ರಾಧಿಕಾ ಪಂಡಿತ್ ಮೊಬೈಲ್ ನಂಬರ್ ಡೂಪ್ಲಿಕೇಟ್ ಪಡೆದು ಎಂತ ನೀಚ ಅವಾಂತರ ಸೃಷ್ಟಿಸಿದ್ದ ಖತರ್ನಾಕ್ ಕಿಲಾಡಿ..! ನೋಡಿ ಒಮ್ಮೆ

ಚಂದನವನದ ಸುಪ್ರಸಿದ್ಧ ನಟಿಯ ನಂಬರ್ ಪಡೆದು ಅವಾಂತರ ಸೃಷ್ಟಿಸಿದ್ದ ಖತರ್ನಾಕ್ ಕಿಲಾಡಿ..! ಆಧುನಿಕ ಜಗತ್ತಿನಲ್ಲಿ ಎಲ್ಲವೂ ನಕಲಿ. ಇಲ್ಲಿ ಯಾವುದನ್ನ ನಂಬಬೇಕು. ಯಾರನ್ನ ನಂಬಬೇಕು. ಯಾವುದು ಸತ್ಯ ಯಾವುದು ಸುಳ್ಳು ಎಂಬುದನ್ನ ಅರಿಯುವುದಕ್ಕೆ ಹರಸಾಹಸವೇ ಪಡಬೇಕಾಗುತ್ತದೆ. ಸಾಮಾನ್ಯ ಜನರಿರಲಿ ಇಲ್ಲಿ ವಿಧ್ಯಾವಂತ ಬುದ್ದಿವಂತರನ್ನೇ ಯಾಮಾರಿಸುವ ಚಾಲಾಕಿಗಳು ನಮ್ಮ ಸುತ್ತ ಮುತ್ತಾನೇ ಇರುತ್ತಾರೆ. ಪ್ರತಿಯೊಬ್ಬ ವ್ಯಕ್ತಿಗಳಿಗೂ ಕೂಡ ಜಾಗರೂಕತೆ ಎಂಬುದು ತುಂಬಾ ಅವಶ್ಯಕವಾಗಿರುತ್ತದೆ. ಕೊಂಚ ಎಚ್ಚರ ತಪ್ದಿದರು ಕೂಡ ನಮ್ಮ ಇಡೀ ಬದುಕನ್ನೆ ತಲೆಕೆಳಕಾಗಿ ಮಾಡಿ ಬಿಡುತ್ತಾರೆ. ಅದರಲ್ಲಿಯೂ ಕೂಡ ಸಾರ್ವಜನಿಕ ಜೀವನದಲ್ಲಿ ಇರುವಂತಹ ಸಿನಿಮಾ, ರಾಜಕೀಯ, ಕ್ರೀಡಾ ಇನ್ನಿತರ ಯಾವುದೇ ಕ್ಷೇತ್ರದಲ್ಲಿ ಹೆಸರು ಮಾಡಿರುವ ಗಣ್ಯ ವ್ಯಕ್ತಿಗಳು ಕೊಂಚ ಜಾಗರೂಕತೆ ತಪ್ಪಿದರೆ ಅವರ ಗೌರವ ಘನೆಗೆ ಧಕ್ಕೆ ತರುವುದರಲ್ಲಿ ಅನುಮಾನವಿಲ್ಲ.

ಹಾಗಾಗಿಯೇ ಸೆಲೆಬ್ರಿಟಿಗಳು ತಮ್ಮ ವೈಯಕ್ತಿಕ ವಿಚಾರಗಳ ಬಗ್ಗೆ ಜಾಗ್ರತೆ ಕಾಳಜಿವಹಿಸುವುದು ಅತ್ಯಂತ ಬಹಳ ಪ್ರಮುಖವಾಗಿರುತ್ತದೆ. ಇದೇ ರೀತಿಯಾಗಿ ಚಿತ್ರ ನಟಿ ರಾಧಿಕಾ ಪಂಡಿತ್ ಅವರ ಸಿಮ್ ನಂಬರ್ ಬಳಸಿ ವ್ಯಕ್ತಿಯೊಬ್ಬ ರಾಧಿಕಾ ಪಂಡಿತ್ ಅವರ ಹೆಸರಿಗೆ ಮಸಿ ಬಳಿಯುವ ಪ್ರಯತ್ನ ಮಾಡಿದ್ದಾನೆ. ಸುಮಾರು ವರ್ಷಗಳ ಹಿಂದೆ ಅಭಿಷೇಕ್ ಎಂಬಾತ ಗಾಂಧಿನಗರದಲ್ಲಿ ಅಲೆದಾಡಿ ಅವರಿವರ ಬಳಿ ನಟಿ ರಾಧಿಕಾ ಪಂಡಿತ್ ಅವರ ಮೊಬೈಲ್ ನಂಬರ್ ಪಡೆದಿದ್ದಾನೆ. ಕನ್ನಡ ಚಿತ್ರರಂಗದ ಬಹು ಬೇಡಿಕೆಯ ನಟಿಯಾಗಿದ್ದ ನಟಿ ರಾಧಿಕಾ ಪಂಡಿತ್ ಅವರಿಗೆ ಅನೇಕ ಅವಕಾಶಗಳು ಹರಿದು ಬರುತ್ತಿತ್ತು.

ಯಾರೋ ತಮ್ಮ ಸಿನಿಮಾ ವಿಚಾರವಾಗಿ ಅವರ ನಂಬರ್ ಕೇಳುತ್ತಿದ್ದಾರೆ ಎಂದು ರಾಧಿಕಾ ಪಂಡಿತ್ ಅವರ ನಂಬರ್ ಕೊಟ್ಟಿದ್ದಾರೆ. ಗಾಂಧಿನಗರ ಅಂದಮೇಲೆ ಅಲ್ಲಿ ಬಹಳ ಗಾಸಿಪ್ಗಳು ನಡೆದೇ ನಡೆಯುತ್ತವೆ.ಆದರೆ ಇದು ಗಾಸಿಪ್ ಅಲ್ಲ ನಿಜವಂತೆ. ಹೌದು ಸ್ಟಾರ್ ನಟಿ ರಾಧಿಕಾ ಪಂಡಿತ್ ಹೆಸರನ್ನ ಬಳಸಿಕೊಂಡು ಅಭಿಷೇಕ್ ಎಂಬ ವ್ಯಕ್ತಿ ನಾನು ಅವರ ಪರ್ಸನಲ್ ಸೆಕ್ರೆಟರಿ ರಾಧಿಕಾ ಪಂಡಿತ್ ಮೇಡಂ ಅವರ ಮೊಬೈಲ್ ಕಳೆದು ಹೋಗಿದೆ. ಹಾಗಾಗಿ ಅದೇ ಸಂಖ್ಯೆಯ ಮತ್ತೊಂದು ಸಿಮ್ ಕೊಡಬೇಕಂತೆ ಎಂದು ಟೆಲಿಕಾಂ ಸೆಂಟರ್ ನಲ್ಲಿ ಅದೇ ಸಂಖ್ಯೆಯ ನಕಲಿ ಸಿಮ್ ಅನ್ನು ಪಡೆದುಕೊಂಡಿದ್ದಾನೆ. ಟೆಲಿಕಾಂ ಸಿಬ್ಬಂದಿಗಳು ಪೂರ್ವಪರ ಅರಿಯದೆ ಆ ವ್ಯಕ್ತಿ ಹೇಳಿದ್ದನ್ನೇ ನಂಬಿ ಡೂಪ್ಲಿಕೇಟ್ ಸಿಮ್ ಕೊಟ್ಟಿದ್ದಾರೆ.

ಈ ಡೂಪ್ಲಿಕೇಟ್ ಸಿಮ್ ಪಡೆದ ನಂತರವೂ ಕೂಡ ಟೆಲಿಕಾಂ ಸರ್ವೀಸ್ ನವರು ತಕ್ಷಣ ಮೊದಲಿನ ಸಿಮ್ ಸಂಖ್ಯೆಯನ್ನ ಬ್ಲಾಕ್ ಮಾಡಿರಲಿಲ್ಲ. ಇದರ ನಡುವೆ ಅಭಿಷೇಕ್ ರಾಧಿಕಾ ಪಂಡಿತ್ ಅವರ ನಂಬರ್ ಬಳಸೀ ಅನೇಕ ಸ್ಟಾರ್ ನಟ-ನಟಿಯರ ದೂರವಾಣಿ ಸಂಖ್ಯೆಯನ್ನ ಪಡೆದುಕೊಂಡಿದ್ದಾನೆ. ಅಷ್ಟೇ ಅಲ್ಲದೆ ಕೆಲವರಿಗೆ ಅಶ್ಲೀಲ ಕೆಟ್ಟ ಸಂದೇಶಗಳನ್ನು ಕೂಡ ಕಳಿಸಿದ್ದಾನೆ. ಬಹುತೇಕರು ಇದು ರಾಧಿಕಾ ಪಂಡಿತ್ ಅವರೇ ಕಳಿಸಿದ್ದಾರೆ ಎಂದು ನಂಬಿದ್ದರಂತೆ. ವಾರದ ಬಳಿಕ ರಾಧಿಕಾ ಪಂಡಿತ್ ಅವರು ಬಳಸುತ್ತಿದ್ದ ಸಿಮ್ ಬ್ಲಾಕ್ ಅಗುತ್ತದೆ.

ತಕ್ಷಣ ರಾಧಿಕಾ ಪಂಡಿತ್ ಅವರು ತಮ್ಮ ಟೆಲಿಕಾಂ ಸೆಂಟರ್ ಗೆ ಕರೆ ಮಾಡಿ ತಮ್ಮ ನಂಬರ್ ಬ್ಲಾಕ್ ಆಗಿರುವ ಬಗ್ಗೆ ಕೇಳಿದಾಗ ಟೆಲಿಕಾಂ ಸಿಬ್ಬಂದಿಗಳು ನಡೆದಿದ್ದ ಅಸಲಿ ಕಥೆಯನ್ನ ಬಿಚ್ಚಿಟ್ಟಿದ್ದಾರೆ. ಇದರಿಂದ ಗಾಬರಿಗೊಂಡ ನಟಿ ರಾಧಿಕಾ ಪಂಡಿತ್ ಅವರು ತಮ್ಮ ತಂದೆಯ ಜೊತೆ ಪೊಲೀಸ್ ಠಾಣೆಗೆ ತೆರಳಿ ದೂರ ನೀಡಿದರು. ಬಳಿಕ ಅಪರಾಧಿ ಪೊಲೀಸರಿಗೆ ಅತಿಥಿಯಾಗಿದ್ದಾನೆ. ಇದು ಒಬ್ಬ ಸ್ಟಾರ್ ನಟಿಗೆ ಈ ರೀತಿ ಯಾಮಾರಿಸಿದ ಮೇಲೆ ಸಾಮಾನ್ಯರ ಪಾಡೇನು ಎಂಬುದನ್ನ ಯೋಚಿಸಲೇಬೇಕಾಗಿದೆ. ಆದ್ದರಿಂದ ಪ್ರತಿಯೊಬ್ಬರು ಕೂಡ ಜಾಗೃತರಾಗಿರಬೇಕಾಗಿರುತ್ತದೆ.