ರಾಜಕೀಯ ಪಕ್ಷಕ್ಕೆ ಸೇರಿಕೊಂಡ ಕನ್ನಡದ ಹಾಸ್ಯ ನಟ ಟೆನ್ನಿಸ್ ಕೃಷ್ಣ ಅವರು

ಕನ್ನಡದ ಖ್ಯಾತ ಹಾಸ್ಯ ನಟ ಇದೀಗ ರಾಜಕೀಯ ರಂಗಕ್ಕೆ ಹೆಜ್ಜೆ ಇಡುವ ಮೂಲಕ ಭಾರಿ ಸುದ್ದಿಯಾಗುತ್ತಿದ್ದಾರೆ. ಮೊದಲಿನಿಂದಾಲೂ ಈ ಸಿನಿಮಾ ರಂಗ ಮತ್ತು ರಾಜಕೀಯ ರಂಗಕ್ಕೆ ಅವಿನಾಭಾವ ಸಂಬಂಧವಿದ್ದು, ಒಂದೇ ನಾಣ್ಯದ ಎರಡು ಮುಖಗಳಂತೆ ಕೆಲಸ ಮಾಡುತ್ತವೆ. ಯಾಕಂದ್ರೆ ಸಿನಿಮಾದ ಮೂಲಕ ಜನಪ್ರಿಯತೆ ಗಳಿಸಿ ನಂತರ ಸಿನಿಮಾ ಕ್ಷೇತ್ರವನ್ನು ಮೆಟ್ಟಿಲಾಗಿಸಿಕೊಂಡು ರಾಜಕೀಯ ಕ್ಷೇತ್ರಕ್ಕೆ ಹತ್ತಿ ಇಂದು ಅನೇಕ ಕಲಾವಿದರು ರಾಜಕೀಯ ಕ್ಷೇತ್ರದಲ್ಲಿ ಗುರುತಿಸಿಕೊಂಡಿದ್ದಾರೆ. ಕೆಲವರು ಅದರಲ್ಲಿ ಸೈಡ್ ಲೈನ್ ಆದರೆ ಇನ್ನೂ ಕೆಲವರು ಯಶಸ್ವಿಯಾಗಿ ಮಂತ್ರಿ ಪದವಿಯನ್ನ ಕೂಡ ಅನುಭವಿಸಿದ್ದಾರೆ. ಅನುಭವಿಸುತ್ತಾ ಇದ್ದಾರೆ ಕೂಡಾ. ಈಗಾಗಲೇ ಅಂಬರೀಶ್, ಅನಂತ್ ನಾಗ್, ಬಿಸಿ ಪಾಟೀಲ್, ಸಿ‌ಪಿ ಯೋಗೇಶ್ವರ್, ಜಯಮಾಲಾ, ಉಮಾಶ್ರೀ, ಶೃತಿ ಅಂತಹ ದಿಗ್ಗಜ ಕಲಾವಿದರು ಸಿನಿಮಾರಂಗದಲ್ಲಿ ಯಶಸ್ವಿಯಾಗಿ ಜನಪ್ರಿಯರಾಗುವ ಮೂಲಕ ರಾಜಕೀಯ ಕ್ಷೇತ್ರದಲ್ಲಿಯೂ ಗುರುತಿಸಿಕೊಂಡು ಯಶಸ್ವಿಯಾಗಿದ್ದಾರೆ.

ಅದರಂತೆ ಇದೀಗ ಕನ್ನಡದ ಖ್ಯಾತ ಹಾಸ್ಯ ನಟ ಟೆನ್ನಿಸ್ ಕೃಷ್ಣ ಅವರು ಕೂಡ ರಾಜಕೀಯದಲ್ಲಿ ಅದೃಷ್ಟ ಪರೀಕ್ಷೆಗೆ ಇಳಿದಿದ್ದಾರೆ. ಹೌದು ನಟ ಟೆನ್ನಿಸ್ ಕೃಷ್ಣ ಅವರಿಗೆ ಕಳೆದೊಂದು ದಶಕದಿಂದ ಚಿತ್ರರಂಗದಲ್ಲಿ ಹೇಳಿಕೊಳ್ಳುವಂತಹ ಬೇಡಿಕೆ ಮತ್ತು ಅವಕಾಶಗಳು ಕೂಡ ಇಲ್ಲ. ಹಾಗಾಗಿ ಅವರಿಗೆ ಈಗ ರಾಜಕೀಯದಲ್ಲಿ ಅವಕಾಶ ಹರಸಿ ಬಂದಿದೆ. ದೆಹಲಿ ಮತ್ತು ಪಂಜಾಬ್ ರಾಜ್ಯಗಳಲ್ಲಿ ಅಧಿಕಾರ ಗದ್ದುಗೆ ಹಿಡಿದು ಸರ್ಕಾರ ನಡೆಸುತ್ತಿರುವ ಅರವಿಂದ್ ಕೇಜ್ರಿವಾಲ್ ನೇತೃತ್ವದ ಆಮ್ ಆದ್ಮಿ ಪಕ್ಷ ಇದೀಗ 2023ರ ವಿಧಾನಸಭಾ ಚುನಾವಣೆಯಲ್ಲಿ ಕರ್ನಾಟಕದಲ್ಲಿ ಭರ್ಜರಿಯಾಗಿ ಸ್ಪರ್ಧಿಸುವ ಯೋಜನೆ ಮಾಡುತ್ತಿದೆ. ಹಾಗಾಗಿ ಕರ್ನಾಟಕದಲ್ಲಿ ಪಕ್ಷ ಬವವರ್ಧನೆಗಾಗಿ ಒಂದಷ್ಟು ಜನಪ್ರಿಯತೆ ಹೊಂದಿರುವ ವ್ಯಕ್ತಿಗಳನ್ನು ತಮ್ಮ ಪಕ್ಷಕ್ಕೆ ಸೆಳೆಯುವ ಕಾರ್ಯ ಚಟುವಟಿಕೆ ಮಾಡುತ್ತಿದೆ.

ಈಗಾಗಲೇ ಬೆಂಗಳೂರು ಕಮೀಶನರ್ ಆಗಿದ್ದ ಭಾಸ್ಕರ್ ರಾವ್ ಅವರು ಆಮ್ ಆದ್ಮಿ ಪಕ್ಷದ ಮುಖಂಡರಾಗಿದ್ದು, ಇತ್ತೀಚೆಗೆ ಕೆಲವು ದಿನಗಳ ಹಿಂದೆಯಷ್ಟೇ ಕಾಂಗ್ರೆಸ್ ತೊರೆದ ಹಿರಿಯ ನಟ ಮುಖ್ಯಮಂತ್ರಿ ಚಂದ್ರು ಅವರು ಕೂಡ ಆಮ್ ಪಕ್ಷಕ್ಕೆ ಸೇರ್ಪಡೆಗೊಂಡಿದ್ದರು. ಇದೀಗ ಆಮ್ ಆದ್ಮಿ ಪಕ್ಷಕ್ಕೆ ಕನ್ನಡದ ಖ್ಯಾತ ಹಿರಿಯ ನಟರಾದ ಟೆನ್ನಿಸ್ ಕೃಷ್ಣ ಅವರು ಕೂಡ ಆಗಸ್ಟ್ 4ರಂದು ಅಂದರೆ ಇಂದು ಬೆಂಗಳೂರಿನಲ್ಲಿ ಅಧಿಕೃತವಾಗಿ ಸೇರ್ಪಡೆಯಾಗಿದ್ದಾರೆ. ಇನ್ನು ಟೆನ್ನಿಸ್ ಕೃಷ್ಣ ಅವರು ಬಿಗ್ ಬಾಸ್ ಸೀಸನ್ 9ರಲ್ಲಿ ಸ್ಪರ್ಧಿಯಾಗಿ ಭಾಗವಹಿಸುತ್ತಾರೆ ಎಂಬ ಸುದ್ದಿ ಹರಿದಾಡಿತ್ತು. ಆದರೆ ಈ ಬಗ್ಗೆ ಯಾವುದೇ ಅಧಿಕೃತ ಮಾಹಿತಿ ಬಂದಿಲ್ಲ. ಇದರ ನಡುವೆ ಟೆನ್ನಿಸ್ ಕೃಷ್ಣ ಅವರು ಆಮ್ ಆದ್ಮಿ ಪಕ್ಷಕ್ಕೆ ಸೇರ್ಪಡೆಯಾಗಿ ಸುದ್ಥಿಯಾಗಿದ್ದಾರೆ.

Leave a Reply

%d bloggers like this: