ಪಿವಿಆರ್ ಕಂಪನಿಯ ಇತಿಹಾಸದಲ್ಲೇ ಹೊಸ ದಾಖಲೆ ಸೃಷ್ಟಿಸಿದ ಕೆಜಿಎಫ್ ಚಾಪ್ಟರ್2 ಚಿತ್ರ

ರಾಕಿಂಗ್ ಸ್ಟಾರ್ ಯಶ್ ಅಭಿನಯದ ಕನ್ನಡದ ಪ್ಯಾನ್ ಇಂಡಿಯಾ, ಗೋಲ್ಡನ್ ಸಿನಿಮಾ ಕೆಜಿಎಫ್ ಚಿತ್ರ ಮಾಡಿದ ದಾಖಲೆ ಒಂದೆರಡಲ್ಲ. ಇದರ ನಂತರ ಮುಂದುವರಿದ ಸರಣಿ ಕೆಜಿಎಫ್2 ಸಿನಿಮಾ ಅಂತೂ ಇಡೀ ವಿಶ್ವದ ಚಿತ್ರರಂಗವೇ ಕನ್ನಡ ಚಿತ್ರರಂಗದತ್ತ ನಿಬ್ಬೆ ರಗಣ್ಣಿನಿಂದ ನೋಡುವಂತೆ ಮಾಡಿತು. ಈ ಕೆಜಿಎಫ್ ಸಿನಿಮಾ ಅನೇಕ ಕಲಾವಿದರಿಗೆ, ತಂತ್ರಜ್ಞರಿಗೆ ಅವರ ಸಿನಿ ವೃತ್ತಿ ಜೀವನದಲ್ಲಿ ಹೊಸ ದಿಕ್ಕನ್ನ ಪರಿಚಯಿಸಿತು. ಅದರಲ್ಲಿಯೂ ನಿರ್ದೇಶಕ ಪ್ರಶಾಂತ್ ನೀಲ್ ಮತ್ತು ನಟ ರಾಕಿಂಗ್ ಸ್ಟಾರ್ ಯಶ್ ಅವರು ಕರ್ನಾಟಕ, ಭಾರತ ಮಾತ್ರವಲ್ಲದೇ ಅಂತರಾಷ್ಟ್ರೀಯ ಮಟ್ಟದಲ್ಲಿ ಅಪಾರ ಜನಪ್ರಿಯತೆ ಗಳಿಸಿದ್ದಾರೆ. ಕೆಜಿಎಫ್ ಮೊದಲ ಭಾಗಕ್ಕಿಂತ ಎರಡನೇ ಭಾಗ ಮೇಕಿಂಗ್ ನಲ್ಲಿ ಅದ್ಭುತವಾಗಿ ಮೂಡಿ ಬಂದಿರುತ್ತದೆ. ಕೆಜಿಎಫ್2 ಚಿತ್ರದ ಅಭೂತಪೂರ್ವ ಯಶಸ್ಸಿಗೆ ಮುನ್ಸೂಚನೆ ಅಂತೆಯೇ ಕೆಜಿಎಫ್2 ಚಿತ್ರದ ಟೀಸರ್ ಬಿಡುಗಡೆಯಾದ ಒಂದೇ ದಿನದಲ್ಲಿ ಬರೋಬ್ಬರಿ ಕೋಟಿ ಗಟ್ಟಲೇ ವೀಕ್ಷಣೆ ಪಡೆದು ವಿಶ್ವದ ಚಿತ್ರರಂಗದಲ್ಲಿ ದಾಖಲೆ ನಿರ್ಮಾಣ ಮಾಡಿತ್ತು.

ಅದರಂತೆ ಕೆಜಿಎಫ್2 ಸಿನಿಮಾ ರಿಲೀಸ್ ಆದ ನಂತರ ಮಾಡಿದ ದಾಖಲೆ ಒಂದೆರಡಲ್ಲ. ಭಾರತೀಯ ಚಿತ್ರರಂಗದ ಬಾಕ್ಸ್ ಆಫೀಸ್ ನಲ್ಲಿ ಬರೋಬ್ಬರಿ 1300 ಕೋಟಿಗೂ ಅಧಿಕ ಕಲೆಕ್ಷನ್ ಮಾಡಿ ಕನ್ನಡ ಚಿತ್ರರಂಗದಲ್ಲಿ ಹೊಸದೊಂದು ಮೈಲಿಗಲ್ಲು ಸೃಷ್ಟಿ ಮಾಡಿತು. ಅದರಲ್ಲಿಯೂ ಮಲ್ಟಿಪ್ಲೆಕ್ಸ್ ಗಳಲ್ಲಿ ಕೆಜಿಎಫ್2 ಸಿನಿಮಾ ನಿರಂತರವಾಗಿ ತಿಂಗಳುಗಟ್ಟಲೇ ದಿನದ ಎಲ್ಲಾ ಶೋ ಗಳು ಹೌಸ್ ಫುಲ್ ಪ್ರದರ್ಶನ ಕಂಡು ಭಾರತೀಯ ಚಿತ್ರರಂಗದ ಸಿನಿ ಪ್ರೇಕ್ಷಕರ ಮನ ಗೆದ್ಧಿತ್ತು. ಅದರಂತೆ ಇದೀಗ ಮಲ್ಟಿಪ್ಲೆಕ್ಸ್ ರೆಕಾರ್ಡ್ ನಲ್ಲಿ ನಮ್ಮ ಕನ್ನಡದ ಹೆಮ್ಮೆಯ ಕೆಜಿಎಫ್2 ಸಿನಿಮಾ ಹೊಸ ದಾಖಲೆಯೊಂದನ್ನ ನಿರ್ಮಾಣ ಮಾಡಿದೆ. ಹೌದು ಕೆಜಿಎಫ್ ಚಾಪ್ಟರ್2 ಸಿನಿಮಾ ಕಲೆಕ್ಷನ್ ಕುರಿತು ಆಂಧ್ರದ ಬಾಕ್ಸ್ ಆಫೀಸ್ ಡಾಟ್. ಕಾಮ್. ಇತ್ತೀಚೆಗೆ ವರದಿಯೊಂದನ್ನ ಮಾಡಿದೆ. ಮಲ್ಟಿಪ್ಲೆಕ್ಸ್ ಪಿ.ವಿ.ಆರ್ ಸಿನಿಮಾಸ್ ನಲ್ಲಿ ಕೆಜಿಎಫ್2 ಸಿನಿಮಾ ಭಾರತೀಯ ಚಿತ್ರರಂಗದ ಯಾವ ಸಿನಿಮಾಗಳು ಕೂಡ ಮಾಡದ ದಾಖಲೆಯನ್ನ ಮಾಡಿದೆ.

ಹೌದು ವರದಿಯ ಪ್ರಕಾರ ಕೆಜಿಎಫ್2 ಸಿನಿಮಾ ಬರೀ ಮಲ್ಟಿಪ್ಲೆಕ್ಸ್ ಗಳಲ್ಲೇ ಬರೋಬ್ಬರಿ 121.4 ಕೋಟಿ ಕಲೆಕ್ಷನ್ ಮಾಡಿದೆಯಂತೆ. ಇನ್ನು ರಾಜಮೌಳಿ ಅವರ ತ್ರಿಬಲ್ ಆರ್ ಸಿನಿಮಾ 93.7 ಕೋಟಿ ಕಲೆಕ್ಷನ್ ಮಾಡಿ ನಂತರ ಸ್ಥಾನದಲ್ಲಿದೆ. 47.4 ಕೋಟಿ ಕಲೆಕ್ಷನ್ ಮಾಡಿ ಹಿಂದಿಯ ಭೂಲ್ ಭೂಲ್ಲಯಾ ಸಿನಿಮಾ ಮೂರನೇ ಸ್ಥಾನದಲ್ಲಿದೆ. ಡಾಕ್ಟರ್ ಸ್ಟ್ರೇಂಜ್ 45.8 ಕೋಟಿ ಮತ್ತು ಕಮಲ್ ಹಾಸನ್ ಅವರ ವಿಕ್ರಮ್ ಸಿನಿಮಾ 26.6 ಕೋಟಿ ಕಲೆಕ್ಷನ್ ಮಾಡಿ ಮಲ್ಟಿ ಪ್ಲೆಕ್ಸ್ ಪಿವಿಆರ್ ಗಳಲ್ಲಿ ಅತಿ ಹೆಚ್ಚು ಕಲೆಕ್ಷನ್ ಮಾಡಿದ ಟಾಪ್ ಫೈವ್ ಸಿನಿಮಾಗಳ ಪಟ್ಟಿಯಲ್ಲಿ ಸ್ಥಾನ ಪಡೆದುಕೊಂಡಿದೆ. ಒಂದು ಕಾಲದಲ್ಲಿ ಮಲ್ಟಿ ಪ್ಲೆಕ್ಸ್ ಪಿವಿಆರ್ ಗಳಲ್ಲಿ ಕನ್ನಡ ಸಿನಿಮಾಗಳನ್ನ ಪ್ರದರ್ಶನ ಮಾಡುವುದಕ್ಕೆ ಹಿಂದೇಟು ಹಾಕುತ್ತಿದ್ದವರು ಇಂದು ನಮ್ಮ ಕನ್ನಡದ ಕೆಜಿಎಫ್2 ಮಾಡಿದ ದಾಖಲೆ ಕಂಡು ಪಿವಿಆರ್ ಗಳೇ ಕನ್ನಡ ಸಿನಿಮಾಗಳನ್ನ ಮುಗಿಬಿದ್ದು ಪ್ರದರ್ಶನ ಮಾಡುತ್ತಿವೆ. ಇನ್ನು ಕೆಜಿಎಫ್2 ಸಿನಿಮಾ ಮಲ್ಟಿಪ್ಲೆಕ್ಸ್ ಪಿವಿಆರ್ ಗಳಲ್ಲಿ ಅತಿ ಹೆಚ್ಚು ಕಲೆಕ್ಷನ್ ಮಾಡಿದ ಮೊದಲ ಸಿನಿಮಾ ಎಂಬ ಹೆಗ್ಗಳಿಕೆ ಪಾತ್ರವಾಗಿದೆ.

Leave a Reply

%d bloggers like this: