ರಾಜಕೀಯದಲ್ಲಿ ನಂಗೆ ಆಸಕ್ತಿ ಇಲ್ಲ, ಸಿನಿಮಾ ಸಲುವಾಗಿ ಬಹಳ ಶ್ರಮ ಹಾಕಿದ್ದಾರೆ ಜಮೀರ್ ಖಾನ್ ಅವರ ಮಗ

ನನ್ನ ತಂದೆಗೆ ನಾನು ಸಿನಿಮಾರಂಗಕ್ಕೆ ಕಾಲಿಡೋದು ಇಷ್ಟವಿರಲಿಲ್ಲ. ನನ್ನ ತಂದೆಯ ಆಪ್ತರಿಂದ ಮನವರಿಕೆ ಮಾಡಿಸಿ ತದ ನಂತರ ಅವರ ಸಹಕಾರ ಪ್ರೋತ್ಸಾಹ ಇಲ್ಲದೆ ನಾನು ಚಂದನವನಕ್ಕೆ ಪಾದಾರ್ಪಣೆ ಮಾಡುತ್ತಿದ್ದೇನೆ ಎಂದು ಚಾಮರಾಜಪೇಟೆ ಶಾಸಕ ಜಮೀರ್ ಅಹ್ಮದ್ ಖಾನ್ ಅವರ ಪುತ್ರ ಝೈದ್ ಖಾನ್ ಮಾಧ್ಯಮಗಳೊಟ್ಟಿಗೆ ತಮ್ಮ ಮನದಾಳದ ಮಾತುಗಳನ್ನ ಹಂಚಿಕೊಂಡಿದ್ದಾರೆ. ಹೌದು ಝೈದ್ ಖಾನ್ ತಮ್ಮ ಬನಾರಸ್ ಚೊಚ್ಚಲ ಸಿನಿಮಾನೇ ಪ್ಯಾನ್ ಇಂಡಿಯಾ ಆಗಿರೋದ್ರಿಂದ ಫುಲ್ ಖುಷ್ ಆಗಿದ್ದಾರೆ. ಜಯತೀರ್ಥ ಅವರ ನಿರ್ದೇಶನದಲ್ಲಿ ಮೂಡಿ ಬಂದಿರೋ ಈ ಬನಾರಸ್ ಸಿನಿಮಾಗೆ ತಿಲಕ್ ರಾಜ್ ಬಂಡವಾಳ ಹೂಡಿಕೆ ಮಾಡಿದ್ದಾರೆ. ತಿಲಕ್ ರಾಜ್ ಅವರು ಝೈದ್ ಖಾನ್ ತಂದೆ ಶಾಸಕ ಜಮೀರ್ ಅವರಿಗೆ ಅತ್ಯಾಪ್ತರಂತೆ.

ಮೊದಲು ಝೈದ್ ಖಾನ್ ಬಣ್ಣದ ಲೋಕಕ್ಕೆ ಎಂಟ್ರಿ ಆಗ್ತಿರೋದು ಜಮೀರ್ ಅವ್ರಿಗೆ ಇಷ್ಟವಿರಲಿಲ್ಲವಂತೆ. ನೀನು ಸಿನಿಮಾ ಕ್ಷೇತ್ರಕ್ಕೆ ಹೋಗೋದಾದ್ರೆ ನಿನಗೆ ನನ್ನ ಕಡೆಯಿಂದ ಯಾವುದೇ ರೀತಿ ಹಣಕಾಸು ಮತ್ತು ನೆರವು ಸಿಗೋದಿಲ್ಲ ಎಂದು ಖಾರವಾಗಿ ಹೇಳಿದ್ರಂತೆ. ಪಿಯುಸಿ ಮುಗಿದ ನಂತರ ಝೈದ್ ಖಾನ್ ಅವರು ನಟನೆ ಕಲಿಯೋದಕ್ಕೆ ಮುಂಬೈನಲ್ಲಿರೋ ಅನುಪಮ್ ಖೇರ್ ಫಿಲ್ಮ್ ಅಕಾಡೆಮೆಯಲ್ಲಿ ನಟನಾಭ್ಯಸ ನಡೆಸಿದ ಝೈದ್ ಖಾನ್ ತದ ನಂತರ ಕನ್ನಡ ಭಾಷಾ ಸ್ಪಷ್ಟತೆಗಾಗಿ ಗೌತಿ ಭಟ್ ಎಂಬುವವರ ಶಿಕ್ಷಕಿ ಬಳಿ ಕನ್ನಡ ಭಾಷೆಯನ್ನ ಉಚ್ಚಾರಣೆಯನ್ನ ಅಧ್ಯಾಯನ ಮಾಡಿದರಂತೆ. ತಾನು ಕನ್ನಡ ಭಾಷೆಯಲ್ಲಿ ನಟಿಸುತ್ತಿರೋದು ತುಂಬಾ ಖುಷಿ ಆಗಿದೆಯಂತೆ. ಬಾಲ್ಯದಿಂದಾನೂ ಝೈದ್ ಖಾನ್ ಅವರಿಗೆ ಸಿನಿಮಾದಲ್ಲಿ ತುಂಬಾ ಆಸಕ್ತಿ ಇತ್ತಂತೆ. ಅವರಿಗೆ ರಾಜಕಾರಣ ಒಂದು ರೀತಿಯಾಗಿ ನೆಮ್ಮದಿಯಿಲ್ಲದ ಕ್ಷೇತ್ರವಂತೆ. ಹಾಗಾಗಿ ಅವರಿಗೆ ರಾಜಕೀಯದಲ್ಲಿ ಆಸಕ್ತಿ ಇಲ್ಲವಂತೆ.

ಇನ್ನು ಬನಾರಸ್ ಸಿನಿಮಾ ಇದೇ ನವೆಂಬರ್ 4ರಂದು ಅದ್ದೂರಿಯಾಗಿ ದೇಶಾದ್ಯಂತ ರಿಲೀಸ್ ಆಗಲು ತಯಾರಿ ನಡೆಸುತ್ತಿದೆ. ಒಲವೇ ಮಂದಾರ, ಟೋನಿ, ಬ್ಯೂಟಿಫುಲ್ ಮನಸುಗಳು ಅಂತಹ ವಿಭಿನ್ನ ಸೂಪರ್ ಹಿಟ್ ಸಿನಿಮಾಗಳನ್ನ ನಿರ್ದೇಶನ ಮಾಡಿರೋ ಖ್ಯಾತ ನಿರ್ದೇಶಕ ಜಯತೀರ್ಥ ಅವರು ಬನಾರಸ್ ಚಿತ್ರಕ್ಕೆ ಆಕ್ಷನ್ ಕಟ್ ಹೇಳಿದ್ದಾರೆ. ಈಗಾಗಲೇ ಬನಾರಸ್ ಸಿನಿಮಾದ ಮಾಯಗಂಗೆ ಎಂಬ ಹಾಡು ಸೂಪರ್ ಹಿಟ್ ಆಗಿದೆ. ನಿರ್ಮಾಪಕ ತಿಲಕ್ ರಾಜ್ ಬಲ್ಲಾಳ್ ಅವರು ಬನಾರಸ್ ಸಿನಿಮಾವನ್ನು ರಿಚ್ ಆಗಿ ತಯಾರು ಮಾಡಿದ್ದಾರೆ. ಬನಾರಸ್ ಚಿತ್ರದಲ್ಲಿ ಝೈದ್ ಖಾನ್ ಅವರಿಗೆ ಜೋಡಿಯಾಗಿ ಸಯೋನ್ ರೋನ್ ಅವರು ನಟಿಸಿದ್ದಾರೆ. ತಾರಾಗಣದಲ್ಲಿ ಹಿರಿಯ ನಟ ದೇವರಾಜ್, ಸುಜಯ್ ಶಾಸ್ತ್ರಿ, ಅಚ್ಯುತ್ ಕುಮಾರ್, ಸ್ವಪ್ನಾ ಸೇರಿದಂತೆ ಮುಂತಾದ ಕಲಾವಿದರು ಇದ್ದಾರೆ. ಇನ್ನು ಬನಾರಸ್ ಸಿನಿಮಾಗೆ ಅಜನೀಶ್ ಬಿ.ಲೋಕನಾಥ್ ರಾಗ ಸಂಯೋಜನೆ ಮಾಡಿದ್ದಾರೆ.