ಪಬ್ಲಿಕ್ ಟಿವಿ ರಂಗಣ್ಣ ಅವರ ಅಳಿಯ ನಿಜಕ್ಕೂ ಯಾರು ಗೊತ್ತಾ? ಅವರ ಬ್ಯಾಗ್ರೌಂಡ್ ಏನು ಗೊತ್ತಾ?

ಕನ್ನಡ ಸುದ್ದಿ ಮಾಧ್ಯಮದ ಖ್ಯಾತ ಪತ್ರಕರ್ತ ಎಚ್.ಆರ್.ರಂಗನಾಥ್ ಅವರ ಪುತ್ರಿಯ ಮದುವೆ ಕುಟುಂಬಸ್ಥರ ಸಮಕ್ಷಮದಲ್ಲಿ ಶಾಸ್ತ್ರೋಕ್ತವಾಗಿ ಬೆಂಗಳೂರಿನಲ್ಲಿ ನೆರವೇರಿದೆ. ಹೌದು ದೃಶ್ಯ ಮಾಧ್ಯಮದಲ್ಲಿ ಎಚ್. ಆರ್
ರಂಗನಾಥ್, ರಂಗಣ್ಣ ಎಂದೇ ಹೆಸರು ವಾಸಿಯಾದ ಹೆಬ್ಬಾಳೆ ರಾಮಕೃಷ್ಣಯ್ಯ ರಂಗನಾಥ್ ಅವರು ಇಪ್ಪತ್ತೈದಕ್ಕೂ ಹೆಚ್ಚು ವರ್ಷಗಳ ಕಾಲ ಹಲವು ಪತ್ರಿಕಾ ಮತ್ತು ದೃಶ್ಯ ಮಾಧ್ಯಮದಲ್ಲಿ ಕೆಲಸ ಮಾಡಿ ತಮ್ಮ ಅನುಭವದ ಮೂಲಕ ಪಬ್ಲಿಕ್ ಸುದ್ದಿ ವಾಹಿನಿ ಆರಂಭಿಸಿ ಇಂದು ಯಶಸ್ವಿ ಪತ್ರಕರ್ತರಾಗಿ ಪಬ್ಲಿಕ್ ಟಿವಿ ಮುಖ್ಯಸ್ಥರಾಗಿ ಮುನ್ನೆಡೆಸುತ್ತಿದ್ದಾರೆ. ತಮ್ಮ ನೇರ ನುಡಿ, ಅತ್ಯಂತ ಸರಳವಾಗಿ ಸುದ್ದಿ ವಿಶ್ಲೇಷಣೆ ಮಾಡುವ ನಾಡಿನಾದ್ಯಂತ ಅಪಾರ ಜನಪ್ರಿಯತೆ ಪಡೆದಿರುವ ಎಚ್.ಆರ್.ರಂಗನಾಥ್ ಅವರು ಇತ್ತೀಚೆಗಷ್ಟೇ ತಮ್ಮ ಪುತ್ರಿ ಪಯಸ್ವಿನಿ ಸತ್ವಜ ರಂಗಾಚಾರ್ ಅವರ ವಿವಾಹ ಮಹೋತ್ಸವ ಏರ್ಪಡಿಸಿ ತಮ್ಮ ಆಪ್ತಿಷ್ಟರು ಮತ್ತು ಕುಟುಂಬಸ್ಥರ ಸಮ್ಮುಖದಲ್ಲಿ ಧಾರಾಮುಹೂರ್ತ ಕಾರ್ಯಕ್ರಮ ನೆರವೇರಿಸಿದ್ದಾರೆ.

ಮುಂದಿನ ತಿಂಗಳು ನಗರದಲ್ಲಿ ಅದ್ದೂರಿಯಾಗಿ ಆರತಕ್ಷತೆ ಕಾರ್ಯಕ್ರಮವನ್ನು ಆಯೋಜನೆ ಮಾಡಿದ್ದಾರೆ. ಈಗಾಗಲೇ ರಾಜಕೀಯ ನಾಯಕರು, ಸಿನಿಮಾ ಕಲಾವಿದರು, ಪತ್ರಿಕಾ ಮಿತ್ರರು,ಉದ್ಯಮಿಗಳು ಸೇರಿದಂತೆ ನಾಡಿನ ಗಣ್ಯಾತಿಗಣ್ಯರನ್ನು ಭೇಟಿ ಮಾಡಿ ಎಚ್. ಆರ್. ರಂಗನಾಥ್ ಅವರು ಮದುವೆ ಆಹ್ವಾನ ಪತ್ರಿಕೆ ನೀಡಿದ್ದಾರೆ. ಇನ್ನು ಎಚ್.ಆರ್.ರಂಗನಾಥ್ ಮತ್ತು ಶಾರದಾ ದಂಪತಿಯ ಪುತ್ರಿ ಪಯಸ್ವಿನಿ ಸತ್ವಜ ರಂಗಾಚಾರ್ ಅವರು ಉದ್ಯಮಿ ನಿಖಿಲ್ ಭಾಸ್ಕರ್ ಎಂಬುವವರನ್ನು ತಮ್ಮ ಬಾಳ ಸಂಗಾತಿಯಾಗಿ ಸ್ವೀಕರಿಸಿದ್ದಾರೆ.

ನಿಖಿಲ್ ಭಾಸ್ಕರ್ ಅವರು ನಗರದ ಪ್ರಸಿದ್ದ ಉದ್ಯಮಿಗಳಾಗಿದ್ದು, ರಂಗನಾಥ್ ಪುತ್ರಿ ಪಯಸ್ವಿನಿ ಸತ್ವಜ ಜರ್ನಲಿಸಂ ಅಂಡ್ ಮಾಸ್ ಕಮ್ಯೂನಿಕೇಶನ್ ನಲ್ಲಿ ಪದವಿ ಪಡೆದು ತಮ್ಮ ತಂದೆಯಂತೆ ಮಾಧ್ಯಮ ಕ್ಷೇತ್ರದಲ್ಲಿ ಉತ್ತಮ ಸೇವೆ ಸಲ್ಲಿಸಬೇಕು ಎಂಬ ಮಹಾದಾಸೆ ಹೊಂದಿದ್ದಾರಂತೆ. ಈ ನಮ್ಮ ಲೇಖನ ನಿಮಗೆ ಇಷ್ಟವಾದಲ್ಲಿ ಶೇರ್ ಮಾಡಿ ಮತ್ತು ಲೈಕ್ ಮಾಡಿ. ಈ ನಮ್ಮ ಲೇಖನದ ಬಗ್ಗೆ ನಿಮ್ಮ ಅನಿಸಿಕೆಗಳನ್ನು ಕಾಮೆಂಟ್ ಮೂಲಕ ನಮಗೆ ತಿಳಿಸಿ. ಮತ್ತಷ್ಟು ಹೊಸ ಸುದ್ದಿಗಳಿಗಾಗಿ ನಮ್ಮ ಪೇಜ್ ನ್ನು ತಪ್ಪದೆ ಲೈಕ್ ಮಾಡಿ.

Leave a Reply

%d bloggers like this: