ರಕ್ಷಿತ್ ಜೊತೆ ಬ್ರೇಕಪ್ ಆಗಿ 4 ವರ್ಷಗಳ ನಂತರ ಕೊನೆಗೂ ಅಸಲಿ ಸತ್ಯ ಬಿಚ್ಚಿಟ್ಟ ರಶ್ಮಿಕಾ ಮಂದಣ್ಣ.. ನೋಡಿ ಒಮ್ಮೆ

ಸ್ಯಾಂಡಲ್ ವುಡ್ ಸಿಂಪಲ್ ಸ್ಟಾರ್ ನಟ, ನಿರ್ದೇಶಕ, ನಿರ್ಮಾಪಕ ರಕ್ಷಿತ್ ಶೆಟ್ಟಿ ಅವರನ್ನ ಕೈ ಬಿಡಲು ನಿಜವಾದ ಕಾರಣ ತಿಳಿಸಿದ ನ್ಯಾಷನಲ್ ಕ್ರಶ್..! ಸಿನಿಮಾ ಕ್ಷೇತ್ರದಲ್ಲಿ ಯಾವುದು, ಏನ್ ಬೇಕಾದ್ದು ಹೇಗೆ ಬೇಕಾದ್ರು ಆಗಬಹುದು. ಅದು ಸಿನಿಮಾದಲ್ಲಿ ನಡೆದರೆ ಚೆನ್ನಾಗಿರುತ್ತದೆ. ಆದರೆ ಅದೇ ರೀತಿಯ ಸನ್ನಿವೇಶ ಪರಿಸ್ಥಿತಿಗಳು ನಿಜ ಜೀವನದಲ್ಲಿ ಗತಿಸಿದರೆ ಅದು ನಿಜಕ್ಕೂ ಕೂಡ ದುರಂತವೇ ಸರಿ. ಹೌದು ಈ ಪ್ರೀತಿ ಪ್ರೇಮ ಮದುವೆ ಸಿನಿಮಾದಲ್ಲಿ ಬ್ರೇಕಪ್ ಆಗಿ ಅಂತ್ಯ ಕಂಡಾಗ ಅದನ್ನ ಸಿನಿಮಾ ಎಂದು ತಿಳಿದು ಆ ಕ್ಷಣದಲ್ಲಿ ಅನುಕಂಪ ತೋರಿಸಿ ಸುಮ್ಮನಾಗಬಹುದು. ಆದರೆ ಇದೇ ಪ್ರೀತಿ ಪ್ರೇಮ ಕೆಲವು ಕಾರಣಾಂತರಗಳಿಂದ ಪ್ರೀತಿಸಿದ ಜೋಡಿಗಳು ದೂರ ಆದರೆ ಅದು ಆ ಇಬ್ಬರಿಗೂ ಜೊತೆಗೆ ಅವರ ಕುಟುಂಬದವರಿಗೂ ಕೂಡ ನೋವನ್ನುಂಟು ಮಾಡುತ್ತದೆ. ಇನ್ನು ಇವರು ಸಿನಿಮಾ ಸ್ಟಾರ್ಸ್ ಆಗಿರುವುದರಿಂದ ಅವರ ಅಭಿಮಾನಿಗಳಿಗೆ ತುಂಬಾನೇ ಬೇಸರವಾಗುತ್ತದೆ.

ನಟ ರಕ್ಷಿತ್ ಶೆಟ್ಟಿ ಮತ್ತು ನಟಿ ರಶ್ಮಿಕಾ ಮಂದಣ್ಣ ಕಿರಿಕ್ ಪಾರ್ಟಿ ಚಿತ್ರದಲ್ಲಿ ಜೋಡಿಯಾಗಿ ನಟಿಸಿದರು‌. ಈ ಜೋಡಿ ತೆರೆ ಮೇಲೆ ಮುದ್ದಾಗಿ ಕಾಣಿಸಿಕೊಂಡಿತು‌. ಈ ಕ್ಯೂಟ್ ಜೋಡಿದ ಪ್ರೇಕ್ಷಕರು ಇವರಿಬ್ಬರು ನಿಜ ಜೀವನದಲ್ಲಿಯೂ ಕೂಡ ಜೋಡಿಯಾದರೆ ಚೆನ್ನಾಗಿರುತ್ತದೆ ಎಂದು ಭಾವಿಸಿದರು‌. ಅದರಂತೆ ಈ ಸ್ಟಾರ್ ಜೋಡಿ ನಿಶ್ಚಿತಾರ್ಥ ಕೂಡ ಮಾಡಿಕೊಂಡರು. ಇದರಿಂದ ಇಡೀ ಅವರ ಅಭಿಮಾನಿ ವರ್ಗಕ್ಕೆ ಸಖತ್ ಖುಷಿಯಾಗಿತ್ತು. ಆದರೆ ದುರಾದೃಷ್ಟವಶಾತ್ ಈ ಸಂತಸ ಕೆಲವೇ ಕೆಲವು ತಿಂಗಳಿಗೆ ಮಾತ್ರ ಸೀಮಿತವಾಗಿತ್ತು. ಯಾಕೋ ಏನೋ ಇದ್ದಕಿದ್ದಂತೆ ಈ ಸ್ಟಾರ್ ಕಲಾವಿದರು ತಮ್ಮ ಭಾಂಧವ್ಯಕ್ಕೆ ಅರ್ಧದಲ್ಲೇ ಅಂತ್ಯ ಹಾಕಿದರು. ಇದರಿಂದ ಅವರ ಅಭಿಮಾನಿಗಳಿಗೆ ಅಪಾರ ನೋವು ಕೂಡ ಆಯಿತು.

ಇದೀಗ ನಟಿ ರಶ್ಮಿಕಾ ಮಂದಣ್ಣ ಅವರು ಇಡೀ ಭಾರತೀಯ ಚಿತ್ರರಂಗದ ದುಬಾರಿ ಬೇಡಿಕೆಯ ನಟಿಯಾಗಿ ಅಪಾರ ಜನಪ್ರಿಯತೆ ಪಡೆದುಕೊಂಡು ನ್ಯಾಷನಲ್ ಕ್ರಶ್ ಅಂತಾನೇ ಕರೆಸಿಕೊಳ್ಳುತ್ತಿದ್ದಾರೆ. ರಶ್ಮಿಕಾ ಮಂದಣ್ಣ ಕೇವಲ ಕನ್ನಡ ಮಾತ್ರ ಅಲ್ಲದೆ ತೆಲುಗು, ತಮಿಳು, ಹಿಂದಿ ಚಿತ್ರಗಳಲ್ಲಿ ನಟಿಸಿ ಅಪಾರ ಪ್ರಸಿದ್ದತೆ ಗಳಿಸಿದ್ದಾರೆ. ಅಂತೆಯೇ ನಟ ರಕ್ಷಿತ್ ಶೆಟ್ಟಿ ಕೂಡ ಸಾಲು ಸಾಲು ಸಿನಿಮಾಗಳಲ್ಲಿ ನಟಿಸುತ್ತಾ ಬಿಝಿಯಾಗಿದ್ದಾರೆ. ನಟನೆಯ ಜೊತೆಗೆ ನಿರ್ಮಾಣ ಮತ್ತು ನಿರ್ದೇಶನದಲ್ಲಿಯೂ ಸಹ ರಕ್ಷಿತ್ ಶೆಟ್ಟಿ ತೊಡಗಿಸಿಕೊಂಡಿದ್ದಾರೆ. ನಟರಾಗಿ, ನಿರ್ದೆಶಕರಾಗಿ, ನಿರ್ಮಾಪಕರಾಗಿ ರಕ್ಷಿತ್ ಶೆಟ್ಟಿ ಚಂದನವನದಲ್ಲಿ ತನ್ನದೇಯಾದ ಅಪಾರ ಅಭಿಮಾನಿ ಬಳಗ ಹೊಂದಿದ್ದಾರೆ.

ಇನ್ನು ನಟ ರಕ್ಷಿತ್ ಶೆಟ್ಟಿ ಅವರು ಉಳಿದವರು ಕಂಡಂತೆ ಚಿತ್ರದಲ್ಲಿ ಪ್ರೇಕ್ಷಕರಿಗೆ ಮೋಡಿ ಮಾಡಿದ ರಿಚರ್ಡ್ ಆಂಟೋನಿ ಎಂಬ ಪಾತ್ರದ ಹೆಸರನ್ನೇ ಟೈಟಲ್ ಆಗಿಟ್ಟುಕೊಂಡು ಈಗ ರಿಚರ್ಡ್ ಆಂಟೋನಿ ಎಂಬ ಚಿತ್ರ ನಿರ್ದೇಶನ ಮಾಡಲು ಹೊರಟಿದ್ದಾರೆ. ಈ ಚಿತ್ರಕ್ಕೆ ಹೊಂಬಾಳೆ ಫಿಲಂಸ್ ಬ್ಯಾನರಡಿಯಲ್ಲಿ ವಿಜಯ್ ಕಿರಂಗದೂರ್ ಬಂಡವಾಳ ಹೂಡುತ್ತಿದ್ದಾರೆ. ಇನ್ನು ಇದರ ಜೊತೆಗೆ ಇವರ ಅಭಿನಯದ 777 ಚಾರ್ಲಿ ಮತ್ತು ಸಪ್ತ ಸಾಗರಾದಚೆ ಎಲ್ಲಾ ಸಿನಿಮಾಗಳು ಬಿಡುಗಡೆಗೆ ಸಿದ್ದವಾಗಿವೆ. ಈ ಚಿತ್ರಗಳ ರಿಲೀಸ್ ಗಾಗಿ ಅವರ ಅಭಿಮಾನಿಗಳು ಕಾತುರರಾಗಿ ಕಾಯುತ್ತಿದ್ದಾರೆ. ಇತ್ತ ನಟಿ ರಶ್ಮಿಕಾ ಮಂದಣ್ಣ ಅವರು ಪುಷ್ಪ ಚಿತ್ರದ ಯಶಸ್ಸಿನ ನಂತರ ತನ್ನ ಸಂಭಾವನೆಯಲ್ಲಿ ಏರಿಕೆ ಮಾಡಿಕೊಂಡಿದ್ದಾರೆ.

ಜೊತೆಗೆ ಇದೀಗ ಸುದ್ದಿ ಏನಪ್ಪಾ ಅಂದರೆ ನಟಿ ರಶ್ಮಿಕಾ ಮಂದಣ್ಣ ಅವರು ನಟ ರಕ್ಷಿತ್ ಶೆಟ್ಟಿ ಅವರೊಂದಿಗೆ ಬ್ರೇಕಪ್ ಮಾಡಿಕೊಳ್ಳಲು ಕಾರಣ ಬಿಚ್ಚಿಟ್ಟಿದ್ದಾರೆ. ಹೌದು ಖಾಸಗಿ ಸಂದರ್ಶನವೊಂದರಲ್ಲಿ ನಟಿ ರಶ್ಮಿಕಾ ಮಂದಣ್ಣ ಅವರು ರಕ್ಷಿತ್ ಶೆಟ್ಟಿ ಅವರು ನನಗಿಂತ ಹದಿ ನಾಲ್ಕು ವರ್ಷ ದೊಡ್ಡವರು. ನನಗೆ ಆಗ ಕೇವಲ ಇಪ್ಪತ್ತು ವರ್ಷ.ನನಗೆ ತುಂಬಾ ಚಿಕ್ಕ ವಯಸ್ಸು ಆದ ಕಾರಣ ಅದರಿಂದ ನಾನು ಹೊರ ಬರಲು ಕಾರಣ ಎಂದು ಬರೋಬ್ಬರಿ ನಾಲ್ಕು ವರ್ಷಗಳ ಬಳಿಕ ತಮ್ಮ ಮತ್ತು ರಕ್ಷಿತ್ ಶೆಟ್ಟಿ ಅವರ ಬ್ರೇಕಪ್ ಗೆ ನಿಜವಾದ ಕಾರಣ ಬಿಚ್ಚಿಟ್ಟಿದ್ದಾರೆ. ಆದರೆ ಇದೀಗ ತೆಲುಗಿನ ಸ್ಟಾರ್ ನಟ ವಿಜಯ್ ದೇವರಕೊಂಡ ಅವರ ಜೊತೆಗೆ ಡೇಟಿಂಗ್ ನಡೆಸುತ್ತಿದ್ದಾರೆ ಎಂಬ ವಿಚಾರ ಕೂಡ ಈಗ ಗುಟ್ಟಾಗಿ ಉಳಿದಿಲ್ಲ.

Leave a Reply

%d bloggers like this: