ಪುನೀತ್ ರಾಜಕುಮಾರ್ ಅವರ ವಿಷಯದಲ್ಲಿ ಮಾಡಿದ ತಪ್ಪನ್ನು ಸರಿ ಪಡಿಸಿಕೊಂಡ ಟ್ವಿಟರ್ ಕಂಪನಿ

ಟ್ವಿಟರ್ ಸಂಸ್ಥೆಯ ಈ ಒಂದು ನಡೆಗೆ ನೆಟ್ಟಿಗರಿಂದ ಅಪಾರ ಮೆಚ್ಚುಗೆ ವ್ಯಕ್ತವಾಗಿದೆ. ಹೌದು ಇತ್ತೀಚೆಗೆ ಕೆಲವು ದಿನಗಳಿಂದ ಕನ್ನಡ ಚಿತ್ರರಂಗದ ಕಣ್ಮಣಿ ಪುನೀತ್ ರಾಜ್ ಕುಮಾರ್ ಅವರ ವಿಚಾರವಾಗಿ ಒಂದಷ್ಟು ಸಿಹಿ ಕಹಿ ಸುದ್ದಿಗಳು ಸದ್ದು ಮಾಡುತ್ತಿವೆ. ಸಿಹಿ ವಿಚಾರ ಅಂದ್ರೆ ಪುನೀತ್ ರಾಜ್ ಕುಮಾರ್ ಅವರ ಕನಸಿನ ಕೂಸಾಗಿರುವ ಗಂಧದಗುಡಿ ಡಾಕ್ಯುಮೆಂಟರಿ ಸಿನಿಮಾ ಅಕ್ಟೋಬರ್ ತಿಂಗಳಿನಲ್ಲಿ ಅದ್ದೂರಿಯಾಗಿ ಬಿಡುಗಡೆಯಾಗಲಿದೆ. ಇದು ಪುನೀತ್ ರಾಜ್ ಕುಮಾರ್ ಅವರ ಅಭಿಮಾನಿಗಳಿಗೆ ತುಂಬ ಸಂತೋಷದ ವಿಚಾರವಾಗಿದೆ. ಇದು ಸಿಹಿ ಸುದ್ದಿಯಾದರೆ ಇದರ ನಡುವೆ ಮತ್ತೊಂದು ಬೇಸರದ ಸಂಗತಿವೊಂದು ನಡೆದಿತ್ತು.

ಅದೇನಪ್ಪಾ ಅಂದರೆ ಸಾಮಾಜಿಕ ಜಾಲತಾಣದ ಪ್ರಸಿದ್ದ ಸಂಸ್ಥೆಯಾಗಿರುವ ಟ್ವಿಟರ್ ಪುನೀತ್ ರಾಜ್ ಕುಮಾರ್ ಪ್ರೊಫೈಲ್ ನಿಂದ ಬ್ಲೂಟಿಕ್ ತೆಗೆಯಲ್ಪಟ್ಟಿತ್ತು. ಇದು ನಾಡಿನಾದ್ಯಂತ ಅಪ್ಪು ಅಭಿಮಾನಿಗಳಿಗೆ ಬಹಳ ಬೇಸರ ಮೂಡಿಸಿತ್ತು. ಅಷ್ಟೇ ಅ ಅಲ್ಲದೆ ಸೋಶಿಯಲ್ ಮೀಡಿಯಾದಲ್ಲಿಯೇ ಟ್ವಿಟರ್ ಸಂಸ್ಥೆ ವಿರುದ್ದ ಅಪ್ಪು ಅಭಿಮಾನಿಗಳು ಸೇರಿದಂತೆ ಎಲ್ಲಾರು ಕೂಡ ಆಕ್ರೋಶ ವ್ಯಕ್ತಪಡಿಸಿದ್ದರು. ಇದರ ಜೊತೆಗೆ ಮಿಸ್ಟರ್ ಅಂಡ್ ಮಿಸಸ್ ರಾಮಾಚಾರಿ, ರಾಜಕುಮಾರ, ಯುವರತ್ನ ಅಂತಹ ಸೂಪರ್ ಹಿಟ್ ಚಿತ್ರ ನೀಡಿರುವ ನಿರ್ದೇಶಕ ಸಂತೋಷ್ ಆನಂದ್ ರಾಮ್, ಅಪ್ಪು ಅವ್ರಿಗೆ ರಣವಿಕ್ರಮ.

ನಟ ಸಾರ್ವಭೌಮ ಚಿತ್ರ ನಿರ್ದೇಶನ ಮಾಡಿದ ಪವನ್ ಒಡೆಯರ್, ಟಗರು, ಸಲಗ ಸಿನಿಮಾಗಳ ನಿರ್ಮಾಪಕ ಕೆಪಿ ಶ್ರೀಕಾಂತ್ ಹೀಗೆ ಅನೇಕ ಸಿನಿ ಗಣ್ಯರು ಅಪ್ಪು ಅವರ ಪ್ರೊಫೈಲ್ ನಿಂದ ಬ್ಲೂಟಿಕ್ ತೆಗೆದ ಕಾರಣ ಸೋಶಿಯಲ್ ಮೀಡಿಯಾದಲ್ಲಿ ಅಭಿಯಾನ ಆರಂಭಿಸಿದ್ದರು. ಈ ಅಭಿಯಾನಕ್ಕೆ ಎಲ್ಲೆಡೆ ಭಾರಿ ಬೆಂಬಲ ವ್ಯಕ್ತವಾಯಿತು. ಈ ಮೂಲಕ ಟ್ವಿಟರ್ ಸಂಸ್ಥೆ ತನ್ನ ತಪ್ಪಿನ ಅರಿವಾಗಿ ಅಪ್ಪು ಅವರ ಪ್ರೊಫೈಲ್ ನಿಂದ ತೆಗೆದಿದ್ದ ಬ್ಲೂಟಿಕ್ ಅನ್ನ ಮತ್ತೆ ಸೇರಿಸಲಾಗಿದೆ. ಇದರಿಂದ ಈಗ ಪುನೀತ್ ರಾಜ್ ಕುಮಾರ್ ಅವರ ಅಭಿಮಾನಿಗಳಿಗೆ ಸಮಾಧಾನವಾಗಿದೆ. ಉತ್ತಮ ಸಾಮಾಜಿಕ ಸಂದೇಶವುಳ್ಳ ಸಿನಿಮಾಗಳನ್ನ ಮಾಡುವುದರ ಜೊತೆಗೆ ಯಾರಿಗೂ ಗೊತ್ತಾಗದಾಗೆ ಅನೇಕ ಸಾಮಾಜಿಕ ಸೇವೆಗಳನ್ನು ಮಾಡಿ ಅಪ್ಪು ಅವರು ಎಂದಿಗೂ ಕೂಡ ಮರೆಯಲಾಗದ ಮಾಣಿಕ್ಯರಾಗಿ ಉಳಿದುಕೊಂಡಿದ್ದಾರೆ.

Leave a Reply

%d bloggers like this: