ರಾಮಮಂದಿರಕ್ಕಾಗಿ ವಿಶ್ವದಲ್ಲೇ ಅತೀ ದೊಡ್ಡ ಬೀಗ ತಯಾರಿಸಿದ ಈ ದಂಪತಿ! ಇದರ ಎತ್ತರ ಮತ್ತು ತೂಕ ಎಷ್ಟು ಗೊತ್ತಾ? ನೋಡಿ ಒಮ್ಮೆ

ಕೇಂದ್ರಸರ್ಕಾರದ ಮಹತ್ವಾಕಾಂಕ್ಷೆ ಯೋಜನೆಗಳಲ್ಲಿ ಅಯೋಧ್ಯೆಯಲ್ಲಿ ಭವ್ಯವಾದ ಶ್ರೀ ರಾಮ ಮಂದಿರ ನಿರ್ಮಾಣ ಕಾರ್ಯಕೂಡ ಪ್ರಾಮುಖ್ಯದ್ದಾಗಿದೆ. ಶ್ರೀ ರಾಮ ಮಂದಿರವನ್ನು ನಿರ್ಮಾಣ ಮಾಡುವ ಕಾರ್ಯಕ್ಕೆ ದೇಶದ್ಯಂತ ಅಭೂತ ಪೂರ್ವ ಬೆಂಬಲ ವ್ಯಕ್ತವಾಗಿದೆ. ಅದರಲ್ಲಿಯೂ ಆಯಾ ರಾಜ್ಯದ ಲ್ಲಿರುವ ಅನೇಕ ಸಂಘ-ಸಂಸ್ಥೆಗಳು ಸ್ವಯಂ ಪ್ರೇರಿತವಾಗಿ ದೇಣಿಗೆ ಸಂಗ್ರಹ ಮಾಡಿ ಅಯೋಧ್ಯೆ ಶ್ರೀ ರಾಮ ಮಂದಿರ ನಿರ್ಮಾಣ ಕಾರ್ಯಕ್ಕೆ ಆರ್ಥಿಕವಾಗಿ ನೆರವಾಗಿವೆ. ಈ ಶ್ರೀ ರಾಮ ಮಂದಿರ ನಿರ್ಮಾಣದ ಯೋಜನೆ ಘೋಷಣೆ ಆದಾಗಿನಿಂದ ಈ ಪುಣ್ಯ ಕಾರ್ಯಕ್ಕೆ ದೇಶದಲ್ಲಿ ಮಾತ್ರ ಅಲ್ಲದೆ ಹೊರ ದೇಶದಲ್ಲಿ ಇರುವ ಬಹಳಷ್ಟು ಭಾರತೀಯರು ಸಂತೃಪ್ತಭಾವದಿಂರ ಲಕ್ಷ ಕೋಟಿಗಳಲ್ಲಿ ದೇಣಿಗೆ ನೀಡಿದ್ದಾರೆ. ಕೆಲವು ತಿಂಗಳ ಹಿಂದೆ ಆರ್. ಎಸ್.ಎಸ್ ಸಂಘವು ಕೂಡಅಯೋಧ್ಯೆ ರಾಮಮಂದಿರ ನಿಧಿ ಸಮರ್ಪಣಾ ಅಭಿಯಾನಕ್ಕೆ ಕೈ ಜೋಡಿಸುವುದರ ಮೂಲಕ ಕೋಟ್ಯಾಂತ ರೂ಼.ಗಳ ದೇಣಿಗೆ ಸಂಗ್ರಹ ಮಾಡಿತ್ತು.

ಇದೀಗ ಈ ಅಯೋಧ್ಯೆ ಶ್ರೀರಾಮ ಮಂದಿರ ನಿರ್ಮಾಣಕ್ಕೆ ಉತ್ತರ ಪ್ರದೇಶದ ದಂಪತಿಗಳಿಬ್ಬರು ಬಹಳ ವಿಭಿನ್ನವಾಗಿ ದೇಣಿಗೆ ನೀಡಲು ಮುಂದಾಗಿದ್ದಾರೆ. ಹೌದು ಉತ್ತರ ಪ್ರದೇಶದ ಅಲಿಗಢ ಎಂಬ ಜಿಲ್ಲೆಯ ಸರಿ ಸುಮಾರು ಅರವತ್ತೈದು ವರ್ಷದ ಸತ್ಯ ಪ್ರಕಾಶ್ ಮತ್ತು ಅವರ ಧರ್ಮಪತ್ನಿ ಇಬ್ಬರು ಅಯೋಧ್ಯೆ ಶ್ರೀ ರಾಮ ಮಂದಿರಕ್ಕೆ ಬೃಹತ್ ಬೀಗವೊಂದನ್ನ ಉಡುಗೊರೆಯಾಗಿ ನೀಡಲು ಮುಂದಾಗಿದ್ದಾರೆ. ಈ ಬೃಹತ್ ಬೀಗ ಬರೋಬ್ಬರಿ ಹತ್ತು ಅಡಿ ಎತ್ತರವಿದ್ದು, ಸುಮಾರು ನಾಲ್ಕುನೂರು ಕೆ.ಜಿ.ಅಷ್ಟು ತೂಕವನ್ನೊಂದಿದೆ. ಈ ಬೃಹತ್ ಗಾತ್ರದ ಬೀಗ ತಯಾರು ಮಾಡಲು ಈ ದಂಪತಿಗಳು ಸರಿ ಸುಮಾರು ಆರು ತಿಂಗಳ ಕಾಲ ಶ್ರಮ ವಹಿಸಿದ್ದಾರಂತೆ.

ಸೋಶಿಯಲ್ ಮೀಡಿಯಾದಲ್ಲಿ ಈ ಸತ್ಯ ಪ್ರಕಾಶ್ ಶರ್ಮಾ ಮತ್ತು ಪತ್ನಿ ಇಬ್ಬರು ಈ ಬೃಹತ್ ಬೀಗದೊಟ್ಟಿಗೆ ನಿಂತಿರುವ ಫೋಟೋಗಳು ಸಖತ್ ವೈರಲ್ ಆಗುತ್ತಿವೆ. ಇನ್ನು ಈ ಬೃಹದಾಕಾರದ ಬೀಗದ ಬಗ್ಗೆ ತಿಳಿಯುವುದಾದರೆ ಈ ಬೀಗ ತುಕ್ಕು ಹಿಡಿಯಬಾರದು ಎಂಬ ಉದ್ದೇಶದಿಂದಾಗಿ ಸ್ಟೀಲ್ ಬಳಸಿ ತಯಾರಿಸಲಾಗಿದೆಯಂತೆ. ಈ ಬೃಹತ್ ಬೀಗಕ್ಕೆ ಮೂವತ್ತು ಕೆ.ಜಿ.ತೂಕದ ಕೀಲಿ ಕೈ ಮಾಡಲಾಗಿದ್ದು, ಈ ಬೃಹತ್ ಬೀಗ ತಯಾರಿಸಲು ಎರಡು ಲಕ್ಷ ರೂ. ವೆಚ್ಚವಾಗಿದೆ ಎಂದು ದಂಪತಿಗಳು ತಿಳಿಸಿದ್ದಾರಂತೆ. ಸದ್ಯಕ್ಕೆ ಈ ಅಯೋಧ್ಯೆ ಶ್ರೀರಾಮಮಂದಿರಕ್ಕೆ ಬೃಹತ್ ಬೀಗ ನೀಡುವ ಮೂಲಕ ಈ ದಂಪತಿಗಳು ಭಾರಿ ಸುದ್ದಿಯಾಗಿದ್ದಾರೆ.