ರಮೇಶ್ ಅವರ ಸೌಂದರ್ಯ ಚಿತ್ರದಲ್ಲಿ ನಟಾಯಿಸಿದ ಬಾಲನಟಿ ಈಗ ಹೇಗಿದ್ದಾಳೆ ಗೊತ್ತಾ? ನೋಡಿ ಒಮ್ಮೆ

ಕನ್ನಡದ ಸೂಪರ್ ಹಿಟ್ ಸಿನಿಮಾವೊಂದರಲ್ಲಿ ಬಾಲ ನಟಿಯಾಗಿ ಮಿಂಚಿದ್ದ ಇವರು ಇದೀಗ ಬಾಲಿವುಡ್ ನಲ್ಲಿ ಮಾಡೆಲ್ ಕಮ್ ಯುವ ಸ್ಟಾರ್ ನಟಿಯಾಗಿ ಮಿಂಚುತ್ತಿದ್ದಾರೆ. ಯಾರು ಇವರು ಅಂದುಕೊಳ್ಳುವಷ್ಟು ಬದಲಾಗಿರುವ ಈ ನಟಿ ನಿಜಕ್ಕೂ ಕೂಡ ಕನ್ನಡದ ಈ ಸಿನಿಮಾದಲ್ಲಿ ನಟಿಸಿರುವುದು ಇವರೇನಾ ಎನ್ನುವಷ್ಟು ಸೌಂಧರ್ಯವತಿಯಾಗಿದ್ದಾರೆ. ಎಲ್ಲಾ ಸ್ಟಾರ್ಸ್ಸ್ ರಂತೆ ಸೋಶಿಯಲ್ ಮೀಡಿಯಾದಲ್ಲಿ ಸಖತ್ ಆಕ್ಟಿವ್ ಆಗಿರುವ ಈ ನಟಿ ಸೋಶಿಯಲ್ ಮೀಡಿಯಾ ಖಾತೆಯಲ್ಲಿ ಲಕ್ಷಾಂತರ ಮಂದಿ ಅನುಯಾಯಿಗಳನ್ನ ಹೊಂದಿದ್ದಾರೆ. ಆಗಾಗ ತಮ್ಮ ಒಂದಷ್ಟು ಸುಂದರ ಫೋಟೋಗಳನ್ನು ತಮ್ಮ ಸೋಶಿಯಲ್ ಮೀಡಿಯಾ ಪೇಜ್ ಗಳಲ್ಲಿ ಪೋಸ್ಟ್ ಮಾಡುವ ಈ ನಟಿಗೆ ಅಪಾರ ಮೆಚ್ಚುಗೆ ವ್ಯಕ್ತವಾಗುತ್ತವೆ. ಹಾಗಾದರೆ ಆ ನಟಿ ಯಾರು ಅಂತ ಯೋಚನೆ ಮಾಡುತ್ತಿದ್ದೀರಾ. ಆ ನಟಿ ಬೇರಾರು ಅಲ್ಲ.

ಅವರೇ ಶ್ರೀಯಾ ಶರ್ಮಾ. ನಟಿ ಶ್ರೀಯಾ ಶರ್ಮಾ ಇಂದು ಮಾಡೆಲ್ ಕಮ್ ನಟಿಯಾಗಿ ಮಿಂಚುತ್ತಿದ್ದಾರೆ. ಇದಕ್ಕೂ ಮುನ್ನ ಶ್ರೀಯಾ ಶರ್ಮಾ ಬಾಲನಟಿಯಾಗಿ ದಕ್ಷಿಣ ಭಾರತದ ಸಿನಿಮಾಗಳಲ್ಲಿ ಹೆಸರು ಮಾಡಿದ್ದಾರೆ. ಹೌದು ಟಾಲಿವುಡ್ ಮೆಗಾಸ್ಟಾರ್ ನಟ ಚಿರಂಜೀವಿ ಅವರ ನಟನೆಯ ಜೈ ಚಿರಂಜೀವ ಎಂಬ ಚಿತ್ರದ ಮೂಲಕ ಬಣ್ಣದ ಲೋಕಕ್ಕೆ ಶ್ರೀಯಾ ಶರ್ಮಾ ಹೆಜ್ಜೆ ಇರಿಸಿದರು. ಈ ಜೈ ಚಿರಂಜೀವ ಎಂಬ ಸಿನಿಮಾದಲ್ಲಿ ಶ್ರೀಯಾ ಶರ್ಮಾ ಚಿರಂಜೀವಿ ಅವರ ಮುದ್ದು ಸೊಸೆಯಾಗಿ ಅಭಿನಯಿಸಿದ್ದರು. ಈ ಚಿತ್ರದಲ್ಲಿ ನಟಿ ಸಮೀರಾ ರೆಡ್ಡಿ ಪ್ರಧಾನ ಪಾತ್ರದಲ್ಲಿ ಕಾಣಿಸಿಕೊಂಡಿದ್ದರು. ಈ ಚಿತ್ರದ ಬಳಿಕ ಶ್ರೀಯಾ ಶರ್ಮಾ ಅವರಿಗೆ ಅನೇಕ ಸಿನಿಮಾಗಳಲ್ಲಿ ಅವಕಾಶ ಒದಗಿಬಂದಿತು.

ಅಂತೆಯೇ ಕನ್ನಡದಲ್ಲಿ ಖ್ಯಾತ ನಟ ರಮೇಶ್ ಅರವಿಂದ್ ಅವರ ಸೌಂದರ್ಯ ಎಂಬ ಚಿತ್ರದಲ್ಲಿ ಕೂಡ ಶ್ರೀಯಾ ಶರ್ಮಾ ಅವರಿಗೆ ಅವಕಾಶ ದೊರೆಯಿತು. ಈ ಸೌಂದರ್ಯ ಸಿನಿಮಾದಲ್ಲಿ ನಟಿ ಸಾಕ್ಷಿ ಶಿವಾನಂದ್ ಮತ್ತು ರಮೇಶ್ ಅವರ ಮುದ್ದಿನ ಮಗಳ ಪಾತ್ರದಲ್ಲಿ ನಟಿಸಿದ್ದರು. ಬಾಲ ನಟಿ ಶ್ರೀಯಾ ಶರ್ಮಾ ಅವರ ಮುದ್ದಾದ ನಟನೆಗೆ ಕನ್ನಡ ಸಿನಿ ಪ್ರೇಕ್ಷಕರು ಮನ ಸೋತಿದ್ದರು. ತದ ನಂತರ ಏಕೋ ಏನೋ ಇದ್ದಕಿದ್ದಂತೆ ಬಣ್ಣದ ಪ್ರಪಂಚದಿಂದ ಅಂತರ ಕಾಯ್ದುಕೊಂಡರು. ಆದರೆ ಇತ್ತೀಚೆಗೆ ಕೆಲವು ವರ್ಷಗಳ ಹಿಂದೀಚೆಗೆ ಮತ್ತೆ ಸಿನಿಮಾರಂಗದಲ್ಲಿ ಸಕ್ರೀಯವಾಗಿದ್ದು, ಹಿಂದಿ ಮತ್ತು ಮರಾಠಿ ಭಾಷೆಯ ಸಿನಿಮಾಗಳಲ್ಲಿ ಅಭಿನಯಿಸುತ್ತಿದ್ದಾರೆ ನಟಿ ಶ್ರೀಯಾ ಶರ್ಮಾ.

Leave a Reply

%d bloggers like this: