ಪುನೀತ್ ರಾಜಕುಮಾರ್ ಅವರ ಕನಸಿನ ಚಿತ್ರ ಇದೆ ಅಕ್ಟೋಬರ್ ತಿಂಗಳಲ್ಲಿ ರಾಜ್ಯಾದ್ಯಂತ ಬಿಡುಗಡೆ

ಅಪ್ಪು ಅಗಲಿದ ದಿನದಂದೇ ಅವರ ಕನಸಿನ ಕೂಸು ಬಿಡುಗಡೆಯಾಗಲಿದೆ. ಇದು ಅವರ ಅಭಿಮಾನಿಗಳಿಗೆ ಕಹಿ ಮತ್ತು ಸಿಹಿಯ ದಿನವಾಗಲಿದೆ. ಹೌದು ಕನ್ನಡ ಚಿತ್ರರಂಗದ ಧೃವತಾರೆ ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಅವರು ನಮ್ಮನ್ನಗಲಿ ಇದೇ ಅಕ್ಟೋಬರ್ 29ಕ್ಕೆ ಒಂದು ವರ್ಷ ಆಗಲಿದೆ. ಆದರೂ ಕೂಡ ನಾಡಿನಾದ್ಯಂತ ಅವರನ್ನ ಪ್ರತಿ ನಿತ್ಯ ಎಲ್ಲಾ ಕಾರ್ಯಕ್ರಮಗಳಲ್ಲಿಯೂ ಅವರನ್ನ ಸ್ಮರಿಸುವ ಮೂಲಕವೇ ಕಾರ್ಯಕ್ರಮಕ್ಕೆ ಚಾಲನೆ ನಡೆಯುತ್ತಿದೆ. ಇನ್ನು ಪುನೀತ್ ರಾಜ್ ಕುಮಾರ್ ಅವರು ನಮ್ಮನ್ನ ಅಗಲಿ ಒಂದು ವರ್ಷವಾದರು ಕೂಡ ಅವರ ಸಿನಿಮಾ ಮತ್ತು ಸಾಮಾಜಿಕ ಸೇವೆಗಳ ಮೂಲಕ ಸೂರ್ಯಚಂದ್ರು ಇರುವವರೆಗೂ ಅವರು ಅಮರವಾಗಿರುತ್ತಾರೆ. ಇನ್ನು ಅಪ್ಪು ಅವರ ನಾಯಕ ನಟರಾಗಿ ಕೊನೆಯ ಸಿನಿಮಾ ಅಂದರೆ ಅದು ಚೇತನ್ ಕುಮಾರ್ ಅವರ ಜೇಮ್ಸ್.

ಈ ಜೇಮ್ಸ್ ಸಿನಿಮಾ ಅಪ್ಪು ಅವರ ಕೊನೆಯ ಸಿನಿಮಾವಾಗಿದ್ದರು ಕೂಡ ಅವರ ಧ್ವನಿ ಈ ಚಿತ್ರದಲ್ಲಿ ಇರಲಿಲ್ಲ. ಹೀಗಾಗಿ ಇದು ಅವರ ಅಭಿಮಾನಿಗಳಿಗೆ ಬೇಸರ ಕೂಡ ಆಗಿತ್ತು. ತದ ನಂತರ ತಂತ್ರಜ್ಞಾನ ಬಳಸಿಕೊಂಡು ಜೇಮ್ಸ್ ಸಿನಿಮಾದಲ್ಲಿ ಅಪ್ಪು ಅವರ ಧ್ವನಿ ಕೇಳುವಂತಾಯಿತು. ಇದೀಗ ಅಪ್ಪು ಅವರ ಕನಸಿನ ಕೂಸಾಗಿದ್ದ ಗಂಧದಗುಡಿ ಡಾಕ್ಯುಮೆಂಟರಿ ಸಿನಿಮಾ ಇದೇ ಅಕ್ಟೋಬರ್ 29ರಂದು ರಿಲೀಸ್ ಆಗಲಿದೆ. ಈ ಗಂಧದಗುಡಿ ಡಾಕ್ಯುಮೆಂಟರಿ ಸಿನಿಮಾ ಅಪ್ಪು ಅವರಿಗೆ ಪ್ರಕೃತಿಯ ಮೇಲೆ ಎಷ್ಟರ ಮಟ್ಟಿಗೆ ವಿಶೇಷವಾದ ಪ್ರೀತಿ ಇತ್ತು ಅನ್ನೋದನ್ನ ತಿಳಿಸುತ್ತದೆ. ಕರ್ನಾಟಕದ ಅರಣ್ಯ ನೈಸರ್ಗಿಕ ಸಂಪತ್ತು ಕುರಿತು ಡಾಕ್ಯುಮೆಂಟರಿ ಮಾಡಬೇಕು ಅನ್ನೋದು ಪುನೀತ್ ರಾಜ್ ಕುಮಾರ್ ಅವರ ಕನಸಾಗಿತ್ತು. ಹಾಗಾಗಿಯೇ ಪುನೀತ್ ರಾಜ್ ಕುಮಾರ್ ಅವರು ನಿರ್ದೇಶಕ ಅಮೋಘ ವರ್ಷ ಅವರೊಟ್ಟಿಗೆ ಮಾತನಾಡಿ ಗಂಧದಗುಡಿ ಎಂಬ ನೇಚರ್ ಡಾಕ್ಯುಮೆಂಟರಿ ಫಿಲ್ಮ್ ಮಾಡಿದ್ದಾರೆ.

ಈ ಚಿತ್ರದಲ್ಲಿ ಪುನೀತ್ ರಾಜ್ ಕುಮಾರ್ ಮೇಕಪ್ ಇಲ್ಲದೇ ಸಹಜವಾಗಿಯೇ ನಟಿಸಿದ್ದಾರೆ. ಗಂಧದ ಗುಡಿ ಈ ಡಾಕ್ಯುಮೆಂಟರಿ ಸಿನಿಮಾದಲ್ಲಿ ಅಪ್ಪು ಅವರು ಸಂಪೂರ್ಣವಾಗಿ ನಟಿಸಿದ್ದು, ತಮ್ಮ ಧ್ವನಿಯನ್ನೇ ನೀಡಿದ್ದಾರೆ. ಗಂಧದಗುಡಿ ಡಾಕ್ಯುಮೆಂಟರಿ ಸಿನಿಮಾ ಯಾವ ಫೀಚರ್ ಫಿಲ್ಮ್ ಗೂ ಕಡಿಮೆ ಇಲ್ಲದಂತೆ ನಿರ್ಮಾಣ ಮಾಡಲಾಗಿದೆ ಎಂದು ನಿರ್ದೇಶಕ ಅಮೋಘವರ್ಷ ತಿಳಿಸಿದ್ದಾರೆ. ಇನ್ನು ಈ ಗಂಧದಗುಡಿ ಚಿತ್ರ ಅಪ್ಪು ಅವರು ನಮ್ಮನ್ನಗಲಿದ ನೋವಿನ ದಿನವಾಗಿರುವ ಅಕ್ಟೋಬರ್ 29ರಂದು ರಿಲೀಸ್ ಆಗಲಿದೆ ಇದು ತಿಳಿದು ಬಂದಿದೆ. ಒಟ್ಟಾರೆಯಾಗಿ ಅಪ್ಪು ಅವರ ಅಗಲಿಕೆಯ ನಂತರ ಅವರ ಅಭಿನಯದ ಮತ್ತೊಂದು ಚಿತ್ರವನ್ನು ಕಣ್ತುಂಬಿಕೊಳ್ಳುವ ಅವಕಾಶ ಅವರ ಅಭಿಮಾನಿಗಳದ್ದು. ಅವರ ಧ್ವನಿಯನ್ನು ಕೇಳಬಹುದಾಗಿರುತ್ತದೆ. ಇದು ಅಪ್ಪು ಅಭಿಮಾನಿಗಳಿಗೆ ನಿಜಕ್ಕೂ ಕೂಡ ಸಂತಸದ ಸುದ್ದಿ ಎಂದು ಹೇಳಬಹುದು.

Leave a Reply

%d bloggers like this: