ರಾಜಕೀಯಕ್ಕೆ ಎಂಟ್ರಿ ಕೊಡುತ್ತಿದ್ದಾರೆ ಕನ್ನಡ ನಟಿ

ಅಸೆಂಬ್ಲಿ ಎಲೆಕ್ಷನ್ ಗೆ ನಿಲ್ತಾರಂತೆ ಈ ನಟಿ. ಸಿನಿಮಾ ಮತ್ತು ರಾಜಕೀಯ ಕ್ಷೇತ್ರಕ್ಕೆ ಒಂದು ಅವಿನಾಭಾವ ಸಂಬಂಧವಿದೆ. ಸಿನಿಮಾದ ಅನೇಕ ನಟ ನಟಿಯರು ಈಗಾಗಲೇ ರಾಜಕೀಯರಂಗಕ್ಕೆ ಪ್ರವೇಶ ಪಡೆದಿದ್ದಾರೆ. ಆದರೆ ಅದರಲ್ಲಿ ಕೆಲವೇ ಕೆಲವರು ಮಾತ್ರ ಯಶಸ್ಸು ಪಡೆದರೆ, ಇನ್ನೂ ಕೆಲವರು ಯಶಸ್ಸು ದಕ್ಕದೇ ಹೋದರು ಕೂಡ ಸಿನಿಮಾ, ಧಾರಾವಾಹಿ ಜೊತೆ ಜೊತೆಗೆ ರಾಜಕೀಯ ರಂಗದಲ್ಲಿಯೂ ಕೂಡ ಸಕ್ರೀಯವಾಗಿ ತೊಡಗಿಸಿಕೊಂಡಿದ್ದಾರೆ. ಅದ್ರಂತೆ ಇದೀಗ ಕನ್ನಡ ಕಿರುತೆರೆಯ ಅನೇಕ ಧಾರಾವಾಹಿಗಳಲ್ಲಿ ಮತ್ತು ಸಿನಿಮಾಗಳಲ್ಲಿ ನಟಿಸಿದ ನಟಿ ಪೂಜಾ ರಮೇಶ್ ಅವರು ಕೂಡ ರಾಜಕೀಯಕ್ಕೆ ಎಂಟ್ರಿ ಕೊಡುತ್ತಿದ್ದಾರೆ. ಅದೂ ಕೂಡ ರಾಯಚೂರು ವಿಧಾನಸಭಾ ಕ್ಷೇತ್ರದ ಮೂಲಕವೇ ನಾನು ರಾಜಕೀಯ ರಂಗ ಪ್ರವೇಶ ಮಾಡ್ತೀನಿ ಅಂತ ಹೇಳ್ತಿದ್ದಾರೆ. ಕರಾವಳಿ ಮೂಲದವರಾಗಿರೋ ನಟಿ ಪೂಜಾ ರಮೇಶ್ ಅವರು ರಾಯಚೂರನ್ನೇ ಯಾಕೆ ಆಯ್ಕೆ ಮಾಡಿಕೊಂಡಿದ್ದಾರೆ.

ಅಂದ್ರೆ ಅವರಿಗೆ ಈ ಭಾಗದ ಜನರ ಜೊತೆ ಉತ್ತಮ ಭಾಂಧವ್ಯ ಇದೆಯಂತೆ. ಅದರ ಜೊತೆಗೆ ಅವರಿಗೆ ಅಭಿಮಾನಿಗಳು, ಮಾರ್ಗದರ್ಶಕರು, ಗುರುಗಳು ರಾಯಚೂರಿನಲ್ಲಿದ್ದಾರಂತೆ. ಅದರ ಜತೆಗೆ ರಾಯಚೂರು ಭಾಗದಲ್ಲಿ ಒಂದಷ್ಟು ಸಾಮಾಜಿಕ ಕಾರ್ಯಗಳನ್ನ ಕೂಡ ಮಾಡ್ಕೊಂಡ್ ಬಂದಿದ್ದಾರಂತೆ. ಹಾಗಾಗಿ ಮುಂದಿನ ವರ್ಷ ನಡೆಯಲಿರೋ ವಿಧಾನಸಭಾ ಚುನಾವಣೆಯಲ್ಲಿ ರಾಯಚೂರು ಕ್ಷೇತ್ರದಿಂದಾನೇ ನಿಲ್ಲಲಿದ್ದಾರಂತೆ. ಇನ್ನು ನಟಿ ಪೂಜಾ ರಮೇಶ್ ಅವರು ಕಿರುತೆರೆಯಲ್ಲಿ ಎಸ್.ಎಸ್.ಎಲ್.ಸಿ ನನ್ ಮಕ್ಳು, ಅಶ್ವಿನಿ ನಕ್ಷತ್ರ, ಕಾಮಧೇನು, ಜಾನವಿ, ಗ್ರಹಣ ಅಂತಹ ಒಂದಷ್ಟು ಧಾರಾವಾಹಿ ಜೊತೆಗೆ ಪೇಪರ್ ದೋಣಿ, ನಿರುದ್ಯೋಗಿ, ಲಹರಿ, ಮಹಾಕಾಳಿ ಎಂಬ ಸಿನಿಮಾಗಳಲ್ಲಿಯೂ ಕೂಡ ಪ್ರಮುಖ ಪಾತ್ರದಲ್ಲಿ ನಟಿಸಿದ್ದಾರೆ. ಇದೀಗ ಕಲಾ ಸೇವೆಯ ಜೊತೆಗೆ ಜನ ಸೇವೆಯನ್ನ ಕೂಡ ಮಾಡಬೇಕು ಎಂದು ನಟಿ ಪೂಜಾ ರಮೇಶ್ ಅವರು ರಾಜಕೀಯ ಕ್ಷೇತ್ರಕ್ಕೆ ಹೆಜ್ಜೆ ಇಡಲು ಸಜ್ಜಾಗುತ್ತಿದ್ದಾರಂತೆ.