ರಾಣಿ ಎಲಿಜಬೆತ್ ಅಂತ್ಯಕ್ರಿಯೆಗೆ 59 ಕೋಟಿ ಖರ್ಚು, ಭಾರತದಿಂದ ಅಂತ್ಯಕ್ರಿಯೆಗೆ ಹೋದವರು ಯಾರು ಗೊತ್ತೇ

ಬ್ರಿಟನ್ ದೇಶದ ಎರಡನೇ ಎಲಿಜಬೆತ್ ರಾಣಿ ನಿಧನಕ್ಕೆ ಭಾರತವೂ ಸೇರಿದಂತೆ ಅನೇಕ ದೇಶಗಳು ಸಂತಾಪ ಸೂಚಿಸಿವೆ. ಬ್ರಿಟನ್ ದೇಶದಲ್ಲಿಯಂತೂ ಇನ್ನೂ ಕೂಡ ಶೋಕಾಚರಣೆ ನಡೆಸುತ್ತಿದೆ. ರಾಣಿ ಅವರ ಅಂತಿಮ ದರ್ಶನಕ್ಕೆ ಲಕ್ಷಾಂತರ ಮಂದಿ ಸರತಿ ಸಾಲಿನಲ್ಲಿ ನಿಂತಿದ್ದು ಇಡೀ ಜಗತ್ತಿನಾದ್ಯಂತ ಭಾರಿ ಸುದ್ದಿ ಆಗಿತ್ತು. ಯಾಕಂದ್ರೆ ಸಾಮಾನ್ಯವಾಗಿ ಜನರ ಮನದಲ್ಲಿ ಅವರು ಮಾಡಿರುವ ಕೆಲಸ ಕಾರ್ಯಗಳು, ಸಹಾಯ ಮಾಡುತ್ತಿದ್ದ ವ್ಯಕ್ತಿತ್ವ ಗುಣ ಬ್ರಿಟನ್ ದೇಶದ ಜನರ ಮನದಲ್ಲಿ ಅಚ್ಚ ಹಸಿರಾಗಿ ಉಳಿದಿರುತ್ತದೆ. ರಾಜಕಾರಣೆಗಳು ನಿಧನರಾದಾಗ ಪಕ್ಷದ ಕಾರ್ಯಕರ್ತರು, ಬೆಂಬಲಿಗರು ಒಂದಷ್ಟು ರಾಜಕೀಯ ಮುಖಂಡರು ಸೇರೋದು ಸರ್ವೇ ಸಾಮಾನ್ಯವಾಗಿರುತ್ತದೆ. ಆದರೆ ಒಂದು ಸಂಸ್ಥಾನದ ರಾಣಿ ನಿಧನರಾದಾಗ ಜನರಲ್ಲಿ ಮೂಡೋ ಭಾವನೆಯೇ ಬೇರೆಯದ್ದಾಗಿರುತ್ತದೆ.

ರಾಣಿಯನ್ನ ಹತ್ತಿರದಿಂದ ನೋಡಿರುತ್ತಾರೋ ಇಲ್ವೋ ಅದು ಬೇರೆ. ಆದರೆ ತಮ್ಮ ದೇಶದ ರಾಣಿಯವರೊಟ್ಟಿಗೆ ಮಾನಸಿಕವಾಗಿ ಒಂದೊಳ್ಳೆ ಭಾವನಾತ್ಮಕ ಸಂಬಂಧ ಹೊಂದಿರುತ್ತಾರೆ. ಅದಕ್ಕೆ ತಕ್ಕ ನಿದರ್ಶನ ಆಗಿದ್ದು ರಾಣಿ ಬ್ರಿಟನ್ ದೇಶದ ಎರಡನೇ ಎಲಿಜಬೆತ್ ಅವರ ಅಂತಿಮ ದರ್ಶನಕ್ಕೆ ಹರಿದು ಬಂದ ಲಕ್ಷಾಂತರ ಜನರು. ಇಂದು ಸೆಪ್ಟೆಂಬರ್ 19ರಂದು ರಾಣಿ ಅವರ ಅಂತ್ಯ ಕ್ರಿಯೆ ನಡೆಯಲಿದೆ. ಹಾಗಾಗಿ ಯುನೈಟೆಡ್ ಕಿಂಗ್ ಡಮ್ ಪೊಲೀಸ್ ಮುನ್ನೆಚ್ಚರಿಕಾ ಕ್ರಮ ಕೈಗೊಂಡು ಎಲ್ಲಿಯೂ ಕೂಡ ಲೋಪ ದೋಷಗಳು ಎದುರಾಗದಾಗೆ ಸೂಕ್ತ ಕಟ್ಟು ನಿಟ್ಟಿನ ಕ್ರಮಗಳನ್ನ ಕೈಗೊಂಡಿದೆ. ಮೂಲಗಳ ಪ್ರಕಾರ ಬ್ರಿಟನ್ ಸರ್ಕಾರ ಇತಿಹಾಸದಲ್ಲಿ ಎಂದೂ ಕೂಡ ಈ ರೀತಿಯ ಬಿಗಿ ಭಧ್ರತೆ ಮಾಡಿರಲಿಲ್ಲವಂತೆ.

2011 ರಲ್ಲಿ ಪ್ರಿನ್ಸ್ ವಿಲಯಂ ಮತ್ತು ಕೇಟ್ ಅವರ ಮದುವೆ ಸಂಧರ್ಭದಲ್ಲಿ 7.2 ಮಿಲಿಯನ್ ಡಾಲರ್ ವೆಚ್ಚ ಮಾಡಿ ಭಧ್ರತೆ ಮಾಡಲಾಗಿತ್ತಂತೆ. ಇದಾದ ಬಳಿಕ ಈಗ ಎರಡನೇ ಎಲಿಜಬೆತ್ ಅವರ ಅಂತ್ಯ ಕ್ರಿಯೆಗೆ ಬ್ರಿಟನ್ ಸರ್ಕಾರ ಬರೋಬ್ಬರಿ 7.5 ಮಿಲಿಯನ್ ಡಾಲರ್ ಖರ್ಚು ವೆಚ್ಚ ಮಾಡಲಾಗುತ್ತಿದೆ ಎಂದು ತಿಳಿದು ಬಂದಿದೆ. ಅಂದರೆ ಈ ಮೊತ್ತವನ್ನ ಭಾರತೀಯ ರುಪಾಯಿ ಮೌಲ್ಯಕ್ಕೆ ಪರಿವರ್ತಿಸಿದರೆ ಬರೋಬ್ಬರಿ ಅರವತ್ತು ಕೋಟಿಯಷ್ಟಾಗುತ್ತದೆ. ರಾಣಿ ಅವರ ಅಂತಿಮ ದರ್ಶನಕ್ಕೆ ಸರಿ ಸುಮಾರು ಐವತ್ತೈದರಿಂದ ಅರವತ್ತು ಲಕ್ಷ ಜನ ಸೇರುವ ಸಾಧ್ಯತೆ ಇರೋದ್ರಿಂದ ಬ್ರಿಟನ್ ಸರ್ಕಾರದ ಪೊಲೀಸ್ ಇಲಾಖೆ ಭಾರಿ ಬಿಗಿ ಭಧ್ರತೆಯನ್ನ ಅಳವಡಿಸಿಕೊಂಡಿದೆ. ಒಟ್ಟಾರೆಯಾಗಿ ಬ್ರಿಟನ್ ರಾಣಿ ಎರಡನೇ ಎಲಿಜಬೆತ್ ಅವರ ಅಂತ್ಯಕ್ರಿಯೆಗಾಗಿ ವೆಚ್ಚ ಮಾಡುತ್ತಿರೋ 59 ಕೋಟಿ ರೂಪಾಯಿ ಇತಿಹಾಸದಲ್ಲಿ ದಾಖಲಾಗುತ್ತಿದೆ. ಈ ಅಂತ್ಯಕ್ರಿಯೆಯಲ್ಲಿ ಜಗತ್ತಿನ ದೊಡ್ಡ ವ್ಯಕ್ತಿಗಳು ಪಾಲ್ಗೊಳ್ಳಲಿದ್ದು ಭಾರತದಿಂದ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ಪಾಲ್ಗೊಳ್ಳಲಿದ್ದಾರೆ.

Leave a Reply

%d bloggers like this: