ರಾಧಿಕಾ ಬಗ್ಗೆ ಯಶ್ ತಂದೆ ತಾಯಿ ಈಗ ಹೇಳೋದಾ! ಹೇಳಿದ್ದೇನು ಗೊತ್ತಾ? ನೋಡಿ ಒಮ್ಮೆ

ಕನ್ನಡ ಚಿತ್ರರಂಗದ ಮುದ್ದಾದ ತಾರಾ ಜೋಡಿಗಳ ಪೈಕಿ ಮೊದಲ ಪಂಕ್ತಿಯಲ್ಲಿ ನಿಲ್ಲುವ ಜೋಡಿ ಅಂದರೆ ಅದು ರಾಕಿಂಗ್ ಸ್ಟಾರ್ ಯಶ್ ಮತ್ತು ಸ್ಯಾಂಡಲ್ ವುಡ್ ಸಿಂಡ್ರೆಲಾ ರಾಧಿಕಾ ಪಂಡಿತ್ ದಂಪತಿಗಳದ್ದು. ಹೌದು ನಂದಗೋಕುಲ ಧಾರಾವಾಹಿ ಮೂಲಕ ಪರಸ್ಪರ ಪರಿಚಯ ಆದ ಈ ಇಬ್ಬರು ಕಲಾವಿದರು ತದ ನಂತರ ಸಿನಿಮಾ ಲೋಕದಲ್ಲಿ ತಮ್ಮ ಅಭಿನಯದ ಮೂಲಕ ತಮ್ಮದೇಯಾದ ಅಭಿಮಾನಿ ಬಳಗವನ್ನು ಹೊಂದಿದ್ದಾರೆ. ಸಧ್ಯಕ್ಕೆ ನಟ ಯಶ್ ಅವರು ಕೆಜಿಎಫ್ ಚಿತ್ರದ ಮೂಲಕ ಪ್ಯಾನ್ ಇಂಡಿಯಾ ಸ್ಟಾರ್ ಆಗಿ ಅಂತರಾಷ್ಟ್ರೀಯ ಮಟ್ಟದಲ್ಲಿ ಹೆಸರು ಮಾಡಿದ್ದಾರೆ. ಇತ್ತ ಪತ್ನಿ ನಟಿ ರಾಧಿಕಾ ಪಂಡಿತ್ ಅವರು ತಮ್ಮ ಇಬ್ಬರು ಮಕ್ಕಳ ಪೋಷಣೆಯಲ್ಲಿ ತೊಡಗಿದ್ದಾರೆ. ಕೆಜಿಎಫ್ ಚಾಪ್ಟರ್ 2.ಸಿನಿಮಾ ಈಗಾಗಲೇ ವರ್ಲ್ಡ್ ವೈಡ್ ಭರ್ಜರಿ ಪ್ರದರ್ಶನ ಕಾಣುತ್ತಿದೆ. ಯಶ್ ಮತ್ತು ರಾಧಿಕಾ ಪಂಡಿತ್ ಅವರು ತಮ್ಮ ಸಿನಿ ವೃತ್ತಿಯ ಬಗ್ಗೆ ಎಷ್ಟು ಪ್ರಾಮುಖ್ಯತೆ ನೀಡುತ್ತಾರೆ ಅಷ್ಟೇ ತಮ್ಮ ವೈಯಕ್ತಿಕ ಜೀವನದ ಬಗ್ಗೆಯೂ ಕೂಡ ಅಪಾರ ಕಾಳಜಿ ವಹಿಸುತ್ತಾರೆ. ಅದಕ್ಕೆ ಸಾಕ್ಷಿ ಎಂಬಂತೆ ತಮ್ಮ ಮುದ್ದಾದ ಮಕ್ಕಳೊಂದಿಗೆ ಯಶ್ ಮತ್ತು ರಾಧಿಕಾ ಇಬ್ಬರೂ ಕೂಡ ಉತ್ತಮವಾದ ಸಮಯ ಕಳೆಯುತ್ತಿದ್ದಾರೆ.

ಸದ್ಯಕ್ಕೆ ಯಶ್ ಅವರ ತಂದೆ ತಾಯಿ ತಮ್ಮ ತೋಟದಲ್ಲಿ ಕಾಲ ಕಳೆಯುತ್ತಿದ್ದಾರೆ. ಆಗಾಗ ಬಿಡುವಿನ ವೇಳೆಯಲ್ಲಿ ತಮ್ಮ ಮಗ ಮತ್ತು ಸೊಸೆ ಮಕ್ಕಳೊಟ್ಟಿಗೆ ಕಾಲ ಕಳೆಯುತ್ತಿದ್ದಾರೆ. ಯಶ್ ಅವರ ಪೋಷಕರಾದ ತಂದೆ ಅರುಣ್ ಕುಮಾರ್ ಮತ್ತು ತಾಯಿ ಪುಷ್ಪಾ ಅವರಿಗೆ ಸೊಸೆ ರಾಧಿಕಾ ಪಂಡಿತ್ ಅವರನ್ನ ಕಂಡರೆ ಬಹಳ ಅಚ್ಚು ಮೆಚ್ಚಂತೆ. ಯಶ್ ಅವರ ತಂದೆ ಅರುಣ್ ಅವರು ತಮ್ಮ ಮಗ ಯಶ್ ಅವರನ್ನ ಬಾಲ್ಯದಿಂದಾನೂ ತುಂಬಾ ಸ್ಟ್ರಿಕ್ಟ್ ಆಗಿ ಬೆಳೆಸಿದ್ದರಂತೆ. ಇಂದಿಗೂ ಕೂಡ ಯಶ್ ಅವರಿಗೆ ತಮ್ಮ ತಂದೆಯನ್ನ ಕಂಡರೆ ಕೊಂಚ ಭಯ ಇದೆಯಂತೆ. ಅದು ಯಶ್ ಅವರು ತಮ್ಮ ತಂದೆಯ ಬಗ್ಗೆ ಇಟ್ಟಿರುವ ಭಯ ಭಕ್ತಿ ಗೌರವವನ್ನು ತೋರುತ್ತದೆ. ಇನ್ನು ಯಶ್ ಅವರ ತಾಯಿ ಪುಷ್ಪಾ ಅವರಿಗೆ ತಮ್ಮ ಮಗಳು ನಂದಿನಿ ಅವರಿಗಿಂತ ಹೆಚ್ಚಾಗಿ ಸೊಸೆ ರಾಧಿಕಾ ಪಂಡಿತ್ ಅವರನ್ನ ಕಂಡರೆ ತುಂಬಾ ಇಷ್ಟ ಅಂತೆ.

ಅದರಂತೆ ರಾಧಿಕಾ ಅವರಿಗೆ ಕೂಡ ತಮ್ಮ ಅತ್ತೆ ಮಾವ ಅವರನ್ನ ಕಂಡರೆ ತುಂಬಾ ಪ್ರೀತಿ ಅಂತೆ. ತಮ್ಮ ಕುಟುಂಬದಲ್ಲಿ ಪರಸ್ಪರ ಒಬ್ಬರಿಗೊಬ್ಬರ ಬಗ್ಗೆ ಇರುವ ಪ್ರೀತಿ ಆಪ್ತತೆಯ ಬಗ್ಗೆ ಯಶ್ ಅವರ ಪೋಷಕರು ಖಾಸಗಿ ವಾಹಿನಿಯ ಸಂದರ್ಶನವೊಂದರಲ್ಲಿ ತಮ್ಮ ಮನದಾಳದ ಮಾತುಗಳನ್ನ ಹಂಚಿಕೊಂಡಿದ್ದಾರೆ. ರಾಕಿಂಗ್ ಸ್ಟಾರ್ ಯಶ್ ಮತ್ತು ರಾಧಿಕಾ ಪಂಡಿತ್ ಅವರ ವೃತ್ತಿ ಜೀವನ ಮತ್ತು ದಾಂಪತ್ಯ ಜೀವನ ನಿಜಕ್ಕೂ ಕೂಡ ಇತರರಿಗೆ ಮಾದರಿ ಆಗಿದೆ ಎಂದರೆ ತಪ್ಪಾಗಲಾರದು. ಒಟ್ಟಾರೆಯಾಗಿ ನಟ ಯಶ್ ಅವರ ಕೆಜಿಎಫ್ 2.ಚಿತ್ರ ಇದೀಗ ಅಭೂತಪೂರ್ವ ಯಶಸ್ಸನ್ನು ಕಂಡು ವಿಶ್ವದಾದ್ಯಂತ ಅಪಾರ ಜನಪ್ರಿಯತೆ ಗಳಿಸಿದ್ದಾರೆ. ಇದರಿಂದ ಇವರ ಕುಟುಂಬ ಕೂಡ ಸಂಭ್ರಮದಲ್ಲಿದೆ.

Leave a Reply

%d bloggers like this: