ಪುನರ್ಜನ್ಮ ದ ಕಥೆ ಹೇಳಿದ 8 ವರ್ಷದ ಬಾಲಕ, ತನ್ನ ಹಿಂದಿನ ಜನ್ಮದ ರಹಸ್ಯ ಬಿಚ್ಚಿಟ್ಟ ಬಾಲಕ, ಜನರೆಲ್ಲಾ ತಬ್ಬಿಬ್ಬು

5 ಜೀ ನೆಟ್ ವರ್ಕ್ ಆಧುನಿಕ ತಂತ್ರಜ್ಞಾನ ಯುಗದಲ್ಲಿ ದೇವರು,ಪೂಜೆ-ಪುನಾಸ್ಕಾರ,ಸಂಪ್ರದಾಯ-ಆಚರಣೆಗಳನ್ನೇ ಜನರು ನಂಬುವುದಿಲ್ಲ.ಅಂತಾದರಲ್ಲಿ ಇಂದಿನ ಯುವ ಪೀಳಿಗೆ ಪೂರ್ವಜನ್ಮ ಕಥೆಗಳನ್ನ ಹೇಗೆ ನಂಬುತ್ತಾರೆ ಎಂಬ ಪ್ರಶ್ನೆ ಮೂಡುತ್ತದೆ. ವಿಜ್ಞಾನ -ತಂತ್ರಜ್ಞಾನ,ವೈಜ್ಞಾನಿಕತೆ ಬೆಳೆದಿರುವಂತಹ ಈ ಸಂದರ್ಭದಲ್ಲಿ ಉತ್ತರ ಪ್ರದೇಶ ರಾಜ್ಯದ ಮೈನ್ಪುರ ಎಂಬ ಪ್ರದೇಶದಲ್ಲಿ ಬೆಳಕಿಗೆ ಬಂದಿರುವ ಪುನರ್ಜನ್ಮದ ಕಥೆಯೊಂದು ಭಾರಿ ಸುದ್ದಿ ಮಾಡುತ್ತಿದೆ. ಪುನರ್ಜನ್ಮ ಪಡೆದಿರುವ ಎಂಟು ವರ್ಷದ ಬಾಲಕ ತನ್ನ ಹಿಂದಿನ ಜನ್ಮದ ಬಗ್ಗೆ ಮಾತನಾಡುತ್ತಿದ್ದಾನೆ. ಮೈನ್ಪುರ ಜಿಲ್ಲೆಯ ನಗ್ಲಾ ತಲಾಹಿ ಎಂಬ ಕುಗ್ರಾಮದಲ್ಲಿ ಎಂಟು ವರ್ಷದ ಬಾಲಕ ಹೇಳುತ್ತಿರುವ ಮಾತುಗಳು ಇಡೀ ಗ್ರಾಮವನ್ನೇ ಆಶ್ಚರ್ಯಕ್ಕೊಳಗಾಗುವಂತೆ ಮಾಡುತ್ತಿದೆ.ಪ್ರಮೋದ್ ಕುಮಾರ್ ಎಂಬ ವ್ಯಕ್ತಿಯ 13 ವರ್ಷದ ಮಗ ರೋಹಿತ್ ಸುಮಾರು ಎಂಟು ವರ್ಷಗಳ ಹಿಂದೆಯೇ ಅಕಾಲಿಕ ಮರಣ ಹೊಂದಿರುತ್ತಾನೆ.ಇ

ದೀಗ ಅವರ ಪಕ್ಕದ ಹಳ್ಳಿಯ ರಾಮನರೇಶ್ ಎಂಬುವವರ ಎಂಟು ವರ್ಷದ ಪುತ್ರ ಚಂದ್ರವೀರ್ ಎಂಬ ಬಾಲಕ ಪ್ರಮೋದ್ ಕುಮಾರ್ ರವರ ಮಗ ರೋಹಿತ್ ನಾನೇ ಎಂದು ಹೇಳುತ್ತಿದ್ದಾನೆ. ಇದು ಇಷ್ಟಕ್ಕೆ ಆಗಿದ್ದರೆ ಹೆಚ್ಚು ಸುದ್ದಿಯಾಗುತ್ತಿರಲಿಲ್ಲ. ಆದರೆ ಚಂದ್ರವೀರ್ ಪ್ರಮೋದ್ ಕುಮಾರ್ ಅವರ ಊರಿಗೆ ಹೋಗಿ ಅವರ ಮನೆಯಲ್ಲಿ ತಾನು ತೀರಿ ಹೋದ ನಿಮ್ಮ ಮಗ ನಾನೆ ನನಗೆ ಮತ್ತೆ ಪುನರ್ಜನ್ಮ ವಾಗಿದೆ ಕಾಲುವೆಯಲ್ಲಿ ಸ್ನಾನ ಮಾಡಲು ಹೋದಾಗ ಕಾಲುಜಾರಿ ನೀರಿನಲ್ಲಿ ಮುಳುಗು ಸಾವನ್ನಪ್ಪಿದ್ದೆ. ನನಗೆ ಈಗ ಹಳೆಯದೆಲ್ಲ ನೆನಪಾಗಿದೆ ಎಂದು ಪ್ರಮೋದ್ ಕುಮಾರ್ ದಂಪತಿಗಳನ್ನ ಅಪ್ಪಿಕೊಂಡು ಅಳುತ್ತಾನೆ.

ಇದೆಲ್ಲ ವಿಚಾರವನ್ನೆಲ್ಲ ತಿಳಿದ ಶಾಲೆಯ ಮುಖ್ಯಸ್ಥರು ಚಂದ್ರವೀರ್ ಅನ್ನು ಬೇಟಿ ಮಾಡಿದ್ದಾರೆ. ಸುಭಾಷ್ ಮಾಸ್ಟರನ್ನ ನೋಡಿದಾಕ್ಷಣ ಬಾಲಕ ತನ್ನ ಶಿಕ್ಷಕರನ್ನು ಗುರುತಿಸಿ ತನ್ನ ಸಹಪಾಠಿಗಳನ್ನು ಕೂಡ ಗುರುತಿಸಿದ್ದಾನೆ. ಇನ್ನೊಂದೆಡೆ ಚಂದ್ರವೀರ್ ಅವರ ತಂದೆ ತಾಯಿಯವರು ಮಗನ ಈ ವಿಚಿತ್ರ ನಡವಳಿಕೆ ಕಂಡು ಕಂಗಲಾಗಿದ್ದಾರೆ. ಒಟ್ಟಾರೆಯಾಗಿ ಈ ಸುದ್ದಿ ಮೈನ್ಪುರ ಜಿಲ್ಲೆಯಾದ್ಯಂತ ಪುನರ್ಜನ್ಮದ ಕಥೆ ಕೇಳಿ ಆಶ್ಚರ್ಯಕ್ಕೆ ಒಳಗಾಗಿದ್ದಾರೆ.

Leave a Reply

%d bloggers like this: