ರಚಿತಾರಾಮ್ ಮತ್ತು ಧನ್ವೀರ್ ಗೌಡ ಮದುವೆ! ಸ್ವತಃ ಧನ್ವೀರ್ ಗೌಡ ಹೇಳಿದ್ದೇನು ಗೊತ್ತಾ

ಸ್ಯಾಂಡಲ್ ವುಡ್ ಡಿಂಪಲ್ ಕ್ವೀನ್ ನಟಿ ರಚಿತಾ ರಾಮ್ ಕೆಲವು ತಿಂಗಳ ಹಿಂದೆ ಮಾಧ್ಯಮಗೋಷ್ಠಿಯಲ್ಲಿ ನಾವು ಗೌಡ್ರು ಆಗಿರೋದ್ರಿಂದ ಗೌಡ್ರ ಹುಡುಗನನ್ನೇ ಮದುವೆ ಆಗುತ್ತೇನೆ ಎಂದು ಹೇಳಿದ್ದರು.ಇದೀಗ ಗೌಡ್ರು ಹುಡಗನ ಕುಟುಂಬದವರ ಜೊತೆ ಸೆಲ್ಫಿ ತೆಗೆದುಕೊಂಡಿರುವ ಫೋಟೋ ಸೋಶಿಯಲ್ ಮೀಡಿಯಾದಲ್ಲಿ ಭಾರಿ ವೈರಲ್ ಆಗಿತ್ತು.ಈ ಪೋಟೋವನ್ನು ನಟ ಧನ್ವೀರ್ ತಮ್ಮ ಇನ್ಸ್ಟಾ ಖಾತೆಯಲ್ಲಿ ಹಂಚಿಕೊಂಡಿದ್ದರು. ಈ ಹಿಂದೆ ನಟಿ ರಚಿತಾ ರಾಮ್ ಈ ಹೇಳಿಕೆ ನೀಡಿದ ತಕ್ಷಣ ಮಾಜಿ ಸಿ.ಎಂ.ಕುಮಾರಸ್ವಾಮಿ ಅವರ ಪುತ್ರ ನಟ ನಿಖಿಲ್ ಕುಮಾರ್ ಅವರಿಗೂ ರಚಿತಾ ರಾಮ್ ಅವರಿಗೂ ಏನೋ ಇದೆ ಎಂಬ ಗುಸು ಗುಸು ಶುರುವಾಗಿತ್ತು.ಏಕೆಂದರೆ ಆಗತಾನೇ ನಿಖಿಲ್ ಕುಮಾರ್ ಮತ್ತು ರಚಿತಾ ರಾಮ್ ಜೋಡಿಯಾಗಿ ಸೀತಾರಾಮ ಕಲ್ಯಾಣ ಎಂಬ ಚಿತ್ರದಲ್ಲಿ ನಟಿಸಿದ್ದರು.ಚಿತ್ರದಲ್ಲಿ ಇವರಿಬ್ಬರ ಕಾಂಬಿನೇಶನ್ ಸೂಪರ್ ಹಿಟ್ ಜೋಡಿ ಆಗಿತ್ತು.ಹಾಗಾಗಿ ಇವರಿಬ್ಬರ ನಡುವೆ ಪ್ರೇಮಾಂಕುರ ಆಗಿರಬಹುದು ಎಂಬ ಸುದ್ದಿ ಹರಿದಾಡಿತ್ತು.

ಆದರೆ ನಿಖಿಲ್ ಕುಮಾರಸ್ವಾಮಿಗೆ ರೇವತಿ ಜೊತೆ ಮದುವೆ ಕೂಡ ಆಯಿತು. ಈ ಬಗ್ಗೆ ನಟಿ ರಚಿತಾ ರಾಮ್ ಅವರೇ ನನ್ನ ಮತ್ತು ನಿಖಿಲ್ ಅವರ ನಡುವೆ ಆ ರೀತಿಯಾದ ಯಾವುದೇ ರೀತಿಯ ಭಾವನೆ ಇಲ್ಲ ಎಂದು ಸ್ಪಷ್ಟನೆ ಕೊಟ್ಟು ಎಲ್ಲಾ ಊಹಾಪೋಹಗಳಿಗೆ ತೆರೆ ಎಳೆದಿದ್ದರು.ಇದೀಗ ನಟಿ ರಚಿತಾ ರಾಮ್ ಅವರ ಹೆಸರು ತಳುಕಾಕಿಕೊಂಡಿರುವುದು ಬಜಾ಼ರ್ ಚಿತ್ರದ ಮೂಲಕ ಸ್ಯಾಂಡಲ್ ವುಡ್ ಗೆ ಎಂಟ್ರಿ ಕೊಟ್ಟಿರುವ ನಟ ಧನ್ವೀರ್ ಗೌಡ ಅವರ ಜೊತೆಗೆ. ಈ ವಿಚಾರವಾಗಿ ನಟಿ ರಚಿತಾ ರಾಮ್ ಅವರು ಯಾವುದೇ ರೀತಿಯ ಪ್ರತಿಕ್ರಿಯೆ ನೀಡದೆ ಹೋದರು ನಟ ಧನ್ವೀರ್ ಅವರು ರಚಿತಾ ರಾಮ್ ಅವರು ನನಗೆ ಮೊದಲಿಂದಲೂ ಪರಿಚಯ.

ನಮ್ಮ ಮನೆಯ ಹತ್ತಿರದಲ್ಲಿ ಅವರ ಸ್ನೇಹಿತರ ಮನೆ ಇರುವುದರಿಂದ ಅಲ್ಲಿಗೆ ಬರುತ್ತಿರುವ ಬಗ್ಗೆ ನನಗೆ ತಿಳಿಸಿದ್ದರು.ಅಂದು ನಾನು ಮನೆಯಲ್ಲೇ ಇದ್ದ ಕಾರಣ ನಾನೇ ಅವರನ್ನ ಮನೆಗೆ ಆಹ್ವಾನಿಸಿದ್ದೆ.ಹಾಗಾಗಿ ನಮ್ಮಮನೆಗೆ ಬಂದು ನಮ್ಮ ತಂದೆ ತಾಯಿಗಳ ಜೊತೆಗೆ ಒಂದಷ್ಟು ಕಾಲ ಮಾತನಾಡಿಕೊಂಡು ಹೋದರು.ಈ ಸಂಧರ್ಭದಲ್ಲಿ ನಮ್ಮ ಕುಟುಂಬ ಸಮೇತ ಅವರೊಟ್ಟಿಗೆ ಫೋಟೋ ತೆಗೆಸಿಕೊಂಡೆವು಼.ಈ ಫೋಟೋಗಳನ್ನು ನಾನು ಸೋಶಿಯಲ್ ಮೀಡಿಯಾ ಖಾತೆಯಲ್ಲಿ ಹಂಚಿಕೊಂಡಿದ್ದೆ ಅಷ್ಟೇ ಎಂದು ನಟಿ ರಚಿತಾರಾಮ್ ಮತ್ತು ನನ್ನ ನಡುವೆ ಅಂತಹ ಯಾವುದೇ ರಿಲೇಶನ್ ಶಿಪ್ ಇಲ್ಲ.ನಾವಿಬ್ಬರು ಗುಡ್ ಫ್ರೆಂಡ್ಸ್ ಅಷ್ಟೇ ಎಂದು ಸ್ಪಷ್ಟನೆ ನೀಡಿದ್ದಾರೆ.

Leave a Reply

%d bloggers like this: