ರಾಧಾ ಹಿರೇಗೌಡರ್ ಕೆಲವು ವರ್ಷಗಳ ಕಾಲ ನ್ಯೂಸ್ ಮಾಧ್ಯಮದಿಂದ ಹೊರಗಿರಲು ಕಾರಣ ಮಾತ್ರ ಇವರೇ ನೋಡಿ

ದೃಶ್ಯ ಮಾಧ್ಯಮದಲ್ಲಿ ಹೊಸದೊಂದು ನಿರೂಪಣಾ ಶೈಲಿಯನ್ನು ನಾಡಿಗೆ ಪರಿಚಯ ಮಾಡಿಕೊಟ್ಟಂತಹ ಪಬ್ಲಿಕ್ ಟಿವಿ ಇಂದು ಜನಪ್ರಿಯ ಕನ್ನಡ ಸುದ್ದಿ ವಾಹಿನಿಗಳಲ್ಲಿ ಒಂದಾಗಿದೆ. ಪಬ್ಲಿಕ್ ಟಿವಿಯಲ್ಲಿ ಪ್ರತಿ ದಿನ ರಾತ್ರಿ ಬರುವ ಬಿಗ್ ಬುಲೆಟಿನ್ ನಲ್ಲಿ ಹಿರಿಯ ಪತ್ರಕರ್ತರಾದಂತಹ ಎಚ್.ಆರ್.ರಂಗನಾಥ್ ಅವರ ಸುದ್ದಿ ವಿಶ್ಲೇಷಣೆ ರಾಜ್ಯದ ಹಳ್ಳಿ ಹಳ್ಳಿಗೂ ತಲುಪಿ ಎಲ್ಲರ ಮೆಚ್ಚುಗೆ ಗಳಿಸಿದೆ.ಎಚ್.ಆರ್.ರಂಗನಾಥ್ ಅವರು ಈ ಕಾರ್ಯಕ್ರಮದ ಮೂಲಕ ಅಪಾರ ಜನಪ್ರಿಯತೆ ಪಡೆದುಕೊಂಡರು.ಇವರಷ್ಟೆ ಜನಪ್ರಿಯತೆ ಪಡೆದವರು ಸುದ್ದಿ ವಾಚಕಿಯಾದ ರಾಧಾ ಹಿರೇಗೌಡರ್.ಸದ್ಯಕ್ಕೆ ಬಿ ಟಿವಿ ಯಲ್ಲಿ ಕಾರ್ಯ ನಿರ್ವಹಿಸುತ್ತಿರುವ ರಾಧಾ ಹಿರೇಗೌಡರ್ ಪಬ್ಲಿಕ್ ಟಿವಿಯಲ್ಲಿ ಕೆಲಸ ಬಿಟ್ಟ ನಂತರ ಒಂದಷ್ಟು ವರ್ಷಗಳ ಕಾಲ ಯಾವ ಮಾಧ್ಯಮದಲ್ಲಿಯೂ ಕಾಣಿಸಿಕೊಳ್ಳಲಿಲ್ಲ.

ರಾಧಾ ಹಿರೇಗೌಡರ್ ಅವರಿಗೆ ಫೋಕಸ್ ಚಾನೆಲ್ ನಲ್ಲಿ ಕೆಲಸ ಸಿಕ್ಕರೂ ಕೂಡ ಅಲ್ಲಿ ಅವರು ಹೆಚ್ಚು ದಿನಗಳ ಕಾಲ ಉಳಿಯಲಿಲ್ಲ.ಇದಾದ ಬಳಿಕ ಯಾವ ಸುದ್ದಿ ವಾಹಿನಿಯಲ್ಲಿ ಕಾಣಿಸಿಕೊಳ್ಳದ ರಾಧಾ ಹಿರೇಗೌಡರ್ ಬಗ್ಗೆ ಸೋಶಿಯಲ್ ಮೀಡಿಯಾಗಳಲ್ಲಿ ಅಪ ಪ್ರಚಾರ ಕೂಡ ನಡೆಯಿತು.ರಾಧಾ ಹಿರೇಗೌಡರ್ ಅವರು ಆತ್ಮಹತ್ಯೆ ಮಾಡಿಕೊಂಡರು ಎಂಬ ಕೆಟ್ಟ ಸುದ್ದಿಗಳು ಭಾರಿ ವೈರಲ್ ಆಗಿದ್ದವು.ಈ ಬಗ್ಗೆ ಸ್ವತಃ ರಾಧಾ ಹಿರೇಗೌಡರ್ ಅವರೇ ಫೇಸ್ ಬುಕ್ ಲೈವ್ ಬಂದು ಸ್ಪಷ್ಟನೆ ಕೊಟ್ಟಿದ್ದರು.ಕೆಲವರು ರಾಧಾ ಹಿರೇಗೌಡರ್ ಅವರಿಗೆ ಸುದ್ದಿವಾಹಿನಿಗಳಲ್ಲಿ ಕೆಲಸ ಸಿಗದಿದ್ದಕ್ಕೆ ಎಚ್.ಆರ್.ರಂಗನಾಥ್ ಅವರೇ ಕಾರಣ ಎಂದು ಹೇಳುತ್ತಿದ್ದರು.

ಇನ್ನೊಂದಷ್ಟು ಮಂದಿ ರಾಧಾ ಹಿರೇಗೌಡರ್ ಅವರು ಖಿನ್ನತೆಗೆ ಒಳಾಗಾಗಿದ್ದರು ಹಾಗಾಗಿ ಅವರು ಎಲ್ಲೂ ಕೂಡ ಕಾಣಿಸಿಕೊಳ್ಳುತ್ತಿಲ್ಲ ಎಂಬಂತಹ ಊಹಾಪೋಹ ಸುದ್ದಿಗಳನ್ನ ಹೊರ ಹಾಕುತ್ತಿದ್ದರು.ಆದರೆ ಅಂತಿಮವಾಗಿ ಸ್ವತಃ ರಾಧಾ ಹಿರೇಗೌಡರ್ ಅವರೇ ತಮ್ಮ ಸೋಶಿಯಲ್ ಮೀಡಿಯಾ ಖಾತೆಯಲ್ಲಿ ಲೈವ್ ಬಂದು ತಮ್ಮ ಬಗ್ಗೆ ಹರಿದಾಡುತ್ತಿದ್ದ ಎಲ್ಲಾ ಅಪಪ್ರಚಾರಗಳಿಗೆ ಬ್ರೇಕ್ ಹಾಕಿದ್ದರು.ಸುವರ್ಣ ನ್ಯೂಸ್ ಸುದ್ದಿವಾಹಿನಿಯಿಂದ ಜರ್ನಲಿಸಂ ವೃತ್ತಿ ಆರಂಭಿಸಿದ ರಾಧಾ ಹಿರೇಗೌಡರ್ ಪ್ರಸ್ತುತ ಬಿ.ಟಿವಿಯಲ್ಲಿ ಹಿರಿಯ ಸಂಪಾದಕರಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ.