ಪುನೀತ್ ರಾಜ್ ಕುಮಾರ್ ಅವರನ್ನ ದೇವರ ರೂಪದಲ್ಲಿ ಕಂಡು ಪೂಜಿಸುತ್ತಿರುವ ಸ್ಯಾಂಡಲ್ ವುಡ್ ಸ್ಟಾರ್ ನಟ..!

ಪುನೀತ್ ರಾಜ್ ಕುಮಾರ್ ಅವರನ್ನ ದೇವರ ರೂಪದಲ್ಲಿ ಕಂಡು ಪೂಜಿಸುತ್ತಿರುವ ಸ್ಯಾಂಡಲ್ ವುಡ್ ಸ್ಟಾರ್ ನಟ..!ಕನ್ನಡ ಚಿತ್ರರಂಗದ ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಅಭಿಮಾನಿಗಳ ಪ್ರೀತಿಯ ಅಪ್ಪು ಅವರು ನಮ್ಮನ್ನಗಲಿ ಮೂರು ತಿಂಗಳ ಸನಿಹವಾಗುತ್ತಿದೆ. ಇಂದಿಗೂ ಕೂಡ ಅವರನ್ನ ನೆನೆಯದ ಗಳಿಗೆಗಳಿಲ್ಲ. ಪುನೀತ್ ಅವರು ಕೇವಲ ಸಿನಿಮಾದಲ್ಲಿ ನಟಿಸಿ ತಾವಾಯಿತು ತಮ್ಮ ಕೆಲಸವಾಯಿತು ಅಂತ ಸುಮ್ಮನಿದ್ದಿದ್ದರೆ ಈ ಪರಿ ಪ್ರಮಾಣದ ಜನಸಂಖ್ಯೆ ಅವರನ್ನ ಆರಾಧಿಸುತ್ತಿತ್ತೋ ಏನೋ ಆದರೆ ಅವರು ಮೌನವಾಗಿ ಮಾಡಿದ ದಾನ ಧರ್ಮ ಸಾಮಾಜಿಕ ಮಾನವೀಯ ಕಾರ್ಯಗಳು ಜಗತ್ತಿನಾದ್ಯಂತ ಅವರನ್ನ ಸದಾ ನೆನೆಯುವಂತಾಗಿದೆ. ಕರುನಾಡಿನ ಮಗ ಅಪ್ಪು ಅವರು ನಿಧನರಾದ ಸುದ್ದಿ ತಿಳಿದ ಆದಾಗ ಯಾವ ರೀತಿಯ ಶಾಕ್ ಅಲ್ಲಿದ್ದರು ಇಂದಿಗೂ ಕೂಡ ಅಪ್ಪು ಇಲ್ಲ ಎಂಬ ಸುದ್ದಿ ಅದೇ ಶಾಕ್ ರೀತಿ ಇರುವಂತೆ ಮಾಡಿದೆ.

ಅವರ ಅಗಲಿಕೆಯ ಆಘಾತದಿಂದ ಇನ್ನೂ ಕೂಡ ನಾಡಿನ ಜನ ಹೊರ ಬಂದಿಲ್ಲ. ಅಪ್ಪು ಅವರ ಪಾರ್ಥಿವ ಶರೀರ ನೋಡಲು ರಾಜ್ಯದ ಮೂಲೆ ಮೂಲೆಗಳಿಂದ ಬರೋಬ್ಬರಿ ಇಪ್ಪತ್ತೈದು ಲಕ್ಷಕ್ಕೂ ಅಧಿಕ ಮಂದಿ ಭೇಟಿ ನೀಡಿ ಇತಿಹಾಸ ನಿರ್ಮಾಣ ಮಾಡಿದರು. ಇಂದಿಗೂ ಕೂಡ ವಾರಾಂತ್ಯದ ದಿನಗಳಲ್ಲಿ ಕುಟುಂಬ ಸಮೇತರಾಗಿ ಸಾವಿರಾರು ಮಂದಿ ಅಪ್ಪು ಪುಣ್ಯಭೂಮಿ ದರ್ಶನ ಪಡೆಯುತ್ತಾರೆ. ವಿಶೇಷ ಅಂದರೆ ವಿದೇಶಿಗಳಿಂದಾನೂ ಕೂಡ ಅಪ್ಪು ಅಭಿಮಾನಿಗಳು ಬರುತ್ತಿದ್ದಾರೆ.

ಅಪ್ಪು ಅವರನ್ನ ಪ್ರತಿಯೊಂದು ಕಾರ್ಯಕ್ರಮದಲ್ಲಿಯೂ ನೆನೆದು ಅವರ ವ್ಯಕ್ಚಿತ್ವ ನಡವಳಿಕೆ ಇಂದಿನ ಯುವ ಸಮಾಜಕ್ಕೆ ಆದರ್ಶ ಮಾದರಿಯಾಗಬೇಕು ಎಂಬುದನ್ನ ಸಾರಿ ಸಾರಿ ತಿಳಿಸಲಾಗುತ್ತದೆ. ಅಂತೆಯೇ ಕನ್ನಡ ಚಿತ್ರ ವಾಣಿಜ್ಯ ಮಂಡಳಿ ಪುನೀತ ನಮನ ಕಾರ್ಯಕ್ರಮವನ್ನ ಮಾಡಿತ್ತು. ಅಪ್ಪು ಅವರ ಸಾಧನೆ ಅವರ ಸಾಮಾಜಿಕ ಸೇವೆಯನ್ನ ಪರಿಗಣಿಸಿ ರಾಜ್ಯ ಸರ್ಕಾರ ಕರ್ನಾಟಕ ರತ್ನ ಗೌರವ ಪುರಸ್ಕಾರ ನೀಡಿದೆ. ಚಿತ್ರರಂಗಕ್ಕೆ ಬರುತ್ತಿದ್ದಂತಹ ಹೊಸ ಪ್ರತಿಭೆಗಳಿಗೆ ಸದಾ ಪ್ರೋತ್ಸಾಹ ನೀಡುತ್ತಿದ್ದ ಮತ್ತು ಅವರ ಮಾಡುವ ವಿಭಿನ್ನ ಪ್ರಯೋಗಾತ್ಮಕ ಚಿತ್ರಗಳ ಟೀಸರ್ ಲಾಂಚ್, ಟ್ರೇಲರ್ ಲಾಂಚ್, ಹಾಡು ಹಾಡುವುದು ಹೀಗೆ ಒಂದಲ್ಲ ಒಂದು ರೀತಿಯಲ್ಲಿ ಅವರಿಗೆ ಬೆನ್ನೆಲುಬಾಗಿ ನಿಲ್ಲುತ್ತಿದ್ದರು ಅಪ್ಪು.

ಅಂತೆಯೇ ಇಂದು ಕನ್ನಡ ಚಿತ್ರರಂಗದ ಸ್ಟಾರ್ ನಟರಾಗಿ ಮಿಂಚುತ್ತಿರುವ ನೀನಾಸಂ ಸತೀಶ್ ಅವರಿಗೂ ಕೂಡ ಆರಂಭದ ದಿನಗಳಲ್ಲಿ ಪ್ರೋತ್ಸಾಹ ನೀಡಿ ಬೆನ್ನು ತಟ್ಟಿದ್ದರು. ನೀನಾಸಂ ಸತೀಶ್ ಅವರು ಸ್ವತಃ ನಿರ್ಮಾಣ ಮಾಡಿದ ರಾಕೆಟ್ ಚಿತ್ರದಲ್ಲಿ ಪುನೀತ್ ರಾಜ್ ಕುಮಾರ್ ಅವರು ಹಾಡನ್ನ ಹಾಡಿ ಅವರಿಗೆ ಪ್ರೋತ್ಸಾಹ ನೀಡಿದ್ದರು. ಹಾಗಾಗಿ ನಟ ನೀನಾಸಂ ಸತೀಶ್ ಅವರು ಇಂದಿಗೂ ಕೂಡ ಅಪ್ಪು ಅವರನ್ನ ದೇವರಂತೆ ಪೂಜಿಸುತ್ತಿದ್ದಾರೆ. ಅವರ ಮನೆಯ ದೇವರ ಗುಡಿಯಲ್ಲಿ ಅಪ್ಪು ಅವರ ಫೋಟೋ ಇಟ್ಟು ಪ್ರತಿದಿನ ಅವರಿಗೆ ನಮಸ್ಕರಿಸಿ ಪೂಜೆ ಸಲ್ಲಿಸುತ್ತಿದ್ದಾರೆ.

ಇಂದು ನಾಡಿನ ಬಹುತೇಕ ದೊಡ್ಡ ಅಂಗಡಿಗಳಲ್ಲಿಂದ ಹಿಡಿದು ಸಣ್ಣ ಪುಟ್ಟ ಪುಟ್ ಪಾತ್ ಕೈಗಾಡಿಗಳಲ್ಲಿಯೂ ಕೂಡ ಅಪ್ಪು ಅವರ ಭಾವಚಿತ್ರವನ್ನು ಕಾಣಬಹುದಾಗಿರುತ್ತದೆ. ಒಟ್ಟಾರೆಯಾಗಿ ಕನ್ನಡ ಚಿತ್ರರಂಗದ ಧೃವತಾರೆ ಅಪ್ಪು ಅವರು ದೈಹಿಕವಾಗಿ ಕಣ್ಮರೆಯಾಗಿದ್ದರು ಕೂಡ ನಾಡಿನ ಜನತೆಯ ಹೃದಯದಲ್ಲಿ ಶಾಶ್ವತವಾಗಿ ಉಳಿದುಕೊಂಡಿದ್ದಾರೆ. ಈ ನಮ್ಮ ಲೇಖನ ನಿಮಗೆ ಇಷ್ಟವಾದಲ್ಲಿ ಶೇರ್ ಮಾಡಿ ಮತ್ತು ಲೈಕ್ ಮಾಡಿ. ಮತ್ತಷ್ಟು ಹೊಸ ಹೊಸ ಸುದ್ದಿಗಳಿಗಾಗಿ ನಮ್ಮ ಪೇಜ್ ನ್ನು ತಪ್ಪದೆ ಲೈಕ್ ಮಾಡಿ.

Leave a Reply

%d bloggers like this: