ರಚಿತಾ ರಾಮ್ ಹಾಗೂ ಡಾಲಿ ಧನಂಜಯ ಅವರ ಸಕ್ಕತ್ ಡ್ಯಾನ್ಸ್ ನೋಡಿ ಅಭಿಮಾನಿಗಳು ಬೋಲ್ಡ್

ಮಾನ್ಸುನ್ ರಾಗ ಸಿನಿಮಾದ ಪ್ರೋಮೋ ಸಾಂಗ್ ರಿಲೀಸ್ ಆಗಿ ಸಖತ್ ರಾಕ್ ಮಾಡ್ತಿದೆ. ಡಾಲಿ ಧನಂಜಯ್ ಮತ್ತು ಡಿಂಪಲ್ ಕ್ವೀನ್ ರಚಿತಾ ರಾಮ್ ನಟನೆಯ ಬಹು ನಿರೀಕ್ಷಿತ ಮಾನ್ಸುನ್ ರಾಗ ಸಿನಿಮಾ ಇದೇ ಸೆಪ್ಟೆಂಬರ್ ತಿಂಗಳ 16ರಂದು ರಾಜ್ಯದ್ಯಂತ ಅದ್ದೂರಿಯಾಗಿ ಬಿಡುಗಡೆ ಆಗುತ್ತಿದೆ. ಈ ಚಿತ್ರದ ಟ್ರೇಲರ್ ಅಂಡ್ ಲಿರಿಕಲ್ ವೀಡಿಯೋ ಸಾಂಗ್ ಈಗಾಗಲೇ ಸೂಪರ್ ಹಿಟ್ ಆಗಿದೆ. ಎಲ್ಲವೂ ಅಂದುಕೊಂಡಂತೆ ಆಗಿದ್ದರೆ ಮಾನ್ಸುನ್ ರಾಗ ಸಿನಿಮಾ ಇದೇ ಆಗಸ್ಟ್ 19ರಂದು ರಿಲೀಸ್ ಆಗಬೇಕಾಗಿತ್ತು. ಆದರೆ ಸಿನಿಮಾದ ಕೆಲವು ತಾಂತ್ರಿಕ ಕೆಲಸಗಳು ಬಾಕಿ ಉಳಿದಿದ್ದ ಕಾರಣ ಚಿತ್ರ ಬಿಡುಗಡೆಯ ದಿನಾಂಕವನ್ನು ಮುಂದೂಡಲಾಯಿತು. ಇದೀಗ ಸೆಪ್ಟೆಂಬರ್ 16ರಂದು ಮಾನ್ಸುನ್ ರಾಗ ಸಿನಿಮಾ ಥಿಯೇಟರ್ ಗೆ ಬರಲಿದೆ. ಹಾಗಾಗಿ ಸಿನಿಮಾದ ಪ್ರಚಾರ ಕೂಡ ಭರ್ಜರಿಯಾಗಿ ನಡೆಯುತ್ತಿದೆ. ಚಿತ್ರದ ಪ್ರಚಾರವನ್ನು ಚಿತ್ರತಂಡ ವಿಭಿನ್ನವಾಗಿ ಮಾಡುತ್ತಿದೆ. ಇತ್ತೀಚೆಗೆ ನಟ ಧನಂಜಯ್ ಅವರು ಬಾರ್ ಹೋಗಿ ಅಲ್ಲಿ ಒಂದಷ್ಟು ಬಾರ್ ಸಪ್ಲೈಯರ್ ಹುಡುಗರೊಟ್ಟಿಗೆ ಮಾತನಾಡಿ ಅವರ ಜೀವನದ ಅನುಭವವನ್ನು ತಿಳಿದುಕೊಂಡಿದ್ದರು.

ಮಾನ್ಸುನ್ ರಾಗ ಸಿನಿಮಾದಲ್ಲಿ ನಟ ಧನಂಜಯ್ ಅವರು ಬಾರ್ ನಲ್ಲಿ ಕೆಲಸ ಮಾಡುವ ಹುಡುಗನ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ ಎಂದು ಹೇಳಲಾಗುತ್ತಿದೆ. ಹಾಗಾಗಿ ಡಾಲಿ ಧನಂಜಯ್ ಅವರು ಬಾರ್ ನಲ್ಲಿಯೇ ಪ್ರಮೋಶನ್ ಮಾಡೋ ಐಡಿಯಾ ಮಾಡಿದ್ರು ಎಂದೂ ಕೂಡ ಹೇಳಲಾಗ್ತಿದೆ‌. ಈ ರೀತಿಯಾಗಿ ಮಾನ್ಸುನ್ ರಾಗ ಚಿತ್ರದ ಪೋಸ್ಟರ್, ಟೀಸರ್ ಮತ್ತು ಲಿರಿಕಲ್ ಸಾಂಗ್ ಮೂಲಕ ಸಾಕಷ್ಟು ಸುದ್ದಿಯಲ್ಲಿದೆ. ಇದೀಗ ನಿನ್ನೆ ತಾನೇ ಮಾನ್ಸುನ್ ರಾಗ ಸಿನಿಮಾದ ಪ್ರಮೋಶನ್ ಸಾಂಗ್ ವೊಂದನ್ನ ಬಿಡುಗಡೆ ಮಾಡಿದ್ದಾರೆ. ಇದರಲ್ಲಿ ಡಿಂಪಲ್ ಕ್ವೀನ್ ರಚಿತಾ ರಾಮ್ ಸೀರೆಯುಟ್ಟು ಮಸ್ತ್ ಸ್ಟೆಪ್ ಹಾಕಿದ್ರೇ, ಡಾಲಿ ಧನಂಜಯ್ ಬಿಳಿ ಪಂಚೆ ಶರ್ಟ್ ಧರಿಸಿ ರಚ್ಚು ಜೊತೆ ಹೆಜ್ಜೆ ಹಾಕಿದ್ದಾರೆ. ಸದ್ಯಕ್ಕೆ ಮಾನ್ಸುನ್ ರಾಗ ಸಿನಿಮಾ ಭಾರಿ ನಿರೀಕ್ಷೆ ಹುಟ್ಟು ಹಾಕಿದ್ದು, ಚಿತ್ರ ನೋಡಲು ಸಿನಿ ಪ್ರೇಕ್ಷಕರು ಭಾರಿ ಕಾತುರದಿಂದ ಕಾಯುತ್ತಿದ್ದಾರೆ. ಇನ್ನೂ ಈ ಚಿತ್ರವನ್ನ ಹಿಂದೆ ಪುಷ್ಪಕ ವಿಮಾನ ಸಿನಿಮಾ ಮಾಡಿದ್ದ ನಿರ್ದೇಶಕ ರವೀಂದ್ರ ನಾಥ್ ನಿರ್ದೇಶನ ಮಾಡುತ್ತಿದ್ದು, ಎ.ಆರ್.ವಿಕ್ಯಾತ್ ಬಂಡವಾಳ ಹೂಡಿದ್ದಾರೆ. ಅನೂಪ್ ಸೀಳಿನ್ ಅವರ ಸಂಗೀತ ಈಗಾಗಲೇ ಪ್ರೇಕ್ಷಕರಿಗೆ ಮೋಡಿ ಮಾಡಿದೆ.

Leave a Reply

%d bloggers like this: