ಪುಟ್ಟಕ್ಕನ ಮಕ್ಕಳು ಧಾರಾವಾಹಿಯಲ್ಲಿ ಮತ್ತೊಬ್ಬ ನಟಿಯ ಆಗಮನ

ಕನ್ನಡ ಕಿರುತೆರೆಯ ಪ್ರಸಿದ್ದ ವಾಹಿನಿಯಾದ ಜೀ಼ ಕನ್ನಡದಲ್ಲಿ ಪ್ರಸಾರವಾಗುವ ಜನಪ್ರಿಯ ಧಾರಾವಾಹಿಯಾದ ಪುಟ್ಟಕ್ಕನ ಮಕ್ಕಳು ಧಾರಾವಾಹಿಯಲ್ಲಿ ಮಹತ್ತರ ಪಾತ್ರದ ನಟಿ ಬದಲಾವಣೆ ಆಗಿದ್ದಾರೆ. ಇವರ ಜಾಗಕ್ಕೆ ಇದೀಗ ಮತ್ತೊಬ್ಬ ಖ್ಯಾತ ನಟಿ ಎಂಟ್ರಿ ಆಗುತ್ತಿದ್ದಾರೆ. ಹೌದು ಇತ್ತೀಚಿನ ಧಾರಾವಾಹಿಗಳಲ್ಲಿ ಪ್ರಮುಖ ಪಾತ್ರಧಾರಿಗಳ ನಟ ನಟಿಯರು ಬದಲಾವಣೆ ಆಗುತ್ತಿರುವುದು ಸರ್ವೇ ಸಾಮಾನ್ಯವಾಗಿ ಬಿಟ್ಟಿದೆ. ಅದರಂತೆ ಇದೀಗ ಅತ್ಯಂತ ಕಡಿಮೆ ಅವಧಿಯಲ್ಲಿ ಬಹುಬೇಗ ವೀಕ್ಷಕರ ನಾಡಿ ಮಿಡಿತ ಅರಿತು ನಾಡಿನಾದ್ಯಂತ ಜನ ಮನ ಗೆದ್ದಿರುವ ಧಾರಾವಾಹಿ ಅಂದರೆ ಅದು ಜೀ಼ ಕನ್ನಡದಲ್ಲಿ ಹಿರಿಯ ನಟಿ ಉಮಾ ಶ್ರೀ ಅವರ ಮುಖ್ಯಭೂಮಿಕೆಯಲ್ಲಿ ಪ್ರಸಾರವಾಗುತ್ತಿರುವ ಪುಟ್ಟಕ್ಕನ ಮಕ್ಕಳು ಧಾರಾವಾಹಿ.

ಈ ಧಾರಾವಾಹಿಯಲ್ಲಿ ಮಧ್ಯಮ ವರ್ಗದ ಹೆಣ್ಣು ಮಗಳು ಮೂರು ಹೆಣ್ಣು ಮಕ್ಕಳಿಗೆ ಜನ್ಮ ನೀಡಿದಳು ಎಂದು ಅಗ್ನಿಸಾಕ್ಷಿಯಾಗಿ ತಾಳಿ ಕಟ್ಟಿದ ಗಂಡ ನಡು ಬೀದಿಯಲ್ಲಿ ತನ್ನ ಹೆಂಡತಿಯನ್ನ ಬಿಟ್ಟು ಇನ್ನೊಂದು ಮದುವೆ ಆಗುತ್ತಾನೆ. ಹೆಣ್ಣು ಹೆತ್ತಳೆಂದು ಅರ್ಧದಲ್ಲೇ ಬಿಟ್ಟೋದ ಗಂಡನಿಗೆ ಸರಿಸಾಟಿಯಾಗಿ ಬದುಕಿ ತನ್ನ ಮೂವರು ಹೆಣ್ಣು ಮಕ್ಕಳನ್ನು ಸಮಾಜದಲ್ಲಿ ಆದರ್ಶವಾಗಿ ಸಾಕಿ ಬೆಳೆಸಿ ಓದಿಸಬೇಕು ಎಂದು ಹಠದಿಂದ ಬದುಕು ಸಾಗಿಸುವ ದಿಟ್ಟ ಮಹಿಳೆಯ ಕಥೆ ಈ ಪುಟ್ಟಕ್ಕನ ಮಕ್ಕಳು ಧಾರಾವಾಹಿಯ ಕಥಾ ವಸ್ತು. ಈ ಪುಟ್ಟಕ್ಕನ ಮಕ್ಕಳು ಧಾರಾವಾಹಿಯನ್ನ ಈಗಾಗಲೇ ಕರುನಾಡಿನ ವೀಕ್ಷಕರು ಮೆಚ್ಚಿ ಹೊಗಳಿದ್ದಾರೆ. ಪುಟ್ಟಕ್ಕನ ಮಕ್ಕಳು ಧಾರಾವಾಹಿ ಕನ್ನಡದಲ್ಲಿ ಈಗ ಅತೀ ಹೆಚ್ಚು ಪ್ರಸಿದ್ದತೆ ಪಡೆದುಕೊಂಡಿದೆ. ಉಮಾಶ್ರೀ ಅವರು ಮುಗ್ದೆ ಪುಟ್ಟಕ್ಕನ ಪಾತ್ರದಲ್ಲಿ ಮನೋಜ್ಞವಾಗಿ ನಟಿಸುತ್ತಿದ್ದಾರೆ.

ಅದೇ ರೀತಿಯಾಗಿ ಪುಟ್ಟಕ್ಕನ ಮಗಳು ಸ್ನೇಹ ಪಾತ್ರವನ್ನು ನಟಿ ಸಂಜನಾ ಬುರ್ಲಿ ಅವರು ನಟಿಸುತ್ತಿದ್ದಾರೆ. ಇದೀಗ ಈ ಧಾರಾವಾಹಿಯಲ್ಲಿ ಪೂರ್ವಿ ಪಾತ್ರವನ್ನು ನಿರ್ವಹಿಸುತ್ತಿದ್ದ ನಟಿ ಚಂದನಾ ಅವರು ತಮ್ಮ ವೈಯಕ್ತಿಕ ಕಾರಣಗಳಿಂದ ಹೊರ ಬರುತ್ತಿದ್ದಾರೆ. ನಟಿ ಚಂದನಾ ಅವರು ಪೂರ್ವಿ ಪಾತ್ರವನ್ನು ಮುದ್ದು ಮುದ್ಧಾಗಿ ಅಚ್ಚುಕಟ್ಟಾಗಿ ನಟಿಸಿ ಜನರ ಮನಸ್ಸನ್ನು ಗೆದ್ದಿದ್ದರು. ಇದೀಗ ಚಂದನಾ ಅವರು ನಿರ್ವಹಿಸುತ್ತಿದ್ದ ಪೂರ್ವಿ ಪಾತ್ರಕ್ಕೆ ಭವ್ಯ ಪೂಜಾರಿ ಅವರು ಎಂಟ್ರಿ ಕೊಡುತ್ತಿದ್ದಾರೆ. ನಟಿ ಭವ್ಯಾ ಪೂಜಾರಿ ಅವರು ಈಗಾಗಲೇ ಅನೇಕ ಧಾರಾವಾಹಿಗಳಲ್ಲಿ ನಟಿಸಿದ್ದಾರೆ. ಇದೀಗ ಪೂರ್ವಿ ಪಾತ್ರದಲ್ಲಿ ನಟಿ ಭವ್ಯಾ ಪೂಜಾರಿ ಅವರು ಎಷ್ಟರ ಮಟ್ಟಿಗೆ ಪುಟ್ಟಕ್ಕನ ಮಕ್ಕಳು ಧಾರಾವಾಹಿಯ ವೀಕ್ಷಕರ ಮನವನ್ನು ಗೆಲ್ಲಲಿದ್ದಾರೆ ಅನ್ನೋದನ್ನ ಮುಂದಿನ ದಿನಗಳಲ್ಲಿ ಕಾದು ನೋಡಬೇಕಾಗಿದೆ.

Leave a Reply

%d bloggers like this: