ರಾಧಿಕಾಗಾಗಿ ಕುಮಾರಸ್ವಾಮಿ ಕಟ್ಟಿಸಿದ ಬಂಗಲೆ ಹೇಗಿದೆ ನೋಡಿ! ಒಳಗಿನ ದೃಶ್ಯ ನೋಡಿ ಒಮ್ಮೆ

ಪ್ರತಿಯೊಬ್ಬರ ಬದುಕಿನಲ್ಲಿ ಒಂದಲ್ಲ ಒಂದು ರೀತಿಯಾದ ಆಕಸ್ಮಿಕ ಘಟನೆಗಳು ನಡೆಯುತ್ತವೆ. ಅದು ನಮ್ಮಿಂದ ತಡೆದು ನಿಲ್ಲಿಸುವುದಕ್ಕೆ ಆಗುತ್ತೋ ಇಲ್ಲವೊ ಆದರೆ ವಿಧಿಯಾಟದ ಮುಂದೆ ನಾವು ಸೋಲಬೇಕಾಗುತ್ತದೆ.ಅಂತೆಯೇ ಕನ್ನಡ ಚಿತ್ರರಂಗದ ಖ್ಯಾತ ನಿರ್ಮಾಪಕ ಮತ್ತು ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಅವರ ಬದುಕು ಕೂಡ ಅಂತಹ ವಿಧಿಯಾಟಕ್ಕೆ ಸಿಲುಕಿ ಎರಡನೇ ಮದುವೆಗೆ ಕಾರಣವಾಯಿತು. ಸ್ಯಾಂಡಲ್ ವುಡ್ ನಲ್ಲಿ ಜನಪ್ರಿಯತೆಯ ಉತ್ತುಂಗದಲ್ಲಿದ್ದ ನಟಿ ರಾಧಿಕಾ ಅವರನ್ನು ಎರಡನೇ ಮದುವೆಯಾದ ಕುಮಾರಸ್ವಾಮಿ ಎಲ್ಲಿಯೂ ಕೂಡ ರಾಧಿಕಾ ಅವರಿಗೆ ಮೋಸವಾಗುವಂತೆ ನಡೆದುಕೊಂಡಿಲ್ಲ. ತಮ್ಮ ಮೊದಲ ಪತ್ನಿ ಅನಿತಾ ಅವರಿಗೆ ನೀಡಿದಷ್ಟೇ ಪ್ರಾಶಸ್ಥ್ಯ ಕೊಟ್ಟು ಅವರಿಗೂ ಕೂಡ ಎಲ್ಲಾ ರೀತಿಯ ಸೌಕರ್ಯ ಸೌಲಭ್ಯಗಳನ್ನು ಮಾಡಿಕೊಟ್ಟಿದ್ದಾರೆ. ಚಂದನವನದ ಇಪ್ಪತ್ತರ ದಶಕದ ಸುಪ್ರಸಿದ್ದ ನಟಿಯಾಗಿ ಮಿಂಚಿದ ರಾಧಿಕಾ ಕನ್ನಡ ಚಿತ್ರರಂಗವನ್ನು ದಶಕಗಳ ಕಾಲ ಆಳಿದ್ದಾರೆ.ಈ ಇಪ್ಪತ್ತರ ದಶಕದಲ್ಲಿ ಕನ್ನಡದ ಜನಪ್ರಿಯ ನಟಿಯಾಗಿ ಮಿಂಚಿದ ರಾಧಿಕಾ ಭಾವಾನ್ಮಾತಕ ಪಾತ್ರಗಳಲ್ಲಿ ಜೀವ ತುಂಬಿ ಅದ್ಭುತವಾಗಿ ನಟಿಸುತ್ತಿದ್ದರು.

ನಿನಗಾಗಿ,ತವರಿಗೆ ಬಾ ತಂಗಿ,ಪ್ರೇಮ ಖೈದಿ,ಮಣಿ,ತಾಯಿ ಇಲ್ಲದ ತಬ್ಬಲಿ,ಮನೆ ಮಗಳು,ರಿಷಿ,ಅಣ್ಣ ತಂಗಿ ಅಂತಹ ಕೌಟುಂಬಿಕ ಚಿತ್ರಗಳ ಮೂಲಕ ನಟಿ ರಾಧಿಕಾ ಕನ್ನಡ ಸಿನಿ ಪ್ರೇಕ್ಷಕರಿಗೆ ಮೋಡಿ ಮಾಡಿದ್ದರು.ಸಿನಿ ವೃತ್ತಿಯಲ್ಲಿ ಯಶಸ್ವಿಯಾದ ನಟಿ ರಾಧಿಕಾ ತಮ್ಮ ವೈಯಕ್ತಿಕ ಬದುಕಿನಲ್ಲಿ ಹಲವು ಏಳು-ಬೀಳುಗಳನ್ನು ಅನುಭವಿಸಿದ್ದಾರೆ.ನಟಿ ರಾಧಿಕಾ ಹದಿನಾಲ್ಕನೇ ವಯಸ್ಸಿನಲ್ಲಿ ರುವಾಗಲೇ ಅಂದರೆ 2000 ನೇ ಇಸವಿಯಲ್ಲಿ ರತನ್ ಕುಮಾರ್ ಎಂಬುವರೊಟ್ಟಿಗೆ ಮದುವೆ ಆಗುತ್ತಾರೆ.ಆದರೆ ಇವರ ದಾಂಪತ್ಯ ಜೀವನ ಸುಂದರವಾಗಿ ಇರುವುದಿಲ್ಲ.ಕೆಲವು ಸಲ ರಾಧಿಕಾ ಅವರ ತಂದೆ ಮತ್ತು ರಥನ್ ಕುಮಾರ್ ಅವರ ನಡುವೆ ಜಗಳವಾಗಿ ಪೊಲೀಸ್ ಠಾಣೆ ಮೆಟ್ಟಿಲೇರಿ ರಾದ್ದಾಂತ ಕೂಡ ಆಗುತ್ತದೆ.2002 ರಲ್ಲಿ ರತನ್ ಕುಮಾರ್ ಹೃದಯಾಘಾತದಿಂದ ಸಾವನ್ನಪ್ಪುತ್ತಾರೆ.

ಬಾಲ್ಯದಿಂದಲೇ ನೃತ್ಯದ ಕಡೆ ಅಪಾರ ಆಸಕ್ತಿ ಹೊಂದಿದ್ದ ರಾಧಿಕಾ ಅವರು ಪುನಃ ತಮ್ಮ ನೃತ್ಯದ ಕಡೆ ಗಮನ ಹರಿಸುತ್ತಾರೆ. ಮಾಡಿದರು.ಇದರ ಜೊತೆಗೆ ಬಣ್ಣದ ಲೋಕದಲ್ಲಿ ಒಂದಷ್ಟು ಅವಕಾಶಗಳು ಕೂಡ ಹರಸಿ ಬರುತ್ತವೆ.ಮೊದಲಿಗೆ ನಟ ಸೃಜನ್ ಲೋಕೇಶ್ ಅವರೊಂದಿಗೆ ನೀಲ ಮೇಘ ಶಾಮ ಎಂಬ ಚಿತ್ರದಲ್ಲಿ ನಟಿಸಲು ಅವಕಾಶ ದೊರೆಯುತ್ತದೆ.ತದ ನಂತರ ಎಸ್.ಮಹೇಂದರ್ ನಿರ್ದೇಶನದಲ್ಲಿ ಮೂಡಿಬಂದ ನಿನಗಾಗಿ ಚಿತ್ರದ ಮೂಲಕ ನಾಯಕಿಯಾಗಿ ಎಂಟ್ರಿ ಪಡೆದ ನಟಿ ರಾಧಿಕಾ ಮತ್ತೆ ಹಿಂದಿರುಗಿ ನೋಡಲಿಲ್ಲ.ಸಾಲು ಸಾಲು ಸಿನಿಮಾಗಳು ಸೂಪರ್ ಹಿಟ್ ಆಗಿ ಸ್ಯಾಂಡಲ್ ವುಡ್ ನ ಜನಪ್ರಿಯ ಬೇಡಿಕೆಯ ನಟಿಯಾಗಿ ಗುರುತಿಸಿಕೊಂಡರು.

ಹೀಗೆ ಕನ್ನಡ ಚಿತ್ರರಂಗದಲ್ಲಿ ಉನ್ನತ ಮಟ್ಟಕ್ಕೆ ಬೆಳೆದ ನಟಿ ರಾಧಿಕಾ ಅವರಿಗೆ ಎಚ್.ಡಿ.ಕುಮಾರಸ್ವಾಮಿ ಅವರ ಪರಿಚಯವಾಗಿ 2006 ರಲ್ಲಿ ರಹಸ್ಯವಾಗಿ ಮದುವೆ ಕೂಡ ಆದರು.ಬಳಿಕ 2010 ರಲ್ಲಿ ಕೋರ್ಟ್ ಇವರಿಬ್ಬರ ಮದುವೆಯನ್ನು ಅಸಿಂಧು ಎಂದು ಘೋಷಣೆ ಮಾಡಿತು.ಏಕೆಂದರೆ ಕುಮಾರಸ್ವಾಮಿ ಅವರು ತಮ್ಮ ಮೊದಲ ಪತ್ನಿ ಅನಿತಾ ಅವರಿಗೆ ವಿಚ್ಚೇದನ ನೀಡರಲಿಲ್ಲ.ಇನ್ನು ನಟ ನಿಖಿಲ್ ಕೂಡ ಅಂದಿನ ದಿನಗಳಲ್ಲಿ ಸಾರ್ವಜನಿಕವಾಗಿಯೇ ರಾಧಿಕಾ ಅವರ ಮಗಳನ್ನ ನನ್ನ ತಂಗಿ ಎಂದು ನಾನು ಒಪ್ಪಿಕೊಳ್ಳುವುದಿಲ್ಲ.ಇದು ನನ್ನ ತಾಯಿಗೆ ಮೋಸವಾಗುತ್ತದೆ ಎಂದು ತಿಳಿಸಿದ್ದರು.ಇನ್ನು ನಟಿ ರಾಧಿಕಾ ಮತ್ತು ಮಾಜಿ ಸಿ ಎಂ.ಎಚ್.ಡಿ.ಕುಮಾರಸ್ವಾಮಿ ಸಾಂಸಾರಿಕ ಬದುಕಿಗೆ ಸಾಕ್ಷಿಯಾಗಿ ಶಮಿತಾ ಎಂಬ ಹೆಣ್ಣು ಮಗುವಿದ್ದು,ಶಮಿತಾ ಹೈ ಸ್ಕೂಲ್ ವಿಧ್ಯಾಭ್ಯಾಸ ಮಾಡುತ್ತಿದ್ದಾರೆ.

ರಾಧಿಕಾ ಕುಮಾರಸ್ವಾಮಿ ಕೂಡ ಸಿನಿಮಾ ನಿರ್ಮಾಣ ಮಾಡುವುದರ ಮೂಲಕ ನಿರ್ಮಾಪಕಿ ,ನಟಿಯಾಗಿ ಕನ್ನಡ ಚಿತ್ರರಂಗದಲ್ಲಿ ತೊಡಗಿಸಿಕೊಂಡಿದ್ದಾರೆ.ಎಚ್ ಡಿ.ಕುಮಾರಸ್ವಾಮಿ ಅವರು ಕೂಡ ತಮ್ಮ ಎರಡನೇ ಪತ್ನಿ ರಾಧಿಕಾ ಅವರೊಟ್ಟಿಗೆ ಉತ್ತಮ ಬಾಂಧವ್ಯ ಹೊಂದಿದ್ದು ಅನ್ಯುನ್ಯತೆ ಜೀವನ ನಡೆಸುತ್ತಿದ್ದಾರೆ.ತಮ್ಮ ಪತ್ನಿ ರಾಧಿಕಾ ಮತ್ತು ಮಗಳು ಶಮಿತಾ ಜೊತೆಗೂಡಿ ಹೊರ ದೇಶಕ್ಕೆ ಪ್ರವಾಸ ಕೂಡ ಹೋಗಿ ಬಂದಿದ್ದಾರೆ.ಶಮಿತಾರ ಹುಟ್ಟು ಹಬ್ಬದಂದು ತಮ್ಮ ಸಂಪೂರ್ಣ ಸಮಯವನ್ನು ಕಳೆದು ತಮ್ಮ ತಂದೆಯ ಜವಾಬ್ದಾರಿ ಕರ್ತವ್ಯವನ್ನು ಕೂಡ ಮಾಡುತ್ತಿದ್ದಾರೆ.ಹೀಗೆ ಎಚ್.ಡಿ.ಕುಮಾರಸ್ವಾಮಿ ಅವರು ರಾಧಿಕಾ ಅವರಿಗೆ ಐಷಾರಾಮಿ ಬಂಗಲೆ,ಕಾರು ಸೇರಿದಂತೆ ಎಲ್ಲಾ ರೀತಿಯ ಸೌಲಭ್ಯವನ್ನು ಮಾಡಿಕೊಟ್ಟಿದ್ದಾರೆ.

Leave a Reply

%d bloggers like this: