ರಾಷ್ಟ್ರ ಪ್ರಶಸ್ತಿ ಗೆದ್ದಿರುವ ಹೊಸ ಕನ್ನಡ ಚಿತ್ರವನ್ನು ವೀಕ್ಷಿಸಿ ಇಷ್ಟ ಪಟ್ಟ ಸಿದ್ದರಾಮಯ್ಯ ಅವರು

ನಿರ್ದೇಶಕ ಪವನ್ ಒಡೆಯರ್ ನಿರ್ಮಾಣ ಮಾಡಿರುವ ಡೊಳ್ಳು ಸಿನಿಮಾ ನೋಡಿ ಮೆಚ್ಚುಗೆ ವ್ಯಕ್ತಪಡಿಸಿದ ಮಾಜಿ. ಮುಖ್ಯಮಂತ್ರಿ ಸಿದ್ದರಾಮಯ್ಯ. ವಿರೋಧ ಪಕ್ಷದ ನಾಯಕರಾದ ಸಿದ್ದರಾಮಯ್ಯ ನವರು ಸಿನಿಮಾದ ಅನೇಕ ನಟರೊಟ್ಟಿಗೆ ಉತ್ತಮ ಸ್ನೇಹ ಸಂಬಂಧ ಹೊಂದಿದ್ದಾರೆ. ನಟರು ಪ್ರೀತಿಯಿಂದ ಸಿನಿಮಾ ನೋಡಲು ಕರೆದಾಗ ಅವರು ಅವರ ಕರೆಗೆ ಓಗೊಟ್ಟು ಸಿನಿಮಾ ನೋಡಿ ಪ್ರೋತ್ಸಾಹಿಸುತ್ತಾರೆ. ಅದರಂತೆ ಇತ್ತೀಚೆಗೆ ನಿರ್ದೇಶಕ ಪವನ್ ಒಡೆಯರ್ ಮತ್ತು ಅವರ ಪತ್ನಿ ಅಪೇಕ್ಷಾ ಪುರೋಹಿತ್ ಅವರು ತಮ್ಮ ನಿರ್ಮಾಣದ ಡೊಳ್ಳು ಸಿನಿಮಾ ನೋಡಲು ಆಹ್ವಾನ ಮಾಡಿದ್ರು. ಇವರ ಆಹ್ವಾನಕ್ಕೆ ತಕ್ಕಂತೆ ಸಿದ್ದರಾಮಯ್ಯ ನವರು ಬೆಂಗಳೂರಿನ ಓರಾಯನ್ ಮಾಲ್ ನಲ್ಲಿ ಡೊಳ್ಳು ಸಿನಿಮಾವನ್ನ ವೀಕ್ಷಣೆ ಮಾಡಿದ್ದಾರೆ. ಚಿತ್ರ ನೋಡಿದ ನಂತರ ಇಂತಹ ನಮ್ಮ ಮಣ್ಣಿನ ಜಾನಪದ ಸೊಗಡಿನ ಸಧಭಿರುಚಿ ಸಿನಿಮಾಗಳು ಮತ್ತಷ್ಟು ಬರಬೇಕು. ಗ್ರಾಮೀಣ ಭಾಗದ ಜನಪದ ಕಲೆಯನ್ನ ಉಳಿಸಿ ಬೆಳೆಸಬೇಕು.

ಕಲೆಗೆ ಯಾವುದೇ ಜಾತಿ ಧರ್ಮ ಇರುವುದಿಲ್ಲ. ನಾಡಿನ ಸಾಂಪ್ರಾದಾಯಿಕ ಡೊಳ್ಳು ಬಾರಿಸುವ ಕಲೆಯನ್ನು ಆಧಾರಿಸಿ ಸಿನಿಮಾ ಮಾಡಿದ್ದಾರೆ. ಒಂದೊಳ್ಳೆ ಸಿನಿಮಾ ನೋಡಿದ್ದೇನೆ. ಚಿತ್ರತಂಡಕ್ಕೆ ಒಳ್ಳೇದಾಗಲಿ ಎಂದು ತಿಳಿಸಿದ್ದಾರೆ. ಇನ್ನು ಪವನ್ ಒಡೆಯರ್ ಅವರಿಗೆ ಸಿನಿಮಾ ನೋಡೋವಾಗ ಸಿದ್ದರಾಮಯ್ಯ ನವರು ಕೆಲವು ದೃಶ್ಯಗಳನ್ನ ಕಂಡು ಇದನ್ನ ಯಾವ ಊರಲ್ಲಿ ಶೂಟಿಂಗ್ ಮಾಡಿದ್ದೀರಾ ಎಂದು ಕೇಳಿ ಮಾಹಿತಿ ಪಡೆಯುತ್ತಿದ್ದರಂತೆ. ಅಂದರೆ ಡೊಳ್ಳು ಸಿನಿಮಾವನ್ನು ಸಿದ್ದರಾಮಯ್ಯನವರು ಸಂಪೂರ್ಣವಾಗಿ ಒಂದೂವರೆ ಗಂಟೆಗಳ ಕಾಲ ನೋಡಿ ಮೆಚ್ಚುಗೆ ವ್ಯಕ್ತಪಡಿಸಿದ್ದಾರಂತೆ. ಇನ್ನು ಸಾಮಾನ್ಯವಾಗಿ ಸಿದ್ದರಾಮಯ್ಯನವರು ಸಿನಿಮಾಗಳನ್ನ ಸಂಪೂರ್ಣವಾಗಿ ನೊಡೋದು ತೀರಾ ಕಡಿಮೆ. ಅವರಿಗೆ ಇಷ್ಟ ಆದ್ರೇ ಮಾತ್ರ ಅವರು ಸಿನಿಮಾ ನೋಡ್ತಾರೆ. ಇಲ್ಲಾಂದ್ರೆ ಮಧ್ಯದಲ್ಲೇ ಎದ್ದು ಬರುತ್ತಾರೆ. ಇನ್ನು ಸಾಗರ್ ಪುರಾಣಿಕ್ ಅವರ ಡೊಳ್ಳು ಸಿನಿಮಾಗೆ ರಾಷ್ಟ್ರ ಪ್ರಶಸ್ತಿ ಲಭಿಸಿದ್ದು, ಇದೇ ಆಗಸ್ಟ್ 26ಕ್ಕೆ ಸಿನಿಮಾ ರಾಜ್ಯಾದ್ಯಂತ ಬಿಡುಗಡೆಯಾಗುತ್ತಿದೆ. ಈಗಾಗಲೇ ಡೊಳ್ಳು ಸಿನಿಮಾ ವಿಮರ್ಶಕರಿಂದ ಅಪಾರ ಮೆಚ್ಚುಗೆ ಪಡೆದಿದ್ದು ಪ್ರೇಕ್ಷಕರಿಂದ ಯಾವ ರೀತಿಯ ಪ್ರತಿಕ್ರಿಯೆ ಪಡೆದುಕೊಳ್ಳಲಿದೆ ಎಂದು ಕಾದು ನೋಡಬೇಕಾಗಿದೆ.

Leave a Reply

%d bloggers like this: