ರಾಜಾ ರಾಣಿ ಸೀಸನ್2 ರಿಯಾಲಿಟಿ ಶೋ ಗೆದ್ದ ಕಾವ್ಯ ಮಹಾದೇವ ಹಾಗೂ ಕುಮಾರ್ ಜೋಡಿ, ಸಿಕ್ಕ ಬಹುಮಾನದ ಮೊತ್ತ ಎಷ್ಟು

ಕನ್ನಡ ಕಿರುತೆರೆಯಲ್ಲಿ ಪ್ರಸಿದ್ದ ವಾಹಿನಿಗಳಲ್ಲಿ ಒಂದಾಗಿರೋ ಕಲರ್ಸ್ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿದ್ದ ಜನಪ್ರಿಯ ರಾಜಾ ರಾಣಿ ರಿಯಾಲಿಟಿ ಶೋಗೆ ತೆರೆ ಬಿದ್ದಿದೆ. ಈ ರಾಜಾ ರಾಣಿ ಶೋ ಈಗಾಗಲೇ ಮೊದಲ ಆವೃತ್ತಿಯನ್ನ ಯಶಸ್ವಿಯಾಗಿ ಪೂರೈಸಿಕೊಂಡಿತ್ತು. ಇದೀಗ ರಾಜಾ ರಾಣಿ ಸೀಸನ್2 ಕೂಡ ಅದ್ದೂರಿಯಾಗಿಯೇ ಅಂತ್ಯ ಕಂಡಿದೆ. ಅದ್ದೂರಿಯಾಗಿ ಯಾಕಪ್ಪಾ ಅಂದರೆ ಈ ರಾಜಾರಾಣಿ2 ಕಾರ್ಯಕ್ರಮಕ್ಕೆ ಈ ಬಾರಿ ವಿಶೇಷ ಅತಿಥಿಯಾಗಿ ಕನ್ನಡದ ಖ್ಯಾತ ಹಿರಿಯ ನಟ ಶ್ರೀನಾಥ್ ದಂಪತಿಗಳು ಆಗಮಿಸಿರ್ತಾರೆ. ಈ ಶೋನ ಗ್ರ್ಯಾಂಡ್ ಫಿನಾಲೆಯಲ್ಲಿ ಶ್ರೀ ನಾಥ್ ದಂಪತಿಗಳು ತಮ್ಮ ಐವತ್ತನೇ ವರ್ಷದ ವಾರ್ಷಿಕೋತ್ಸವ ಸಂಭ್ರಮಾಚರಣೆ ಮಾಡಿಕೊಂಡಿದ್ದಾರೆ. ಅದರಿಂದಾಗಿ ಈ ರಾಜಾರಾಣಿ2 ಗ್ರ್ಯಾಂಡ್ ಫಿನಾಲೆ ವಿಶೇಷವಾಗಿತ್ತು.

ಈ ಶೋ ನಾಡಿನಾದ್ಯಂತ ಅಪಾರ ಜನಪ್ರಿಯತೆ ಪಡೆದುಕೊಂಡು ಮನೆ ಮನೆಗಳಲ್ಲಿ ಅಪಾರ ಹೆಸರು ಮಾಡಿದೆ. ಈ ರಾಜಾರಾಣಿ2 ನಲ್ಲಿ ವಿಜೇತರಾಗಿರೋದು ಬೇರಾರು ಅಲ್ಲ ನಾಡಿನ ಜನರ ಮನಸ್ಸನ್ನ ಗೆದ್ದ ಕಾವ್ಯ ಮತ್ತು ಕುಮಾರ್ ಜೋಡಿ. ಈ ಜೋಡಿ ರಾಜಾ ರಾಣಿ2 ಟ್ರೋಫಿಯನ್ನ ತಮ್ಮ ಮುಡಿಗೇರಿಸಿಕೊಂಡು ಬಹುಮಾನದ ಮೊತ್ತವಾಗಿ ಐದು ಲಕ್ಷ ರೂಗಳನ್ನ ತಮ್ಮದಾಗಿಸಿಕೊಂಡಿದ್ದಾರೆ. ಅದೇ ರೀತಿಯಾಗಿ ನಂತರದ ಸ್ಥಾನ ಪಡೆದುಕೊಂಡು ಮೊದಲ ರನ್ನರ್ ಅಪ್ ಆಗಿರೋ ಜೋಡಿ ಖ್ಯಾತ ನಟ ಮತ್ತು ನಟಿ ಆದಂತಹ ವೀಣಾ ಸುಂದರ್ ದಂಪತಿಗಳು. ಇವರಿಗೂ ಕೂಡ ಎರಡು ಲಕ್ಷ ಬಹುಮಾನದ ಮೊತ್ತ ಸಿಕ್ಕಿದೆ.

ಇನ್ನು ಮೂರನೇ ಸ್ದಾನ ಪಡೆದು ಎರಡನೇ ರನ್ನರ್ ಅಪ್ ಆದ ಅಕ್ಷತ್ ಮತ್ತು ರಜತ್ ಜೋಡಗಳಿಗೆ ಸಹ ಒಂದು ಲಕ್ಷ ರೂಪಾಯಿ ಬಹುಮಾನದ ಮೊತ್ತವನ್ನ ನೀಡಲಾಗಿದೆ. ರಾಜಾ ರಾಣಿ2 ರಿಯಾಲಿಟಿ ಶೋ ನ ವಿನ್ನರ್ ಆಗಿರೋ ಕಾವ್ಯ ಮತ್ತು ಕುಮಾರ್ ಜೋಡಿ ತಮ್ಮ ಅಧ್ಬುತ ಪರ್ಫಾಮೆನ್ಸ್ ನೀಡುವ ಮೂಲಕ ಎಲ್ಲರ ಮನಗೆದ್ದಿತ್ತು. ಆರಂಭ ದಿನಗಳಿಂದಾನೂ ಕೂಡ ಈ ಜೋಡಿ ಎಲ್ಲರ ಗಮನ ಸೆಳೆಯುತ್ತಿದ್ದ ಕಾರಣ ಈ ಜೋಡಿಯೇ ಗೆಲ್ಲುತ್ತದೆ ಎಂದು ವೀಕ್ಷಕರು ಕೂಡ ನಿರೀಕ್ಷೆ ಮಾಡುತ್ತಿದ್ದರು. ಅದೇ ರೀತಿಯಾಗಿ ಆದೀಗ ಕಾವ್ಯ ಮತ್ತು ಕುಮಾರ್ ಜೋಡಿ ರಾಜಾ ರಾಣಿ2 ರಿಯಾಲಿಟಿ ಶೋ ಟ್ರೋಫಿ ಮತ್ತು ಬಹುಮಾನದ ಮೊತ್ತವನ್ನ ಪಡೆದಿದ್ದಾರೆ. ಇದು ಅವರ ಅಭಿಮಾನಿಗಳಿಗೆ ಸಖತ್ ಖುಷಿಯಾಗಿದೆ.