ರಾಜಮೌಳಿ ಕನ್ನಡದಲ್ಲಿ ಚಿತ್ರ ಮಾಡುವುದು ಖಚಿತ.. ಹೀರೋ ಇವರೇ ನೋಡಿ ಒಮ್ಮೆ

ದಕ್ಷಿಣ ಭಾರತದ ಸುಪ್ರಸಿದ್ಧ ನಿರ್ದೇಶಕರಲ್ಲಿ ಮೊದಲ ಪಟ್ಟಿಯಲ್ಲಿ ನಿಲ್ಲುವ ನಿರ್ದೇಶಕ ಅಂದರೆ ಅದು ಎಸ್.ಎಸ್. ರಾಜಮೌಳಿ. ರಾಜಮೌಳಿ ಅವರು ನಿರ್ದೇಶನ ಮಾಡಿದ ಎಲ್ಲಾ ಸಿನಿಮಾಗಳು ಕೂಡ ಸೂಪರ್ ಹಿಟ್ ಆಗಿವೆ. ಇವರು ಮಾಡುವ ಸಿನಿಮಾ ಮೇಕಿಂಗ್ ಮತ್ತು ನಿರೂಪಣೆಯ ಶೈಲಿ ಚಿತ್ರವನ್ನು ಗೆಲ್ಲಿಸಿಬಿಡುತ್ತವೆ. ಅದರ ಜೊತೆಗೆ ಪ್ರಮುಖವಾಗಿ ಕಲಾವಿದರಿಗೂ ಕೂಡ ಒಂದು ಉತ್ತಮ ಭವಿಷ್ಯ ಮಾತ್ರ ಸಿಕ್ಕೆ ಸಿಗುತ್ತದೆ. ಟಾಲಿವುಡ್ ನಲ್ಲಿ ಕಿಚ್ಚ ಸುದೀಪ್ ಅವರು ಇಂದು ಒಂದಷ್ಟು ಜನಪ್ರಿಯತೆ ಗಳಿಸಿದ್ದಾರೆ ಅಂದರೆ ಅದಕ್ಕೆ ರಾಜಮೌಳಿ ನಿರ್ದೇಶನದ ಈಗ ಸಿನಿಮಾ ಪ್ರಮುಖ ಪಾತ್ರ ವಹಿಸುತ್ತದೆ. ಈಗ ಸಿನಿಮಾದಲ್ಲಿ ನಾನಿ ಮತ್ತು ಸಮಂತಾ ಕೂಡ ನಟಿಸಿದ್ದರು. ವಿಲನ್ ಆಗಿ ಸುದೀಪ್ ಅವರ ನಟನೆಗೆ ಟಾಲಿವುಡ್ ಮಂದಿ ಫಿದಾ ಆದರು. ಹೀಗೆ ರಾಜಮೌಳಿ ಮತ್ತು ಕಿಚ್ಚ ಸುದೀಪ್ ಅವರ ಸಿನಿಮಾ ಬಾಂಧವ್ಯ ಹೆಚ್ಚಾಗಿ ಅವರ ಬಾಹುಬಲಿ ಚಿತ್ರದಲ್ಲಿಯೂ ಕೂಡ ಸುದೀಪ್ ಅವರಿಗೆ ಒಂದು ಪಾತ್ರ ನೀಡಿದ್ದರು.

ಇದೀಗ ರಾಜಮೌಳಿ ಅವರು ರಾಮ್ ಚರಣ್ ತೇಜಾ ಮತ್ತು ಜ್ಯೂನಿಯರ್ ಎನ್.ಟಿ.ಆರ್. ಜೊತೆಗೂಡಿಸಿ ಮಲ್ಟಿ ಸ್ಟಾರರ್ ಚಿತ್ರ ಮಾಡಿದ್ದಾರೆ. ರೌದ್ರಂ ರಣಂ ರುಧಿರಂ ಚಿತ್ರದ ಪ್ರಮೋಶನ್ ಕೂಡ ಜೋರಾಗಿ ಮಾಡುತ್ತಿದ್ದಾರೆ. ಇದೇ ಜನವರಿ 7 ರಂದು ಜಗತ್ತಿನಾದ್ಯಂತ ರಿಲೀಸ್ ಆಗುತ್ತಿರುವ ಆರ್. ಆರ್.ಆರ್.ಸಿನಿಮಾ ಬಗ್ಗೆ ಸಿನಿ ಪ್ರೇಕ್ಷಕರು ಭಾರಿ ನಿರೀಕ್ಷೆ ಇಟ್ಟುಕೊಂಡಿದ್ದಾರೆ. ಇತ್ತೀಚೆಗೆ ಆರ್‌.ಆರ್. ಆರ್ ಸಿನಿಮಾ ತಂಡ ಬೆಂಗಳೂರಿನಲ್ಲಿ ಪ್ರಮೋಶನ್ ಇವೆಂಟ್ ಕೂಡ ಮಾಡಿದೆ. ಈ ಕಾರ್ಯಕ್ರಮದಲ್ಲಿ ನಿರ್ದೇಶಕ ರಾಜಮೌಳಿ ಅವರನ್ನ ನೀವು ಈಗ ಮತ್ತು ಬಾಹುಬಲಿ ಚಿತ್ರಗಳಲ್ಲಿ ಕನ್ನಡದ ಖ್ಯಾತ ನಟ ಕಿಚ್ಚ ಸುದೀಪ್ ಅವರನ್ನು ಬಳಸಿಕೊಂಡಿದ್ದೀರಿ. ಅದೇ ರೀತಿಯಾಗಿ ಆರ್. ಆರ್.ಆರ್. ಚಿತ್ರದಲ್ಲಿ ಏಕೆ ಅವಕಾಶ ನೀಡಲಿಲ್ಲ ಎಂಬ ಪ್ರಶ್ನೆಗೆ ನಾನು ಸುದೀಪ್ ಗೆಳೆಯರು.

ಆರ್.ಆರ್.ಆರ್. ಚಿತ್ರದಲ್ಲಿ ಸುದೀಪ್ ಅವರಿಗೆ ಹೊಂದುವಂತಹ ಪಾತ್ರ ಇರಲಿಲ್ಲ. ಅವರು ಬೇಕು ಅಂದಾಗ ನಾನೇ ಮೊದಲು ಕರೆ ಮಾಡಿ ಕೇಳುತ್ತೇನೆ. ಅವರ ಸಂಭಾವನೆ ವಿಚಾರ ಸಮಸ್ಯೆ ಅಲ್ಲ.ನಾನು ಹಣದ ವಿಚಾರವಾಗಿ ಯಾವುದೇ ನಟರನ್ನ ಆಯ್ಕೆ ಮಾಡುವುದಿಲ್ಲ. ನನಗೆ ಆ ಪಾತ್ರ ಇಂತಹ ನಟ ಬೇಕು ಎಂದಾದರೆ ನಾನು ಅವರನ್ನೇ ಹಾಕಿಕೊಳ್ಳುತ್ತೇನೆ ಎಂದರು. ಅದೇ ರೀತಿಯಾಗಿ ಕನ್ನಡದ ನಟರ ಜೊತೆ ಸಿನಿಮಾ ಮಾಡುವ ಯೋಜನೆ ಕೂಡ ನನಗಿದೆ. ಅದನ್ನ ಈಗಲೇ ತಿಳಿಸುವುದಿಲ್ಲ. ಮೂಲಗಳಿಂದ ತಿಳಿದು ಬಂದಿರುವ ಪ್ರಕಾರ ರಾಜಮೌಳಿಯವರು ಕನ್ನಡ ವಾಣಿಜ್ಯವಾಗಿ ಬೆಳೆಯುತ್ತಿರುವುದನ್ನು ಕಂಡು ಕನ್ನಡದಲ್ಲಿ ಸಿನಿಮಾ ಮಾಡುವ ಪ್ಲಾನ್ ಮಾಡಿದ್ದಾರಂತೆ. ಹೌದು ಸದ್ಯ ರಾಜಮೌಳಿಯವರು ಕನ್ನಡದಲ್ಲಿ ಯಶ್ ಅಥವಾ ಸುದೀಪ್ ರವರ ಜೊತೆ ಸಿನಿಮಾ ಮಾಡಲು ನಿರ್ಧರಿಸಿದ್ದು ಈ ವಿಚಾರದ ಕುರಿತು ಅಧಿಕೃತವಾಗಿ ಜನವರಿ ತಿಂಗಳಲ್ಲಿ ತಿಳಿಸುತ್ತಾರೆ.

ಪ್ರಮೋಷನ್ ಕಾರ್ಯಗಳು ಅದ್ದೂರಿಯಾಗಿ ನಡೆಯುತ್ತಿದೆ ಮುಂದಿನ ದಿನಗಳಲ್ಲಿ ತಿಳಿಸುತ್ತೇನೆ. ಸದ್ಯಕ್ಕೆ ಆರ್.ಆರ್.ಆರ್.ಸಿನಿಮಾದ ಪ್ರಮೋಶನ್ ಕಡೆ ಮಾತ್ರ ಗಮನ ಎಂದು ತಿಳಿಸಿದ್ದಾರೆ. ಇನ್ನು ನಾವು ಬಾಹುಬಲಿ ಚಿತ್ರವನ್ನು ಮಾಡುವಾಗ ಕನ್ನಡದಲ್ಲಿ ಡಬ್ಬಿಂಗ್ ಮಾಡುವಂತಹ ಅವಕಾಶ ಇರಲಿಲ್ಲ. ಆದರೆ ಈಗ ಕನ್ನಡದಲ್ಲಿ ಡಬ್ಬಿಂಗ್ ಮಾಡುವಂತಹ ಅವಕಾಶವಿದೆ ಕನ್ನಡ ಸಿನಿಪ್ರೇಕ್ಷಕರು ಡಬ್ಬಿಂಗ್ ಸಿನಿಮಾಗಳಿಗಿಂತ ಹೆಚ್ಚಾಗಿ ಮೂಲ ಭಾಷೆಯ ಚಿತ್ರಗಳನ್ನು ನೋಡಲು ಇಷ್ಟಪಡುತ್ತಾರೆ ಹಾಗಾಗಿ ನಾವು ಬಾಹುಬಲಿ ಚಿತ್ರಕ್ಕೆ ಡಬ್ಬಿಂಗ್ ಮಾಡಿರಲಿಲ್ಲ. ಇದೀಗ ಆರ್ ಆರ್ ಆರ್ ಚಿತ್ರಕ್ಕೆ ಕನ್ನಡದಲ್ಲಿಯೂ ಕೂಡ ಡಬ್ಬಿಂಗ್ ಮಾಡಿದ್ದೇವೆ. ಕನ್ನಡದಲ್ಲಿ ಡಬ್ಬಿಂಗ್ ಮಾಡುವಾಗ ಕನ್ನಡ ಭಾಷೆಯ ಬಗ್ಗೆ ತುಂಬಾ ಜಾಗೃತಿ ಬಯ ವಹಿಸಿದ್ದೇವೆ. ಪದಗಳ ಅರ್ಥ ಉಚ್ಚಾರಣೆ ಬಗ್ಗೆ ಕೂಡ ತುಂಬಾ ಜಾಗೃತಿ ವಹಿಸಿದ್ದೇವೆ ಎಂದಿದ್ದಾರೆ.

ಕನ್ನಡ ಸಿನಿ ಪ್ರೇಕ್ಷಕರು ತಮ್ಮ ನಟರು ನಟರು ಸಣ್ಣ ಪುಟ್ಟ ತಪ್ಪು ಮಾಡಿದಾಗ ಕ್ಷಮಿಸುತ್ತಾರೆ. ಆದರೆ ಬೇರೆ ಭಾಷೆಯ ನಟರು ಭಾಷೆಯ ಉಚ್ಚಾರಣೆ ತಪ್ಪಿದ್ದಲ್ಲಿ ಅದನ್ನು ಒಪ್ಪಿಕೊಳ್ಳುವುದಿಲ್ಲ ಹಾಗಾಗಿ ಎಲ್ಲಾ ರೀತಿಯಲ್ಲೂ ಕೂಡ ನಾವು ಸಂಪೂರ್ಣವಾಗಿ ಜವಾಬ್ದಾರಿಯಿಂದ ಡಬ್ಬಿಂಗ್ ಮಾಡಿದ್ದೇವೆ ಎಂದು ತಿಳಿಸಿದರು. ಇನ್ನು 2022 ಜನವರಿ 7 ರಂದು ವಿಶ್ವಾದ್ಯಂತ ಆರ್.ಆರ್.ಆರ್. ಸಿನಿಮಾ ತೆರೆ ಕಾಣಲಿದೆ. ಚಿತ್ರದಲ್ಲಿ ಬಿಗ್ ಸ್ಟಾರ್ ಗಳಾದ ಜ್ಯೂನಿಯರ್ ಎನ್.ಟಿ.ಆರ್. ಮತ್ತು ರಾಮ್ ಚರಣ್ ತೇಜಾ, ಆಲಿಯಾ ಭಟ್, ಅಜಯ್ ದೇವಗನ್ ಸೇರಿದಂತೆ ಬಹುದೊಡ್ಡ ತಾರಾಗಣವಿದೆ.

Leave a Reply

%d bloggers like this: