ರಾಹುಲ್ ಗಾಂಧಿ ವಿಚಾರದಲ್ಲಿ ಮಾಡಿದ ಯಡವಟ್ಟಿನ ಬಗ್ಗೆ ಮೊದಲ ಬಾರಿಗೆ ತುಟಿ ಬಿಚ್ಚಿದ ನಟಿ ರಮ್ಯಾ

ನಮಸ್ಕಾರ ಸ್ನೇಹಿತರೆ ಕನ್ನಡ ಚಲನಚಿತ್ರದ ಖ್ಯಾತ ನಟಿ ಮೋಹಕ ತಾರೆ ರಮ್ಯಾ ಅವರು ಯಾರಿಗೆ ತಾನೇ ಗೊತ್ತಿಲ್ಲ ಹೇಳಿ ನೋಡಿ. ಸ್ನೇಹಿತರೆ ರಾಹುಲ್ ಗಾಂಧಿ ವಿಚಾರದಲ್ಲಿ ತಾವು ಮಾಡಿದ್ದ ತಪ್ಪಿನ ಬಗ್ಗೆ ನಟಿ ರಮ್ಯಾ ಬಾಯ್ಬಿಟ್ಟಿದ್ದಾರೆ. ಮೂರು ವರ್ಷದ ಹಿಂದೆ ತಮ್ಮಿಂದ ಆದ ಅಚಾತುರ್ಯವನ್ನು ಜಗಜ್ಜಾಹೀರು ಮಾಡಿದ್ದಾರೆ. ತಮ್ಮ ಇನ್ಸ್ಟಾ ಗ್ರಾಂ ಸ್ಟೋರಿಯಲ್ಲಿ ವಿಚಾರವನ್ನ ಹಂಚಿಕೊಂಡಿದ್ದಾರೆ. ಆಗ ನಾನು ಕಾಂಗ್ರೆಸ್​ ಸೋಷಿಯಲ್​ ಮೀಡಿಯಾ ವಿಭಾಗದ ಮುಖ್ಯಸ್ಥಳಾಗಿದ್ದೆ. ಆಗ ನಡೆದ ಘಟನೆಯನ್ನು ನೀವು ನೆನಪಿಸಿಕೊಳ್ಳಬಹುದು. ಆದರೆ ಅದರ ಹಿಂದೆ ಇರುವ ಸತ್ಯದ ಬಗ್ಗೆ ನಿಮಗೆ ಗೊತ್ತಿಲ್ಲ. ಆ ಬಗ್ಗೆ ಇಲ್ಲಿದೆ ಪೂರ್ಣ ವಿವರ’ ಎಂದು ಬರಹವನ್ನ ಆರಂಭಿಸಿರುವ ರಮ್ಯಾ ‘ಕಾಂಗ್ರೆಸ್​ನ ಕೆಲವು ಮಾಜಿ ಸಂಸದರು, ಅಂದಿನ ಕಾಂಗ್ರೆಸ್ ಅಧ್ಯಕ್ಷ ರಾಹುಲ್​ ಗಾಂಧಿ ಜೊತೆ ಜರ್ಮನಿ ಪ್ರವಾಸಕ್ಕೆ ತೆರಳಿದ್ದೆ. ಅಂಥ ಪ್ರವಾಸಗಳು ತುಂಬ ಗಡಿಬಿಡಿಯಿಂದ ಕೂಡಿರುತ್ತಿದ್ದವು. ಒಂದು ದಿನ ಪ್ಲ್ಯಾನ್​ ಪ್ರಕಾರ, ಬರ್ಲಿನ್​ನ ಒಂದು ಮ್ಯೂಸಿಯಂಗೆ ಭೇಟಿ ನೀಡಿದ್ದೆವು.

ಅಲ್ಲಿನ ರಾಜಕಾರಣಿಗಳು ನಮಗೆ ಅವರ ಸಂಸ್ಕೃತಿ ಮತ್ತು ಇತಿಹಾಸದ ಬಗ್ಗೆ ತೋರಿಸುತ್ತಿದ್ದರು. ಆಗ ನಾನು ರಾಹುಲ್​ ಗಾಂಧಿಯವರ ಕೆಲವು ಫೋಟೋಗಳನ್ನು ಕ್ಲಿಕ್​ ಮಾಡಿ, ಇಂಡಿಯಾದಲ್ಲಿರುವ ನನ್ನ ಟೀಮ್​ಗೆ ಕಳಿಸಿದೆ. ಬೇಡದ ಕಾರಣಕ್ಕಾಗಿ ಆ ಫೋಟೋಗಳು ವೈರಲ್​ ಆಗಿಬಿಟ್ಟವು’ ಎಂದು ರಮ್ಯಾ ಬರೆದುಕೊಂಡಿದ್ದಾರೆ. ಇಷ್ಟೇ ಅಲ್ಲ ನಾನಾ ರೀತಿಯ ಮೀಮ್ ಗಳು ಹರದಾಡಿದ ನಂತರ ಬೇಸರಗೊಂಡು ರಮ್ಯಾ, ರಾಹುಲ್​ ಗಾಂಧಿ ಬಳಿ ಹೋಗಿ ಕ್ಷಮೆ ಕೇಳಿ. ರಾಜೀನಾಮೆ ನೀಡಿದ ವಿಚಾರವನ್ನು ಹೇಳಿದ್ದಾರೆ. ರಾಜೀನಾಮೆಯನ್ನ ಅವರು ಸ್ವೀಕರಿಸಲಿಲ್ಲ. ಪರವಾಗಿಲ್ಲ, ಮುಂದಿನ ಬಾರಿ ಪೋಸ್ಟ್​ ಮಾಡುವಾಗ ಎಚ್ಚರದಿಂದಿರಿ ಎಂದಷ್ಟೇ ಹೇಳಿದರು. ಆಗ ರಾಹುಲ್ ಗಾಂಧಿ ಗುಣವನ್ನು ಕಂಡು ಕಣ್ಣೀರು ಹಾಕಿದೆ ಎಂದು ತಮ್ಮ ಅನಿಸಿಕೆ ಹಂಚಿಕೊಂಡಿದ್ದಾರೆ. ಈ ನಮ್ಮ ಲೇಖನ ನಿಮಗೆ ಇಷ್ಟವಾದಲ್ಲಿ ಶೇರ್ ಮಾಡಿ ಮತ್ತು ಲೈಕ್ ಮಾಡಿ. ಮತ್ತಷ್ಟು ಹೊಸ ಹೊಸ ಸುದ್ದಿಗಳಿಗಾಗಿ ನಮ್ಮ ಪೇಜ್ ನ್ನು ತಪ್ಪದೆ ಲೈಕ್ ಮಾಡಿ.

Leave a Reply

%d bloggers like this: