ರಜೆ ಇಲ್ಲದಿದ್ದರೂ ಬೆಂಗಳೂರು ಒಂದರಲ್ಲೇ ದೊಡ್ಡ ಸಂಖ್ಯೆಯಲ್ಲಿ ಶೋ ಗಿಟ್ಟಿಸಿಕೊಂಡ ‘ವಿಕ್ರಾಂತ್ ರೋಣ’

ಸ್ಯಾಂಡಲ್ ವುಡ್ ಬಾದ್-ಶಾ ಕಿಚ್ಚ ಸುದೀಪ್ ಅಭಿನಯದ ಬಹು ನಿರೀಕ್ಷಿತ ವಿಕ್ರಾಂತ್ ರೋಣ ಸಿನಿಮಾ ಇಂದು ವರ್ಲ್ಡ್ ವೈಡ್ ಅದ್ದೂರಿಯಾಗಿ ರಿಲೀಸ್ ಆಗಿದೆ. ವಿಕ್ರಾಂತ್ ರೋಣ ಸಿನಿಮಾದಲ್ಲಿ ಕಿಚ್ಚ ಸುದೀಪ್ ಪೊಲೀಸ್ ಆಫೀಸರ್ ಪಾತ್ರದಲ್ಲಿ ಖಡಕ್ ಆಗಿ ಕಾಣಿಸಿಕೊಂಡಿದ್ದಾರೆ. ವಿಭಿನ್ನ ಗೆಟಪ್ ಗಳಲ್ಲಿ ಕಾಣಿಸಿಕೊಂಡಿರುವ ಸುದೀಪ್ ಅವರ ನಟನೆಗೆ ಅಭಿಮಾನಿಗಳು ಫಿಧಾ ಆಗಿದ್ದಾರೆ. ಇನ್ನು ವಿಕ್ರಾಂತ್ ರೋಣ ಸಿನಿಮಾದ ಮೇಕಿಂಗ್ ಅತ್ಯುತ್ತಮವಾಗಿದ್ದು, ತಂತ್ರಜ್ಞಾನದ ಕೆಲಸಗಳಿಗೆ ಅಭೂತಪೂರ್ವ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ. ವಿಶೇಷ ಅಂದರೆ ಕೆಜಿಎಫ್2 ಚಿತ್ರದ ನಂತರ ಕಿಚ್ಚನ ವಿಕ್ರಾಂತ್ ರೋಣ ಸಿನಿಮಾ ಬೆಂಗಳೂರಿನಲ್ಲಿ ಅತ್ಯಧಿಕ ಥಿಯೇಟರ್ ಗಳಲ್ಲಿ ಪ್ರದರ್ಶನ ಕಾಣುತ್ತಿದೆ. ವಿಕ್ರಾಂತ್ ರೋಣ ಸಿನಿಮಾ ಪ್ಯಾನ್ ಇಂಡಿಯಾ ಸಿನಿಮಾವಾಗಿದ್ದು ಪಂಚಭಾಷೆಗಳಲ್ಲಿ ರಿಲೀಸ್ ಆಗಿದೆ. ಬೆಂಗಳೂರಿನಲ್ಲಿ ವಿಕ್ರಾಂತ್ ರೋಣ ಚಿತ್ರ ಕನ್ನಡದಲ್ಲಿ 934 ಪರದೆಯಲ್ಲಿ ಪ್ರದರ್ಶನವಾಗುವುದರ ಜೊತೆಗೆ ತೆಲುಗಿನಲ್ಲಿ 22, ಹಿಂದಿ 40, ತಮಿಳು 10, ಮಲೆಯಾಳಂ ಭಾಷೆಯಲ್ಲಿ 5ಶೋ ಪ್ರದರ್ಶನವಾಗುತ್ತಿದೆ.

ಒಟ್ಟಾರೆಯಾಗಿ ಅನೂಪ್ ಭಂಡಾರಿ ನಿರ್ದೆಶನದಲ್ಲಿ ಮೂಡಿಬಂದ ವಿಕ್ರಾಂತ್ ರೋಣ ಸಿನಿಮಾ ಮೊದಲ ದಿನದ ಗಳಿಕೆ ಬರೋಬ್ಬರಿ ಹತ್ತು ಕೋಟಿ ಗಳಿಕೆ ಮಾಡಲಿದೆ ಎಂದು ನಿರೀಕ್ಷೆ ಮಾಡಲಾಗಿದೆ. ಅದಕ್ಕೂ ಮುನ್ನ ಅಚ್ಚರಿ ಅಂದರೆ ಭಾರತದಾದ್ಯಂತ ವಿಕ್ರಾಂತ್ ರೋಣ ಸಿನಿಮಾ ನೋಡಲು ಭಾರತದಾದ್ಯಂತ ಅಭಿಮಾನಿಗಳು ರಿಲೀಸ್ ಮುನ್ನ ದಿನವೇ ಭಾರಿ ಸಂಖ್ಯೆಯಲ್ಲಿ ಅಡ್ವಾನ್ಸ್ ಬುಕ್ಕಿಂಗ್ ಮಾಡಿದ್ದರು. ಈ ಅಡ್ವಾನ್ಸ್ ಬುಕ್ಕಿಂಗ್ ನಿಂದಾನೇ ವಿಕ್ರಾಂತ್ ರೋಣ ಸಿನಿಮಾ ಬರೋಬ್ಬರಿ 7.5 ಕೋಟಿ ಕಲೆಕ್ಷನ್ ಮಾಡಿದೆ ಎಂದು ತಿಳಿದು ಬಂದಿದೆ. ಕೆಜಿಎಫ್2 ಚಿತ್ರ ಬೆಂಗಳೂರಿನಲ್ಲಿ 1046 ಶೋ ಪ್ರದರ್ಶನ ಕಂಡಿತ್ತು. ಇದೀಗ ಈ ಚಿತ್ರದ ನಂತರ ಕಿಚ್ಚನ ವಿಕ್ರಾಂತ್ ರೋಣ 1011ಶೋ ಪ್ರದರ್ಶನ ಕಾಣುವ ಮೂಲಕ ಭಾರಿ ಸದ್ದು ಮಾಡುತ್ತಿದೆ. ಕೆಜಿಎಫ್2 ಚಿತ್ರ ನಂತರ ಅತ್ಯಂತ ಅಧಿಕ ಶೋ ಪಡೆದುಕೊಂಡ ಸಿನಿಮಾ ಎಂಬ ಕೀರ್ತಿಗೆ ಸುದೀಪ್ ಅವರ ವಿಕ್ರಾಂತ್ ರೋಣ ಸಿನಿಮಾ ಪಾತ್ರವಾಗಿದೆ.