ರಾಧಿಕಾ ಪಂಡಿತ್ ತನ್ನ ಮೊಬೈಲ್ ನಲ್ಲಿ ಯಶ್ ಹೆಸರು ಏನೆಂದು ಸೇವ್ ಮಾಡಿದ್ದಾಳೆ ಗೊತ್ತಾ? ವಿಚಿತ್ರವಾದ ಹೆಸರು ನೋಡಿ ಒಮ್ಮೆ

ಚಂದನವನದ ಯಶಸ್ವಿ ತಾರಾ ಜೋಡಿಗಳಲ್ಲಿ ಮೊದಲ ಪಂಕ್ತಿಯಲ್ಲಿ ನಿಲ್ಲುವ ಜೋಡಿ ಅಂದರೆ ಅದು ರಾಕಿಂಗ್ ಸ್ಟಾರ್ ಯಶ್ ಮತ್ತು ನಟಿ ರಾಧಿಕಾ ಪಂಡಿತ್ ಅವರದ್ದು. ರಾಕಿಂಗ್ ಸ್ಟಾರ್ ಯಶ್ ಮತ್ತು ನಟಿ ರಾಧಿಕಾ ಪಂಡಿತ್ ಇಬ್ಬರು ಒಂದಷ್ಟು ವರ್ಷಗಳ ಕಾಲ ಪರಸ್ಪರ ಪ್ರೀತಿಸಿ ತದ ನಂತರ ತಮ್ಮ ತಮ್ಮ ಸಿನಿ ವೃತ್ತಿ ಜೀವನದಲ್ಲಿ ಯಶಸ್ಸು ಪಡೆದ ಬಳಿಕ ಕುಟುಂಬದವರ ಒಪ್ಪಿಗೆ ಪಡೆದು 2016 ರಲ್ಲಿ ದಾಂಪತ್ಯ ಜೀವನಕ್ಕೆ ಹೆಜ್ಜೆ ಇಟ್ಟರು. ಇದೀಗ ಇಬ್ಬರು ಮಕ್ಕಳೊಂದಿಗೆ ಸುಂದರ ಸಾಂಸಾರಿಕ ಬದುಕನ್ನ ಕಟ್ಟಿಕೊಂಡಿರುವ ಈ ಜೋಡಿ ಅನೇಕ ಯುವಕ-ಯುವತಿಯರಿಗೆ ಆದರ್ಶರಾಗಿ ಬದುಕು ನಡೆಸುತ್ತಿದ್ದಾರೆ. ಸದ್ಯಕ್ಕೆ ಇಬ್ಬರು ಮಕ್ಕಳ ತಾಯಿಯಾಗಿ ನಟಿ ರಾಧಿಕಾ ಪಂಡಿತ್ ಅವರು ಗೃಹ ಲಕ್ಷ್ಮಿಯಾಗಿ ಇದ್ದಾರೆ.

ಇತ್ತ ಯಶ್ ಕೆಜಿಎಫ್ ಚಾಪ್ಟರ್ 2 ಚಿತ್ರದ ಪ್ರಮೋಶನ್ ಕೆಲಸ ಕಾರ್ಯಗಳಲ್ಲಿ ಬಿಝಿ಼ ಆಗಿದ್ದಾರೆ. ಜೊತೆಗೆ ಮಫ್ತಿ ಸಿನಿಮಾದ ನಿರ್ದೇಶಕ ನರ್ತನ್ ಅವರೊಟ್ಟಿಗೆ ಚಿತ್ರ ಮಾಡಲು ತಯಾರಿ ನಡೆಸುತ್ತಿದ್ದಾರೆ. ನಟಿ ರಾಧಿಕಾ ಪಂಡಿತ್ ತಮ್ಮಿಬ್ಬರ ಮಕ್ಕಳ ಲಾಲನೆ ಪಾಲನೆ ಮಾಡುತ್ತಾ ಸೋಶಿಯಲ್ ಮೀಡಿಯಾದಲ್ಲಿ ಸಖತ್ ಆಕ್ಟೀವ್ ಆಗಿರುತ್ತಾರೆ. ತಮ್ಮ ದೈನಂದಿನ ಅಪ್ ಡೇಟ್ಸ್ ಜೊತೆಗೆ ತಮ್ಮ ಮುದ್ದಾದ ಮಕ್ಕಳ ತುಂಟಾಟಗಳ ವೀಡಿಯೋ ಪೋಸ್ಟ್ ಮಾಡುತ್ತಿರುತ್ತಾರೆ. ಇನ್ನು ಇದೀಗ ರಾಧಿಕಾ ಪಂಡಿತ್ ಅವರು ತಮ್ಮ ಪತಿ ಯಶ್ ಅವರಿಗೆ ಇಟ್ಟಿದ್ದ ಅಡ್ಡ ಹೆಸರೊಂದನ್ನ ರಿವೀಲ್ ಮಾಡಿದ್ದಾರೆ.

ಹೌದು ರಾಧಿಕಾ ಪಂಡಿತ್ ಮತ್ತು ಯಶ್ ಇಬ್ಬರು ತಾವು ಪ್ರೀತಿಸುತ್ತಿರುವ ವಿಚಾರವನ್ನು ತುಂಬಾ ಜಾಗರೂಕತೆಯಿಂದ ಗೌಪ್ಯವಾಗಿ ಇಟ್ಟುಕೊಂಡಿದ್ದರಂತೆ. ಅದಕ್ಕಾಗಿ ರಾಧಿಕಾ ಪಂಡಿತ್ ಅವರು ಯಶ್ ಅವರ ಮೊಬೈಲ್ ನಂಬರ್ ಅನ್ನು ತಮ್ಮ ಫೋನ್ ನಲ್ಲಿ ಡೊಲ್ಲ ಎಂಬ ಹೆಸರಿನಿಂದ ಕಾಂಟ್ಯಾಕ್ಟ್ ನಲ್ಲಿ ಸೇವ್ ಮಾಡಿಕೊಂಡಿದ್ದರಂತೆ. ಡೊಲ್ಲ ಅಂದರೆ ಕೊಂಕಣಿ ಭಾಷೆಯಲ್ಲಿ ಫ್ಯಾಟ್ ಎಂಬ ಅರ್ಥ ನೀಡುತ್ತದೆಯಂತೆ. ಹೀಗಂತ ಸ್ವತಃ ನಟಿ ರಾಧಿಕಾ ಪಂಡಿತ್ ಅವರೇ ಖಾಸಗಿ ವಾಹಿನಿಯೊಂದರಲ್ಲಿ ತಮ್ಮ ಪ್ರೀತಿ ಪ್ರೇಮ ಸಂಧರ್ಭದ ದಿನಗಳಲ್ಲಿ ತಾವು ಮುಚ್ಚಿಟ್ಟಿದ್ದಂತಹ ಸ್ವಾರಸ್ಯಕರ ವಿಚಾರವನ್ನು ಹಂಚಿಕೊಂಡಿದ್ದಾರೆ.