ಪುನೀತ್ ರಾಜ್‍ಕುಮಾರ್ ಅಭಿಮಾನಿಗಳ ಆಕ್ರೋಶದ‌ ನಂತರ ಕ್ಷಮೆ ಕೇಳಿದ ಚಕ್ರವರ್ತಿ ಸೂಲಿಬೆಲೆ

ಚಿಂತಕ ಎನಿಸಿಕೊಳ್ಳುವ ಚಕ್ರವರ್ತಿ ಸೂಲಿಬೆಲೆ ಅವರು ಇತ್ತೀಚೆಗೆ ಮುಖ್ಯ ಮಂತ್ರಿ ಬಸವರಾಜ್ ಬೊಮ್ಮಾಯಿ ಅವರನ್ನ ಟೀಕಿಸುವ ಭರದಲ್ಲಿ ಕರ್ನಾಟಕ ರತ್ನ ನಟ ಪುನೀತ್ ರಾಜ್ ಕುಮಾರ್ ಅವರ ಬಗ್ಗೆ ಕೇವಲವಾಗಿ ಮಾತನಾಡಿದ ಪೋಸ್ಟ್ ಕುರಿತಂತೆ ಕ್ಷಮೆ ಕೋರಿದ್ದಾರೆ. ಮಾತು ಮನೆ ಕೆಡಿಸ್ತು ತೂತು ವಲೆ ಕೆಡಿಸ್ತು ಅನ್ನುವ ಹಾಗೇ ಸಾರ್ವಜನಿಕವಾಗಿ ಗುರುತಿಸಿಕೊಂಡು ಸಮಾಜದಲ್ಲಿ ಗಣ್ಯ ವ್ಯಕ್ತಿಗಳು ಎಂಬ ಪಟ್ಟಕ್ಕೆ ತಲುಪಿದ ನಂತರ ಅವರಿಗೆ ತಮ್ಮ ನಡೆ ನುಡಿಯ ಬಗ್ಗೆ ಭಾರಿ ಜಾಗೃತಿ ಇರಬೇಕಾಗುತ್ತದೆ. ಇನ್ನಿಲ್ಲವಾದಲ್ಲಿ ಮಾತಿನ ಭರದಲ್ಲಿ ಮಾತು ಜಾರಿದರೆ ಅದರಿಂದ ಆಗುವ ಪರಿಣಾಮ ಅಂತಿಂತದ್ದಲ್ಲ. ಅದಕ್ಕೊಂದು ಉತ್ತಮ ಉದಾಹರಣೆಯಾಗಿ ಚಕ್ರವರ್ತಿ ಸೂಲಿಬೆಲೆ ಅವರ ಪೋಸ್ಟ್ ಎದುರಾಗಿದೆ‌.

ಇತ್ತೀಚೆಗೆ ಮಂಗಳೂರಿನಲ್ಲಿ ಆರ್.ಎಸ್.ಎಸ್ ಕಾರ್ಯಕರ್ತ ಪ್ರವೀಣ್ ಅವರ ಕಗ್ಗೊಲೆಯ ಹಿನ್ನೆಲೆಯಲ್ಲಿ ಸರ್ಕಾರದ ವಿರುದ್ದ ರಾಜ್ಯಾದ್ಯಂತ ಪ್ರತಿಭಟನೆ ನಡೆಯುತ್ತಿದೆ. ಅದರಂತೆ ಚಕ್ರವರ್ತಿ ಸೂಲಿಬೆಲೆ ಕೂಡ ಪ್ರವೀಣ್ ಅವರನ್ನ ಹತ್ಯೆ ಮಾಡಲಾದ ವ್ಯಕ್ತಿಗಳನ್ನ ಅರೆಸ್ಟ್ ಮಾಡಿ, ರಾಜ್ಯದಲ್ಲಿ ಇಂತಹ ಘಟನೆಗಳು ಮರುಕಳಿಸದಂತೆ ರಾಜ್ಯ ಸರ್ಕಾರ ಕಠಿಣ ಕಾನೂನು ಕ್ರಮ ಜರುಗಿಸಬೇಕು ಎಂದು ಪ್ರತಿಭಟನೆಯಲ್ಲಿ ತೊಡಗಿಕೊಳ್ಳುವುದರ ಜೊತೆಗೆ ಸಿಎಂ ಬಸವರಾಜ್ ಬೊಮ್ಮಾಯಿ ಅವರ ನಡೆಯ ವಿರುದ್ದ ಆಕ್ರೋಶ ವ್ಯಕ್ತಪಡಿಸುವ ಭರದಲ್ಲಿ ತಮ್ಮ ಸೋಶಿಯಲ್ ಮೀಡಿಯಾ ಖಾತೆಯಲ್ಲಿ ಮುಖ್ಯಮಂತ್ರಿ ಅವರಿಗೆ ದಾಖಲೆಗಳಿಗೆ ಸಹಿ ಮಾಡಲು ಸಮಯ ಸಿಗುತ್ತಿಲ್ಲ ಎಂದು ಶಾಸಕರು ದೂರು ಹೇಳುತ್ತಿದ್ದಾರೆ.

ಬಹುಶಃ ಅವರಿಗೆ ಸಮಯದ ಅಭಾವ ಇರಬಹುದ. ಆದರೆ ಪ್ರೀಮಿಯರ್ ನಲ್ಲಿ ಕೂತು ಸಿನಿಮಾ ನೋಡಿ ಕಣ್ಣೀರಾಕರು, ಸಿನಿಮಾ ಹೀರೋ ಸತ್ತಾಗ ಮೂರು ದಿನಗಳ ಕಾಲ ತಮ್ಮ ಸಮಯವನ್ನು ವಿನಿಯೋಗಿಸಿದರು. ಈ ಆಕ್ರೋಶ ಇಲ್ಲದಿದ್ದರೆ ಸಿಎಂ ಅವರು ವಿಕ್ರಾಂತ್ ರೋಣ ಸಿನಿಮಾವನ್ನು ಕೂಡ ಖಂಡಿತ ನೋಡುತ್ತಿದ್ದರು ಎಂದು ಟ್ವೀಟ್ ಮಾಡಿದ್ದರು‌. ಇದರಲ್ಲಿ ಹೀರೋ ಸತ್ತಾಗ ಮೂರು ದಿನಗಳ ಸಮಯ ನೀಡಿದರು ಅನ್ನುವ ಮಾತು ಪುನೀತ್ ಅವರನ್ನೇ ಕುರಿತು ಹೇಳಿದ್ದಾಗಿತ್ತು. ಇದರಿಂದ ಅಪ್ಪು ಅಭಿಮಾನಿಗಳ ಆಕ್ರೋಶಕ್ಕೆ ಕಾರಣವಾಗಿ, ಸೋಶಿಯಲ್ ಮೀಡಿಯಾಗಳಲ್ಲಿ ಚಕ್ರವರ್ತಿ ಸೂಲಿಬೆಲೆ ಅವರ ವಿರುದ್ದ ಭಾರಿ ಆಕ್ರೋಶ ಎದುರಾಯಿತು‌. ಇನ್ನೆನೋ ಇದು ಪರಿಸ್ಥಿಥಿ ಕೈ ಮೀರಲಿದೆ ಅನ್ನುವುದನ್ನ ಅರಿತ ಚಕ್ರವರ್ತಿ ಸೂಲಿಬೆಲೆ ತಕ್ಷಣ ನನ್ನ ಈ ಟ್ವೀಟ್ ಪುನೀತ್ ಅವರನ್ನ ಅಗೌರವಿಸಿದ್ದು ಎಂದು ಅನೇಕರು ಭಾವಿಸಿದ್ದರೆ ನಾನು ಕ್ಷಮೆಯಾಚಿಸುತ್ತೇನೆ.

ಪುನೀತ್ ಅವರ ಬಗ್ಗೆ ನನಗೆ ಅಪಾರವಾದ ಗೌರವವಿದೆ. ದಯಮಾಡಿ ನನ್ನ ಟ್ವೀಟ್ ಅನ್ನು ಅನ್ಯತಾ ಭಾವಿಸಬೇಡಿ ನಿಸ್ಸಂಶಯವಾಗಿ ನಾನು ಕ್ಷಮೆಯಾಚಿಸುತ್ತಿದ್ದೇನೆ. ಪುನೀತ್ ಅವರ ಅಭಿಮಾನಿಯಾಗಿ ಇದು ನನ್ನ ಕರ್ತವ್ಯವೂ ಹೌದು ಎಂದು ಮತ್ತೊಂದು ಟ್ವೀಟ್ ಮಾಡಿದ್ದಾರೆ. ಆದರೆ ಇವರು ಕ್ಷಮೆ ಕೇಳಿದಾಕ್ಷಣ ಅವರ ವ್ಯಕ್ತಿತ್ವ ಬದಲಾಗುವುದಿಲ್ಲ. ಅಪ್ಪು ಅವರ ಅಗಲಿಕೆ ವರ್ಷ ಅಲ್ಲ ಶತ ಮಾನಗಳು ಉರುಳಿದರು ಕೂಡ ಅವರು ಮಾಡಿದ ಸಮಾಜ ಸೇವೆ, ಅವರ ವ್ಯಕ್ತಿತ್ವ ಅವರ ಹೆಸರನ್ನು ಸೂರ್ಯ ಚಂದ್ರರು ಇರುವವರೆಗೆ ಸದಾ ಎಂದೆಂದಿಗೂ ರಾರಾಜಿಸುತ್ತದೆ ಅಪ್ಪು ಅವರ ಬಗ್ಗೆ ಮಾತನಾಡಬೇಕಾದಾಗ ತಮ್ಮ ನಾಲಿಗೆಯ ಮೇಲೆ ತಮ್ಮ ಹಿನ್ನೆಲೆಯ ಬಗ್ಗೆ ಕೊಂಚ ಅರಿವು ಇಟ್ಟುಕೊಂಡು ಮಾತನಾಡಬೇಕು ಎಂದು ಅಪ್ಪು ಅಭಿಮಾನಿಗಳು ತಿಳಿಸಿದ್ದಾರೆ.

Leave a Reply

%d bloggers like this: