ರಾಧಿಕಾ ಕುಮಾರಸ್ವಾಮಿ ಮಗಳಿಗೆ ಕನ್ನಡದ ಈ ಸ್ಟಾರ್ ನಟನ ಜೊತೆ ನಟಿಸುವ ಆಸೆಯಂತೆ! ಯಾರು ಗೊತ್ತಾ ಆ ನಟ? ನೋಡಿ ಒಮ್ಮೆ

20 ರ ದಶಕದಲ್ಲಿ ಕನ್ನಡ ಚಿತ್ರರಂಗದಲ್ಲಿ ಬಹು ಬೇಡಿಕೆಯ ಜನಪ್ರಿಯ ನಟಿಯಾಗಿ ಮಿಂಚಿದ ನಟಿಯರ ಪೈಕಿ ನಟಿ ರಾಧಿಕಾ ಕೂಡ ಒಬ್ಬರು. ನಿನಗಾಗಿ ಚಿತ್ರದಲ್ಲಿನ ರಾಧಿಕಾ ಅವರ ಮುದ್ದಾದ ಅಭಿನಯಕ್ಕೆ ಮನಸೋಲದ ಕನ್ನಡ ಸಿನಿ ಪ್ರೇಕ್ಷಕರೇ ಇಲ್ಲ ಎಂದೇಳಬಹುದು. ಅಷ್ಟರ ಮಟ್ಟಿಗೆ ನಟಿ ರಾಧಿಕಾ ಅವರು ತಮ್ಮ ಅಭಿನಯದ ಮೂಲಕ ಕನ್ನಡ ಸಿನಿ ಪ್ರೇಕ್ಷಕರಿಗೆ ಮೋಡಿ ಮಾಡಿದರು. ಚಂದನವನದ ಇಪ್ಪತ್ತರ ದಶಕದ ಸುಪ್ರಸಿದ್ದ ನಟಿಯಾಗಿ ಮಿಂಚಿದ ರಾಧಿಕಾ ಕನ್ನಡ ಚಿತ್ರರಂಗವನ್ನು ದಶಕಗಳ ಕಾಲ ಆಳಿದ್ದಾರೆ. ಈ ಇಪ್ಪತ್ತರ ದಶಕದಲ್ಲಿ ಕನ್ನಡದ ಜನಪ್ರಿಯ ಮೂವರು ನಾಯಕಿ ನಟಿಯರು ಅಂದರೆ ಅದು ರಮ್ಯಾ, ರಕ್ಷಿತಾ, ರಾಧಿಕಾ. ಸೂಪರ್ ಸ್ಟಾರ್ ನಟರ ಜೊತೆಗೆ ನಟಿಸುವ ಮೂಲಕ ಈ ಮೂವರು ನಾಯಕಿಯರು ಅಪಾರ ಜನಪ್ರಿಯತೆ ಪಡೆದುಕೊಂಡವರು.

ಜನಪ್ರಿಯತೆಯ ಉತ್ತುಂಗದಲ್ಲಿದ್ದ ನಟಿ ರಾಧಿಕಾ ಅವರು ಯಾವ ಸ್ಟಾರ್ ನಟರಿಗೂ ಕಡಿಮೆ ಇಲ್ಲದಂತೆ ಫ್ಯಾನ್ ಫಾಲೋಯಿಂಗ್ ಹೊಂದಿದ್ದರು. ಭಾವನಾತ್ಮಕ ಪಾತ್ರಗಳಲ್ಲಿ ಅಮೋಘವಾಗಿ ಅಭಿನಯಿಸುವ ನಟಿ ರಾಧಿಕಾ ಕುಮಾರ ಸ್ವಾಮಿ ಅವರಿಗೆ ನಾಡಿನಾದ್ಯಂತ ಅಪಾರ ಮಹಿಳಾ ಅಭಿಮಾನಿಗಳು ಇದ್ದಾರೆ. ನಟಿ ರಾಧಿಕಾ ಕುಮಾರ ಸ್ವಾಮಿ ಅವರು ಭಾವನ್ಮಾತಕ ಪಾತ್ರಗಳಲ್ಲಿ ಜೀವ ತುಂಬಿ ಅದ್ಭುತವಾಗಿ ನಟಿಸುತ್ತಿದ್ದರು. ನಿನಗಾಗಿ, ತವರಿಗೆ ಬಾ ತಂಗಿ,ಪ್ರೇಮ ಖೈದಿ,ಮಣಿ,ತಾಯಿ ಇಲ್ಲದ ತಬ್ಬಲಿ,ಮನೆ ಮಗಳು,ರಿಷಿ,ಅಣ್ಣ ತಂಗಿ ಹೀಗೆ ನಟಿ ರಾಧಿಕಾ ಕುಮಾರಸ್ವಾಮಿ ಅವರು ನಟಿಸಿದಂತಹ ಬಹುತೇಕ ಸಿನಿಮಾಗಳು ಕೌಟುಂಬಿಕ ಪ್ರಧಾನ ಚಿತ್ರಗಳಾಗಿದ್ದವು.

ಇನ್ನು ನಟಿ ರಾಧಿಕಾ ಕುಮಾರ ಸ್ವಾಮಿ ಅವರು ಇಂದಿಗೂ ಅದೇ ಚಾರ್ಮ್ ಉಳಿಸಿಕೊಂಡಿದ್ದಾರೆ. ಸಿನಿಮಾಗಳಿಂದ ದೂರ ಇದ್ದರು ಕೂಡ ಸೋಶಿಯಲ್ ಮೀಡಿಯಾದಲ್ಲಿ ಸಖತ್ ಆಕ್ಟಿವ್ ಆಗಿದ್ದಾರೆ ನಟಿ ರಾಧಿಕಾ ಕುಮಾರಸ್ವಾಮಿ. ಇತ್ತೀಚೆಗಂಚೂ ಇವರ ಒಂದು ಡ್ಯಾನ್ಸ್ ವೀಡಿಯೋ ಸೋಶಿಯಲ್ ಮೀಡಿಯಾದಲ್ಲಿ ಭಾರಿ ವೈರಲ್ ಕಂಡಿತ್ತು. ಈ ಡ್ಯಾನ್ಸ್ ವೀಡಿಯೋ ನೋಡಿದ ಅವರ ಅಭಿಮಾನಿಗಳು ಮತ್ತೆ ನೀವು ಸಿನಿಮಾಗಳಲ್ಲಿ ನಟಿಸಬೇಕು. ದಯವಿಟ್ಟು ಮತ್ತಷ್ಟು ಸಿನಿಮಾಗಳಲ್ಲಿ ಉತ್ತಮ ಪಾತ್ರ ಮಾಡಿ ಎಂದು ಮೆಚ್ಚುಗೆ ವ್ಯಕ್ತಪಡಿಸಿದ್ದರು.

ರಾಧಿಕಾ ಕುಮಾರ ಸ್ವಾಮಿ ಅವರಿಗೆ ಬಾಲ್ಯದಿಂದಾನೂ ನೃತ್ಯದ ಕಡೆ ಅಪಾರ ಆಸಕ್ತಿ. ನಟ ಸೃಜನ್ ಲೋಕೇಶ್ ಅವರೊಂದಿಗೆ ನೀಲ ಮೇಘ ಶಾಮ ಎಂಬ ಚಿತ್ರದಲ್ಲಿ ನಟಿಸುವ ಮೂಲಕ ಬಣ್ಣದ ಲೋಕಕ್ಕೆ ಎಂಟ್ರಿ ಕೊಡುತ್ತಾರೆ. ಆದರೆ ಇವರಿಗೆ ಬ್ರೇಕ್ ನೀಡಿದ ಸಿನಿಮಾ ಅಂದರೆ ಎಸ್. ಮಹೇಂದರ್ ನಿರ್ದೆಶನದಲ್ಲಿ ಮೂಡಿಬಂದಂತಹ ನಿನಗಾಗಿ ಸಿನಿಮಾ. ಈ ಚಿತ್ರ ಸೂಪರ್ ಹಿಟ್ ಆಗಿ ಸ್ಯಾಂಡಲ್ ವುಡ್ ನ ಜನಪ್ರಿಯ ಬೇಡಿಕೆಯ ನಟಿಯಾಗಿ ಗುರುತಿಸಿಕೊಂಡರು ರಾಧಿಕಾ. ಅಂತೆಯೇ ಇದೀಗ ತನ್ನಂತೆ ತನ್ನ ಮಗಳು ಶಮಿಕಾ ಕೂಡ ಬಣ್ಣದ ಲೋಕದಲ್ಲಿ ಮಿಂಚಬೇಕು ಎಂಬ ಮಹದಾಸೆಯನ್ನ ಹೊಂದಿದ್ದಾರಂತೆ.

ಹಾಗಾಗಿ ಮಗಳು ಶಮಿಕಾಳಿಗೂ ಕೂಡ ಡ್ಯಾನ್ಸ್ ತರಬೇತಿ ಕೊಡಿಸುತ್ತಿದ್ದಾರಂತೆ. ಮುದ್ದಾಗಿರುವ ಶಮಿಕಾ ಕೂಡ ಚಿತ್ರರಂಗದಲ್ಲಿ ಮಿಂಚಬೇಕು ಎಂಬ ಆಸೆ ಕನಸು ಹೊಂದಿದ್ದಾರಂತೆ. ಶಮಿಕಾಳಿಗೆ ತಾನು ಚಾಲೇಂಜಿಂಗ್ ಸ್ಟಾರ್ ದರ್ಶನ್ ಅವರೊಟ್ಟಿಗೆ ನಟಿಸಬೇಕು ಎಂಬ ಬಹು ದೊಡ್ಡ ಕನಸು ಇದೆಯಂತೆ. ಈ ನಮ್ಮ ಲೇಖನ ನಿಮಗೆ ಇಷ್ಟವಾದಲ್ಲಿ ಶೇರ್ ಮಾಡಿ ಮತ್ತು ಲೈಕ್ ಮಾಡಿ. ಮತ್ತಷ್ಟು ಹೊಸ ಹೊಸ ಸುದ್ದಿಗಳಿಗಾಗಿ ನಮ್ಮ ಪೇಜ್ ನ್ನು ತಪ್ಪದೆ ಲೈಕ್ ಮಾಡಿ.

Leave a Reply

%d bloggers like this: