ರಾಧಿಕಾ ಪಂಡಿತ್ ಇದುವರೆಗೂ ಸುದೀಪ್ ಜೊತೆ ಏಕೆ ನಟಿಸಿಲ್ಲ ಗೊತ್ತಾ? ಅಸಲಿ ಕಾರಣ ಬಯಲು

ಸ್ಯಾಂಡಲ್ ವುಡ್ ಸಿಂಡ್ರೆಲಾ ಎಂದೇ ಹೆಸರಾಗಿರುವ ನಟಿ ರಾಧಿಕಾ ಪಂಡಿತ್.ಚಂದನವನದ ಯಶಸ್ವಿ ನಟಿಯರಲ್ಲಿ ಒಬ್ಬರಾಗಿರುವ ನಟಿ ರಾಧಿಕಾ ಪಂಡಿತ್ ಕನ್ನಡದ ಬಹುತೇಕ ಸ್ಟಾರ್ ನಟರೊಂದಿಗೆ ನಟಿಸಿದ್ದಾರೆ.ಆದರೆ ಈ ಇಬ್ಬರು ಸ್ಟಾರ್ ನಟರೊಂದಿಗೆ ಮಾತ್ರ ನಟಿಸಿಲ್ಲ.ಇದಕ್ಕೆ ಏನು ಕಾರಣ ಎಂಬುದು ಸಿನಿ ಪ್ರೇಮಿಗಳಿಗೆ ಕಾಡುತ್ತಲೇ ಇದೆ.ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್,ಗೋಲ್ಡನ್ ಸ್ಟಾರ್ ಗಣೇಶ್,ಅಜಯ್ ರಾವ್,ಆಕ್ಷನ್ ಪ್ರಿನ್ಸ್ ಧೃವಸರ್ಜಾ,ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಸೇರಿದಂತೆ ಎಲ್ಲಾ ಸ್ಟಾರ್ ನಟರ ಜೊತೆ ನಟಿಸಿ ಸೈ ಎನಿಸಿಕೊಂಡಿದ್ದಾರೆ.ಯಶಸ್ವಿ ನಟಿ ಎಂದೂ ಸಹ ಕರೆಸಿಕೊಂಡಿದ್ದಾರೆ.ನಟಿ ರಾಧಿಕಾ ಪಂಡಿತ್ ನಟಿಸಿದ ಬಹುತೇಕ ಸಿನಿಮಾಗಳು ಸೂಪರ್ ಹಿಟ್ ಚಿತ್ರಗಳೇ.ಆದರೆ ರಾಧಿಕಾ ಪಂಡಿತ್ ಇದುವರೆಗೂ ಕೂಡ ಸ್ಯಾಂಡಲ್ ವುಡ್ ಸೂಪರ್ ಸ್ಟಾರ್ ನಟರಾದ ಬಾಕ್ಸ್ ಆಫೀಸ್ ಸುಲ್ತಾನ್ ಚಾಲೇಂಜಿಂಗ್ ಸ್ಟಾರ್ ದರ್ಶನ್,ಕಿಚ್ಚ ಸುದೀಪ್ ಅವರ ಚಿತ್ರಗಳಲ್ಲಿ ನಟಿಸಿಲ್ಲ.ಈ ಬಗ್ಗೆ ಅನೇಕ ಬಾರಿ ನಟಿ ರಾಧಿಕಾ ಪಂಡಿತ್ ಅವರಿಗೆ ಅವರ ಅಭಿಮಾನಿಗಳು ಪ್ರಶ್ನೆ ಕೂಡ ಮಾಡಿದ್ದರು.

ಹೀಗೆ ಒಂದು ಖಾಸಗಿ ಸಂದರ್ಶನವೊಂದರಲ್ಲಿ ಈ ಪ್ರಶ್ನೆಯನ್ನ ಕೇಳಿದಾಗ,ನನಗೆ ಕಥೆ ಚೆನ್ನಾಗಿದ್ದು ನನ್ನ ಪಾತ್ರ ಇಷ್ಟವಾದರೆ ನಾನು ಯಾವ ಸ್ಟಾರ್ ನಟರೊಂದಿಗೂ ಕೂಡ ನಟಿಸುತ್ತೇನೆ.ಅದೂ ಹೊಸ ನಟ ಆದರೂ ಸರಿಯೇ ನನಗೆ ಕಥೆ ಚೆನ್ನಾಗಿರಬೇಕು ಅಷ್ಟೇ ಎಂದು ಖಾಸಗಿ ಸಂದರ್ಶನವೊಂದರಲ್ಲಿ ಹೇಳಿದ್ದರು.ಆದರೆ ನಟಿ ರಾಧಿಕಾ ಪಂಡಿತ್ ಈ ಸ್ಟಾರ್ ನಟರೊಂದಿಗ ನಟಿಸದಿರಲು ರಾಕಿಂಗ್ ಸ್ಟಾರ್ ಯಶ್ ಕಾರಣ.ಕೆಲವು ವರ್ಷಗಳ ಹಿಂದೆ ತೆರೆಕಂಡ ಗೋಲ್ಡನ್ ಸ್ಟಾರ್ ಗಣೇಶ್ ಅಭಿನಯದ ಜೂ಼ಮ್ ಚಿತ್ರದಲ್ಲಿ ರಾಧಿಕಾ ಪಂಡಿತ್ ನಾಯಕಿಯಾಗಿ ನಟಿಸಿದ್ದರು.ಈ ಚಿತ್ರದ ಬಿಡುಗಡೆಯಾಗುವ ಮುನ್ನ ತಾವೇ ಸಂಪೂರ್ಣ ಸಿನಿಮಾ ನೋಡಿ ಅವರ ಒಪ್ಪಿಗೆ ಸೂಚಿಸಿದ ಬಳಿಕ ಈ ಜೂ಼ಮ್ ಚಿತ್ರವನ್ನು ರಿಲೀಸ್ ಮಾಡುವುದಕ್ಕೆ ಅನುವು ಮಾಡಿಕೊಟ್ಟರು ಎಂಬ ಊಹಾಪೋಹ ಸುದ್ದಿಗಳು ಹರಿದಾಡಿದ್ದವು.

ಆದರೆ ಈ ಯಾವ ವಿಚಾರಗಳು ಕೂಡ ಸತ್ಯವಲ್ಲ ಎಂಬುದನ್ನ ನಟಿ ರಾಧಿಕಾ ಪಂಡಿತ್ ಅವರೇ ಸ್ಪಷ್ಟನೆ ನೀಡಿದ್ದರು.ನಟಿ ರಾಧಿಕಾ ಪಂಡಿತ್ ಮದುವೆಯಾದ ಮೇಲೂ ಕೂಡ ನಟ ನಿರೂಪ್ ಭಂಢಾರಿ ಅವರಿಗೆ ಜೋಡಿಯಾಗಿ ನಟಿಸಿದ್ದರು.ಸದ್ಯಕ್ಕೆ ನಟಿ ರಾಧಿಕಾ ಪಂಡಿತ್ ಮತ್ತು ನಟ ರಾಕಿಂಗ್ ಸ್ಟಾರ್ ಯಶ್ ದಂಪತಿಗಳು ದುಬೈ ಪ್ರವಾಸದಲ್ಲಿದ್ದಾರೆ. ಈ ನಮ್ಮ ಲೇಖನ ಇಷ್ಟವಾದರೆ ಶೇರ್ ಮಾಡಿ ಮತ್ತು ಲೈಕ್ ಮಾಡಿ. ಮತ್ತಷ್ಟು ಹೊಸ ಹೊಸ ಸುದ್ದಿಗಳಿಗಾಗಿ ನಮ್ಮ ಪೇಜ್ ನ್ನು ತಪ್ಪದೆ ಲೈಕ್ ಮಾಡಿ.