ರಾಣಿ ಡಯಾನ ಬಳಸುತ್ತಿದ್ದ 35 ವರ್ಷದ ಹಳೆಯ ಕಾರು ಹರಾಜಿನಲ್ಲಿ ದೊಡ್ಡ ಮೊತ್ತಕ್ಕೆ ಮಾರಾಟ

ಓಲ್ಡ್ ಈಸ್ ಗೋಲ್ಡ್ ಅನ್ನೋ ಹಾಗೇ ಬ್ರಿಟನ್ ರಾಜವಂಶದ ಮಾಜಿ ಸೊಸೆ ದಿವಂಗತ ರಾಣಿ ಡಯಾನಾ ಅವರು ಉಪಯೋಗಿಸುತ್ತಿದ್ದ ಕಾರು ಈಗ ಬರೋಬ್ಬರಿ ಐದಾರು ಕೋಟಿಗೆ ಮಾರಾಟವಾಗಿದೆ. ಈ ಸುದ್ದಿ ಇದೀಗ ಎಲ್ಲೆಡೆ ಭಾರಿ ವೈರಲ್ ಆಗಿದೆ. ಹೌದು ಸಿಲ್ವರ್ ಸ್ಟೋನ್ ಅನ್ನೋ ಹರಾಜು ಸಂಸ್ಥೆ ರಾಣಿ ಡಯಾನಾ ಬಳಸುತ್ತಿದ್ದ ಫೋರ್ಡ್ ಎಸ್ಕಾರ್ಟ್ ಆರ್.ಎಸ್ ಟರ್ಬೋ ಕಾರನ್ನ ಹರಾಜಿಗೆ ಇಟ್ಟಿತ್ತು. ಈ ಕಾರು ಅಂತಹ ಹೇಳಿಕೊಳ್ಳವ ಕಾರೇನಲ್ಲ. ಆದರೂ ಕೂಡ ರಾಣಿ ಡಯಾನಾ ಅವರು ಈ ಕಾರನ್ನ ಇಷ್ಟಪಟ್ಟು ಬಳಸುತ್ತಿದ್ದರು. ಈ ಕಾರನ್ನ ರಾಣಿ ಡಯಾನ ಅವರು 1985ರಿಂದ 1988ರವರೆಗೆ ಉಪಯೋಗಿಸಿದ್ದರಂತೆ. ಕೇವಲ 25,000 ಮೈಲಿಗಳು ಮಾತ್ರ ಈ ಕಾರು ರನ್ ಆಗಿದೆ. ಬ್ರಿಟಿಷ್ ರಾಜಕುಮಾರಾಗಿದ್ದ ಚಾರ್ಲ್ಸ್ ಅವರ ಮೊದಲ ಹೆಂಡತಿಯಾಗಿದ್ದ ಡಯಾನಾ ಕೆಲವು ವರ್ಷಗಳ ನಂತರ ಕಾರಣಾಂತರಗಳಿಂದ ಚಾರ್ಲ್ಸ್ ದೊರೆಗೆ ವಿಚ್ಚೇದನ ನೀಡಿದ್ರು.

ವಿಚ್ಚೇದನ ನೀಡಿ ಒಬ್ಬಂಟಿಯಾಗಿದ್ದ ಡಯಾನಾ ಒಂದು ದಿನ ಗೆಳೆಯನೊಟ್ಟಿಗೆ ಪ್ರಯಾಣ ಮಾಡುತ್ತಿರುವಾಗ ಅಪಘಾತವಾಗಿ ಮೃತರಾಗುತ್ತಾರೆ. ರಾಣಿ ಡಯಾನಾ ಮೃತರಾಗಿ ಇತ್ತೀಚೆಗೆ ಇಪ್ಪತ್ತೈದು ವರ್ಷಗಳಾಗಿವೆ. ಅದರ ಹಿನ್ನೆಲೆಯಲ್ಲಿ ಡಯಾನಾ ಅವರ ಕಾರನ್ನ ಹರಾಜಿಗೆ ಇಡಲಾಗಿದೆ. ಡಯಾನಾ ಅವರು ಬದುಕಿದ್ದಾಗ ತಮ್ಮ ಬಹುಪಾಲು ಆಸ್ತಿಯನ್ನ ಸಮಾಜ ಸೇವೆಗೆ ಮುಡಿಪಾಗಿಟ್ಟಿದ್ರು. ಅವರ ಸೌಂದರ್ಯ ಬದುಕುವ ಶೈಲಿ ಪ್ರಪಂಚದಾದ್ಯಂತ ಅಪಾರ ಜನಪ್ರಿಯತೆ ತಂದುಕೊಟ್ಟಿತ್ತು. ಅವರು ನಿಧನರಾಗಿ 25 ವರ್ಷ ತುಂಬಿದ್ದರು ಕೂಡ ಜನ ಅವರನ್ನ ಮರೆತಿಲ್ಲ. ಬಹುಶಃ ಮರೆಯಲು ಕೂಡ ಆಗೋದಿಲ್ಲ ಅನಿಸುತ್ತೆ.

ಇನ್ನು ರಾಣಿ ಡಯಾನಾ ಅವರು ಬಳಸುತ್ತಿದ್ದ ಈ ಫೋರ್ಡ್ ಎಸ್ಕಾರ್ಟ್ ಕಾರು ನೋಡಲು ತುಂಬ ಆಕರ್ಷಕ ಮತ್ತು ಶಕ್ತಿ ಶಾಲಿ ಸಾಮರ್ಥ್ಯವನ್ನ ಹೊಂದಿರೋ ಮೋಟಾರು ಒಳಗೊಂಡಿದೆ. ಇಂದಿಗೂ ಕೂಡ ಈ ಕಾರನ್ನ ಆರಾಮಾದಾಯಕವಾಗಿ ಬಳಸಬಹುದಾಗಿದೆ. ರಾಣಿ ಡಯಾನಾ ಅವರು ಈ ಕಾರಿಗೆ ವಿಶೇಷ ಆಲ್ಟ್ರೇಶನ್ ಮಾಡಿಸಿಕೊಂಡು ಸೇಫ್ಟಿ ಸಿಸ್ಟಮ್ಸ್ ಅಳವಡಿಸಿಕೊಂಡಿದ್ದರು. ಇದೀಗ ಈ ಕಾರನ್ನ ಬ್ರಿಟಿಷ್ ಉದ್ಯಮಿಯೊಬ್ಬರು ಬರೋಬ್ಬರಿ 6.50 ಲಕ್ಷ ಪೌಂಡ್ ಗಳಿಗೆ ಖರೀದಿ ಮಾಡಿದ್ದಾರೆ ಎನ್ನಲಾಗುತ್ತಿದೆ. ಇದು ಭಾರತದ ರುಪಾಯಿ ಮೌಲ್ಯಕ್ಕೆ ಪರಿವರ್ತಿಸಿದರೆ ಬರೋಬ್ಬರಿ 5.20 ಕೋಟಿಯಷ್ಟಾಗುತ್ತದೆ ಎಂದು ಅಂದಾಜಿಸಲಾಗಿದೆ. ಆದರೆ ಈ ಕಾರ್ ಖರೀದಿ ಮಾಡಿರುವ ಬ್ರಿಟಿಷ್ ಉದ್ಯಮಿ ಯಾರು ಏನು ಅವರ ವಿವರವನ್ನು ಹರಾಜು ಸಂಸ್ಥೆ ಬಹಿರಂಗ ಪಡಿಸಿಲ್ಲ.