ಪ್ರತಿಯೊಬ್ಬ ಮಹಿಳೆಯೂ ಕೂಡ ತನ್ನ ಗಂಡನ ಜೊತೆಗೆ ಈ 5 ವಿಷಯವಗಳನ್ನು ಯಾವುದೇ ಕಾರಣಕ್ಕೆ ಹೇಳುವುದಿಲ್ಲ

ಪ್ರತಿಯೊಬ್ಬ ಮಹಿಳೆಯೂ ಕೂಡ ತನ್ನ ಪತಿಯ ಜೊತೆಗೆ ಒಂದಷ್ಟು ವಿಚಾರಗಳನ್ನು ಹಂಚಿಕೊಳ್ಳಲು ಇಷ್ಟಪಡುವುದಿಲ್ಲ. ಏಕೆಂದರೆ ಅದರಿಂದ ತನ್ನ ದಾಂಪತ್ಯ ಜೀವನ ಹಾಳಾಗುತ್ತದೆ ಎಂಬ ಆತಂಕ ಅವರನ್ನ ಕಾಡುತ್ತಿರುತ್ತದೆ.ಹಾಗಾಗಿ ವಿವಾಹಕ್ಕೂ ಮುಂಚೆ ತನ್ನ ಬದುಕಿನಲ್ಲಿ ಆಗಿರುವ ಅನೇಕ ವೈಯಕ್ತಿಕ ವಿಚಾರಗಳನ್ನು ಗೌಪ್ಯವಾಗಿ ಇಟ್ಟುಕೊಂಡಿರುತ್ತಾರೆ.ಈ ದಾಂಪತ್ಯ ಸುಖ ಸಂಸಾರಕ್ಕೆ ಹಿರಿಯರು ಹೇಳುವಂತೆ ಪತಿ-ಪತ್ನಿಯರ ನಡುವೆ ಯಾವುದೇ ರೀತಿಯ ಮುಚ್ಚುಮರೆ ಇರಬಾರದು, ಯಾವುದೇ ವಿಚಾರಗಳನ್ನು ಮುಕ್ತವಾಗಿ ಮಾತನಾಡಿ ಪರಸ್ಪರ ಅರ್ಥ ಮಾಡಿಕೊಂಡು ಹೋಗಬೇಕು ಎಂದು ತಿಳಿಸುತ್ತಾರೆ.ಒಂದೇ ಗಾಡಿಯ ಎರಡು ಎತ್ತಿನಂತೆ ಹೆಗಲು ಕೊಟ್ಟು ಪತಿ ಪತ್ನಿ ಜೀವನದ ಬಂಡಿಯನ್ನ ಸಾಗಿಸಬೇಕಾಗಿರುತ್ತದೆ.ಆದರೆ ಕೆಲವೊಂದು ವಿವಾಹಪೂರ್ವ ವಿಚಾರಗಳು ಗಂಡ-ಹೆಂಡಿರ ನಡುವೆ ಮನಸ್ತಾಪ ಉಂಟಾಗಲು ಕಾರಣವಾಗುತ್ತದೆ.ನೀರಿನಲ್ಲಿ ಮೀನಿನ ಹೆಜ್ಜೆ, ಹೆಣ್ಣಿನ ಮನಸ್ಸಿನಲ್ಲಿರುವ ವಿಚಾರ ಎರಡನ್ನೂ ಕೂಡ ತಿಳಿದುಕೊಳ್ಳವುದು ಕಷ್ಟಸಾಧ್ಯ.

ಅದೇ ರೀತಿಯಾಗಿ ಗಂಡು ಕೂಡ ತನ್ನ ಕೆಲವೊಂದು ವಿಚಾರಗಳನ್ನು ಎಲ್ಲರೊಂದಿಗೂ ಹಂಚಿಕೊಳ್ಳಲು ಇಷ್ಟಪಡುವುದಿಲ್ಲ. ವೈವಾಹಿಕ ಜೀವನಕ್ಕೆ ಹೆಜ್ಜೆ ಇಡುವ ನವ ಜೋಡಿಗಳು ಇತ್ತೀಚಿನ ದಿನಗಳಲ್ಲಿ ಕೆಲವೊಂದು ವಿಚಾರಗಳನ್ನು ಹಂಚಿಕೊಳ್ಳಲಾಗದೇ,ತಮ್ಮ ಮನದೊಳಗೆಯೇ ನೋವು ಪಡುತ್ತಿರುತ್ತಾರೆ.ಇಂದಿನ ಯುವ ದಂಪತಿಗಳಿಗೆ ಪರಸ್ಪರ ಗೌರವ,ನಂಬಿಕೆಗಿಂತ ವೈಯಕ್ತಿಕ ಅಹಂ ಹೆಚ್ಚಾಗಿರುತ್ಚತದೆ.ಈ ವ್ಯಕ್ತಿತ್ವ ಅವರ ಸುಂದರ ಬದುಕನ್ನ ಹಾಳು ಮಾಡಿಕೊಳ್ಳುವುದಕ್ಕೆ ಕಾರಣ ಎಂದು ಮನಶಾಸ್ತ್ರಜ್ಞರು ತಮ್ಮ ವೃತ್ತಿ ಜೀವನದಲ್ಲಿ ಕೇಳಿ ಪಟ್ಟ ಘಟನೆಗಳನ್ನು ಉದಾಹರಣೆಯಾಗಿ ತಿಳಿಸುತ್ತಾರೆ. ಸಾಮಾನ್ಯವಾಗಿ ಮದುವೆಯಾದ ಹೆಣ್ಣುಮಕ್ಕಳು ತನ್ನ ಗಂಡನ ಬಳಿ ಈ ಐದು ವಿಚಾರಗಳನ್ನು ಹೇಳಿಕೊಳ್ಳಲು ಹಿಂದೆ ಸರಿಯುತ್ತಾರೆ. ಅವುಗಳಲ್ಲಿ ಪ್ರಮುಖವಾದುವೆಂದರೆ ಮದುವೆಗಿಂತ ಮುಂಚೆ ತಾನು ಪ್ರೀತಿಸಿದ ವಿಚಾರವನ್ನು ಹೇಳಿಕೊಳ್ಳುವುದಿಲ್ಲ. ಏಕೆಂದರೆ ಇದರಿಂದ ತನ್ನ ಪತಿ ನನ್ನ ಬಗ್ಗೆ ಯಾವ ರೀತಿಯ ಭಾವನೆ ಇಟ್ಟುಕೊಳ್ಳಬಹುದು.

ಇದರಿಂದ ತನ್ನ ವೈವಾಹಿಕ ಜೀವನಕ್ಕೆ ತೊಂದರೆ ಆಗಬಹುದು ಎಂಬ ಕಾರಣಕ್ಕಾಗಿ ತನ್ನ ಮೊದಲ ಪ್ರೀತಿಯ ಬಗ್ಗೆ ಯಾವುದೇ ಕಾರಣಕ್ಕೂ ತನ್ನ ಗಂಡನೊಂದಿಗೆ ಹಂಚಿಕೊಳ್ಳುವುದಿಲ್ಲ.ಇನ್ನು ತನ್ನ ದೈಹಿಕ ಅನಾರೋಗ್ಯ ವಿಚಾರವಾಗಿ ತನ್ನ ಗಂಡನ ಬಳಿ ಹೇಳಿಕೊಳ್ಳಲು ಮುಕ್ತವಾಗಿ ಚರ್ಚಿಸಲು ಹಿಂದೆ ಸರಿಯುತ್ತಾರೆ.ಇದರಿಂದಾಗಿ ತನ್ನ ಗಂಡ ಯಾವ ರೀತಿ ಅಭಿಪ್ರಾಯ ಹೊಂದುತ್ತಾನೋ ಎಂಬ ದುಗುಡ ಅವಳಲ್ಲಿ ಕಾಡುತ್ತಿರುತ್ತದೆ.ಅದೇ ರೀತಿಯಾಗಿ ತನ್ನ ಗಂಡನ ನಿರ್ಧಾರದ ಬಗ್ಗೆ ಅಸಮಾಧಾನ ಇದ್ದರು ಕೂಡ ಅದರ ಬಗ್ಗೆ ದನಿ ಎತ್ತುವುದಿಲ್ಲ.ಅದು ತಪ್ಪು ಎಂದು ಗೊತ್ತಿದ್ದರೂ ಕೂಡ ಅದನ್ನು ಮುಕ್ತವಾಗಿ ಹೇಳುವುದಿಲ್ಲ.ಅವರಿಗೆ ಸಲಹೆ ನೀಡುವುದರಿಂದ ಅವರು ಎಲ್ಲಿ ಕೋಪಗೊಳ್ಳುತ್ತಾರೋ ಎಂಬ ಭಾವನೆಯಿಂದ ಅವರ ತಪ್ಪು ನಿರ್ಧಾರವನ್ನು ಒಪ್ಪಿಕೊಳ್ಳುತ್ತಾರೆ.ಇದು ಕೆಲವೊಮ್ಮೆ ಅನಿವಾರ್ಯ ಕೂಡ ಆಗಿರುತ್ತದೆ.ಇನ್ನು ಸೇವಿಂಗ್ಸ್ ಮನೋಭಾವನೆ ಹೊಂದಿರುವ ಹೆಣ್ಣು ಮಕ್ಕಳು ತನ್ನ ಗಂಡನಿಗೆ ಗೊತ್ತಿಲ್ಲದಂತೆ ಹಣವನ್ನು ಉಳಿತಾಯ ಮಾಡಿರುತ್ತಾರೆ.ಇದು ತನ್ನ ಸಂಸಾರದ ಸಂಕಷ್ಟಕ್ಕೆ ಅನುಕೂಲ ಆಗಲಿ ಎಂಬ ಉದ್ದೇಶ ಹೊಂದಿರುತ್ತಾರೆ. ಹೀಗೆ ಅನೇಕ ವಿಚಾರಗಳನ್ನ ತನ್ನ ಪತಿಗೆ ತಿಳಿಸದೇ ಗೌಪ್ಯವಾಗಿ ಕಾಪಾಡಿ ಕೊಂಡಿರುತ್ತಾರೆ.

Leave a Reply

%d bloggers like this: