ರಾತ್ರಿ 12 ಘಂಟೆಗೆ ಸಾಮಾನ್ಯ ಮಹಿಳೆಯಂತೆ ಬಸ್ ಸ್ಟಾಂಡ್ ನಲ್ಲಿ ನಿಂತ DCP! ಬೈಕ್ ಮೇಲೆ ಬಂದ ಮೂವರು ಯುವಕರು ಮಾಡಿದ್ದೇನು ಗೊತ್ತಾ

ರಾತ್ರಿ 12 ಘಂಟೆಗೆ ಸಾಮಾನ್ಯ ಮಹಿಳೆಯಂತೆ ಬಸ್ ಸ್ಟಾಂಡ್ ನಲ್ಲಿ ನಿಂತ DCP! ಬೈಕ್ ಮೇಲೆ ಮೂವರು ಯುವಕರು, ಯಾವತ್ತು ನಮ್ಮ ಮಹಿಳೆಯರು ಮಧ್ಯರಾತ್ರಿ ಹನ್ನೆರಡು ಗಂಟೆಗೆ ನಿರ್ಭೀತರಾಗಿ ಧೈರ್ಯದಿಂದ ಒಬ್ಬಂಟಿಯಾಗಿ ತಿರುಗಾಡುತ್ತಾರೋ ಅಂದು ನಮ್ಮ ದೇಶಕ್ಕೆ ನಿಜವಾದ ಸ್ವಾತಂತ್ರ್ಯ ದೊರೆತಂತೆ ಎಂದು ಮಹಾತ್ಮ ಗಾಂಧೀಜಿ ಹೇಳಿದ್ದಾರೆ.ನಮಗೆ ಇಂದು ಬ್ರಿಟೀಷರಿಂದ ಸ್ವಾತಂತ್ರ್ಯ ಸಿಕ್ಕಿದೆ.ಆದರೆ ಗಾಂಧಿ ಹೇಳಿದಂತಹ ಸ್ವಾತಂತ್ರ್ಯ ಸಿಕ್ಕಿದ್ಯ ಎಂದು ಕೇಳಿದರೆ ಹೌದು ಎನ್ನುವುದಕ್ಕೆ ನಮಗೆ ಸಾವಿರ ಅಲ್ಲ ಲಕ್ಷ ಲಕ್ಷ ಭಾರಿ ಯೋಚನೆ ಮಾಡಬೇಕಾಗುತ್ತದೆ.ಏಕೆಂದರೆ ನಮ್ಮ ದೇಶದಲ್ಲಿ ಹಗಲಿನಲ್ಲಿಯೇ ಬೇರೆ ಬೇರೆ ರೂಪದಲ್ಲಿ ಮಹಿಳೆಯರ ಶೋಷಣೆ ನಡೆಯುತ್ತಿದೆ.ಇನ್ನು ನಡು ರಾತ್ರಿಯಲ್ಲಿ ಒಬ್ಬಂಟಿ ಮಹಿಳೆಯು ನಿರ್ಭೀತವಾಗಿ ಓಡಾಡಬಹುದೇ.ಇದು ಸಾಧ್ಯವೇ. ಇತ್ತೀಚೆಗಂತೂ ದಿನ ನಿತ್ಯ ಮಾಧ್ಯಮಗಳಲ್ಲಿ ಅನೇಕ ಅತ್ಯಾಚಾರ ಪ್ರಕರಣಗಳ ಸುದ್ದಿಯನ್ನ ಗಮನಿಸುತ್ತಲೇ ಇರುತ್ತೇವೆ.ಹೀಗೆ ತನ್ನ ಮಿತಿಗೆ ಬರುವ ಪ್ರದೇಶದ ಒಳಗೆ ಮಹಿಳೆಯರ ಸುರಕ್ಷತೆ ಎಷ್ಟರ ಮಟ್ಟಿಗೆ ಇದೆ ಎಂಬುದನ್ನ ತಿಳಿಯಲು ಮಹಿಳಾ ಡಿಸಿಪಿ ಅವರೇ ಸ್ವತಃ ರಾತ್ರಿಯ ಸಮಯದಲ್ಲಿ ಬಸ್ ನಿಲ್ದಾಣದಲ್ಲಿ ಒಬ್ಬರೇ ನಿಂತುಕೊಳ್ಳುತ್ತಾರೆ.

ಇನ್ನೊಂದಷ್ಟು ತನ್ನ ಮಹಿಳಾ ಪೊಲೀಸ್ ಸಹೋದ್ಯೋಗಿಯರಾದ ಸೌಮ್ಯ ಮತ್ತು ಸವಿತಾ ಎಂಬುವರನ್ನ ಕ್ಯಾಲಿಕಟ್ ನಗರದ ಮೆಮೋರಿಯಲ್ ಆಸ್ಪತ್ರೆಯ ರಸ್ತೆಗಳಲ್ಲಿ ಓಡಾಡುವಂತೆ ಸೂಚಿಸಿರುತ್ತಾರೆ.ಕೆಲವು ಪುಂಡ ಪೋಕರಿಗಳು ಸಾಮಾನ್ಯ ಉಡುಗೆ ತೊಟ್ಟು ಮಾರು ವೇಷದಲ್ಲಿದ್ದ ಮಹಿಳಾ ಪೊಲೀಸ್ ರನ್ನು ಕೆಟ್ಟ ದೃಷ್ಟಿಯಲ್ಲಿ ಕಂಡು ನಮ್ಮ ಜೊತೆ ಬರುತ್ತೀಯಾ ಎಂದು ಈ ಇಬ್ಬರು ಮಹಿಳಾ ಪೊಲೀಸರಿಗೆ ಕರೆಯುತ್ತಾರೆ.ಕೆಟ್ಟ ಸನ್ನೆಗಳನ್ನು ಮಾಡುತ್ತಾರೆ.ಅಂತೆಯೇ ಬಸ್ ನಿಲ್ದಾಣದಲ್ಲಿ ನಿಂತಿದ್ದ ಡಿಸಿಪಿ ಮೇರಿ ಜೋಸೆಫ್ ಅವರನ್ನ ಯಾರೂ ಕೂಡ ಮಾತಾಡಿಸದೇ ಇದ್ದರು ಸಹ ಯಾರೋಬ್ಬರು ಕೂಡ ಬಂದು ಏನು ಎತ್ತ,ನಿಮ್ಮ ಸಮಸ್ಯೆ ಏನು,ನೀವ್ಯಾಕೆ ಇಷ್ಟೊತ್ತಲ್ಲಿ ಇಲ್ಲಿ ನಿಂತಿದ್ದೀರಿ ಏನಾದರು ಸಹಾಯ ಆಗಬೇಕೆ ಎಂದು ಕೇಳುವುದಿಲ್ಲ.

ಬಹಳ ಹೊತ್ತಿನ ನಂತರ ಹೈವೇ ಪೆಟ್ರೋಲ್ ಪೊಲೀಸರು ಬಂದು ಮಾರುವೇಷದಲ್ಲಿದ್ದ ಡಿಸಿಪಿ ಮೇರಿ ಜೋಸೆಫ್ ಅವರನ್ನು ವಿಚಾರಿಸಿ ಕಳುಹಿಸುತ್ತಾರೆ.ಆದರೆ ಈ ಪೊಲೀಸರಿಗೂ ಕೂಡ ಇವರು ಯಾರೆಂಬುದನ್ನ ತಿಳಿಯುವುದಿಲ್ಲ.ಇನ್ನು ರಾತ್ರಿಯ ಸಮಯದಲ್ಲಿ ಮಹಿಳೆಯರಿಗೆ ಯಾವೆಲ್ಲಾ ರೀತಿಯ ತೊಂದರೆ ಸಮಸ್ಯೆಗಳು ಎದುರಾಗುತ್ತವೆ ಎಂದು ಮನಗಂಡು ಡಿಸಿಪಿ ಮೇರಿ ಜೋಸೆಫ್ ಅವರು ರಸ್ತೆ ಬದಿಗಳಲ್ಲಿ ಸಂಪೂರ್ಣವಾಗಿ ಬೀದಿ ದೀಪಗಳನ್ನು ಹಾಕಿಸುತ್ತಾರೆ.ಜೊತೆಗೆ ರಾತ್ರಿಯ ಸಂಧರ್ಭದಲ್ಲಿ ಎಲ್ಲಾ ಬೀದಿಗಳಲ್ಲಿಯೂ ಕೂಡ ಪೊಲೀಸ್ ವಾಹನ ಗಸ್ತು ತಿರುಗುವಂತೆ ಆದೇಶ ಹೊರಡಿಸುತ್ತಾರೆ.ಒಟ್ಟಾರೆಯಾಗಿ ಕೇರಳದ ಕ್ಯಾಲಿಕಟ್ ನ ಈ ಮಹಿಳಾ ಡಿಸಿಪಿ ಮೇರಿ ಜೋಸೆಫ್ ಅವರ ಕಾರ್ಯ ನಿಜಕ್ಕೂ ಕೂಡ ಪ್ರಶಂಸನೀಯವಾದದ್ದು.

Leave a Reply

%d bloggers like this: