ ಮನಸಿಗೆ ಹತ್ತಿರವಾದ ವಿಚಾರಗಳನ್ನ ಪ್ರಸ್ತುತ ಪಡಿಸಿದ್ದೇನೆ. ಹಾಗಾಗಿ ಈ ಸಿನಿಮಾ ನನಗೆ ತುಂಬಾ ಹತ್ತಿರವಾಗಿದೆ. ಈಗಾಗಲೇ ನಾವು ಹದಿನೆಂಟು ದಿನಗಳಲ್ಲಿ ಶೂಟಿಂಗ್ ಮುಗಿಸಿದ್ದೇವೆ. ಇಷ್ಟು ಬೇಗ ಶೂಟಿಂಗ್ ಮುಗಿಸಲು ಕಾರಣ ಅಂದರೆ ನಾವು ತುಂಬಾ ಸುಲಭ ಸಹಜವಾದ ಹತ್ತಿರದ ಪ್ರದೇಶಗಳಲ್ಲಿಯೇ ಚಿತ್ರೀಕರಣ ಮಾಡಿರೋದ್ರಿಂದ ಹೆಚ್ಚು ಸಮಯ ತೆಗೆದುಕೊಳ್ಳಲು ಆಗಲಿಲ್ಲ. ಒಟ್ಟಾರೆಯಾಗಿ ಈ ಸ್ವಾತಿ ಮುತ್ತಿನ ಹನಿಯೇ ಸಿನಿಮಾ ಒಂದು ವಿಶೇಷ ಅನುಭವವನ್ನ ನೀಡಿದ್ದು, ಆದಷ್ಟು ಬೇಗ ಚಿತ್ರಮಂದಿರಗಳಿಗೆ ಬರುತ್ತೇವೆ ಎಂದಿದ್ದಾರೆ.

Leave a Reply

%d bloggers like this: