ರಾಣಿ ಎಲಿಜಬೆತ್ ಅವರ ಬಳಿ ದುಬಾರಿ ಕಾರುಗಳಿದ್ದರೂ ಸಹ ಈ ಕಾರು ರಾಣಿಯ ನೆಚ್ಚಿನ ಕಾರಾಗಿತ್ತು

ಬ್ರಿಟನ್ ರಾಣಿ ತೊಂಭತ್ತಾರು ವರ್ಷದ ಎರಡನೇ ಎಲಿಜಬೆತ್ ಅವರು ಇತ್ತೀಚೆಗೆ ನಿಧನರಾಗಿದ್ದಾರೆ. ಬಹಳ ದಿನಗಳಿಂದ ಅನಾರೋಗ್ಯದಿಂದಾಗಿ ಬಳಲುತ್ತಿದ್ದರು. ಹಾಗಾಗಿ ತಕ್ಷಣ ಆಸ್ಪತ್ರೆಗೆ ದಾಖಲಿಸಿಲಾಗಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೇ ಗುರುವಾರ ಅಸು ನೀಗಿದ್ದಾರೆ. ಈ ವಿಷಾದಕಾರಿ ಸಂಗತಿ ಜಗತ್ತಿನಾದ್ಯಂತ ಭಾರಿ ಸುದ್ದಿಯಾಗಿದೆ. ಎರಡನೇ ಎಲಿಜಬೆತ್ ರಾಣಿ ನಿಧನದ ನಂತರ ಶಿಷ್ಟಾಚಾರದಂತೆ ಇದೀಗ ಅವರ ಅಧಿಕಾರವನ್ನು ಅವರ ಮಗ ಪ್ರಿನ್ಸ್ ಚಾರ್ಲ್ಸ್ ಅವರು ಪಡೆದಿದ್ದಾರೆ. ಎಪ್ಪತ್ತು ವರ್ಷಗಳಿಂದ ಯಶಸ್ವಿಯಾಗಿ ಅಧಿಕಾರ ನಡೆಸಿದ ರಾಣಿ ಅಪಾರ ಆಸ್ತಿ- ಪಾಸ್ತಿಗಳನ್ನ ಹೊಂದಿದ್ದಾರೆ. ಅದರ ಜೊತೆಗೆ ಅನೇಕ ಐಷಾರಾಮಿ ಕಾರುಗಳನ್ನ ಕೂಡ ಹೊಂದಿದ್ದಾರೆ. ಸಾಮಾನ್ಯವಾಗಿ ಸಿನಿಮಾ ಸ್ಟಾರ್ಸ್, ರಾಜಕೀಯ ಗಣ್ಯರು ಇನ್ನಿತರರೇ ದುಬಾರಿ ಬೆಲೆಯ ಐಷಾರಾಮಿ ಕಾರುಗಳನ್ನ ಖರೀದಿ ಮಾಡುವುದಾದರೆ.

ಬ್ರಿಟನ್ ದೇಶದ ರಾಣಿಯಾಗಿ ಮೆರೆದಿರೋ ಈ ಎರಡನೇ ಎಲಿಜಬೆತ್ ಅವರ ಜೀವನ ಶೈಲಿ ಹೇಗಿರ್ಬೇಡ. ಇವರು ಅದ್ದೂರಿತನದ ಲೈಫ್ ಲೀಡ್ ಮಾಡಿದ್ದಾರೆ. ಅದ್ರಂತೆ ರಾಣಿ ಅವರ ಬಳಿ ಅನೇಕ ದುಬಾರಿ ಬೆಲೆಯ ಕಾರುಗಳಿದ್ದಾವೆಯಂತೆ. ಕೆಲವು ವರ್ಷಗಳ ಹಿಂದೆ ಲ್ಯಾಂಡ್ ರೋವರ್ ಎಸ್ಯೂವಿಗಳಲ್ಲಿ ಕಾಣಿಸಿಕೊಂಡಿದ್ದ ರಾಣಿ ಎಲಿಜಬೆತ್ ಅವರು ಡ್ರೈವಿಂಗ್ ಲೈಸೆನ್ಸ್ ಇಲ್ಲದೆ ಯುಕೆಯಲ್ಲಿ ಅರ್ಹತೆ ಪಡೆದುಕೊಂಡಿದ್ದ ಏಕೈಕ ರಾಣಿ ಎಂಬ ಹೆಸರಿಗೂ ಕೂಡ ಪಾತ್ರವಾಗಿದ್ದರು. ಇವರ ಬಳಿ ಇದ್ದಂತಹ ಎಲ್ಲಾ ಕಾರುಗಳು ದುಬಾರಿ ಬೆಲೆಯ ಐಷಾರಾಮಿ ಕಾರುಗಳು ಆಗಿದ್ದವು. ಅದರ ಜತೆಗೆ ಇವುಗಳಲ್ಲಿ ಅತ್ಯಂತ ಸುರಕ್ಷತೆಯ ಮತ್ತು ಭಧ್ರತೆಯ ಫೀಚರ್ಸ್ ಗಳನ್ನ ಅಳವಡಿಸಲಾಗಿತ್ತಂತೆ. ಅದರಂತೆ ಅವರ ಬಳಿ ಲ್ಯಾಂಡ್ ರೋವರ್, ರೋಲ್ಸ್ ರಾಯ್, ಜಾಗ್ವಾರ್, ಬೆಂಟ್ಲಿ ಮತ್ತು ಆಸ್ಟನ್ ಮಾರ್ಟಿನ್ ಸೇರಿದಂತೆ ಸರಿ ಸುಮಾರು ಮೂವತ್ತಕ್ಕೂ ಅಧಿಕ ಲ್ಯಾಂಡ್ ರೋವರ್ ಕಾರುಗಳು ಇದ್ದಾವೆಯಂತೆ.

ಸ್ಪೆಷಲ್ ಆಗಿ ರಾಜ ಮನೆತನದವರು ಹೊರಗಡೆ ಹೋಗೋವಾಗ ರೋಲ್ಸ್ ರಾಯ್ ಕಾರನ್ನೇ ಹೆಚ್ಚಾಗಿ ಬಳಸುತ್ತಿದ್ದರಂತೆ. ಆದರೆ ಅವುಗಳಲ್ಲಿ ರಾಣಿ ಎರಡನೇ ಎಲಿಜಬೆತ್ ಅವರಿಗೆ 2022 ಎಲ್ಆರ್ ಡಿಫೆಂಡರ್ 110 ಟಿಡಿಎಸ್ ಕಾರು ತುಂಬಾನೇ ಇಷ್ಟವಂತೆ. ಈ ಕಾರನ್ನ ಅವರು ರಾಣಿಯಾಗಿ ಅಧಿಕಾರ ವಹಿಸಿಕೊಂಡ 75ನೇ ವರ್ಷದ ಸುಸಂಧರ್ಭದಲ್ಲಿ ಬ್ರಿಟಿಷ್ ರೆಡ್ ಕ್ರಾಸ್ಗೆ ಲ್ಯಾಂಡ್ ರೋವರ್ ಸಂಸ್ಥೆಯು ರಾಣಿ ಅವರಿಗೆ ಉಡುಗೊರೆಯಾಗಿ ನೀಡಿತ್ತು. ಅದೇ ರೀತಿಯಾಗಿ ಬೆಂಟ್ರಿ ಕಾರು ಕಂಪನಿ ಕೂಡ ಎರಡನೇ ಎಲಿಜಬೆತ್ ರಾಣಿ ಅವರು ತಮ್ಮ 50ನೇ ವರ್ಷದ ಅಧಿಕಾರವದಿಯ ಸಂಭ್ರಮಾಚಾರಣೆಯ ದಿನದಂದು ಈ ಬೆಂಟ್ಲಿ ಕಾರನ್ನ ವಿಶೇಷ ಉಡುಗೊರೆಯಾಗಿ ನೀಡಿತ್ತಂತೆ. ಒಟ್ಟಾರೆಯಾಗಿ ಇದೀಗ ಬ್ರಿಟನ್ ದೇಶದ ರಾಣಿ ಎರಡನೇ ಎಲಿಜಬೆತ್ ಅವರು ತಮ್ಮ ಸಂಪೂರ್ಣ ಜೀವನವನ್ನು ಅತ್ಯಂತ ಐಷಾರಾಮಿ ಜೀವನ ನಡೆಸಿ ತುಂಬು ಜೀವನ ನಡೆಸಿ ನಿಧನರಾಗಿದ್ದಾರೆ. ಅವರ ನಿಧನಕ್ಕೆ ಜಗತ್ತಿನ ಅನೇಕ ರಾಷ್ಟ್ರಗಳಲ್ಲಿ ಮೌನಾಚರಣೆ ಮತ್ತು ತೀವ್ರ ಸಂತಾಪ ಸೂಚಿಸಲಾಗಿದೆ.

Leave a Reply

%d bloggers like this: