ಪುಲ್ಕಿತ್ ಸಾಮ್ರಾಟ್ ಗೆ ಎರಡನೇ ಹೆಂಡತಿ ಆಗಲಿದ್ದಾರೆ ಗೂಗ್ಲಿ ಬೆಡಗಿ ಕೃತಿ ಕರಬಂದ

ಸ್ಯಾಂಡಲ್ ವುಡ್ ಕ್ಯೂಟ್ ನಟಿ ಕೃತಿ ಕರಬಂದ ಇದೀಗ ದಾಂಪತ್ಯ ಜೀವನಕ್ಕೆ ಹೆಜ್ಜೆ ಇಡಲು ಸಿದ್ದರಾಗುತ್ತಿದ್ದಾರೆ.ಹೌದು ಕನ್ನಡ,ತೆಲುಗು,ತಮಿಳು ಹಾಗೂ ಹಿಂದಿ ಚಿತ್ರಗಳಲ್ಲಿ ಸ್ಟಾರ್ ನಟರೊಂದಿಗೆ ಅಭಿನಯಿಸಿದ್ದಾರೆ.ಈ ಮೂಲಕ ಭಾರತೀಯ ಚಿತ್ರರಂಗದ ಸ್ಟಾರ್ ನಟಿಯಾಗಿ ಗುರುತಿಸಿಕೊಂಡಿರುವ ಕೃತಿ ಕರಬಂದ ತಮ್ಮ ಬಾಳ ಸಂಗಾತಿಯಾಗಿ ಬಾಲಿವುಡ್ ಸ್ಟಾರ್ ಯುವ ನಟ ಪುಲ್ಕಿತ್ ಸಾಮ್ರಾಟ್ ಅವರನ್ನು ಸ್ವೀಕರಿಸಲಿದ್ದಾರೆ.ಹೌದು ವರ್ಷಗಳಿಂದ ಡೇಟಿಂಗ್ ನಡೆಸುತ್ತಿದ್ದ ಈ ಜೋಡಿ ಇದೀಗ ದಾಂಪತ್ಯ ಜೀವನಕ್ಕೆ ಅಡಿಯಿಡಲು ಮನಸ್ಸು ಮಾಡಿದ್ದಾರೆ.ಇನ್ನು ನಟ ಹಾಗೂ ಮಾಡೆಲ್ ಆಗಿರುವ ಪುಲ್ಕಿತ್ ಸಾಮ್ರಾಟ್ ಬಿಟ್ಟೂಬಾಸ್ ಚಿತ್ರದ ಮೂಲಕ ಬಾಲಿವುಡ್ ಗೆ ಎಂಟ್ರಿ ಕೊಟ್ಟರು.

ಇವರ ಅಭಿನಯದ ಫುಕ್ರೆ ಸಿನಿಮಾದಲ್ಲಿನ ಹನಿ ಪಾತ್ರಕ್ಕೆ ಭಾರಿ ಮೆಚ್ಚುಗೆ ಪಡೆದುಕೊಂಡರು.ಇನ್ನು ನಟ ಪುಲ್ಕಿತ್ ಸಾಮ್ರಾಟ್ ಅವರಿಗೆ ಈಗಾಗಲೇ 2014 ರಲ್ಲಿ ಶ್ವೇತಾ ರೋಹಿರಾ ಎಂಬುವರೊಂದಿಗೆ ವಿವಾಹವಾಗಿ 2015 ರಲ್ಲಿ ವಿಚ್ಚೇದನ ಪಡೆದುಕೊಂಡಿದ್ದಾರೆ.ಇನ್ನು ನಟಿ ಕೃತಿ ಕರಬಂದ ಮಹೇಶ್ ಬಾಬು ನಿರ್ದೇಶನದಲ್ಲಿ ಮೂಡಿಬಂದ ಚಿರು ಚಿತ್ರದ ಮೂಲಕ ಸ್ಯಾಂಡಲ್ ವುಡ್ ಗೆ ಪ್ರವೇಶ ಮಾಡಿದರು.ಈ ಚಿರು ಸಿನಿಮಾದಲ್ಲಿ ತಮ್ಮ ಮುಗ್ದ ನಟನೆಯಿಂದ ಕನ್ನಡ ಸಿನಿ ಪ್ರೇಕ್ಷಕರಿಗೆ ಮೋಡಿ ಮಾಡಿದರು.ಈ ಚಿತ್ರದ ನಂತರ ರಾಕಿಂಗ್ ಸ್ಟಾರ್ ಯಶ್ ಅಭಿನಯದ ಗೂಗ್ಲಿ ಚಿತ್ರದಲ್ಲಿ ಸ್ವಾತಿ ಪಾತ್ರದ ಮೂಲಕ ಸ್ಯಾಂಡಲ್ ವುಡ್ ನಲ್ಲಿ ಭರವಸೆ ನಟಿಯಾಗಿ ನೆಲೆ ಕಂಡಕೊಂಡರು.

ಇದಾದ ಬಳಿಕ ಮತ್ತೊಂದಷ್ಟು ಸಿನಿಮಾಗಳಲ್ಲಿ ನಟಿಸಿದ ಕೃತಿ ಕರಬಂದ ತದ ನಂತರ ಬಾಲಿವುಡ್ ನಲ್ಲಿ ಬಿಝಿ ಆದರು.ಇದೀಗ ತಮ್ಮಮದುವೆಯ ವಿಚಾರವಾಗಿ ಸುದ್ದಿ ಆಗಿದ್ದಾರೆ. ಕೆಲವು ತಿಂಗಳಿಂದ ಖಾಸಗಿ ಸಂದರ್ಶನವೊಂದರಲ್ಲಿ ಮದುವೆಯ ಬಗ್ಗೆ ಪ್ರಶ್ನೆ ಕೇಳಿದಾಗ ಸದ್ಯದ ಮಟ್ಟಿಗೆ ಆಲೋಚನೆ ಇಲ್ಲ ಎಂದಿದ್ದರು.ಆದರೆ ಈಗ ನಟ ಪುಲ್ಕಿತ್ ಸಾಮ್ರಾಟ್ ಅವರನ್ನು ತಮ್ಮ ಬಾಳ ಸಂಗಾತಿಯಾಗಿ ಸ್ವೀಕರಿಸುತ್ತಿರುವುದಾಗಿ ಮಾಹಿತಿ ಹಂಚಿಕೊಂಡಿದ್ದಾರೆ.

Leave a Reply

%d bloggers like this: